Sunday 20 April 2014

ಸಹಯಾನ ಸಾಹಿತ್ಯೋತ್ಸವ-2014 ರ ಸರ್ವಾಧ್ಯಕ್ಷರಾಗಿ ಎಚ್. ಎಸ್. ರಾಘವೇಂದ್ರರಾವ್



                            ಸಹಯಾನ ಸಾಹಿತ್ಯೋತ್ಸವ-2014 ರ 
                          ಸರ್ವಾಧ್ಯಕ್ಷರಾಗಿ ಎಚ್. ಎಸ್. ರಾಘವೇಂದ್ರರಾವ್


ಪ್ರತಿ ವರ್ಷದಂತೆ 'ಸಹಯಾನ'ದಿಂದ ಮೇ 11, 2014 ರಂದು ರವಿವಾರ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಸಲಾಗುತ್ತಿದ್ದೇವೆ. ಓದುವ ಸಂಸ್ಕೃತಿ : ಹೊಸ ತಲೆಮಾರು' ಎನ್ನುವ ವಿಷಯದ ಮೇಲೆ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದ್ದು ಖ್ಯಾತ ವಿಮರ್ಶಕ, ಲೇಖಕ ಡಾ. ಎಚ್. ಎಸ್. ರಾಘವೇಂದ್ರರಾವ್ ಅವರು ಉತ್ಸವದ ಸರ್ಧ್ಯವಾಕ್ಷತೆ ವಹಿಸಿಕೊಳ್ಳಲಿದ್ದಾರೆ.


ಡಾ. ಎಚ್.ಎಸ್.ರಾಘವೇಂದ್ರರಾವ್ರವರು ಖ್ಯಾತ ವಿಮರ್ಶಕರು, ಕನ್ನಡದ ನಿವೃತ್ತ ಪ್ರಾಧ್ಯಾಪಕರು ಮತ್ತು ಅನುವಾದಕರು. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜು, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಮೈಸೂರಿನ ಸಿಐಐಎಲ್ ಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಬೇಂದ್ರೆ, ಕುವೆಂಪು ಮತ್ತು ಪುತಿನ ಅವರ ಕಾವ್ಯಗಳ ತೌಲನಿಕ ಅಧ್ಯಯನಕ್ಕಾಗಿ ಪಿಎಚ್.ಡಿ ಪಡೆದಿದ್ದಾರೆ. 'ವಿಶ್ಲೇಷಣೆ', 'ನಿಲುವು', 'ಪ್ರಗತಿಶೀಲತೆ', 'ಹಾಡೆ ಹಾದಿಯ ತೋರಿತು', 'ತರುತಳೆದ ಪುಷ್ಪ', 'ನಮಸ್ಕಾರ', 'ಸಂಗಡ ಮತ್ತು ಚರ್ಕವತರ್ಿಯ ಬಟ್ಟೆಗಳು', 'ಕಣ್ಣಹನಿಗಳೆ ಕಾಣಿಕೆ' ಇವು ಸಾಹಿತ್ಯ ವಿಮಶರ್ೆಗಳು. 'ಜನಗಣಮನ' ಪ್ರವಾಸ ಸಾಹಿತ್ಯ, ನವಸಾಕ್ಷರರಿಗಾಗಿ 'ಹುಡುಕಾಟ', 'ಪ್ರೀತಿಸುವುದೆಂದರೆ', 'ಸಂಸ್ಕೃತಿ ಸಂಗತಿ', 'ಶಿಕ್ಷಣ ಮತ್ತು ಜೀವನ', 'ಇರುವೆಗಳು ಮತ್ತು ಇತರ ಕಥೆಗಳು' ಮತ್ತು 'ಬಾಲಮೇಧಾವಿ' ಅನುವಾದ ಕೃತಿಗಳು, 'ಶತಮಾನದ ಸಾಹಿತ್ಯ ವಿಮಶರ್ೆ', 'ಸಾಹಿತ್ಯ ಸಂವಾದ', 'ಭೃಂಗ ಮಾರ್ಗ', 'ಅವಗಾಹ', 'ಪ್ರಾಚೀನ ಕಾವ್ಯಮಾರ್ಗ ಮತ್ತು ಇಂದಿನ ಕವಿತೆ' ಸಂಪಾದಿತ ಕೃತಿಗಳು, ಅನಿಕೇತನ ಮತ್ತು ಸಿರಿಗನ್ನಡಗಳ ಸಂಪಾದಕರಾಗಿ ಕೆಲಸ ಮಾಡಿದ ಇವರಿಗೆ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ.ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ, ಕನರ್ಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಜಿ.ಎಸ್.ಎಸ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರಶಸ್ತಿ, ವಿ.ಎಂ.ಇನಾಮದಾರ್ ಪ್ರಶಸ್ತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಇವರಿಗೆ ದೊರೆತಿದೆ. ಇವರು ಡಾ. ಆರ್. ವಿ. ಭಂಡಾರಿಯವರ ಆತ್ಮೀಯ ಗೆಳೆಯರೂ ಆಗಿದ್ದರು ಎನ್ನು ವುದು ಕೂಡ ಖುಶಿಯ ಸಂಗತಿ.


             ಈ ಸಾಹಿತ್ಯೋತ್ಸವದಲ್ಲಿ ವಿಚಾರ ಸಂಕಿರಣ, ಸಂವಾದ, ಕವಿಗೋಷ್ಠಿ, ಜಾನಪದ ಕಲಾ ಪ್ರದರ್ಶನ, ನಾಟಕ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದು ಡಾ. ಆರ್.ವಿ. ಭಂಡಾರಿಯವರ ನೆನಪಿನಲ್ಲಿ ನಡೆಯುವ ಈ ಸಾಹಿತ್ಯೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲೇಖಕರು, ಚಿಂತಕರು ಭಾಗವಹಿಸುತ್ತಿದ್ದಾರೆ. ಆರ್. ವಿ. ಭಂಡಾರಿಯವರ ಒಂದು ಪುಸ್ತಕವೂ ಬಿಡುಗಡೆಗೊಳ್ಳಲಿದೆ. ಅವರ ನೆನಪಿನಲ್ಲಿ ಒಂದು ಸಾಂಸ್ಕೃತಿಕ ಕೇಂದ್ರ ಕಟ್ಟುವ ಕಾಯಕದ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ 'ಸಹಯಾನ'ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾಯರ್ಾಧ್ಯಕ್ಷರಾದ ವಿಷ್ಣು ನಾಯ್ಕ,ವಿನಂತಿಸಿಕೊಂಡಿದ್ದಾರೆ. 

ವಿಠ್ಠಲ ಭಂಡಾರಿ, ಕೆರೆಕೋಣ
ಕಾರ್ಯದರ್ಶಿ

Wednesday 9 April 2014

ಸಾಹಿತ್ಯ ಮತ್ತು ಚಳುವಳಿಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ ಮಹಿಳೆಯರು ಇಲ್ಲಿ ಸಂಧಿಸಿದ್ದಾರೆ - ಎಂ ಜಿ ಹೆಗಡೆ

ಸಾಹಿತ್ಯ ಮತ್ತು ಚಳುವಳಿಯನ್ನು ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ 
ಮಹಿಳೆಯರು ಇಲ್ಲಿ ಸಂಧಿಸಿದ್ದಾರೆ - ಎಂ ಜಿ ಹೆಗಡೆ

'ಶೋಷಣೆಯ ಮೂರ್ತರೂಪ ಅನುಭವಿಸಿದವರು ಮತ್ತು ಮೇಲ್ಮಧ್ಯಮ ವರ್ಗಗಳ ಫಲ ಅನುಭವಿಸಿದ ಜಾಗೃತ ಮಹಿಳೆಯರು ಎನ್ನುವ ಎರಡು ಜಗತ್ತಿನ ಅನಾವರಣ ಇಲ್ಲಿ ಆಗಿದೆ; ಅವು ಪರಸ್ಪರ ಸಂಧಿಸಿವೆ. ಶೋಷಣೆಯನ್ನು ಎದುರಿಸುವ ಶಕ್ತಿಯನ್ನು ಶಿಕ್ಷಣದಿಂದ ಪಡೆದ, ಶೋಷಣೆ ಸಹಿಸಿ, ಎದುರಿಸಿದ ಮಹಿಳೆಯರು ಚಳುವಳಿಯ ಭಾಷೆಯತ್ತ ಸಾಗಿದ್ದಾರೆ. ಆದರೆ ಅವರಿಗೆ ಸಾಹಿತ್ಯಿಕ ಅಭಿವ್ಯಕ್ತಿ ಕಡಿಮೆ. ಚಳುವಳಿಯ ಅಗತ್ಯತೆಯನ್ನು ಪ್ರಶ್ನಿಸುವವರು ಈಗಾಗಲೇ ಸಮಾಜದ ಮುಖ್ಯವಾಹಿನಿಯಲ್ಲಿದ್ದವರು. ಇವರು ಸಮಾನತೆಯ ಮೌನವಾಗಿರುವುದರಿಂದಲೇ, ಬದುಕಿನ ವಾಸ್ತವವನ್ನು ನಿರಾಕರಿಸಿದ್ದರಿಂದಲೇ ಪ್ರತ್ಯೇಕವಾಗಿ ಚಿಂತಿಸುವ ಅಗತ್ಯ ಬಂದಿದೆ. ಮೊದಲ ಜನಾಂಗವೇ ಇನ್ನೂ ಶಿಕ್ಷಣ ಪಡೆಯದಿರುವಾಗ ಈಗಾಗಲೇ ಮುಂದುವರಿದ ಮಹಿಳಾ ವಿಭಾಗ ಅವರ ಜೊತೆಗೆ ಹತ್ತಿರವಾದ ಸಂಬಂಧ ಕಟ್ಟಿಕೊಳ್ಳುತ್ತಾ ಸಾಗಬೇಕಿದೆ.' ಹಾಗಾಗಿ ಸಿದ್ಧ ಉಪಮೆಗಳನ್ನು ಬದಿಗೊತ್ತಿ ನೈಜ ಬದುಕನ್ನು ಚಿತ್ರಿಸುವಲ್ಲಿ ಈ ಸಮಾವೇಶ ಉಶಸ್ವಿಯಾಗಿದೆ.' ಎಂದು ಡಾ. ಎಂ.ಜಿ.ಹೆಗಡೆ ಅವರು ಇತ್ತೀಚೆಗೆ 'ಮಹಿಳೆ ಸಾಂಸ್ಕೃತಿಕ ಅಭಿವ್ಯಕ್ತಿ' ಕುರಿತು ಚಿಂತನ ಉತ್ತರ ಕನ್ನಡ ಸಂಘಟಿಸಿದ ಉತ್ತರ ಕನ್ನಡ ಜಿಲ್ಲೆಯ ಲೇಖಕಿ, ಕಲಾವಿದೆ, ಚಿಂತಕರ ಯಶಸ್ವಿ ಸಮಾವೇಶದ ಸಮಾರೋಪ ಮಾತನಾಡುತ್ತಾ ಹೀಗೆ ಹೇಳಿದರು.

.
         ಜಿಲ್ಲೆಯ ಲೇಖಕಿ, ಕಲಾವಿದೆ, ಚಿಂತಕಿಯರ ಸಮಾವೇಶದಲ್ಲಿ ದಿನ ಪೂತರ್ಿ ನಡೆದ ಚಚರ್ೆಯು  ಲೇಖಕಿಯರ ಸಂಘವೊಂದನ್ನು ರಚಿಸುವ ಅಗತ್ಯವನ್ನು ಮನದಟ್ಟು ಮಾಡಿತು. ಇದರ ಭಾಗವಾಗಿ ರಚನೆಗೊಂಡ ಉತ್ತರ ಕನ್ನಡ ಜಿಲ್ಲಾ ಲೇಖಕಿಯರ ಸಂಘವು ಮಾಧವಿ ಭಂಡಾರಿ ಕೆರೆಕೋಣ, ಡಾ.ಎಚ್.ಎಸ್.ಅನುಪಮಾ, ವಿನಯಾ ವಕ್ಕುಂದ, ದೀಪಾ ಹಿರೇಗುತ್ತಿ, ರತ್ನಾಯ ವೆಳಿಪ್, ಸುಕನ್ಯಾ ದೇಸಾಯಿ, ಲಕ್ಷ್ಮಿ ಸಿದ್ದಿ, ರೇಣುಕಾ ರಮಾನಂದ, ಅಕ್ಷತಾ ಕೃಷ್ಣಮೂತರ್ಿ, ನುಗ್ಲಿ ಗೌಡ, ಶೈಲಜಾ ಗೋರ್ನಮನೆ, ಯಮುನಾ ಗಾಂವ್ಕರ್ ಇವರನ್ನೊಳಗೊಂಡ ಸಮಿತಿಯನ್ನು  ಆಯ್ಕೆಮಾಡಿಕೊಳ್ಳಲಾಯಿತು.

. ಚಿಂತನದ ಜಿಲ್ಲಾ ಸಂಚಾಲಕ ವಿಠ್ಠಲ ಭಂಡಾರಿ ವಂದಿಸಿದರು. ಯಮುನಾ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು.