ಅಮೆರಿಕಾ ಸಂಯುಕ್ತ ಸಂಸ್ಥಾನವು 1776 ರಲ್ಲಿ ಸ್ವಾತಂತ್ರ್ಯ ಘೋಷಣೆ ಮಾಡಿದಾಗ ಹೀಗೆ ಹೇಳಿಕೊಂಡಿತ್ತು-ಪ್ರತಿಯೊಬ್ಬ ಮನುಷ್ಯ ಜೀವಿಯೂ ನಿಸರ್ಗದಿಂದ ಸಮನಾಗಿ ಸೃಷ್ಟಿಸಲ್ಪಟ್ಟವನೆಂದು, ಅವರಿಗೆಲ್ಲ ನಿರಾಕರಿಸಲ್ಪಡಲಾಗದ ಕೆಲವು ಮೂಲಭೂತ ಹಕ್ಕುಗಳಿವೆ ಎಂದು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಜೀವ ಉಳಿಸುವುದು ಮತ್ತು ಸುಖ ಜೀವನವನ್ನು ಸಾಧಿಸಲು ಇರುವಂತಹ ಹಕ್ಕು ಸೇರಿದೆ ಎಂದು, ಈ ಸುಖ ಜೀವನಕ್ಕಾಗಿ ಸಕರ್ಾರಗಳ ರಚನೆಯಾಗಿದೆ ಎಂದು, ಯಾವುದೇ ಸಂದರ್ಭದಲ್ಲಿಯಾದರೂ ಈ ಗುರಿಯನ್ನು ಮುಟ್ಟದಿದ್ದಾಗ ಪ್ರಜೆಗಳು ಅದರ ವಿರುದ್ಧ ಕ್ರಾಂತಿ ಮಾಡುವ ಹಕ್ಕಿದೆಎಂದು ಹೇಳಲಾಗಿದೆ. ಆದರೆ ಇಂದು ಅಜ-ಗಜ-ಅಂತರವಷ್ಟೇ ಅಲ್ಲ, ಆಕಾಶ-ಪಾತಾಳ ಅಂತರ! ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಂಡರೂ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದೂ ಅಮೇರಿಕಾವೇ!
ಈ ಸಾಂವಿಧಾನಿಕ ವಾಗ್ದಾನವು 110 ವರ್ಷಗಳಲ್ಲಿ ಅಂದರೆ 1857 ರಲ್ಲಿ ನ್ಯೂಯಾರ್ಕನ ಬೀದಿಗಳಲ್ಲಿ, 1886 ರಲ್ಲಿ ಕೆಲಸದ ವೇಳೆ ಹಾಗೂ ಸಮಾನ ವೇತನಕ್ಕಾಗಿ ಬೇಡಿಕೆ ಇಟ್ಟರು. ಅಲ್ಲಿಯ ದುಡಿಯುವ ವರ್ಗ ಹೇಳಿದ್ದಿಷ್ಟೇ-' ದಿನದ 24 ತಾಸು ದುಡಿಯಲಾಗದು, ತಾವು ಗುಲಾಮರಲ್ಲ, 8 ತಾಸು ವಿಶ್ರಾಂತಿ, 8 ತಾಸು ಕೌಟುಂಬಿಕ ಕೆಲಸ ಹಾಗೂ ಮನೋರಂಜನೆ ಹಾಗೂ 8 ತಾಸು ಮಾತ್ರವೇ ಮಾಲಿಕನ ಅಥವಾ ಸಕರ್ಾರದ ಕೆಲಸ ಮಾಡುವುದೆಂದು ಕಾನೂನು ಮಿತಿಗೆ ತರಬೇಕು' ಎಂದಾಗ ಸಾವಿರಾರು ಕಾಮರ್ಿಕರನ್ನು ಯುಎಸ್ಎ ಸಕರ್ಾರವು ಸಾಯಿಸಿತು; ಗಲ್ಲಿಗೇರಿಸಿತು. ಅದರ ವಿರುದ್ಧವೇ ಜಗತ್ತಿನ ಕಾಮರ್ಿಕರೇ ಒಂದಾಗಿ ಎಂಬ ಘೋಷಣೆ ಅಡಿಯಲ್ಲಿ ಕಾಮರ್ಿಕ ವರ್ಗ ಸಿಡಿದೆದ್ದು ಕಾನೂನನ್ನು ಮಾನವೀಯಗೊಳಿಸಲು ಮುಂದಾಯಿತು. ಅದರ ನೆನಪಿನಲ್ಲಿ ಮೇ 1 ವಿಶ್ವ ಕಾಮರ್ಿಕ ದಿನಾಚರಣೆ! ಹಾಗೆಯೇ 1908ರಲ್ಲಿ 30000 ಮಹಿಳಾ ಕಾಮರ್ಿಕರನ್ನು ಮತ್ತು 1910ರಲ್ಲಿ ದುಡಿಯುವ ಮಹಿಳೆಯರ ಹಕ್ಕುಗಳ ಪ್ರತಿಪಾದಕರನ್ನು ನಿರ್ದಯವಾಗಿ, ಅಮಾನುಷವಾಗಿ ಹತ್ತಿಕ್ಕಿತು. ಆದರೆ ಜಗತ್ತನ್ನೇ ಮುನ್ನಡೆಸಿದ ದುಡಿಯುವ ವರ್ಗ ಮಾರ್ಚ 8 ನ್ನು ಅಂತಾರಾಷ್ಟ್ರಿಯ ಮಹಿಳಾ ದಿನವಾಗಿ ಕಾಲಕಾಲಕ್ಕೆ ಹೋರಾಟವನ್ನು ಸಮಕಾಲೀನಗೊಳಿಸಿಕೊಳ್ಳುವ ಪ್ರತಿಜ್ಞೆಯ ದಿನವಾಗಿಸಿತು. ಅದಕ್ಕೇ ಕಾರ್ಲಮಾಕ್ರ್ಸ ಹೇಳಿರುವುದು 'ಬಂಡವಾಳಶಾಹಿ ಗರ್ಭದೊಳಗಿಂದಲೇ ಸಮಾಜವಾದದ ಉಗಮ ಆಗುತ್ತದೆ' ಎಂದು. ಅದು ಈ ಶೋಷಣಾ ವ್ಯವಸ್ಥೆಯ ಜಗತ್ತಿನಲ್ಲಿ ಸತ್ಯಸ್ಯ ಸತ್ಯ ಎಂದು ಸಾಬೀತಾಗಿದೆ.
ಈ ಶತಮಾನದಲ್ಲಿ ಸಾಮ್ರಾಜ್ಯಶಾಹಿಯಾದ ಅಮೇರಿಕಾ ಸಂಯುಕ್ತ ಸಂಸ್ಥಾನವು ಪ್ರತಿನಿತ್ಯ ಸಾವಿರಾರು ಜನರನ್ನು ಸಾಯಿಸುತ್ತಿದೆ; ವಿವಿಧ ಸ್ವರೂಪದಲ್ಲಿ ಕೊಲ್ಲುತ್ತಿದೆ; ಸಂಚುನಡೆಸುತ್ತಿದೆ. ತನ್ನ ಅಧೀನತೆ ಒಪ್ಪಿಕೊಳ್ಳದ ದೇಶಗಳ ಅಧ್ಯಕ್ಷರನ್ನು, ಜನ ಪ್ರತಿನಿಧಿಗಳನ್ನು ಹೊಂಚುಹಾಕಿ ಸಾಯಿಸಲು, ವಿಮಾನಗಳನ್ನೇ ಉಡಾಯಿಸಿ, ಅಪಘಾತ ಸೃಷ್ಟಿಸಲು ಕಾರಣವಾಗಿತ್ತಿದೆ. ಪ್ಯಾಲಿಸ್ಟೈನ್ನ ವಿಮೋಚನ ಹೋರಾರಗಾರರನ್ನು ಸದೆಬಡಿಯಲು ಇಸ್ರೈಲ್ ನೊಂದಿಗೆ ಕೈಜೋಡಿಸಿತು. ಯುಗೋಸ್ಲಾವಿಯಾದಲ್ಲಿ ಜನಾಂಗೀಯ ಕಲಹಕ್ಕೆ ಕುಮ್ಮಕ್ಕು ನೀಡಿ ದೇಶವನ್ನೇ ಒಡೆಯಿತು. ನ್ಯಾಟೊ ಪಡೆಗಳನ್ನು, ಶಸ್ತ್ರಾಸ್ತ್ರಗಳನ್ನು ಬೃಹತ್ ಪ್ರಮಾಣದಲ್ಲಿ ತನಗಾಗದ ದೇಶಕ್ಕೆ ಮುಖಮಾಡಿ ನಿಲ್ಲಿಸಿತು.
ಈ ಹಿಂದಿನ ಸೋವಿಯೆತ್ ಗಣರಾಜ್ಯ ಬೀಳಿಸಲು, ಅಧ್ಯಕ್ಷನನ್ನೇ ಖರಿದಿಸಿತು; ಓಸಾಮಾನಂತಹ ಉಗ್ರರನ್ನು ಸಾಕಿ-ಬೆಳೆಸಿತು, ಸಮೂಹ ನಾಶಕ ಅಸ್ತ್ರ ಇರಾಕ್ನಲ್ಲಿದೆ ಎಂದು ಭಯೋತ್ಪಾದನೆ ಹುಟ್ಟಡಗಿಸುವ ನೆಪದಲ್ಲಿ ಅಮೇರಿಕಾದ ಗುಲಾಮನಾಗಲು ಒಪ್ಪದ ಸದ್ದಾಂ ಹುಸೇನ್ ನನ್ನು ಕೊಂದಿದ್ದು, ಇಲ್ಲಿಯ ಮುಗ್ದ ಒಂದು ಲಕ್ಷ ಜನರನ್ನು ಸಾಯಿಸಿದ್ದು ಇದೇ ಅಮೇರಿಕಾ.
ಹಾಗಾಗಿ ಅಮೇರಿಕಾದ ರಾಜಕೀಯ ನೀತಿಯ ಗರ್ಭದೊಳಗೆನೇ ಕ್ರೂರತ್ವ ಅಡಗಿದೆ. ಅಧಿಕಾರ ಹಿಡಿದವರು ಕರಿಯನೋ-ಬಿಳಿಯನೋ ಎಂಬುದು ಸಂಬಂಧವಿಲ್ಲ. ಸಾಮ್ರಾಜ್ಯಶಾಹಿ ರಾಜಕೀಯ ನೀತಿ ಬದಲಾಗದೇ ಅಧ್ಯಕ್ಷ ಗಾದಿಯ ವ್ಯಕ್ತಿ ಬದಲಾದರೆ ಜನತೆಗೆ-ಜಗತ್ತಿಗೆ ಯಾವ ಉಪಯೋಗವೂ ಇಲ್ಲ.
ನವ ಉದಾರವಾದಿ, ಜಾಗತಿಕರಣ ಪ್ರತಿಪಾದಕ ಸಾಮ್ರಾಜ್ಯ ಶಾಹಿ ಅಮೆರಿಕಾವು ಬೆಲೆ ಏರಿಕೆ, ಹಸಿವು, ಅಪೌಷ್ಟಿಕತೆ, ಉದ್ಯೋಗರಹಿತ ಬೆಳವಣಿಗೆ ಮತ್ತು ಉದ್ಯೋಗಹೀನ ಅಭಿವೃದ್ಧಿ ಇವನ್ನು ಕೊಡುಗೆಯಾಗಿ ಕೊಟ್ಟಿದೆ. ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡುವ ನೆಪದಲ್ಲಿ ಖಾಯಂ ಉದ್ಯೋಗ ಸೃಷ್ಟಿಗೆ ತಿಲಾಂಜಲಿ ನೀಡಿದ್ದು, ಇದೇ ಅಮೇರಿಕಾ ಪ್ರಣೀತ ವಿಶ್ವಬ್ಯಾಂಕಿನ ನೀತಿಗಳಿಗೆ ನಮ್ಮಂತಹ ದೇಶಗಳು ತಲೆಗಾಗಿದುದ್ದರ ಪರಿಣಾಮ. ಗ್ಯಾಟ್ ಒಪ್ಪಂದ, ರೈತರನ್ನು ಜೈಲಿಗಟ್ಟುವ ಬೀಜ ಕಾಯ್ದೆ, ವಿದ್ಯುತ್ ಕಾಯ್ದೆ, ಮುಂಗಡ ವ್ಯಾಪಾರ ನೀತಿ, ವಾಲ್ ಮಾರ್ಟ, ಖಾಸಗಿ ವಿವಿ, ಶಿಕ್ಷಣ ಕಾಯ್ದೆ, ವಿದೇಶಿ ನೇರ ಬಂಡವಾಳ, ಮಾಧ್ಯಮಗಳನ್ನು ನಿಯಂತ್ರಿಸುವ ದೈತ್ಯ ಕಾಯ್ದೆ, ಖಾಸಗಿ ಹಣಕಾಸು ನೀತಿ, ಇಷ್ಟೂ ಸಾಲದೆಂಬಂತೆ ಬಂಡವಾಳಗಾರರಿಗೆ ಯಾವುದೇ ದೇಶವನ್ನಾದರೂ ಕೊಳ್ಳೆ ಹೊಡೆಯುವ ಅವಕಾಶ ನೀಡಿ ಬಡವರನ್ನು ಸಾಲದ ಬಾಧೆಗೆ ನೂಕಿ, ಹಸಿವಿಗಟ್ಟಿದ್ದು ಇದೇ ಅಮೇರಿಕಾ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ದೇಶ ಈಥಿಯೋಪಿಯಾಗಿಂತ ಕೇವಲ ಒಂದು ಸ್ಥಾನ ಮಾತ್ರ ಕೆಳಗಿದೆ. ಅಂದರೆ 118ನೇ ಸ್ಥಾನ. ಹಾಗೆಯೇ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 128ನೇ ಸ್ಥಾನಕ್ಕೆ ನಮ್ಮ ದೇಶ ಕುಸಿದಿದೆ.
ಕಾರಣ ಇಷ್ಟೇ, ಉದಾರೀಕರಣವಾದಿಗಳು ಹೇಳುವ ಹೊಳೆಯುವ ಭಾರತದಲ್ಲಿ 54 ಜನ ಶ್ರೀಮಂತರ ಸಂಪತ್ತು ಶೇಕಡಾ 78 ರಷ್ಟು ಹೆಚ್ಚಳವಾಗಿದೆ. ಅವರ ಆದಾಯವು ಭಾರತ ಸರಕಾರದ ಒಂದು ವರ್ಷದ ಬಜೆಟ್ಟಿನ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಿದೆ. ಅಂದರೆ 13 ಲಕ್ಷ 60 ಸಾವಿರ ಕೋಟಿ ರೂಪಾಯಿ ಕೇವಲ ಬೆರಳೆಣಿಕೆಯ ಜನರದ್ದಾಗಿದೆ. ಆದರೆ ನರಳುವ ಭಾರತದ 84 ಕೋಟಿ ಭಾರತೀಯರಿಗೆ ದಿನವೊಂದಕ್ಕೆ ಕೇವಲ 20 ರೂಪಾಯಿಗಿಂತ ಕಡಿಮೆ ಆದಾಯ !
ಬಾರೋ ಬಾರೋ, ನಿಮ್ಮನೆಯಿಂದ ಅಕ್ಕಿ ತಗೊಂಬಾ, ನಮ್ಮನೆಯಿಂದ ತೌಡು ತರ್ತಿನಿ, ಇಬ್ಬರೂ ಸೇರಿ ತಿನ್ನೋಣ!!!? ಎಂಬಂತಿದೆ ಸಾಮ್ರಾಜ್ಯಶಾಹಿ ನೀತಿ. ಅಮೇರಿಕಾ, ಅಮೇರಿಕಾ . . . ನೀನು ಇನ್ನೆಷ್ಟು ಕ್ರೂರಿಯಾಗಲು ಸಾಧ್ಯ? ಇಷ್ಟು ಸಾಲದೇ?
ಯಮುನಾ ಗಾಂವ್ಕರ್
No comments:
Post a Comment