Sunday 7 February 2016

ದಲಿತರ ಆತ್ಮಕತೆಗಳು ಹಸಿವು, ಹಿಂಸೆ, ಅವಮಾನ ಮತ್ತು ಹತಾಶೆಗಳಿಂದ ಕೂಡಿರುತ್ತವೆ- ಮೂಡ್ನಾಕೂಡು ಚಿನ್ನಸ್ವಾಮಿ


ದಲಿತರ ಆತ್ಮಕತೆಗಳು ಹಸಿವು, ಹಿಂಸೆ, ಅವಮಾನ ಮತ್ತು ಹತಾಶೆಗಳಿಂದ ಕೂಡಿರುತ್ತವೆ- ಮೂಡ್ನಾಕೂಡು ಚಿನ್ನಸ್ವಾಮಿ
ದಲಿತ ಆತ್ಮಕಥೆಗಳನ್ನು ಓದಲು, ದಲಿತರ ಸಂಕಷ್ಟದ ಬದುಕನ್ನು ಅರಿಯಲು ಸಹ ಮೇಲ್ಜಾತಿ ಸಮುದಾಯಗಳು ತಮ್ಮವರನ್ನು ಬೀಡುತ್ತಿಲ್ಲ ಎಂದು ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಹೊನ್ನಾವರದ ಕೆರೆಕೋಣದ ಸಹಯಾನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಡಾ.ಅಂಬೇಡ್ಕರ್ 125ನೇ ವಷರ್ಾಚಣೆ ಸಮಿತಿ ಹಾಗೂ ಸಹಯಾನ(ಆರ್ ವಿ ಭಂಡಾರಿ ನೆನಪಿನ ಸಂಕ್ಕೃತಿ ಅಧ್ಯಯನ ಕೇಂದ್ರ) ಆಶ್ರಯದಲ್ಲಿ ಭಾನುವಾರ ಪ್ರಾರಂಭವಾದ ದಲಿತ ಆತ್ಮಕಥೆಗಳು: ವಾಚನ ಮತ್ತು ವಿಶ್ಲೇಷಣೆ ಎಂಬ ಎರಡು ದಿನಗಳ ರಾಜ್ಯ ಮಟ್ಟದ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತರ ಬರೆದಿರುವ ಪುಸ್ತಕಗಳನ್ನು ಕೈಯಿಂದ ಮುಟ್ಟಲು ಹೆದರುವ, ಇಂಥದೆಲ್ಲ ಯಾಕೆ ಓದುತ್ತಿಯಾ ಎಂದು ಓದಲು ಸಹ ಬಿಡದ ಸನಾತನಿಗಳು ಈಗಲೂ ಇದ್ದಾರೆ. ತಮ್ಮವರಲ್ಲದವರ ಬದುಕನ್ನು ಅರಿತುಕೊಳ್ಳಲು ಸಹ ಅವರ ಮನಸ್ಸು ಒಪ್ಪುವುದಿಲ್ಲ. ತಾನು, ತನ್ನ ಸಮುದಾಯ ಚನ್ನಾಗಿದ್ದರೆ ಅಷ್ಟು ಸಾಕು ಎನ್ನುವ ಮನಸ್ಥಿತಿ ಅವರಲ್ಲಿ ಬೇರೂರಿದೆ ಎಂದರು.
ಭಾರತೀಯ ಸಂಸ್ಕೃತಿ ಶ್ರೇಷ್ಠವಾದುದು ಎಂಬ ಸುಳ್ಳನ್ನು ಎಲ್ಲ ಕಡೆಯೂ ಬಿತ್ತಲಾಗಿದೆ. ನಾವೆಲ್ಲರೂ ಹಾಗೆ ನಂಬಿದ್ದೇವೆ ಕೂಡ. ಆದರೆ, ಈ ಸಂಸ್ಕೃತಿ ನೀವೆಲ್ಲರೂ ತಿಳಿದುಕೊಂಡಂತೆ ಇಲ್ಲ. ಇದರಲ್ಲಿನ ಹುಳುಕುಗಳು ಇವೆ ಎಂಬುದನ್ನು ತಿಳಿಸಿಕೊಡುವ ಕೆಲಸವನ್ನು ದಲಿತ ಆತ್ಮಕಥೆಗಳು ಮಾಡುತ್ತವೆ. ಮೇಲ್ವರ್ಗದವರ ಆತ್ಮಕಥೆಗಳು ಹೆಣ್ಣು, ಹೊನ್ನು ಮತ್ತು ಮಣ್ಣಿನ ಸುತ್ತಲಿನ ಪ್ರತಿಷ್ಠೆಯ ನೆಲೆಯಿಂದ ಕೂಡಿದ್ದರೆ ದಲಿತರ ಆತ್ಮಕತೆಗಳು ಹಸಿವು, ಹಿಂಸೆ, ಅವಮಾನ ಮತ್ತು ಹತಾಶೆಗಳಿಂದ ಕೂಡಿರುತ್ತವೆ ಎಂದರು.
ಜಾತಿ ಸಮಸ್ಯೆಯನ್ನು ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಿದ್ದರೆ ಇಂದು, ರೋಹಿತ್ ವೇಮುಲನಂಥ ಯುವಕನ ಸಾವು ಸಂಭವಿಸುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಅವನಿಗೆ 7 ತಿಂಗಳ ಸ್ಕಾಲರ್ಶೀಪ್ ಸಿಗದಂತೆ ಮಾಡಲಾಯಿತು. ದೆಹಲಿಯು ಪ್ರತಿಷ್ಠಿತ ಜೆಎನ್ಯುಎನ್ನಂಥ ಸಂಸ್ಥೆಗಳಲ್ಲೂ ಜಾತಿ ಸಂಘರ್ಷಗಳು ನಡೆಯುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂಥ ಕಮ್ಮಟಗಳು ಮನುಷ್ಯತ್ವದ ತರಬೇತಿ ಶಿಬಿರಗಳಿದ್ದಂತೆ. ಈ ಕಥೆಗಳನ್ನು ಓದಿದರೆ ಮುಂದಾದರೂ ನಮ್ಮ ಪೂವರ್ಿಕರ ಮಾಡಿದ ತಪ್ಪುಗಳನ್ನು ನಾವು ಮಾಡಬಾರದು ಎಂಬ ಪಶ್ಚಾತಾಪ ಮೂಡುತ್ತದೆ. ತನ್ನಂತೆ ಪರರನ್ನು ಕಾಣುವ ಗುಣ ಬರುತ್ತದೆ ಎಂದರು.
                      


ನಮ್ಮ ಸಮಾಜದಲ್ಲಿ ಮೇಲ್ವರ್ಗದವರು ಯಾವ ಸಾಧನೆಯನ್ನಾದರೂ ಮಾಡಬಹುದು. ಮಂತ್ರಿಯೂ ಆಗಬಹುದು, ಮುಖ್ಯಮಂತ್ರಿಯೂ ಆಗಬಹುದು. ಆದರೆ, ಈ ಹಿಂದೆ ದಲಿತರು ಬದುಕಿ ಉಳಿಯುವುದೇ ಬಹಳ ಕಷ್ಟವಿತ್ತು. ನಮಗೆ ಅಕ್ಷರ ದಕ್ಕಿದವರ ಆತ್ಮಕಥೆಗಳು ಮಾತ್ರ ಸಿಗುತ್ತಿವೆ. ಆದರೆ, ಅಕ್ಷರ ದಕ್ಕದ ಹಳ್ಳಿಯೊಂದರ ಮೂಲೆಯಲ್ಲಿ ಬದುಕುತ್ತಿರುವ ಅಸ್ಪೃಶ್ಯರ ಬದುಕು ಇನ್ನು ನಿಕೃಷ್ಟವಾಗಿರುತ್ತದೆ ಎಂದರು.
ಕಮ್ಮಟದ ಸಂಚಾಲಕಿ, ಲೇಖಕಿ ಡಾ. ವಿನಯಾ ವಕ್ಕುಂದ ಮಾತನಾಡಿ, ಎಲ್ಲ ಆತ್ಮಕಥೆಗಳನ್ನು ಒಳಗೊಂಡ ಇಡಿಯಾದ ಕಮ್ಮಟ ಮಾಡುವ ಬದಲು ಹೀಗೆ ದಲಿತ, ಮಹಿಳಾ ಎಂದು ಬಿಡಿ ಬಿಡಿಯಾಗಿ ಮಾಡುವ ಅಗತ್ಯವಿದೆಯೇ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ, ಇಡಿಯಾಗಿ ಹಿಡಿಯುವಾಗ ಕೆಲವನ್ನು ಉದ್ದೇಶಪೂರ್ವಕವಾಗಿ ಕೈ ಬೀಡಲಾಗುತ್ತದೆ ಆದ್ದರಿಂದ ಹೀಗೆ ಬಿಡಿಬಿಡಿಯಾಗಿ ಓದುವ ಅಗತ್ಯವಿದೆ ಎಂದರು.
ಇಂದಿನ ಟಿವಿ ವಾಹಿನಿಗಳಲ್ಲಿನ ಆಡಂಬರದ ರಿಯಾಲಿಟಿ ಶೋಗಳು ಯುವ ಸಮೂಹದ ದಿಕ್ಕನ್ನು ತಪ್ಪಿಸುತ್ತಿವೆ. ಅವುಗಳಿಂದ ವಿಮುಖರಾಗಿಸಿ ಹೀಗೆ ವಿಭಿನ್ನ ಸಮುದಾಯಗಳ ಸಂಸ್ಕೃತಿಯನ್ನು ತಿಳಿಸುವ ಕೃತಿಗಳ ವ್ಯವದಾನದ ಓದನ್ನು ಯುವಕರು ರೂಡಿಗತ ಮಾಡಲು ಇಂಥ ಕಮ್ಮಟಗಳು ಸಹಕಾರಿಯಾಗತ್ತವೆ ಎಂದರು.

ಹಿರಿಯ ಕಥೆಗಾರ ಆರ್.ಜಿ.ಗುಂದಿ ಮಾತನಾಡಿ, ಮೇಲ್ವರ್ಗದ ಶಿಕ್ಷಕನೊಬ್ಬ ತಮ್ಮನ್ನು ಸಂಸ್ಕೃತ ಕಲಿಯದಂತೆ ಮಾಡಿದ ಪ್ರಸಂಗವನ್ನು ನೆನಪಿಸಿಕೊಂಡರು ಮಾತ್ರವಲ್ಲ ಆಗೇರನಾಗಿರುವ ಕಾರಣಕ್ಕೆ ತಾನು ಮತ್ತು ತನ್ನ ಕುಟುಂಬ ಅನುಭವಿಸಿದ ನೋವುಗಳನ್ನು ಬಿಚ್ಚಿಟ್ಟರು. ಪ್ರಾಧಿಕಾರದ ಸದಸ್ಯೆ, ಕವಿ, ಡಾ.ಮಾಧವಿ ಭಂಡಾರಿ ಸ್ವಾಗತಿಸಿದರು. ಸಹಯಾನದ ಕಾರ್ಯದಶರ್ಿ ಡಾ.ವಿಠಲ್ ಭಂಡಾರಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಸಾಹಿತ್ಯ ಪರಿಚಾರಿಕಿ ಕವಿತಾ ವಿಷ್ಣು ನಾಯಕರಿಗೆ ಎರಡು ನಿಮಿಷ ಮೌನ ಸಲ್ಲಿಸುವ ಶೃದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯದ ವಿವಿಧ ಭಾಗಗಳಿಂದ ಶಿಬಿರಾಥರ್ಿಗಳು ಪಾಲ್ಗೊಂಡಿದ್ದಾರೆ. ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ರಾಜಪ್ಪ ದಳವಾಯಿ, ಡಾ.ಎಚ್.ಎಸ್.ಅನುಪಮ,  ಮಲ್ಲಿಕಾ ಬಸವರಾಜು, ಜಯಶೀಲ ಆಗೇರ,  ದೀಪಾ ಹೀರೆಗುತ್ತಿ, ಹನಮಂತ ಹಾಲಗೇರಿ ಭಾಗವಹಿಸಿದ್ದರು.


 ಬಾಕ್ಸ್ ಮಾಡಿ..
ಶೂದ್ರ ಪತ್ರಿಕೆ ಮುಟ್ಟಲ್ಲಿಲ್ಲ
ಶೂದ್ರ ಎಂಬ ಪತ್ರಿಕೆಯನ್ನು ಸಹ ಮುಟ್ಟಲು ಮೇಲ್ವರ್ಗದವರು ಹೆದರಿದ ಪ್ರಸಂಗವನ್ನು ಮೂಡ್ನಾಕೂಡು ಚಿನ್ನಸ್ವಾಮಿ ಹಂಚಿಕೊಂಡರು. ಅವರ ಕಚೇರಿಗೆ ಬರುತ್ತಿದ್ದ ಶೂದ್ರ ಪತ್ರಿಕೆಯನ್ನು ಮೇಲ್ಜಾತಿಯ ಸಹದ್ಯೋಗಿ ಓದಿ ಹಿಂದಿರುಗಿಸುವುದಾಗಿ ಮನೆಗೆ ಓಯ್ದರಂತೆ. ಮನೆಯಲ್ಲಿ ಮೇಜಿನ ಮೇಲೆ ಇಟ್ಟಿದ್ದಾಗ ನೋಡಿ ದಂಗಾದ ಅವರ ತಾಯಿ, ಅಯ್ಯೋಯ್ಯೋ, ಇದರ ಮೇಲೆ ಶೂದ್ರ ಅಂತ ಇದೆಯಲ್ಲೋ, ಇದನ್ಯಾಕೆ ಮನೆಗೆ ತಂದೆ? ಮನೆಯೆಲ್ಲ ಹಾಳು ಮಾಡ್ತಿ ನೀನು ಎಂದು ತರಾಟೆಗೆ ತೆಗೆದುಕೊಂಡರಂತೆ.














No comments:

Post a Comment