Friday, 23 May 2014

ಮರುಗು, ಅಂಥ ನೆಲಕಾಗಿ.. ಖಲೀಲ್ ಗಿಬ್ರಾನ್ - ಕನ್ನಡಕ್ಕೆ: ಅನುಪಮಾ.h s

ಮರುಗು, ಅಂಥ ನೆಲಕಾಗಿ..

ನಂಬಿಕೆಯಲಿ ಮುಳುಗಿದ ಧರ್ಮಹೀನ ನಾಡಿಗಾಗಿ ಮರುಗು.
ತಾನೇ ನೇಯದ ಬಟ್ಟೆ ತೊಡುವ
ತಾ ಬೆಳೆಯದ ಅನ್ನ ಉಣುವ ನೆಲಕಾಗಿ ಮರುಗು. 

ಪುಂಡಪೋಕರಿಯ ಕಲಿವೀರನೆಂದು ಹೊಗಳುವ ನಾಡಿಗಾಗಿvಮರುಗು,
ಅಯ್ಯೋ ಪಾಪ, 
ಗೆದ್ದು ಎದೆಯುಬ್ಬಿಸುವವನ 
ಉದಾರಿಯೆಂದು ತಿಳಿವ ದೇಶಕಾಗಿ ಮರುಗು.

ಮಸಣದ ದಾರಿಯಲಿ ಹೆಜ್ಜೆಯಿಡುವಾಗಲೂ
ದನಿಯೆತ್ತದ ನಾಡಿಗಾಗಿ ಮರುಗು.
ಪಾಳು ಅವಶೇಷಗಳಲ್ಲದೆ ಹೆಮ್ಮೆಪಡಲೇನೂ ಇರದ ನಾಡಿಗಾಗಿ ಮರುಗು.
ಕತ್ತಿ ಮೊನೆಗೆ ತಲೆಯೊಪ್ಪಿಸುವಾಗಲೂ ದಂಗೆಯೇಳದ ನಾಡಿಗಾಗಿ, 
ಅಯ್ಯೋ ಪಾಪ, ಮರುಗು.

ತೋಳ ಮುತ್ಸದ್ದಿಯೆನುವ ನೆಲಕಾಗಿ ಮರುಗು.
ಜಾದೂಗಾರನೇ ತತ್ವಜ್ಞಾನಿ ಎನುವ ದೇಶಕಾಗಿ ಮರುಗು.
ತೇಪೆಹಚ್ಚಿ, ಅಣಕವಾಡುವುದೇ ಕಲೆಯೆನುವ ನಾಡಿಗಾಗಿ ಮರುಗು.

ಹೊಸ ನಾಯಕನ ಬರವಿಗೆ ಕೊಂಬುಕಹಳೆಯನೂದುವ ನೆಲಕಾಗಿ ಮರುಗು.
ಅವನಿಗೇ ವಿದಾಯ ಹೇಳಲು ಚೀತ್ಕರಿಸಿ ಫೂತ್ಕರಿಸಿ 
ಬರಲಿರುವ ಹೊಸ ನಾಯಕಗೆ ಕಹಳೆಯೂದುವ ಜನಕಾಗಿ ಮರುಗು.

ವರುಷಗಟ್ಟಲೆ ಮೂಕರಾಗುಳಿವ ಸಂತರ
ತೊಟ್ಟಿಲ ಕೂಸುಗಳಾಗೇ ಇರುವ ವೀರರ ನೆಲಕಾಗಿ ಮರುಗು.

ದೇಶ ಒಡೆದು ಚೂರುಚೂರಾದರೂ
ಒಡೆದ ಪ್ರತಿ ಚೂರೂ ತಾನೇ ದೇಶವೆನುವ ನೆಲಕಾಗಿ
ನಾಡಿಗಾಗಿ, ಜನರಿಗಾಗಿ 
ಅಯ್ಯೋ ಪಾಪ, 
ಮರುಗು..

- ಖಲೀಲ್ ಗಿಬ್ರಾನ್
- ಕನ್ನಡಕ್ಕೆ: ಅನುಪಮಾ




“Pity the nation that is full of beliefs and empty of religion.
Pity the nation that wears a cloth it does not weave
and eats a bread it does not harvest.
Pity the nation that acclaims the bully as hero,
and that deems the glittering conqueror bountiful.
Pity a nation that despises a passion in its dream,
yet submits in its awakening.

Pity the nation that raises not its voice
save when it walks in a funeral,
boasts not except among its ruins,
and will rebel not save when its neck is laid
between the sword and the block.

Pity the nation whose statesman is a fox,
whose philosopher is a juggler,
and whose art is the art of patching and mimicking

Pity the nation that welcomes its new ruler with trumpeting,
and farewells him with hooting,
only to welcome another with trumpeting again.

Pity the nation whose sages are dumb with years
and whose strongmen are yet in the cradle.

Pity the nation divided into fragments,
each fragment deeming itself a nation.”