Tuesday 20 April 2021

‘ನಾವು ಪರಸ್ಪರರನ್ನು ಬೆಂಬಲಿಸಿ ಮಾತನಾಡಲಿದು ಸಕಾಲ’ ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

  ‘ನಾವು ಪರಸ್ಪರರನ್ನು ಬೆಂಬಲಿಸಿ ಮಾತನಾಡಲಿದು ಸಕಾಲ’

ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

“ನಾವು ಶೋಷಕನಾದ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಮುಖಾಬಿಲೆಯಾಗುತ್ತಿದ್ದೇವೆ. ಈ ಎಲ್ಲಾ ಕಾರ್ಯಕರ್ತರು ಮತ್ತು ಮೇಧಾವಿಗಳನ್ನು ಅವರು ಬಡವರ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬ ಏಕೈಕ ಕಾರಣಕ್ಕಾಗಿ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ.” 

ಬಹದ್ದೂರ್ ಗರ್, (ಹರಿಯಾಣ) ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರವು ಮುಂದಿಟ್ಟ ವಿಸ್ತೃತ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ ಒಂದು ದಿನದ ನಂತರ ೩೨ ರೈತ  ಸಂಘಟನೆಗಳಲ್ಲೇ ದೊಡ್ಡ ಗುಂಪಾಗಿರುವ ಭಾರತೀಯ ಕಿಸಾನ್ ಯೂನಿಯನ್ (ಏಕತಾ ಉಗ್ರಹನ್) ಜೈಲಿನಲ್ಲಿರುವ ಹಲವಾರು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ‘ಮಾನವ ಹಕ್ಕುಗಳ ದಿನ’ವನ್ನು ಆಚರಿಸಿದರು.

ಇನ್ನೂ ವಿಶಾಲವ್ಯಾಪ್ತಿಯ ಕಾರ್ಯಸೂಚಿಯನ್ನು ಸಮರ್ಥಿಸುವ ಮೂಲಕ ಬಿ ಕೆ ಯು(ಉಗ್ರಹನ್) ಕೇಂದ್ರದ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸುವ ಸೂಚನೆ ನೀಡಿತು. ದೆಹಲಿಯ ಟಿಕ್ರಿ ಗಡಿಯ ಬಳಿ ಬೀಡು ಬಿಟ್ಟಿರುವ ಅದು ಇತರ ಪ್ರಜಾಪ್ರಭುತ್ವವಾದಿ ಹಾಗೂ ಮಾನವ ಹಕ್ಕುಗಳ ಚಳುವಳಿಗಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ “ಸರ್ವಾಧಿಕಾರಿ” ಕೇಂದ್ರ ಸರ್ಕಾರದ ಮೇಲಿನ ಪೂರ್ಣಪ್ರಮಾಣದ ದಾಳಿಯಲ್ಲಿ ರೈತ ಮುಖಂಡರು ದೇಶದ ವಿವಿಧ ಪ್ರಜಾಪ್ರಭುತ್ವ ಚಳುವಳಿಗಳೊಂದಿಗೆ ನಿಲ್ಲುವ ಸಮಯ ಈಗ ಸನ್ನಿಹಿತವಾಗಿದೆ ಎಂದು ಪ್ರತಿಪಾದಿಸಿದರು. ಏಕೆಂದರೆ ತಮ್ಮ ವಿಸ್ತೃತ ಹೋರಾಟವು ಕೇವಲ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಮಾತ್ರವಾಗಿರದೆ ಭಾರತೀಯ ಕೃಷಿಯ ‘ಕಾರ್ಪೊಟೈಜೇಷನ್’ ಗೊಳಿಸುವುದುರ ವಿರುದ್ಧವಾಗಿದೆ ಎಂದೂ ಅವರು ಪ್ರತಿಪಾದಿಸಿದರು.

“ನಾವು ಶೋಷಕ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಎದುರಿಸುತ್ತಿದ್ದೇವೆ. ಈ ಎಲ್ಲ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮ ಸ್ವಂತ ಸುರಕ್ಷಿತತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಬಡವರ ದುಃಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬುದಕ್ಕಾಗಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಈಗ ಅವರಿಗೆ ಬೆಂಬಲವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಕೃಷಿ ಕಾನೂನುಗಳಿಗೆ ನಮ್ಮ ಪ್ರತಿರೋಧದ ಜೊತೆಗೆ ಈ ಎಲ್ಲ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ” ಎಂದು ಬಿಕೆಯು ಏಕತಾ (ಉಗ್ರಹನ್) ಅಧ್ಯಕ್ಷ ಜೋಗಿಂದರ್ ಉಗ್ರಹನ್ ‘ದಿ ವೈರ್’ ಗೆ ತಿಳಿಸಿದರು.

“ಗೌತಮ್ ನವಲಖಾ ಅಥವಾ ಸುಧಾ ಭಾರದ್ವಾಜ್ ಅವರಂತಹ ಜನರು ಏನು ಮಾಡಿದರು? ದೂರದ ಪ್ರದೇಶಗಳಲ್ಲಿ ಬಡವರು ಹೀಗೆ ತೀವ್ರ ಒತ್ತಡದಲ್ಲಿದ್ದಾರೆ, ಹೇಗೆ ಬದುಕುತ್ತಿದ್ದಾರೆ, ಮತ್ತು ಸರ್ಕಾರಗಳು ಅವರನ್ನು ಹೇಗೆ ಅನ್ಯಾಯವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು ಅವರು ತೋರಿಸಿದರು. ಕಾಶ್ಮೀರದ ಜನರು ಹೇಗೆ ಭದ್ರತಾಪಡೆಗಳ ಭಯಭೀತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ತೋರಿಸಿದ ಇತರರೂ ಇದ್ದಾರೆ. ಮೋದಿ ಸರ್ಕಾರ ಅವರೆಲ್ಲರನ್ನೂ ಮೌನಗೊಳಿಸುವುದಕ್ಕಾಗಿ ಮಾತ್ರ ಜೈಲಿಗೆ ಹಾಕಿದೆ ಎಂದು ನಾವು ನಂಬುತ್ತೇವೆ. ಈಗ ನಾಗರಿಕರ ಪರವಾಗಿ ಮಾತನಾಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.

ರೈತರ ಆಂದೋಲನವನ್ನು ದೇಶದ ವಿರಾಟ್ ರಾಜಕೀಯ ಬೆಳವಣಿಗೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ.

ಕಳೆದ ಕೆಲವು ವರ್ಷಗಳಿಂದ ಹೆಚ್ಚಿನÀ ಪ್ರತಿಭಟನೆಗಳು- ಅದು ಶಾಹಿನ್ ಬಾಗ್‌ನಲ್ಲಿರಲಿ (ಸಿ.ಎ.ಎ-ಎನ್.ಆರ್.ಸಿ ವಿರುದ್ಧವಾಗಿರಲಿ) ಅಥವಾ ೩೭೦ನೇ ಪರಿಚ್ಛೇದವನ್ನು ತೆಗೆದು ಹಾಕುವುದರ ವಿರುದ್ಧವಾಗಿರಲಿ- ಈ ಕ್ರಮಗಳಿಂದಾಗಿ ಯಾರ ಮೇಲೆ ಪರಿಣಾಮವಾಗುತ್ತದೋ ಅವರನ್ನು ಸಂಪರ್ಕಿಸಲು ಸರ್ಕಾರ ತಲೆಕೆಡಿಸಿಕೊಳ್ಳದಿದ್ದ ಕಾರಣದಿಂದ ನಡೆಯುತ್ತಿವೆ. ಕೃಷಿ ಕಾನೂನುಗಳಲ್ಲೂ ಅದೇ ಸಂಭವಿಸಿದೆ. ೫೦೦೦ ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲವರನ್ನು ಮತ್ತು ಕಾರ್ಪೊರೇಟ್‌ಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಕೃಷಿ ಕಾನೂನುಗಳು ಶೇ. ೮೫ ರಷ್ಟಿರುವ ಅತಿ ಚಿಕ್ಕ ಹಿಡುವಳಿದಾರರಾದ ಭಾರತೀಯ ರೈತರ ವಿರುದ್ಧವಾಗಿದೆ. ಈಗ ಸರ್ಕಾರವು ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ತನ್ನ ಪಾಪಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.

  “ಈ ಸರ್ಕಾರವನ್ನು ಬೆತ್ತಲೆಗೊಳಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಚಳುವಳಿಗಳು ಒಟ್ಟಾಗಲು ಈಗ ಸಕಾಲ. ಅವರ ಉದ್ದೇಶಗಳು ಸರಿಯಾಗಿಲ್ಲ, ನಾವಂತೂ ಸತ್ಯವನ್ನೇ ಹೇಳಿದ್ದೇವೆ.” ಸಿ.ಎ.ಎ ಅಥವಾ ೩೭೦ ಪರಿಚ್ಛೇದ ಅಥವಾ ಬುದ್ಧಿಜೀವಿಗಳ ಸೆರೆವಾಸ ಮುಂತಾದ ವಿಷಯಗಳ ಬಗ್ಗೆ ಮಾತನಾಡುವುದು ಕೃಷಿ ಕಾನೂನುಗಳ ಪ್ರಾಥಮಿಕ ಸಮಸ್ಯೆಯ ಪ್ರಶ್ನೆಯನ್ನು ದುರ್ಬಲಗೊಳಿಸಬಹುದು ಎಂಬ ಭಯವಿದ್ದರೂ “ಬಿಜೆಪಿಯು ಭಾರತೀಯ ಮತದಾರರನ್ನು ದೃವೀಕರಿಸಲು ಈ ಸಮಸ್ಯೆಗಳನ್ನು ಯಶಸ್ವಿಯಾಗಿ ಬಳಸಿದೆ. ರೈತ ಚಳುವಳಿಯನ್ನೂ ಹೀಗೆ ಮಾಡಲು ಬಳಸಬಹುದು. ಆದರೂ ನಾವು ಅಂಜುವುದಿಲ್ಲ. ಈ ಸರ್ಕಾರ ಹೇಗೆ ಬಡವರನ್ನು ದಮನಿಸುತ್ತಿದೆ ಎಂಬುದು ತಿಳಿದಿದೆ. ಇಂದು ನಾವು ರೈತರು ಅದರ ಏಕಪಕ್ಷೀಯ ಕಾರ್ಪೊರೇಟ್ ಪರ ವಿಧಾನದ ಬೆಂಕಿಯ ತೀವ್ರತೆಯನ್ನು ಅನುಭವಿಸುತ್ತಿದ್ದೇವೆ. ನಾಳೆ ಈ ನೋವನ್ನು ಬೇರೊಬ್ಬರು ಅನುಭವಿಸುತ್ತಾರೆ. ಹೀಗಾಗಿ ನಾವು ಒಬ್ಬರಿಗೊಬ್ಬರು ಬೆಂಬಲವಾಗುವ, ಮಾತನಾಡುವ ಸಮಯ ಇದು.” ನಮ್ಮ ಆಂದೋಲನವು ಕೃಷಿ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ನಾವು ಸ್ಪಷ್ಟಪಡಿಸಿದಾಗಲೂ ಸರ್ಕಾರ ಮತ್ತು ಪೀತ ಮಾಧ್ಯಮಗಳು ನಮ್ಮನ್ನು ಖಲಿಸ್ತಾನಿಗಳೆಂದು ಚಿತ್ರಿಸಿದವು. ಈಗ ಅವರು ನಮ್ಮನ್ನು ಅರ್ಬನ್ ನಕ್ಸಲ್ಸ್  ಎಂದು ಕರೆಯಬಹುದು. ಆದರೆ ಇವೆಲ್ಲವೂ ಸರಳ ಪ್ರಚಾರ ಎಂದು ರೈತರಿಗೆ ಬಡವರಿಗೆ ತಿಳಿದಿದೆ. ಆದ್ದರಿಂದ ನಾವು ಹೆದರುವುದಿಲ್ಲ.

ಕೃಷಿ ಕಾನೂನುಗಳು ಕೃಷಿಯನ್ನು ಕಾರ್ಪೊರೇಟ್ ಸ್ನೇಹಿಯಾಗಿಸುವ ಸರ್ಕಾರದ ವಿರಾಟ್ ಯೋಜನೆಯ ಪರಿಣಾಮವಾಗಿದೆ. ಈ ಆರ್ಥಿಕ ನೀತಿಯನ್ನು ಮೊದಲು ಅನುಸರಿಸಿದ್ದು ಕಾಂಗ್ರೆಸ್ ಉದಾರೀಕರಣ. ಬಿಜೆಪಿ ಈಗ ಅದನ್ನು ತೀವ್ರಗೊಳಿಸಿದೆ. ನಮ್ಮ ಚಳುವಳಿ ರಾಜಕೀಯವಲ್ಲ ಎಂದು ನಾವು ಹೇಳಿದಾಗ ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬAಧ ಹೊಂದಿಲ್ಲ ಎಂದು ಮಾತ್ರ. ಆದರೆ ನಾವು ಕೃಷಿಯ ಕಾರ್ಪೊರೇಟೀಕರಣವನ್ನು ವಿರೋಧಿಸುತ್ತೇವೆ ಎಂಬ ಅರ್ಥದಲ್ಲಿ ನಾವು ಖಂಡಿತವಾಗಿಯೂ “ರಾಜಕೀಯ” ಆಗಿದ್ದೇವೆ.

ಇದು ನಮ್ಮ ಭೂಮಿಯ ಪ್ರಶ್ನೆಯಾಗಿದೆ. ಕೃಷಿ ಕಾನೂನುಗಳು ಹೋಗಬೇಕೆಂದು ನಾವು ಬಯಸುತ್ತೇವೆ. ಅದೇ ಸಮಯದಲ್ಲಿ ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಹೆಚ್ಚಿನ ವ್ಯಾಪ್ತಿಯನ್ನು ಹೊಂದಬೇಕು ಎಂದೂ ನಾವು ಬಯಸುತ್ತೇವೆ. ಆ ನಿಟ್ಟಿನಲ್ಲಿ ನಾವು ಬಡವರಿಗೆ ನೋವುಂಟುಮಾಡುವ ಇಂತಹ ನೀತಿಗಳನ್ನು ವಿರೋಧಿಸುವ ಎಲ್ಲಾ ಪ್ರಜಾಪ್ರಭುತ್ವವಾದಿ ಗುಂಪುಗಳಿಗೆ ಬೆಂಬಲ ನೀಡುತ್ತೇವೆ ಮತ್ತು ಅವುಗಳ ಬೆಂಬಲವನ್ನು ಪಡೆಯುತ್ತೇವೆ. 

ಸರ್ಕಾರವು ಭೂಮಿಯ ಮೇಲಿನ ಎಲ್ಲಾ ಕಾನೂನುಗಳನ್ನೂ ಬಡವರ ವಿರುದ್ಧ ಬಳಸುತ್ತಿದೆ ಎಂಬುದು ನಮಗೆ ಮನದಟ್ಟಾಗಿದೆ. ಯಾವುದೇ ಭಯವಿಲ್ಲದೇ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಶ್ರೀಮಂತರ ವಿರುದ್ಧ ಅದೇ ಕಾನೂನುಗಳನ್ನು ಬಳಸುವುದಿಲ್ಲ. ತನ್ನನ್ನು ವಿಮರ್ಶಿಸುತ್ತಿರುವ ಜನರ ಬಾಯಿ ಮುಚ್ಚಿಸಲು “ಪಿತೂರಿ” ಆರೋಪ ಮಾಡುತ್ತಿರುವ ಈ ಸರ್ಕಾರವೇ ಪಿತೂರಿ ಮಾಡುತ್ತಿದೆ. ಜನಪರ ಬರಹಗಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ದಮನಕಾರಿ ವಿಧಾನದಿಂದ ಮೌನವಾಗಿಸಲಾಗಿದೆ. ಅವರ ಪ್ರತಿಭಟನೆಗಳು ನಮ್ಮ ಪ್ರತಿಭಟನೆಯಂತೆಯೇ ಶಾಂತಿಯುತವಾಗಿತ್ತು ಆದರೂ ಅವರನ್ನು ಜೈಲಿಗಟ್ಟಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. “ಇಂದಿನ ರೈತರ ಹೋರಾಟ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನೂ ಬಲಪಡಿಸುತ್ತಿದೆ” ಎಂದರೂ ಜೋಗಿಂದರ್ ಉಗ್ರಹನ್ ಹೇಳಿದರು. 

                                               (ದಿ ವೈರ್ ಪತ್ರಿಕೆಯ ವರದಿ)

a

ತಳಮಟ್ಟದಲ್ಲಿ ಅಪನಂಬಿಕೆಗಳಿಲ್ಲ....ಸೌಹಾರ್ದ ಪರಂಪರೆ ನಮ್ಮದು

 ತಳಮಟ್ಟದಲ್ಲಿ ಅಪನಂಬಿಕೆಗಳಿಲ್ಲ....ಸೌಹಾರ್ದ ಪರಂಪರೆ ನಮ್ಮದು

ಕಾಕತಾಳೀಯವಾಗಿ ಸಂಭವಿಸುವ ಹಲವು ಸಂಗತಿಗಳನ್ನು ಧರ್ಮ ಜಾತಿಗೆ ಒತ್ತಾಯಪೂರ್ವಕವಾಗಿ ತಳಕುಹಾಕುವ ಹುನ್ನಾರ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಾಮಾನ್ಯ ಜನರ ದಿನನಿತ್ಯದ ನಡವಳಿಕೆಗಳು ಈ ರೋಗಗ್ರಸ್ಥ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಪ್ರಜ್ಞಾಪೂರ್ವಕವಾದ ಕೆಲಸ ಮಾಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಪೂರಕವಾದ ಒಂದೆರಡು ಭಿನ್ನ ಘಟನೆಗಳನ್ನು ನೆನಪಿಸುತ್ತಿದ್ದೇನೆ. 

ಘಟನೆ:೧- ಕೋವಿಡ್ ೧೯ ರ ವ್ಯಾಪಕ ಪ್ರಸರಣದ ಸಂದರ್ಭ, ಇಂದು ಒಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಸಿದೆ. ರೋಗದ ಕುರಿತ ಮಾಹಿತಿಯ ಕೊರತೆ, ಹಲವು ಮಾಧ್ಯಮದ ಟಿಆರ್‌ಪಿ ಸಮರ, ಆಡಳಿತದ ನಿರ್ಲಕ್ಷö್ಯ, ಅಸಮರ್ಪಕ ನಿರ್ವಹಣೆ ಮತ್ತು ಮುಂದಾಲೋಚನೆಯ ಕೊರತೆಯಿಂದಾಗಿ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವ ಸಂದರ್ಭದಲ್ಲಿ ಹಲವು ಸಂಘಸAಸ್ಥೆಗಳು, ವ್ಯಕ್ತಿಗಳು ಬಡ, ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಹಸ್ತ(ಸಹಾಯ ನೀಡುವಲ್ಲಿ ಕೆಲವರಿಗೆ ಪ್ರತ್ಯೇಕ ಒಳ ಅಜೆಂಡಾ ಇದೆ ಅನ್ನುವುದು ಬೇರೆ ಸಂಗತಿ)ನೀಡುತ್ತಿವೆ.  ಒಂದೆರಡು ದಿನಗಳ ಹಿಂದೆ ನಮ್ಮ ಕಾಲೇಜಿನ ಅಧ್ಯಾಪಕರು ಸೇರಿ ಜನಗಳಿಗೆ ಒಂದಿಷ್ಟು ದಿನಸಿ ಕೊಡೋಣವೆಂದು ತೀರ್ಮಾನಿಸಿದೆವು; ಅದು ಸಣ್ಣ ಪ್ರಮಾಣದಲ್ಲಿ. ಲಾಕ್ ಡೌನ್ ಇರುವುದರಿಂದ ನಾವೇ ಹೋಗಿ ಫಲಾನುಭವಿಗಳನ್ನು ಆರಿಸುವಂತಿರಲಿಲ್ಲ. ಸಹಾಯದ ಅಗತ್ಯ ಇರುವ ಕುಟುಂಬಗಳ ಒಂದು ಯಾದಿ ತಯಾರಿಸಿ ಕೊಡಲು ಒಂದಿಬ್ಬರು ಪರಿಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿನಂತಿಸಿದೆವು. ಅವರಿಬ್ಬರೂ ‘ಹಿಂದೂ’ ಸಮುದಾಯದ ಅನುಯಾಯಿಗಳು.  ಎರಡು ದಿನದಲ್ಲಿ ಯಾದಿ ಬಂದು ತಲುಪಿತು. ಇನ್ನೊಬ್ಬ ಮುಸ್ಲಿಂ ಸಮುದಾಯದ ಅನುಯಾಯಿ ವ್ಯಕ್ತಿಗೆ ಹೇಳಲಾಗಿತ್ತು. ಅವರೂ ಒಂದು ಯಾದಿ ನೀಡಿದರು. ‘ತಮ್ಮತಮ್ಮ ಯಾದಿಯಲ್ಲಿ ಎಲ್ಲಾ ಜಾತಿ ರ‍್ಮದವರ ಹೆಸರೂ ಇರಬೇಕು, ನಿಮ್ಮ ನಿಮ್ಮ ಸಮುದಾಯದ ಹೆಸರು ಮಾತ್ರ ಇರದಿರಲಿ’ ಎಂದು ಹೇಳಬೇಕೆನ್ನಿಸಿದರೂ ಅವರಿಗೆ ಹಾಗೆ ಹೇಳಿರಲಿಲ್ಲ. 

ಆದರೆ ಇಬ್ಬರೂ ಸಿದ್ಧಪಡಿಸಿದ ಯಾದಿಯಲ್ಲಿ ಮುಕ್ಕಾಲು ಪಾಲಿಗಿಂತÀ ಹೆಚ್ಚು ಜನ ಅವರು ಆಚರಿಸುವ ರ‍್ಮ ಮತ್ತು ಜಾತಿಯ ಆಚೆಯ ಕುಟುಂಬದ ಬಡವರ ಹೆಸರಿತ್ತು. ದಿನನಿತ್ಯ ಪತ್ರಿಕೆ, ಟಿವಿಗಳಲ್ಲಿ ಕರೋನಾದ ಆವಾಂತರಕ್ಕಿAತ ಧರ್ಮವಾರು ಲೆಕ್ಕ, ಪರಸ್ಪರ ಅಪನಂಬಿಕೆ ಹುಟ್ಟಿಸುವ ಕೆಲಸ ಮತ್ತು ಸ್ಥಳೀಯವಾಗಿ ಪರಸ್ಪರರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಗುಪ್ತವಾಗಿ ಇನ್ನೊಂದೆಡೆ ನಡೆಯುತ್ತಿರುವಾಗ ಈ ಕೆಳಹಂತದಲ್ಲಿ ಬಡವರು ಮತ್ತು ದುರ್ಬಲರನ್ನು ಗುರುತಿಸುವಾಗ ಕಿಂಚಿತ್ತೂ ದ್ವೇಷದ ಭಾವನೆ ಇರಲಿಲ್ಲ. ಪರಸ್ಪರ ಗೌರವ, ಪ್ರೀತಿ, ಸೌಹಾರ್ದತೆಯ ಭಾವಗಳು ತುಂಬಿದ್ದವು. ನೋವುಂಡವರಿಗೆ ಧರ್ಮದ ಬೇಲಿ ತೊಡಿಸಲು ಇವರ ಮನಸ್ಸು ಒಪ್ಪುತ್ತಿರಲಿಲ್ಲ. ಒಂದಿಷ್ಟು ದಿನಸಿ ಹಂಚಿ ಬರುವಾಗ ಒಬ್ಬ ಶಿಕ್ಷಣೋದ್ಯಮಿಗಳು ಸಿಕ್ಕರು. ‘ದಿನಸಿ ಹಂಚುತ್ತಿದ್ದೇವೆ’ ಅಂದೆ. ಒಳ್ಳೆಯದು, ‘ಇದು ಸಕಾಲ ಸಹಾಯ ಮಾಡುವುದಕ್ಕೆ’ ಅನ್ನುತ್ತಲೇ ‘ಅವರಿಗೆ ಎಲ್ಲಿಂದಲೋ ತುಂಬಾ ಸಹಾಯ ಬರುತ್ತದೆ. ನೋಡಿಕೊಡಿ’ ಎಂದರು. ‘ಸರ್ಕಾರವೂ ತುಂಬಾ ಸಹಾಯ ಮಾಡುತ್ತಿದೆ’ ಎಂದು ಒಂದೆರಡು ನಂಜಿನ ಮಾತನ್ನಾಡಿದರು. ಆದರೆ ಒಂದು ಮನೆಗೆ ದಿನಸಿ ಕೊಟ್ಟಾಗ ‘ತಮ್ಮ ಹಿಂಬದಿಯ ಮನೆಯ (ಬೇರೊಂದು ಧರ್ಮದ) ಬಡ ಕುಟುಂಬಕ್ಕೂ ಕೊಡಿ, ಅವರೂ ಬಡವರು. ಕಡಿಮೆ ಇದ್ದರೆ ಇದೇ ಹಂಚಿಕೊಳ್ಳುತ್ತೇವೆ ಬಿಡಿ’ ಎಂದು ಹೇಳುವ ಗುಣ ಭಾರತದ ನಿಜವಾದ ಅಂತಃಸ್ಸತ್ವ. ಭಾರತ ತನ್ನೊಳಗೆ ಪ್ರೀತಿಯ ಬೀಜವನ್ನೇ ಇಟ್ಟುಕೊಂಡಿದೆ. ಹೊರಗಿನ ಸುಡುಬೆಂಕಿ ಆರಿದ ಮೇಲೆ ಚಿಗುರುವುದು ಇದೇ ಬೀಜವೇ ಅಲ್ಲವೇ? 

ಘಟನೆ:೨ ನಮ್ಮಲ್ಲಿ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮವನ್ನು ಮೊದಲೇ ಹೇಳಿದಂತೆ ಸಂತ್ರಸ್ಥರಿಗೆ ದಿನಸಿ ಹಂಚುವ ಮೂಲಕ ಆಚರಿಸಲಾಯಿತು. ಇದರ ಭಾಗವಾಗಿ ದಿನೇಶ್ ಎನ್ನುವ ವ್ಯಕ್ತಿಗೆ ದಿನಸಿಗಳ ಪೊಟ್ಟಣ ನೀಡುವ ಮೂಲಕ ಉದ್ಘಾಟಿಸಲಾಯಿತು. ಆತ ಅಟೆಂಡರ್ ನೌಕರಿ ಮಾಡುವವನಾದರೂ ಬಡವನೆ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಆತ ನನ್ನ ಬಳಿ ಬಂದ. ‘ನನಗೆ ಏನಿಲ್ಲವೆಂದರೂ ತಿಂಗಳ ಸಂಬಳ ಬರುತ್ತಿದೆ. ಹಾಗಾಗಿ ನೀವು ಕೊಟ್ಟ ದಿನಸಿಗಳನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ನನಗಿಂತ ಬಡವರಿಗೆ ಕೊಡಿ’ ಎಂದು ಹೇಳಿದ. ‘ಇರಲಿ ಬಿಡು, ತೆಗೆದುಕೊಂಡು ಹೋಗು ಎಂದೆ’- ಆತನ ಗುಣಕ್ಕೆ ಹೆಮ್ಮೆ ಪಟ್ಟು. ಆತ ಒಪ್ಪಿಕೊಂಡ. ‘ಇದನ್ನು ನಮ್ಮ ಸುತ್ತಲಿದ್ದವರಿಗೆ ಹಂಚಲು ಒಪ್ಪಿಗೆ ನೀಡಿದರೆ ಮಾತ್ರ’ ಎಂದ. ಹ್ಞೂಂ ಎಂದೆ. ಆತ ತನ್ನ ಓಣಿಗೆ ಹೋಗಿ ಅದನ್ನು ಹಂಚಿದ್ದು ಮಾತ್ರವಲ್ಲ ಆತನ ಮನೆಯಿರುವ ಪ್ರದೇಶವನ್ನು ಸುತ್ತಿ, ಊಟಕ್ಕೂ ತೊಂದರೆ ಇರುವ ತೀರಾ ಬಡ ೧೦-೧೫ ಕುಟುಂಬಗಳ ಹೆಸರು ಪಟ್ಟಿ ತಯಾರಿ ಮಾಡಿ ಕಳುಹಿಸಿದ. ‘ಸರ್, ಇವರಿಗೂ ನೀವು ಸಹಾಯ ಮಾಡಿದರೆ ಒಳ್ಳೆಯದು ಎಂದ.’ ಅಷ್ಟು ಮಾತ್ರವಲ್ಲ ನಮ್ಮ ಅಧ್ಯಾಪಕರ ವಾಟ್ಸ ಎಪ್ ಗುಂಪಿಗೆ ಹೋಗಿ ನೋಡಿದರೆ “ಸರ್ ನೀವು ಬಡವರಿಗೆ ದಿನಸಿ ಹಂಚುತ್ತಿರುವುದು ಖುಷಿಯ ಸಂಗತಿ. ಈ ಕಾರ್ಯಕ್ಕೆ ನನ್ನ ದೇಣಿಗೆಯಾಗಿ ೧೦೦೦ ರೂ. ಕೊಡುತ್ತೇವೆ ಎಂದ; ನಂತರ ಭೇಟಿಯಾದಾಗ ಹಣವನ್ನು ನೀಡಿದ ಕೂಡ. ಆತ ಲಕ್ಷ ರೂಪಾಯಿ ಸಂಬಳ ಬರುವವನಲ್ಲ. ಸಿದ್ದಾಪುರದಲ್ಲಿ ಸ್ವಂತ ಮನೆ ಹೊಂದಿದವನೂ ಅಲ್ಲ. ಆದರೆ ಇನ್ನೊಬ್ಬರ ನೋವಿಗೆ ಮಣಿಯುವ ಮನಃಸ್ಥಿತಿ ಎಂತವರ ಕಣ್ಣನ್ನೂ ತೇವಗೊಳಿಸದೇ ಇರದು. ಹೃದಯದ ಕಣ್ಣಿದ್ದವರಿಗೆ ಇಂಥ ಸಾವಿರ ಘಟನೆಗಳು ನಮ್ಮ ಸುತ್ತಲೇ ಕಾಣುತ್ತವೆ. 

ಆಗ ನೆನಪಾದದ್ದು ಭಾರತದೊಳಗಿನ ಸೌಹಾರ್ದ ಪರಂಪರೆ ಎಂದರೆ ಭೂಮಿಯೊಳಗೆ ಹುಗಿದು ಹೋದ ಬೀಜದಂತೆ. ಸಣ್ಣ ಮಳೆ ಹನಿಯ ಸಿಂಚನವಾದರೂ ಸಾಕು. ಅದು ಮೊಳಕೆಯೊಡೆದು ಮರುಭೂಮಿಯನ್ನೂ ಹಸಿರು ಮಾಡುವ ಶಕ್ತಿ ಹೊಂದಿದೆ. ನಮಗೆ ಮಳೆ ಆಗಲು ಸಾಧ್ಯವಿಲ್ಲದಿದ್ದರೂ ಸಣ್ಣ ಹನಿಯಾದರೂ ಆಗೋಣ. 

                                                                                                                    -ವಿಠ್ಠಲ ಭಂಡಾರಿ


ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತ ಸಲ್ಲದು- ಚಿಂತನ ಉತ್ತರ ಕನ್ನಡ, ಸಹಯಾನ

 ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತ ಸಲ್ಲದು- ಚಿಂತನ ಉತ್ತರ ಕನ್ನಡ, ಸಹಯಾನ 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರತಿವರ್ಷ ಹೊರನಾಡಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮತ್ತು ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ರಾಜ್ಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಧನ ಸಹಾಯ ಮಾಡುವ, ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಗೌರವ ನೀಡುವ ... ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಆದರೆ ಪ್ರಾಧಿಕಾರವು ಅನುದಾನದ ಕೊರತೆಯಿಂದ ಇಂತಹ ಎಲ್ಲಾ ಪ್ರೋತ್ಸಾಹಕ ಕಾರ್ಯಕ್ರಮಗಳನ್ನೂ ಕೈಬಿಡುವ ತೀರ್ಮಾನ ತೆಗೆದುಕೊಂಡಿರುವುದು ದುರಾದೃಷ್ಟಕರ. ಅದರಲ್ಲೂ ಕನ್ನಡ ಸಾಹಿತ್ಯ- ಸಂಸ್ಕೃತಿ- ಭಾಷೆಯ ಅಭಿವೃದ್ಧಿಗೆ ಅಗತ್ಯವಿರುವ ಧನ ಸಹಾಯವನ್ನು ಸರ್ಕಾರ ಕಡಿತ ಮಾಡಿದ್ದನ್ನೂ ಕೂಡ ಮರುಪರಿಶೀಲಿಸುವಂತೆ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಒತ್ತಾಯಿಸುತ್ತವೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದೇ ಕನ್ನಡ ಭಾಷೆ ಸಾಹಿತ್ಯ ಕಲೆ ಸಂಸ್ಕೃತಿಯನ್ನೂ ಒಳಗೊಂಡAತೆ ನಾಡು ನುಡಿಯ ಹಿತಾಸಕ್ತಿಯ ರಕ್ಷಣೆಗಾಗಿ. ಹಾಗೆಯೇ ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳೂ ಕನ್ನಡ ಅಭಿವೃದ್ಧಿಯ ಕೆಲಸಕ್ಕೆ ಬದ್ಧವಾಗಿರುವುದಾಗಿಯೂ, ಕನ್ನಡದ ಕೆಲಸಕ್ಕೆ ಹಣಕಾಸಿನ ಕೊರತೆ ಎಂದೂ ಆಗದೆಂದು ಭರವಸೆ ನೀಡಿದ್ದನ್ನು ಮರೆತಿರುವುದು ಖಂಡನಾರ್ಹ. ಈಗಾಗಲೇ ದೇಶದ ಹಲವು ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠಗಳಿವೆ, ಅಧ್ಯಯನ ಕೇಂದ್ರಗಳಿವೆ, ಅಲ್ಲಿ ಕನ್ನಡ ಕಲಿಕೆ ಮತ್ತು ಸಂಶೋಧನೆಯ ಕೆಲಸ ನಡೆಯುತ್ತಿದೆ. ಇದು ಕನ್ನಡ ನುಡಿಯ ವಿಸ್ತರಣೆಯ ದೃಷ್ಟಿಯಿಂದ ತೀರಾ ಮಹತ್ವದ ಕೆಲಸ. ಹೊರ ರಾಜ್ಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಧನಸಹಾಯವಾಗಿ ವಿದ್ಯಾರ್ಥಿವೇತನ ನೀಡುವುದು ಕೂಡ ಕನ್ನಡದ ಅಭಿವೃದ್ಧಿಯ ಒಂದು ಭಾಗವೇ ಆಗಿದೆ. ಹೀಗೆ ಅಲ್ಪ ಮೊತ್ತದ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವುದರಿಂದ ಅವರ ಕಲಿಕೆ ಮೊಟಕಾಗುತ್ತದೆ. ಅಲ್ಲಿಯ ಕನ್ನಡ ವಿಭಾಗಗಳೇ ಮುಚ್ಚಿ ಹೋಗುವ ಅಪಾಯ ಎದುರಾಗುತ್ತದೆ. ಇದರ ಬದಲು ವಿದ್ಯಾರ್ಥಿ ವೇತನದ ಮೊತ್ತವನ್ನೂ ಈಗಿರುವ ಪ್ರಮಾಣಕ್ಕಿಂತ ಹೆಚ್ಚಿಸಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತೇವೆ. 

ಹಾಗೆಯೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕಾವಾರು ನೀಡುತ್ತಿರುವ ಪ್ರೋತ್ಸಾಹ ಮತ್ತು ಧನ ಸಹಾಯವೂ ಕೂಡ ಹಲವು ಬಡ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದೆ. ಕನ್ನಡ ಕಲಿಕೆಯ ಕುರಿತು ಅವರಲ್ಲಿ ಆಸಕ್ತಿ ಬೆಳೆಸಿದೆ. ಈ ಪ್ರೋತ್ಸಾಹ ಧನವನ್ನು ಇನ್ನಷ್ಟು ವಿದ್ತರಿಸಬೇಕಾದ ಅಗತ್ಯವಿರುವ ಸಂದರ್ಭದಲ್ಲಿ ಕನ್ನಡ ಅಭಿವದ್ಧಿ ಪ್ರಾಧಿಕಾರವು ಹಣಕಾಸಿನ ಕೊರತೆಯ ನೆಪವೊಡ್ಡಿ ಈ ಕೆಲಸವನ್ನೇ ನಿಲ್ಲಿಸುತ್ತಿರುವುದು ಸರಿಯಾದ ಕ್ರಮವಲ್ಲ. ಪ್ರಾಧಿಕಾರವು ಕನ್ನಡದ ಮನಸ್ಸುಗಳನ್ನು ಒಟ್ಟು ಸೇರಿಸಿ ಸಮಾಲೋಚಿಸಿ ಸರ್ಕಾರಕ್ಕೆ ಮನವರಿಕೆ ಮಾಡಿ, ಒತ್ತಡ ತಂದು ಹಣ ಬಿಡುಗಡೆಯ ಕೆಲಸ ಮಾಡಿಸಬೇಕೇ ಹೊರತೂ ಹಣ ನೀಡಿಲ್ಲವೆಂದು ಕಾರ್ಯಕ್ರಮಗಳನ್ನೇ ಕೈಬಿಡುವುದಲ್ಲ. ಮತ್ತು ಪ್ರಾಧಿಕಾರಕ್ಕೆ ಈಗಿರುವ ಎರಡು ಕೋಟಿಯಿಂದ ಕನಿಷ್ಟ ಹತ್ತು ಕೋಟಿ ರೂಪಾಯಿ ಅನುದಾನವನ್ನು ಹೆಚ್ಚಿಸುವುದು ಸರ್ಕಾರಕ್ಕೆ ದೊಡ್ಡ ಹೊರೆಯೇನೂ ಆಗದು. ಈ ಹಣದಲ್ಲಿ ಪ್ರಾಧಿಕಾರವು ಕನ್ನಡದ ಚಿಂತಕರು ಸಂಘಟಕರು ಮತ್ತು ಕಲಾವಿದರೊಂದಿಗೆ ಸಮಾಲೋಚಿಸಿ ಕನ್ನಡ ಕಟ್ಟುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಬೇಕೆAದು ಒತ್ತಾಯಿಸುತ್ತೇವೆ. 


ಸಂವಿಧಾನ ಓದು: 25 ಪ್ರಶ್ನೋತ್ತರ’

 

 ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಅವರ ಸಂವಿಧಾನದ ಓದು ಪುಸ್ತಕದ ಮೊದಲ ಮುದ್ರಣ ಬಿಡುಗಡೆ ಮತ್ತು 'ಸಂವಿಧಾನ ಓದು' ಅಭಿಯಾನದ ಉದ್ಘಾಟನೆ ಒಟ್ಟಿಗೆ ನಡೆದದ್ದು 2018 ಅಗಸ್ಟ 25, ಬೆಂಗಳೂರಿನಲ್ಲಿ. ಅದಕ್ಕಿಂತ ಕೆಲವು ದಿನ/ತಿಂಗಳ ಮೊದಲು ಅಥವಾ ಅದೇ ಸಂದರ್ಭದಲ್ಲಿ   ಕೆಲವು ದುಷ್ಕರ್ಮಿಗಳು ಸಂವಿಧಾನವನ್ನು ಸುಟ್ಟು ಹಾಕುವ ಕಾರ್ಯಕ್ರಮ ನಡೆಸಿದರು. ಹಲವರ ಒತ್ತಾಯದ ನಂತರ ಅವರ ಮೇಲೆ ಒಂದು ಕೇಸ್ ಹಾಕಲಾಯಿತು. ಶಿರಸಿಯಲ್ಲಿ ಕೆಲವು ಧರ್ಮಾಂಧರು 'ಸಂವಿಧಾನ ನಡೆ' ಕಾರ್ಯಕ್ರಮದ ಮೆರವಣಿಗೆ ನಡೆಸಿದ ರಸ್ತೆ ಮತ್ತು ಸಾರ್ವಜನಿಕ ಸಭೆ ನಡೆದ ಸಭಾಭವನಕ್ಕೆ ಸಗಣಿ ನೀರು, ಗೋಮೂತ್ರ ಹಾಕಿ ಶುದ್ದೀಕರಿಸಿರುವುದಾಗಿ(!?) ಹೇಳಿದರು. 'ನಾವು ಅಧಿಕಾರಕ್ಕೆ ಬಂದಿದ್ದೆ ಸಂವಿಧಾನ ಬದಲಿಸಲಿಕ್ಕೆ' ಎಂದು ಜನಪ್ರತಿನಿಧಿಯೊಬ್ಬರು ಕೂಗಾಡಿದರು...... ಇವೆಲ್ಲವೂ ಒಂದೆಡೆ ಚರ್ಚೆಯಾಗುತ್ತಿರುವಾಗಲೇ 'ಸಂವಿಧಾನ ಓದು' ಅಭಿಯಾನವನ್ನು 'ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು 'ಸಮುದಾಯ ಕರ್ನಾಟಕ' ಜಂಟಿಯಾಗಿ ಕರ್ನಾಟಕದಾದ್ಯಂತ ಪ್ರಾರಂಭಿಸಿದವು. ಪ್ರಜ್ಞಾವಂತ ಜನರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದ ಸಹಯಾನಿಗಳಾದರು. ಕರ್ನಾಟಕದ ತುಂಬಾ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನದ ಕಾರ್ಯಾಗಾರ ನಡೆದವು. ಕೆಲವು ಜಿಲ್ಲೆಗಳಲ್ಲಂತೂ ಹಲವು ಬಾರಿ ನಡೆದವು. ಹಲವು ವಿಶ್ವವಿದ್ಯಾಲಯಗಳಲ್ಲಿ ಎನ್.ಎಸ್.ಎಸ್ ಅಡಿಸಂವಿಧಾನ ಓದು' ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕರ್ನಾಟಕದ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ತಾಲೂಕುಗಳಲ್ಲಿ ಕಾರ್ಯಕ್ರಮ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿತು. ಬಹುಶಃ ತಾವೂ ಅಭಿಯಾನದಲ್ಲಿ ಒಮ್ಮೆಯಾದರೂ ಪಾಲ್ಗೊಂಡಿದ್ದೀರಿ ಮತ್ತು ಅದರ ಯಶಸ್ಸಿನಲ್ಲಿ ಪಾಲುದಾರರಾಗಿದ್ದೀರಿ ಎಂದುಕೊಂಡಿದ್ದೇವೆ.

 

ಕರ್ನಾಟಕದ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಅಭಿಯಾನದ ನೇತೃತ್ವವಹಿಸಿದ್ದರಿಂದ ಅಭಿಯಾನಕ್ಕೆ ಆನೆಬಲ ಬಂದಂತಾಯಿತು. ಈವರೆಗೆ ಸರಿ ಸುಮಾರು400-450 ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆದವು. ಕನ್ನಡದ ಪ್ರಕಾಶನದ ಇತಿಹಾಸದಲ್ಲಿಯೇ ದಾಖಲೆ ಅನ್ನುವಷ್ಟರ ಮಟ್ಟಿಗೆ ಪುಸ್ತಕ 50 ಮುದ್ರಣ ಕಂಡಿದೆ.

  'ಸಂವಿಧಾನ ಓದು' ಪುಸ್ತಕವು(ಬೆಲೆ: 50 ರೂ) ನಮ್ಮ ನಾಡಿನ ಎಲ್ಲಾ ವರ್ಗದ, ಸಮುದಾಯದ, ವಿದ್ಯಾರ್ಥಿ, ಯುವಜನರ, ಮಹಿಳೆಯರ ಅರಿವನ್ನು ವಿಸ್ತರಿಸಿತು. ಸಂವಿಧಾನದ ಕುರಿತು ಉದ್ದೇಶಪೂರ್ವಕವಾಗಿ ಹುಟ್ಟಿಸಿದ ಹಲವು ಪೂರ್ವಾಗ್ರಹಕ್ಕೆ ಸೂಕ್ತ ಉತ್ತರವಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಇನ್ನೂ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಸಂವಿಧಾನವನ್ನು ತಾವೂ ತಿಳಿದುಕೊಳ್ಳಬಹುದು ಮಾತ್ರವಲ್ಲ. ಅದಕ್ಕನುಗುಣವಾಗಿ ಬದುಕಬೇಕಾದ ಅವಶ್ಯಕತೆಇದೆ ಎನ್ನುವ ಭಾವನೆಯನ್ನು ಬೆಳೆಸಲು ಪುಸ್ತಕಕ್ಕೆ ಸಾಧ್ಯವಾಯಿತು. 30 ಜಿಲ್ಲೆಗಳಲ್ಲಿಯೂ ನಡೆದ ಕಾರ್ಯಕ್ರಮಗಳಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಸಂವಾದವೇ ನಡೆಯಿತು. ತಾವು ವಾಸ್ತವದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಅನುಮಾನಗಳಿಗೆ ಸಂವಿಧಾನ ರಿತ್ಯಾ ಉತ್ತರ ಬಯಸುತ್ತಿದ್ದರು. ಹತ್ತು ಹಲವು ಪ್ರಶ್ನೆ ಕೇಳಿ ಅಲ್ಲಿ ಉತ್ತರ ಪಡೆದರು. ಒಂದರ್ಥದಲ್ಲಿ ಸಂವಿಧಾನವನ್ನು ಅನುಸಂಧಾನಿಸುವ ಕೆಲಸ ತಳಮಟ್ಟದಿಂದ ಪ್ರಾರಂಭ ಆಯಿತು. ಕಾರ್ಯಕ್ರಮ ಮುಗಿಸಿ ಬಂದಾಗಲೂ ವಾಟ್ಸಪ್ ಮೂಲಕ, ದೂರವಾಣಿಯ ಮೂಲಕ ಒಂದಿಷ್ಟು ಪ್ರಶ್ನೆಗಳು ಬರುತ್ತಿದ್ದವು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸದೇ ಅಭಿಯಾನ ಪೂರ್ಣಗೊಳ್ಳದು ಎನ್ನುವ ಕಾರಣದಿಂದಅಭಿಯಾನದಲ್ಲಿ ಬಂದ ಎಲ್ಲಾ ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ಸೂಕ್ತ ಉತ್ತರವನ್ನು ನೀಡಿದರು. ಅಭಿಯಾನದ ಬಹು ಮಹತ್ತರ ಭಾಗವೆಂದರೆ ಸಂವಾದ ಕಾರ್ಯಕ್ರಮ. ರೀತಿಯ ಸಂವಿಧಾನ ಓದು ಅಭಿಯಾನದ ಸಂವಾದದ ಬಹು ಚರ್ಚಿತ 25 ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ನೀಡಿದ ಉತ್ತರಗಳನ್ನು ಸಂವಿಧಾನ ಓದು: 25 ಪ್ರಶ್ನೋತ್ತರ ಕೃತಿಯಲ್ಲಿ ಪ್ರಕಟಿಸಿದ್ದೇವೆ.(ಬೆಲೆ-30 ರೂ) ಅದರ ಧ್ವನಿ ಮುದ್ರಣವನ್ನು ಮೂಲಕ ನೀಡುತ್ತಿದ್ದೇವೆ. ಉತ್ತರ ಓದಿದ ಎಲ್ಲರಿಗೆ ಅನಂತ ಕೃತಜ್ಞತೆಗಳು. ಈವರೆಗೆ ನಮ್ಮ ಅಭಿಯಾನವನ್ನು ಆಯೋಜಿಸಿದ, ಬೆಂಬಲಿಸಿದ ತಮಗೆ ಅನಂತ ಕೃತಜ್ಞತೆಗಳು. ಸಂವಿಧಾನದ ಆಶಯ ನಿಮ್ಮ ನಮ್ಮ ಮನೆಗೂ ಮನಕ್ಕೂ ತಲುಪಲಿ ಎಂಬ ಆಶಯ ನಮ್ಮದು ಪುಸ್ತಕಕ್ಕಾಗಿ ಸಂಪರ್ಕಿಸಿರಿ ಡಾ. ವಿಠ್ಠಲ ಭಂಡಾರಿ ಕಾರ್ಯದರ್ಶಿ, ಸಹಯಾನ vittalbhandari@gmail.com 9448729359