Tuesday, 29 September 2015

Monday, 28 September 2015

 
ಉರಿಯ ಉಯ್ಯಾಲೆ-ನಟನೆ- ಮಾಧವಿ ಭಂಡಾರಿ ಕೆರೆಕೋಣ (ನಿರ್ದೇಶನ- ಶ್ರೀಪಾದ ಭಟ್) -chintana Ranga Adhyayana Kendra

Sunday, 20 September 2015

ಅಧ್ಯಯನ ಶಿಬಿರ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಅಕ್ಟೋಬರ್ 4-5, 2015

ಅಧ್ಯಯನ ಶಿಬಿರ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು
ಅಕ್ಟೋಬರ್ 4-5, 2015

ಸಮುದಾಯ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಎಂಬ ವಿಷಯದ ಮೇಲೆ ಅಧ್ಯಯನ ಶಿಬಿರವನ್ನು ಕಲಾವಿದ ಗೆಳೆಯರಾದ ಸೊಲಬಕ್ಕನವರ ಕಲಾ ಸಂಕೀರ್ಣ ಉತ್ಸವ್ ರಾಕ್ ಗಾರ್ಡನ್ನಲ್ಲಿ (ಗೊಟಗೋಡಿ, ಶಿಗ್ಗಾಂವ್, ಹಾವೇರಿ) ಅಕ್ಟೋಬರ್ 4-5, 2015 ರಂದು ನಡೆಸಲಿದೆ.
ಈ ಕಲಾ ಸಂಕೀರ್ಣವು ಶಿಗ್ಗಾಂವ್ನಿಂದ ಹುಬ್ಬಳ್ಳಿ ಕಡೆ ಕೇವಲ ಐದು ಕಿ.ಮಿ. ದೂರದಲ್ಲಿದೆ. ರಾಜ್ಯದ ಉತ್ತರ ಭಾಗದಿಂದ ರೈಲಿನಲ್ಲಿ ಬರುವವರು ಹುಬ್ಬಳ್ಳಿಯಲ್ಲಿ ಇಳಿದು ಅಲ್ಲಿಂದ ಕೇವಲ 35 ಕಿ.ಮಿ. ಶಿಗ್ಗಾಂವ್ ಕಡೆ ಇರುವ ಗೋಟಗೋಡಿಗೆ ರಸ್ತೆ ಮೂಲಕ ಬರಬಹುದು. ದಕ್ಷಿಣ ಭಾಗದಿಂದ ಬರುವವರು ಹಾವೇರಿ ರೈಲು ನಿಲ್ದಾಣದಲ್ಲಿ ಇಳಿದು ಶಿಗ್ಗಾಂವ್ ಕಡೆ ರಸ್ತೆಯಲ್ಲಿ ಬರಬಹುದು.

ಸಮುದಾಯ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಲ್ಲದೆ, ಈ ವಿಷಯದಲ್ಲಿ ಆಸಕ್ತರಾದ (ಹೆಚ್ಚಾಗಿ ಯುವಜನರಾದ) ಲೇಖಕರು, ಕಲಾವಿದರು, ವಿದ್ಯಾಥರ್ಿಗಳು, ಅಧ್ಯಾಪಕರು, ಚಳುವಳಿಗಾರರು, ಚಿಂತಕರು ಈ ಶಿಬಿರದಲ್ಲಿ ರಿಜಿಸ್ಟರ್ ಮಾಡಲು ಅವಕಾಶ ಇರುತ್ತದೆ. ಒಟ್ಟು ಸುಮಾರು 100ರಷ್ಟು ಶಿಬಿರಾಥರ್ಿಗಳಿಗೆ ವ್ಯವಸ್ಥೆ ಇರುತ್ತದೆ.

ಅಧ್ಯಯನ ಶಿಬಿರದಲ್ಲಿ ನಾಲ್ಕು ಪ್ರಮುಖ ವಿಷಯಗಳಿರುತ್ತವೆ. ಅಧ್ಯಯನ ಶಿಬಿರದ ಒಟ್ಟು ಆಶಯ ಮತ್ತು ಪ್ರತಿಯೊಂದು ವಿಷಯದ ವ್ಯಾಪ್ತಿ ಬಗ್ಗೆ ಒಂದು ಟಿಪ್ಪಣಿಯನ್ನು ಇಲ್ಲಿ ಲಗತ್ತಿಸಲಾಗಿದೆ. ಪ್ರತಿ ವಿಷಯದ ಬಗ್ಗೆ ಒಬ್ಬ ಪರಿಣತರು ವಿಷಯ ಮಂಡನೆ ಮಾಡುತ್ತಾರೆ. ಆ ಮೇಲೆ ವಿಷಯದ ಬಗ್ಗೆ ಸಂವಾದ ಇರುತ್ತದೆ. ಅಧ್ಯಯನ ಶಿಬಿರ ಮತ್ತು ಸಂವಾದ ಗಂಭೀರವಾಗಿಯೂ ಉಪಯೋಗಿಯೂ ಹಾಗೂ ಪ್ರಬುದ್ಧವಾಗಿರುವಂತೆ ಶಿಬಿರಾಥರ್ಿಗಳಿಗೆ ಶಿಬಿರದ ಮೊದಲೇ ವಿಷಯದ ಬಗ್ಗೆ ಪರಿಣತರ ಪ್ರಬಂಧ ಮತ್ತು ವಿಷಯಕ್ಕೆ ಬೇಕಾದ ಪೂರ್ವ-ತಯಾರಿ ಓದು-ಅಧ್ಯಯನ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ.

ಅಧ್ಯಯನ ಶಿಬಿರದ ವಿಷಯಗಳ ಬಗ್ಗೆ ಪ್ರಸ್ತುತ ಪಡಿಸುವ ಪ್ರಬಂಧದ ಸಾರ(ಅಬ್ಸ್ಟ್ರಾಕ್ಟ್)ವನ್ನು ಸೆಪ್ಟೆಂಬರ್ 19ರೊಳಗೆ, ವಿಷಯದ ಬಗ್ಗೆ ಪ್ರಬಂಧವನ್ನು ಸೆಪ್ಟೆಂಬರ್ 27ರೊಳಗೆ ಕಳಿಸಬೇಕೆಂದು ವಿಷಯ ಪರಿಣತರನ್ನು ಕೋರಲಾಗುತ್ತದೆ. ಅಧ್ಯಯನ ಶಿಬಿರದ ಪ್ರಬಂಧಗಳನ್ನು ಮತ್ತು ಸಂವಾದದ ಸಾರವನ್ನು ಪುಸ್ತಕವಾಗಿ ಪ್ರಕಟಿಸುವ ಯೋಜನೆ ಇದೆ.
ಅಧ್ಯಯನ ಶಿಬಿರ ಸಂಚಾಲಕ ಸಮಿತಿ
ಸಂಪರ್ಕ ದೂರವಾಣಿ: ಸುರೇಂದ್ರ ರಾವ್-9449528643/ವಸಂತರಾಜ್-9845172249/ವಿಮಲ ಕೆ ಎಸ್-9448072431/ ಇಳಿಗೇರ್ ಬಿ.ಐ. 9880604167
ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು
ಸಮುದಾಯ ಅಧ್ಯಯನ ಶಿಬಿರ: ಗೊಟಗೋಡಿ, ಶಿಗ್ಗಾಂವ್ ಹಾವೇರಿ ಅಕ್ಟೋಬರ್ 4-5, 2015
ಆಶಯ ಟಿಪ್ಪಣಿ
ನಾವು ಎದುರಿಸುತ್ತಿರುವ ಸಮಕಾಲೀನ ಸವಾಲುಗಳು ಹಲವು. ಕೋಮು ಸಂಘರ್ಷ, ಜಾತಿಭೇದ-ಅಸ್ಪೃಶ್ಯತೆ, ಲಿಂಗ ತಾರತಮ್ಯ ಮತ್ತು ಅವುಗಳ ಫಲಿತವಾಗಿರುವ ಅಸಹನೆ, ದ್ವೇಷ, ಹಿಂಸಾಚಾರ, ದಮನ, ಅತ್ಯಾಚಾರಗಳು ಕಣ್ಣಿಗೆ ಹೊಡೆದು ಕಾಣುವಂಥವು. ಈ ಸಮಸ್ಯೆಗಳಲ್ಲದೆ ಬಡತನ, ಅಜ್ಞಾನಗಳನ್ನು ಹೋಗಲಾಡಿಸುವ ಎಲ್ಲರ ಕನಿಷ್ಟ ಆವಶ್ಯಕತೆಗಳನ್ನು ಪೂರೈಸಿ ಘನತೆಯ ತುಂಬು ಬದುಕು ಕೊಡುವ ಅತಿ ದೊಡ್ಡ ಸಮಸ್ಯೆಯಂತೂ ನಮ್ಮನ್ನು ಕಾಡುತ್ತಲೇ ಇದೆ. ಈ ಎಲ್ಲದರ ಜತೆಗೆ ವರ್ಗ ವೈಷಮ್ಯವೂ ನಮ್ಮನ್ನು ಕಾಡುತ್ತಲೇ ಇದೆ. ಈ ಎಲ್ಲಾ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಮತ್ತು ಅವನ್ನು ಎದುರಿಸಲು ಪರಿಹರಿಸಲು ನಮಗೆ ಇರುವ ಸ್ವಾಯತ್ತತೆಯನ್ನು ಕಸಿದುಕೊಳ್ಳುವಂತೆ ಕಾಣಿಸುವ ಜಾಗತೀಕರಣದ ವಿದ್ಯಮಾನವೂ ಇದೆ. ಮನುಕುಲದ ನಾಶಕ್ಕೆ ಕಾರಣವಾಗಬಲ್ಲ (ಪ್ರಾಕೃತಿಕ ಸಂಪನ್ಮೂಲಗಳು ಬರಿದಾಗುವ, ಹವಾಮಾನ ಬದಲಾವಣೆ) ತೀವ್ರ ಪರಿಸರ ಸಮಸ್ಯೆಗಳೂ ನಮ್ಮ ಮುಂದಿವೆ.
ಈ ಸಮಸ್ಯೆಗಳು ಪೂರ್ಣವಾಗಿ ಪ್ರತ್ಯೇಕ ಸಮಸ್ಯೆಗಳಲ್ಲ. ಪರಸ್ಪರ ಸಂಬಂಧ ಇರುವುವು, ಒಂದಕ್ಕೊಂದು ಹೆಣೆದುಕೊಂಡು ಇರುವುವು. ಆದ್ದರಿಂದ ಹೆಚ್ಚಾಗಿ ಒಂದು ಸಮಸ್ಯೆಯನ್ನು ಪ್ರತ್ಯೇಕವಾಗಿ ಬಗೆಹರಿಸಲು ಬಾರದಂಥವು. ಇನ್ನೊಂದು ರೀತಿಯಲ್ಲಿ ಇವೆಲ್ಲವು ಸಮಾಜದ ಬೆಳವಣಿಗೆಯ ಹಲವು ಘಟ್ಟಗಳಲ್ಲಿ ಮಾನವ-ಮಾನವರ ನಡುವೆ ಬೆಳೆದ ಹಲವು ಬಗೆಯ- ಜಾತಿ, ಲಿಂಗ, ಧರ್ಮ, ವರ್ಗ - ಅಸಮಾನತೆಗಳ ಸಮಸ್ಯೆ. ಈ ಎಲ್ಲಾ ಸಮಸ್ಯೆಗಳು ಹಲವು ಶತಕಗಳಿಂದ ಬೆಳೆದು ಬಂದಿದ್ದು, ಸಮಕಾಲೀನ ಸಂದರ್ಭದಲ್ಲಿ ಅವುಗಳಿಗೆ ನಿದರ್ಿಷ್ಟ ಸಾಮಾಜಿಕ, ಆಥರ್ಿಕ, ರಾಜಕೀಯ, ಸಾಂಸ್ಕೃತಿಕ ಆಯಾಮಗಳಿವೆ.
ಈ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಅದರ ಮೂಲ ಬೇರುಗಳನ್ನು ಗುರುತಿಸಿ ಅವುಗಳ ಪರಿಹಾರಗಳನ್ನು ಹುಡುಕಲು ಹಲವು ಸಿದ್ಧಾಂತಗಳು ಪ್ರಯತ್ನಿಸಿವೆ. ಕೆಲವು ಸಿದ್ಧಾಂತಗಳು ಕೆಲವು ನಿದರ್ಿಷ್ಟ ಸಮಸ್ಯೆಗಳಿಗೆ ಸೀಮಿತವಾಗುವ ತಾತ್ವಿಕ ಚೌಕಟ್ಟು ಒದಗಿಸಿದರೆ, ಇನ್ನೂ ಕೆಲವು ಇವೆಲ್ಲವನ್ನೂ ಸಮಗ್ರವಾಗಿ ವಿಶ್ಲéೇಷಿಸಿ ಸಮಗ್ರ ಪರಿಹಾರ ಕೊಡುವ ಪ್ರಯತ್ನ ನಡೆಸಿವೆ. ಸೆಕ್ಯುಲರ್ವಾದ, ಮಹಿಳಾವಾದ, ಪರಿಸರವಾದ ಮೊದಲ ಬಗೆಯ ಸಿದ್ಧಾಂತಗಳಾದರೆ; ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ವಾದ, ಮಾಕ್ಸರ್್ವಾದ, ಮಾಕ್ಸರ್ೋತ್ತರವಾದ ಎನ್ನಬಹುದಾದ (ವಸಾಹತೋತ್ತರವಾದ, ರಾಚನಿಕೋತ್ತರವಾದ, ಆಧುನಿಕೋತ್ತರವಾದ ಇತ್ಯಾದಿ) ಹಲವು ವಾದಗಳು ಎರಡನೆಯ ಬಗೆಯವು. ಮಹಿಳಾವಾದ, ಪರಿಸರವಾದ ಸಹ ಎರಡನೆಯ ಬಗೆಯವು ಎಂದು ವಾದಿಸುವವರೂ ಇದ್ದಾರೆ. ಇವಲ್ಲದೆ ಪ್ರತಿ ಸಮಸ್ಯೆಯನ್ನೂ ಬಿಡಿಬಿಡಿಯಾಗಿ 'ರಾಜಕೀಯ-ಮುಕ್ತ'ವಾಗಿ ನೋಡುವ ಎನ್.ಜಿ.ಒ.ಗಳ ಸಿದ್ಧಾಂತಗಳೂ ಇವೆ.
ಪ್ರತಿ ಸಮಸ್ಯೆಗೆ ವಿವಿಧ ಸಿದ್ಧಾಂತಗಳು ಕೊಡುವ ವಿಶ್ಲೇಷಣೆ, ಒಳನೋಟಗಳನ್ನು ತಿಳಿದುಕೊಳ್ಳಲು ಹಾಗೂ ಪರಿಹಾರಕ್ಕೆ ಅನುವು ಮಾಡಿಕೊಡುವ ಇವುಗಳ ಸಾಮಾನ್ಯ ಎಳೆಗಳನ್ನು ಗುರುತಿಸಲು ಪ್ರಯತ್ನಿಸುವುದು, ಆ ಪ್ರಕ್ರಿಯೆಯಲ್ಲಿ ಕಂಟಕವಾಗುವ ಸಿದ್ದಾಂತಗಳನ್ನು ಗುರುತಿಸಿ ತಿರಸ್ಕರಿಸುವುದು ಈ ಅಧ್ಯಯನ ಶಿಬಿರದ ಉದ್ದೇಶ. ಎಲ್ಲಾ ರೀತಿಯ ಅಸಮಾನತೆ ಹೋಗಲಾಡಿಸುವ ಸಮೃದ್ಧ ಸಮಾಜ ಕಟ್ಟುವ ಆಶಯ ಈ ಎಲ್ಲಾ ವಿಷಯಗಳಲ್ಲಿ ಅಂತರ್ಗತವಾಗಿರುತ್ತದೆ. ಮೇಲೆ ಹೇಳಿದ ಚೌಕಟ್ಟಿನ ಆಧಾರದ ಮೇಲೆ ಅಧ್ಯಯನ ಶಿಬಿರದ ವಿಷಯಗಳನ್ನು ಆರಿಸಲಾಗಿದೆ. ಸಮಕಾಲೀನ ಸವಾಲುಗಳನ್ನು ಅರ್ಥಮಾಡಿಕೊಳ್ಳಬಯಸುವ ಎಲ್ಲಾ ಆಸಕ್ತರಿಗೂ ಅಧ್ಯಯನ ಶಿಬಿರ ತೆರೆದಿರುತ್ತದೆ. ಶಿಬಿರದಲ್ಲಿ ಈ ಕೆಳಗಿನ 4 ಪ್ರಮುಖ ವಿಷಯಗಳ ಬಗ್ಗೆ ಪರಿಣತರು ಪ್ರಬಂಧ ಮಂಡಿಸುತ್ತಾರೆ.

ಆಶಯ ಭಾಷಣ : ರಹಮತ್ ತರಿಕೆರೆ
ಸೆಕ್ಯುಲರ್ ವಾದ : ರಾಜೇಂದ್ರ ಚೆನ್ನಿ
ಸಾಮಾಜಿಕ ನ್ಯಾಯ : ಫಣಿರಾಜ್ ಕೆ.
ಮಹಿಳಾವಾದ : ಆಶಾದೇವಿ ಎಂ.ಎಸ್.
ಜಾಗತೀಕರಣ ಮತ್ತು ಪಯರ್ಾಯ : ವಿ.ಎನ್. ಲಕ್ಷ್ಮಿನಾರಾಯಣ್
ಪ್ರತಿ ವಿಷಯದ ವ್ಯಾಪ್ತಿಯ ವಿವರಗಳನ್ನು ಮುಂದೆ ಕೊಡಲಾಗಿದೆ. ಪ್ರತಿ ವಿಷಯದ ಪ್ರಬಂಧ ಮಂಡನೆಗೆ 1 ಗಂಟೆ ಮತ್ತು ಸಂವಾದಕ್ಕೆ 1 ಗಂಟೆ ಇರುತ್ತದೆ

ವಿಷಯದ ವ್ಯಾಪ್ತಿ

ಸೆಕ್ಯುಲರ್ವಾದ

ಬಹುಧಮರ್ೀಯ ಬಹುಸಂಸ್ಕೃತಿಯ ಸ್ವತಂತ್ರ ಭಾರತ ಗಣರಾಜ್ಯದಲ್ಲಿ ಸೆಕ್ಯುಲರ್ವಾದ ಆರಂಭದಲ್ಲಿ ಎಲ್ಲರಿಗೂ ಒಪ್ಪಿತವಾದ ನೀತಿಯಾಗಿತ್ತು. ಪ್ರಭುತ್ವ/ರಾಜಕಾರಣ ಮತ್ತು ಧರ್ಮವನ್ನು ಪ್ರತ್ಯೇಕಿಸಬೇಕು, ಪ್ರಭುತ್ವ ಎಲ್ಲಾ ಧಾಮರ್ಿಕ ಸಮುದಾಯಗಳನ್ನು ಸಮಾನರೀತಿಯಲ್ಲಿ ಕಾಣಬೇಕು ಹಾಗೂ ಕೋಮುಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂಬ ಆಶಯಗಳ ಬಗ್ಗೆ ಹೆಚ್ಚಿನ ತಕರಾರು ಇರಲಿಲ್ಲ. ಕೋಮುದಂಗೆಗಳು, ಕೋಮುವಾದಿ ರಾಜಕಾರಣ ಮತ್ತು ಸೆಕ್ಯುಲರ್ವಾದದ ಮೇಲೆ ದಾಳಿ ಅಂದಿನಿಂದಲೂ ಇದ್ದರೂ, ಅದು ವ್ಯಾಪಕವಾಗಿರಲಿಲ್ಲ. ಜನಮಾನಸವನ್ನು ಹಿಡಿದಿರಲಿಲ್ಲ. ಕಳೆದ 2-3 ದಶಕಗಳಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಮತ್ತು ಜನಮಾನಸವನ್ನು ಸಹ ದೊಡ್ಡದಾಗಿ ಆವರಿಸಿರುವ ಸೆಕ್ಯುಲರ್ವಾದದ ಬಗ್ಗೆ ತಕರಾರುಗಳು ದಾಳಿಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ತಕರಾರುಗಳು ಯಾವುವು? ಅವನ್ನು ತಾತ್ವಿಕವಾಗಿ ಎದುರಿಸುವುದು ಹೇಗೆ? ಸೆಕ್ಯುಲರ್ವಾದದ ತಾತ್ವಿಕತೆಯಲ್ಲಿ ಮತ್ತು ಆಚರಣೆಗಳಲ್ಲಿ ನ್ಯೂನ್ಯತೆಗಳು ಇಲ್ಲವೇ? ಇದ್ದರೆ ಅವು ಯಾವುವು? ಹಲವು ಟೀಕಾಕಾರರು ಹೇಳುವಂತೆ ಸೆಕ್ಯುಲರ್ವಾದವನ್ನು ಪಶ್ಚಿಮದಿಂದ ಹೇರಲಾಗಿದೆಯೆ? ನಮ್ಮ ಜನಸಂಸ್ಕೃತಿ ಸೆಕ್ಯುಲರ್ ಆಗಿಲ್ಲವೆ? ಅಲ್ಲದಿದ್ದರೆ, ಈ ನೆಲದಲ್ಲ್ಲಿ ಜನಸಂಸ್ಕೃತಿಗಳು ಬೇರೂರಲಾರವೇ? ಸೆಕ್ಯುಲರ್ವಾದವನ್ನು ಜನಸಂಸ್ಕೃತಿಯ ಭಾಗವಾಗಿಸುವ ಬಗೆ ಹೇಗೆ? ಧರ್ಮ-ಆಧಾರಿತ ಅಸಮಾನತೆ-ತಾರತಮ್ಯ ಹೋಗಲಾಡಿಸುವುದಕ್ಕೂ ಇತರ (ಜಾತಿ, ವರ್ಗ, ಲಿಂಗ) ಅಸಮಾನತೆ-ತಾರತಮ್ಯಗಳನ್ನು ಹೋಗಲಾಡಿಸುವುದಕ್ಕೂ ಏನಾದರೂ ಸಂಬಂಧ ಇದೆಯೇ ? ಇದ್ದರೆ ಏನು? ಕೋಮುವಾದಿ ರಾಜಕಾರಣ ಮತ್ತು ಸೆಕ್ಯುಲರ್ವಾದದ ಮೇಲೆ ದಾಳಿಗಳು ಕಳೆದ 2-3 ದಶಕಗಳಲ್ಲಿ ಏಕೆ ತೀವ್ರ ರೂಪ ತಾಳಿವೆ? ಕೋಮುವಾದದ ಉಗಮ, ಹರಡುವಿಕೆ, ಮತ್ತು ನಿವಾರಣೆ ಬಗ್ಗೆ ವಿವಿಧ (ಎರಡನೇ ಬಗೆಯ) ಸಿದ್ಧಾಂತಗಳ ನಿಲುವು ಏನು? ಇವುಗಳಲ್ಲಿ ಇರುವ ಸಾಮಾನ್ಯ ಎಳೆಗಳು ಏನು? ವಿಶಿಷ್ಟ ಒಳನೋಟಗಳು ಏನು?

ಸಾಮಾಜಿಕ ನ್ಯಾಯ

ಜಾತಿಪದ್ಧತಿ ಮತ್ತು ಅದರ ಭಾಗವಾಗಿರುವ ಅಸ್ಪೃಶ್ಯತೆ ನಮ್ಮ ಸಮಾಜಕ್ಕೆ ವಿಶಿಷ್ಟವಾಗಿರುವ ದೀರ್ಘಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಅದರ ವಿರುದ್ಧ ತಾತ್ವಿಕ ಹೋರಾಟವೂ ಅಷ್ಟೇ ಹಳೆಯದು. ಬ್ರ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಾಮಾಜಿಕ ಚಳುವಳಿಗಳು ಮತ್ತು ಸಮಾಜ ಸುಧಾರಣೆಯ ಪ್ರಯತ್ನಗಳು ಈ ಹೋರಾಟವನ್ನು ದೇಶವ್ಯಾಪಿಯಾಗಿಸಿದವು. ಈ ಹೋರಾಟಗಳ ಭಾಗವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಂತು. ಪ್ರಮುಖವಾಗಿ ಮಹಾತ್ಮ ಫುಲೆ ಮತ್ತು ಅಂಬೇಡ್ಕರ್ ಇದನ್ನು ಮುನ್ನೆಲೆಗೆ ತಂದರು. ಇದು ಸ್ವಾತಂತ್ರ್ಯದ ನಂತರ ಮೊದಲಿಗೆ ದಲಿತರಿಗೆ ಆದಿವಾಸಿಗಳಿಗೆ ಆ ಮೇಲೆ ಇತರ ಹಿಂದುಳಿದ ಜಾತಿಗಳಿಗೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಇತರ ನೀತಿಗಳಿಗೆ ಕಾರಣವಾಯಿತು. ಇದು ಕೆಲಮಟ್ಟಿನ ಸಾಮಾಜಿಕ ತಾರತಮ್ಯ ನಿವಾರಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಆದರೆ ಇದು ಜಾತಿ ಮತ್ತು ಅಸ್ಪೃಶ್ಯತೆಯ ದಮನವನ್ನು ನಿವಾರಿಸುವಲ್ಲಿ ವಿಫಲವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಜಾತಿ ಪದ್ಧತಿ ಇನ್ನೂ ಬಲಗೊಂಡಿದೆ. ಅಸ್ಪೃಶ್ಯತೆ ಹೊಸ ಮತ್ತು ಇನ್ನೂ ಹೆಚ್ಚಿನ ಆಕ್ರಾಮಕ ಬರ್ಬರ ರೂಪಗಳನ್ನು ಪಡೆದಿದೆ. ಆದಿವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ದಮನ ಸಹ ಇನ್ನೂ ತೀವ್ರವಾಗಿವೆ. ದಲಿತ, ಆದಿವಾಸಿ ಮತ್ತು ಹಿಂದುಳಿದ ಜಾತಿಗಳ ಸಾಮಾಜಿಕ-ಸಾಂಸ್ಕೃತಿಕ ಐಡೆಂಟಿಟಿೆಗಳ ಮೇಲೆ ಒಂದು ಕಡೆ ಹಲ್ಲೆಯಾಗುತ್ತಿದೆ. ಇನ್ನೊಂದು ಕಡೆ ಈ ಐಡೆಂಟಿಟಿಗಳನ್ನು ಬಳಸಿ, ಐಡೆಂಟಿಟಿ ರಾಜಕಾರಣ ಆರಂಭವಾಗಿದೆ. ಈ ರಾಜಕಾರಣ ಜಾತಿ-ಅಸ್ಪೃಶ್ಯತೆಗಳ ತಾರತಮ್ಯ ಮತ್ತು ದಮನಗಳನ್ನು ನಿವಾರಿಸುವ ಸಾಮಾಜಿಕ ನ್ಯಾಯದ ಚಳುವಳಿಯನ್ನು ಮುಂದೊಯ್ಯುವುದೇ? ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಲ್ಲಿ ನ್ಯೂನತೆಗಳಿವೆಯೇ? ಇದ್ದರೆ ಅವು ಯಾವುವು? ಜಾತಿ-ಆಧಾರಿತ ಅಸಮಾನತೆ-ತಾರತಮ್ಯ ದಮನ ಹೋಗಲಾಡಿಸುವುದಕ್ಕೂ ಇತರ (ಧರ್ಮ, ವರ್ಗ, ಲಿಂಗ) ಅಸಮಾನತೆ-ತಾರತಮ್ಯಗಳನ್ನು ಹೋಗಲಾಡಿಸುವುದಕ್ಕೂ ಏನಾದರೂ ಸಂಬಂಧ ಇದೆಯೇ? ಇದ್ದರೆ ಏನು? ಜಾತಿ-ಆಧಾರಿತ ಅಸಮಾನತೆ-ತಾರತಮ್ಯ ದಮನ ಕಳೆದ ಕೆಲವು ದಶಕಗಳಲ್ಲಿ ಏಕೆ ತೀವ್ರ ರೂಪ ತಾಳಿವೆ? ಜಾತಿ-ಆಧಾರಿತ ಅಸಮಾನತೆ-ತಾರತಮ್ಯ ದಮನ ನಿವಾರಿಸಿ ಸಾಮಾಜಿಕ ನ್ಯಾಯ ಒದಗಿಸುವ ಬಗ್ಗೆ ವಿವಿಧ (ಎರಡನೇ ಬಗೆಯ) ಸಿದ್ಧಾಂತಗಳ ನಿಲುವು ಏನು? ಇವುಗಳಲ್ಲಿ ಇರುವ ಸಾಮಾನ್ಯ ಎಳೆಗಳು ಏನು? ವಿಶಿಷ್ಟ ಒಳನೋಟಗಳು ಏನು?

ಮಹಿಳಾವಾದ

ಮಹಿಳೆ ಮಾನವ ಸಮಾಜದ ಚರಿತ್ರೆಯಲ್ಲೇ ಪ್ರಥಮ ದಮನಿತೆ ಶೋಷಿತೆ ಎನ್ನಲಾಗುತ್ತದೆ. ಎಲ್ಲಾ ಸಮಾಜಗಳಲ್ಲೂ ಚರಿತ್ರೆಯ ಒಂದು ಕಾಲಘಟ್ಟದ ನಂತರ ಸತತವಾಗಿ ಎಲ್ಲಾ ಸಾಮಾಜಿಕ ವ್ಯವಸ್ಥೆಗಳಲ್ಲೂ ದಮನಿತರಾದವರು ಮಹಿಳೆಯರು. ಭಾರತದಲ್ಲಂತೂ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ, ಕೌಟುಂಬಿಕ ಹಿಂಸಾಚಾರ, ಅತ್ಯಾಚಾರ - ಹೀಗೆ ಹತ್ತು ಹಲವು ಬಗೆಯ ದೌರ್ಜನ್ಯಗಳು ಎಲ್ಲಾ ವಯಸ್ಸಿನ ಎಲ್ಲಾ ಜಾತಿ-ವರ್ಗಗಳ ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿದೆ. ಕೋಮುದಂಗೆ, ಯುದ್ಧ, ಬಡತನ ಎಲ್ಲವೂ ಮಹಿಳೆಯರಿಗೆ (ಪುರುಷರಿಗಿಂತ ಎಷ್ಟೋ ಪಟ್ಟು ಹೆಚ್ಚು) ಅಸಮಾನವಾಗಿ ತಟ್ಟುತ್ತದೆ. ಮಹಿಳೆ ದಮನಿತೆ ಆದಂದಿನಿಂದಲೂ ಅದರ ವಿರುದ್ಧ ಪ್ರತಿರೋಧ ಮತ್ತು ಅದಕ್ಕೊಂದು ತಾತ್ವಿಕ ನೆಲೆ ಕಟ್ಟಿಕೊಳ್ಳುವ ಪ್ರಯತ್ನವೂ ಸತತವಾಗಿ ನಡೆದು ಬಂದಿದೆ. 20ನೇ ಶತಮಾನದಲ್ಲಿ ಇದು ಒಟ್ಟಾಗಿ ಮಹಿಳಾವಾದ ಸಿದ್ಧಾಂತದ ರೂಪು ಪಡೆದಿದೆ. ನೂರು ವರ್ಷಗಳಿಗಿಂತಲೂ ಹಿಂದೆ ಜಾಗತಿಕ ಮಹಿಳಾ ದಿನದೊಂದಿಗೆ ಜಾಗತಿಕವಾಗಿ ಪಸರಿಸಿದ ಮಹಿಳಾ ಚಳುವಳಿ ಮತ್ತು ಮಹಿಳಾವಾದ ಪರಸ್ಪರ ಪ್ರಭಾವ ಬೀರಿವೆ. ಮಹಿಳೆ ಪ್ರಥಮ ದಮನಿತೆ ಆಗಲು ಕಾರಣಗಳೇನು? ವಿವಿಧ ಸಾಮಾಜಿಕ ವ್ಯವಸ್ಥೆಗಳಲ್ಲಿ ಮಹಿಳೆಯರ ತಾರತಮ್ಯ-ದಮನಗಳ ಸಾತತ್ಯದ ಮತ್ತು ವಿವಿಧ ರೂಪಗಳ ಗುಟ್ಟೇನು? ಮಹಿಳಾವಾದದ ಪ್ರಕಾರ ಲಿಂಗ ತಾರತಮ್ಯ ಶಾಶ್ವತವಾಗಿ ಕೊನೆಗಾಣಿಸಲು ಸ್ಟ್ರಾಟೆಜಿ ಏನು? ಮಹಿಳಾವಾದದ ಪ್ರಮುಖ ರೂಪುರೇಷೆಗಳು ಏನು? ಮಹಿಳಾವಾದದ ಪ್ರಕಾರ ಲಿಂಗ-ಆಧಾರಿತ ಅಸಮಾನತೆ-ತಾರತಮ್ಯ ದಮನ ಹೋಗಲಾಡಿಸುವುದಕ್ಕೂ ಇತರ (ಜಾತಿ, ಧರ್ಮ, ವರ್ಗ) ಅಸಮಾನತೆ-ತಾರತಮ್ಯಗಳನ್ನು ಹೋಗಲಾಡಿಸುವುದಕ್ಕೂ ಏನಾದರೂ ಸಂಬಂಧ ಇದೆಯೇ? ಇದ್ದರೆ ಏನು? ಲಿಂಗ-ಆಧಾರಿತ ಅಸಮಾನತೆ-ತಾರತಮ್ಯ ದಮನ ಕಳೆದ ಕೆಲವು ದಶಕಗಳಲ್ಲಿ ಏಕೆ ತೀವ್ರ ರೂಪ ತಾಳಿವೆ? ಮಹಿಳಾವಾದ ಹಲವು ಸೈದ್ಧಾಂತಿಕ ಕವಲುಗಳಿಂದ (ಮಾಕರ್್ವಾದ, ಅಸ್ತಿತ್ವವಾದ, ಪರಿಸರವಾದ, ಮಾಕ್ಸರ್ೋತ್ತರವಾದ) ಪ್ರಭಾವಿತವಾಗಿದೆ ಮತ್ತು ಅವನ್ನು ಪ್ರಭಾವಿಸಿದೆ. ಕೆಲವೊಮ್ಮೆ ಹೈಬ್ರಿಡ್ (ಮಹಿಳಾ-ಮಾಕರ್್ವಾದ, ಪರಿಸರ-ಮಹಿಳಾವಾದ) ಸಿದ್ಧಾಂತಗಳನ್ನೂ ಹುಟ್ಟಿ ಹಾಕಿದೆ. ಲಿಂಗ-ಆಧಾರಿತ ಅಸಮಾನತೆ-ತಾರತಮ್ಯ ದಮನದ ಬಗ್ಗೆ ವಿವಿಧ (ಎರಡನೇ ಬಗೆಯ) ಸಿದ್ಧಾಂತಗಳ ನಿಲುವು ಏನು? ಮಹಿಳಾವಾದ ಮತ್ತು ಇವುಗಳಲ್ಲಿ ಇರುವ ಸಾಮಾನ್ಯ ಎಳೆಗಳು ಏನು? ಇವುಗಳ ವಿಶಿಷ್ಟ ಒಳನೋಟಗಳು ಏನಾದರೂ ಇವೆಯೆ?

ಜಾಗತೀಕರಣ ಮತ್ತು ಪರ್ಯಾಯಗಳು

ಕಳೆದ 2-3 ದಶಕಗಳಿಂದ 'ಜಾಗತೀಕರಣ' ಜಗತ್ತಿನ ಅತ್ಯಂತ ಪ್ರಮುಖ ವಿದ್ಯಮಾನವಾಗಿ ಹೊಮ್ಮಿದೆ. ಜಾಗತೀಕರಣ ಜಗತ್ತಿನ ಕೆಲವೇ (ಬಹುಶ: ಶೇ. 1) ಜನರನ್ನು ಬಿಟ್ಟು ಎಲ್ಲರಿಗೂ ಪ್ರತಿಕೂಲವಾಗಿದೆ. ಎಲ್ಲಾ ರೀತಿಯ ಅಸಮಾನತೆ-ತಾರತಮ್ಯಗಳು ಇದರಿಂದಾಗಿ ಅಗಾಧವಾಗಿ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಸೇರಿದಂತೆ ಎಲ್ಲೆಲ್ಲೂ ಈಗಾಗಲೇ ವ್ಯಾಪಕವಾಗಿ ಇರುವ ವರ್ಗ ವೈಷಮ್ಯವನ್ನು ಪ್ರಮುಖವಾಗಿ ಇದು ಹೆಚ್ಚಿಸುತ್ತದೆ. ಮಾತ್ರವಲ್ಲ, ನಿದರ್ಿಷ್ಟ ಅಸಮಾನತೆ-ತಾರತಮ್ಯಗಳನ್ನು ನಿದರ್ಿಷ್ಟ ದೇಶ-ಪ್ರದೇಶಗಳಲ್ಲಿ ಕಡಿಮೆ ಮಾಡುವ ನಿವಾರಿಸುವ ಸಾಧ್ಯತೆಗಳನ್ನೂ ಸ್ವಾಯತ್ತತೆಯನ್ನು ಅದು ಮುಚ್ಚಿಬಿಡುತ್ತಿದೆ. ಇದು ಈಗಿನ ಪರಿಸರ ಸಮಸ್ಯೆಗಳನ್ನು (ಹವಾಮಾನ ಬದಲಾವಣೆ ಇತ್ಯಾದಿಯಂತಹ ಬೆಳವಣಿಗೆಗಳಿಂದ) ಮತ್ತು ಮಿಲಿಟರೀಕರಣಗಳನ್ನು ಇನ್ನಷ್ಟು ಭೀಕರವಾಗಿಸುವ ಮೂಲಕ ಮನುಕುಲದ ನಾಶದತ್ತ ಮುನ್ನುಗ್ಗುತ್ತಿದೆ ಎನ್ನಲಾಗುತ್ತದೆ. ಜಾಗತೀಕರಣ ಎಂದರೇನು? ಕಳೆದ 2-3 ದಶಕಗಳ ನಕಾರಾತ್ಮಕ ಬೆಳವಣಿಗೆಗಳಿಗೆ ನಿಜವಾಗಿಯೂ ಜಾಗತೀಕರಣ ಕಾರಣವೇ? ಕೆಲವರು ಎನ್ನುವಂತೆ ಜಾಗತೀಕರಣ ಅನಿವಾರ್ಯ ಚಾರಿತ್ರಿಕ ಪ್ರಕ್ರಿಯೆಯೇ? ಅಥವಾ ನಿದರ್ಿಷ್ಟ ರೀತಿಯ ಜಾಗತೀಕರಣದ ಸಮಸ್ಯೆಯೆ? ಜಾಗತೀಕರಣದ ರೂಪುರೇಷೆಗಳೇನು? ಅಸಮಾನತೆ-ತಾರತಮ್ಯಗಳ ಮೇಲೆ ಜಾಗತೀಕರಣದ ಪರಿಣಾಮಗಳೇನು? ಎಲ್ಲಾ ಅಸಮಾನತೆ-ತಾರತಮ್ಯ ದಮನಗಳನ್ನು ನಿವಾರಿಸಬಲ್ಲ ಪರಿಸರ-ಪೋಷಕವಾಗಿರುವ ಜಾಗತಿಕ ಪಯರ್ಾಯ ವ್ಯವಸ್ಥೆ ಇದೆಯೇ? ಇದ್ದರೆ ಅದರ ಸ್ಥೂಲ ಸ್ವರೂಪವೇನು? ಜಾಗತೀಕರಣ ಮತ್ತು ಅದಕ್ಕೆ ಪಯರ್ಾಯದ ಬಗ್ಗೆ ವಿವಿಧ ಸಿದ್ಧಾಂತಗಳ ನಿಲುವು ಏನು? ದಯವಿಟ್ಟು ಆಸಕ್ತರು ಬನ್ನಿ ಹೆಸರು ನೊಂದಾಯಿಸಿಕೊಳ್ಳಿ