Thursday, 28 November 2013

ಪಶ್ಚಿಮ ಘಟ್ಟ ಪರಿಸರ ರಕ್ಷಣಾ ಸಂಬಂಧಿ ವರದಿಯ ಕುರಿತು ನಮ್ಮ ದೃಷ್ಟಿಕೋನ -- ಯಮುನಾ ಗಾಂವ್ಕರ್, ಕಾರವಾರ

ಪಶ್ಚಿಮ ಘಟ್ಟ ಪರಿಸರ ರಕ್ಷಣಾ ಸಂಬಂಧಿ ವರದಿಯ ಕುರಿತು ನಮ್ಮ ದೃಷ್ಟಿಕೋನ 


ಈಗ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಯುಪಿಎ-2 ಸಕರ್ಾರ 4-3-2013 ರಂದು ಪ್ರೋ. ಮಾಧನ ಗಾಡ್ಗಿಳ್ ಅವರ ಅಧ್ಯಕ್ಷತೆಯಲ್ಲಿ ಪಶ್ಚಿಮ ಘಟ್ಟ ಜೀವ ಪರಿಸರ ಪರಿಣಿತರ ತಂಡವನ್ನು ರಚಿಸಿತ್ತು. 18 ತಿಂಗಳಲ್ಲಿ ಅದು ನಿಡಿದ ವರದಿ 6 ರಾಜ್ಯಗಳ 1,29,037 ಚ.ಕಿ.ಮಿ ವಿಸ್ತೀರ್ಣದ ಪ್ರದೇಶವನ್ನು ಜೀವಿ ಪರಿಸರಾತ್ಮಕ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿತು. ಮಾತ್ರವಲ್ಲ ಈ ಪ್ರದೇಶಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ನಿರ್ವಹಣೆ ಕುರಿತು ಹಲವು ನಿರ್ಬಂಧವನ್ನು ಹೇರಿತ್ತು. ವಿವಿಧ ರಾಜ್ಯಗಳಿಂದ ಈ ವರದಿಗೆ 1750 ವಿರೋಧವು ಬಂದಿತ್ತು.

ನಂತರ ನಡೆದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಈ ವರದಿ ಒಪ್ಪದ ಕೇಂದ್ರ ಸಕರ್ಾರ ಮತ್ತೆ 17-8-12ರಂದು ಯೋಜನಾ ಆಯೋಗದ ಸದಸ್ಯರೂ ಬಾಹ್ಯಾಕಾಶ ವಿಜ್ಞಾನಿಯೂ ಆದ ಡಾ. ಕೆ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ 10 ಜನರ ಉನ್ನತ ಹಂತದ ಕಾರ್ಯತಂಡ (ಎಚ್.ಎಲ್.ಡಬ್ಲು.ಜಿ) ವನ್ನು (ತಂಡದಲ್ಲಿರುವ ಬಹುತೇಕರು ಸಾಮಾನ್ಯಜನರೊಂದಿಗೆ ಸಾವಯವ ಸಂಬಂಧ ಇಟ್ಟುಕೊಂಡವರಲ್ಲ. ಅಧ್ಯಕ್ಞರು ಕೂಡ ಬಾಹ್ಯಾಕಾಶ ತಜ್ಞರೇ ಹೊರತು ಪರಿಸರ ತಜ್ಞರಲ್ಲ ಎಂಬ ಆಪಾದನೆಯೂ ಇತ್ತು.)ರಚಿಸಿತು. ಅದೂ ಕೂಡ ಕೇವಲ 8 ತಿಂಗಳಲ್ಲಿ ತನ್ನ ವರದಿ ನೀಡಿತು. ಇವರ ವರದಿಯನ್ನು ಜ್ಯಾರಿಗೊಳಿಸಲು ಮುಂದಾಗಿರುವ ಕೇಂದ್ರ ಸಕರ್ಾರ ಪಾರಂಪರಿಕವಾಗಿ ಅರಣ್ಯವಾಸಿಗಳ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಲು ಮುಂದಾಗಿರುವುದು ಖೇದಕರ. 

ಪರಿಸರ ಮತ್ತು ಜೀವ ವೈವಿಧ್ಯದ ಹೆಸರಿನಲ್ಲಿ ಬಂದ ಈ ಎರಡೂ ವರದಿಗಳು(ಗಾಡ್ಗಿಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿ) ಮನುಷ್ಯನನ್ನು ಒಬ್ಬ ಜೀವಿಯೆಂದು ಗಂಭೀರವಾಗಿ ಪರಿಗಣಿಸದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹೆಚ್ಚು ದೀರ್ಘ ಸಮಯ ತೆಗೆದುಕೊಂಡು ಸಲ್ಲಿಸಿದ ಪ್ರೋ. ಗಾಡ್ಗೀಳ್ ವರದಿ ಮತ್ತು ತರಾತುರಿಯಲ್ಲಿ ಸಲ್ಲಿಸಲ್ಪಟ್ಟ ಬಾಹ್ಯಾಕಾಶ ತಜ್ಞ ಡಾ, ಕಸ್ತೂರಿ ರಂಗನ್ ವರದಿಗಳೆರಡರಲ್ಲೂ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಳ್ಳದೇ, ಪಶ್ಚಿಮ ಘಟ್ಟದಲ್ಲಿ ಪಾರಂಪರಿಕವಾಗಿ ವಾಸಮಾಡುವವರ ಬದುಕಿನ ವಿವರ ಮತ್ತು ಅವರ ಸಾಮಾಜಿಕ, ಸಾಂಸ್ಕೃತಿಕ, ಆಥರ್ಿಕ ವಿವರಗಳ ವಸ್ತುನಿಷ್ಟ ಅರಿವಿಲ್ಲದೇ ರಚನೆಗೊಂಡದ್ದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.


ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿತವಾದ ಅಭಿವೃದ್ಧಿ ನಿಷೇಧಿತ ಪ್ರದೇಶ ನಮ್ಮ ರಾಜ್ಯದ 11 ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಇದು ರಾಜ್ಯದ ಸಾವಿರಾರು ಚ.ಕಿ.ಮಿ ಪ್ರದೇಶದ ಸುಮಾರು 8ರಿಂದ 10 ಲಕ್ಷಕ್ಕು ಹೆಚ್ಚು ಜನರನ್ನು ಬಾಧಿಸುತ್ತಿದೆ. 8 ರಿಂದ 10 ಲಕ್ಷ ಜನ ವಾಸವಾಗಿರುವ ಪ್ರದೇಶಗಳಿಂದ ತಕ್ಷಣ ಒಕ್ಕಲೆಬ್ಬಿಸದಿದ್ದರೂ ಕ್ರಮೇಣ ಮನುಷ್ಯವಾಸವನ್ನು ನಿರ್ಬಂಧಿಸುವುದಕ್ಕೆ ಈ ವರದಿ ಮೂಲವಾಗಲಿದೆ.

ಭಾರತ ಸಕರ್ಾರದ ಆದೇಶಾನುಸಾರ ಕನರ್ಾಟಕದ 11 ಜಿಲ್ಲೆಗಳ 1576 ಹಳ್ಳಿಗಳು, ಗೋವಾದ 3 ಜಿಲ್ಲೆಗಳ 99 ಹಳ್ಳಿಗಳು, ಮಹಾರಾಷ್ಟ್ರದ 12 ಜಿಲ್ಲೆಗಳ 2159 ಹಳ್ಳಿಗಳು, ಗುಜರಾತಿನ 4 ಜಿಲ್ಲೆಗಳ 64 ಹಳ್ಳಿಗಳು, ತಮಿಳುನಾಡಿನ 9 ಜಿಲ್ಲೆಗಳ 135 ಹಳ್ಳಿಗಳು, ಕೇರಳದ 12 ಜಿಲ್ಲೆಗಳ 123 ಹಳ್ಳಿಗಳು ಹೀಗೆ ಒಟ್ಟು 4156 ಹಳ್ಳಿಗಳು ಅಭಿವೃದ್ಧಿ ಪ್ರಕ್ರಿಯೆಯಿಂದ ನಿಷೇಧಿಸಲ್ಪಡುತ್ತವೆ. ಒಟ್ಟು 52 ಜಿಲ್ಲೆಗಳನ್ನು ವ್ಯಾಪಿಸಿರುವ ಈ ಹಳ್ಳಿ ಪ್ರದೇಶಗಳ 164280 ಚ.ಕಿ.ಮೀ ವ್ಯಾಪ್ತಿ ಆವರಿಸಿದೆ. 
ಕನರ್ಾಟಕದ 10 (ವರದಿಯಲ್ಲಿ ಧಾರವಾಡದ ಉಲ್ಲೇಖವಿದೆ ಅದೂ ಸೇರಿ 11 ಜಿಲ್ಲೆ) ಜಿಲ್ಲೆಗಳ 40 ತಾಲೂಕುಗಳ ಒಟ್ಟು 1576 ಹಳ್ಳಿಗಳು ವಿಷೇಧಾವ್ರತವಾಗಲಿವೆ.! ಬೆಳಗಾವಿಯ 5 ತಾಲೂಕುಗಳ 64 ಹಳ್ಳಿಗಳು, ಚಾಮರಾಜನಗರದ  1 ತಾಲೂಕಿನ 21, ಚಿಕ್ಕಮಗಳೂರಿನ 5 ತಾಲೂಕಿನ 147, ಕೊಡಗಿನ 3 ತಾಲೂಕಿನ 55, ಹಾಸನದ 4 ತಾಲೂಕಿನ 35, ಉತ್ತರ ಕ್ನನಡದ 10 ತಾಲೂಕಿನ 626, ದಕ್ಷಿಣಕನ್ನಡದ 3 ತಾಲೂಕಿನ 45, ಮೈಸೂರಿನ 1 ತಾಲೂಕಿನ 62, ಶಿವಮೊಗ್ಗದ 5 ತಾಲೂಕಿನ 484, ಉಡುಪಿಯ 3 ತಾಲೂಕಿನ 37 ಹಳ್ಳಿಗಳು ಪ್ರಸ್ತುತ ಆದೇಶದಿಂದ ತೊಂದರೆಗೆ ಒಳಗಾಗುತ್ತವೆ.

ಈ ತಂಡವನ್ನು ರಚಿಸಿದ ಸಂದರ್ಭದಲ್ಲಿ ಕೇಂದ್ರ ಸಕರ್ಾರವು 5 ಮುಖ್ಯಾಂಶಗಳ ಮೇಲೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿ ವರದಿ ನೀಡುವಂತೆೆ ಸೂಚಿಸಿತ್ತು. ಅದರಲ್ಲಿ ಅಪರೂಪದ ಜೀವವೈವಿಧ್ಯದ ರಕ್ಷಣೆಯ ಅವಶ್ಯಕತೆ ಮತ್ತು ಕಾರ್ಯಸೂಚಿ ಜೊತೆಗೆ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಐಕ್ಯತೆಯನ್ನು ಸಮಾನ ಆಥರ್ಿಕ ಸಾಮಾಜಿಕ ಬೆಳವಣಿಗೆಯೊಂದಿಗೆ ಸಮತೂಗಿಸಿಕೊಳ್ಳುತ್ತಲೇ ಸ್ಥಳೀಯರು ಮತ್ತು ಮೂಲ ನಿವಾಸಿಗಳು, ಬುಡಕಟ್ಟು ಜನ, ಅರಣ್ಯವಾಸಿಗಳು ಮತ್ತು ಸ್ಥಳೀಯ ಸಮುದಾಯಗಳ ಹಕ್ಕುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ ಆಶೋತ್ತರಗಳನ್ನು  ಖಾತ್ರಿ ಪಡಿಸುವುದು ಪ್ರಮುಖವಾಗಿತ್ತು. ಆದರೆ ಕಸ್ತೂರಿ ರಂಗನ್ ವರದಿಯ ಶಿಫಾರಸ್ಸು ಸಕರ್ಾರದ ಈ ನಿದರ್ೇಶನಕ್ಕೆ ವಿರೋಧವಾಗಿಯೇ ಇದೆ. ಇದನ್ನು ಪಾಲಿಸಲೇ ಇಲ್ಲ. 


ಪರಿಸರ ಜೀವ ವೈವಿಧ್ಯ ತೀರಾ ಮುಖ್ಯವಾದುದು. ಯಾವ ಕಾರಣಕ್ಕೂ ಪರಿಸರವನ್ನು ವಿರೋಧಿಸುವ ಅಥವಾ ಉಪೇಕ್ಷಿಸುವ ಪ್ರಶ್ನೆ ಇಲ್ಲ. ಕಾಡನ್ನು ತಲೆತಲಾಂತರದಿಂದ ಕಾಪಿಟ್ಟುಕೊಂಡು ಬಂದವರು ಇದೇ ದುಡಿಯುವ ಜನ. ಲಕ್ಷಾಂತರ ರೂಪಾಯಿ ಹಣ ಸುರಿದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗದ ಶ್ರಮಿಕರಿಗೆ ಸ್ವಚ್ಛ ಮತ್ತು ಉತ್ತಮ ಪರಿಸರದ ಅಗತ್ಯ ಇದ್ದೇ ಇದೆ. ಹಾಗಾಗಿಯೇ ಮರವನ್ನು ಪೂಜಿಸುವ, ಕಾಡಿನ ಮೇಲೆ ಹಾಡು ಕಟ್ಟಿ ಕುಣಿಯುವ ಬುಡಕಟ್ಟು ಜನ ಎಂದೂ ಮರಗಳ್ಳರಾಗಿಲ್ಲ. ಕಾಡನ್ನು ನಾಶಮಾಡಿಲ್ಲ; ದೇವರೆಂದೇ ಪೂಜಿಸುತ್ತಿದ್ದಾರೆ. ಈ ವರೆಗೆ ಆಳಿದ ಹಲವು ಸಕರ್ಾರಗಳು ಪ್ರತಿಯಾಗಿ ಅವರಿಗೆ ನೀಡಿದ್ದೇನು? ಏನೂ ಇಲ್ಲ. ರಸ್ತೆಯಿಲ್ಲ, ಸೇತುವೆ ಇಲ್ಲ, ಮನೆ ಇಲ್ಲ, ಶಾಲೆ ಆಸ್ಪತ್ರೆಗಳಿಲ್ಲ, ಈವರೆಗೆ ದುಡಿದು ತಿನ್ನುತ್ತಿದ್ದ ಭೂಮಿಗೆ ಹಕ್ಕುಪತ್ರವಿಲ್ಲ. ಉದ್ಯೋಗಕ್ಕೆ ಕೈಗಾರಿಕೆಗಳಿಲ್ಲ. ಕಟ್ಟಕೊನೆಗೆ ಅರಣ್ಯ ಸಂಪತ್ತಿನ ಮೇಲೆ ಸಾಮುದಾಯಿಕವಾದ ಹಕ್ಕೂ ಇಲ್ಲ.

ಇವೆಲ್ಲವನ್ನೂ ಒದಗಿಸಬೇಕಾದ್ದು ಸಕರ್ಾರದ ಜವಾಬ್ದಾರಿಯಾಗಿರಬೇಕಾದಾಗ ಕಾಡಿನಲ್ಲಿರುವವರು, ಬುಡಕಟ್ಟು ಸಮುದಾಯ, ಅರಣ್ಯವವಾಸಿಗಳು ಮತ್ತು ಪಶ್ಚಿಮ ಘಟ್ಟದ ತೊಪ್ಪಲಿನಲ್ಲಿ ವಾಸಿಸುವ ಎಲ್ಲರಿಗೂ ಬದುಕುವ ಹಕ್ಕನ್ನೇ ಸಕರ್ಾರ ನಿರಾಕರಿಸುತ್ತಿದೆ. ಈವರೆಗೆ ಅರಣ್ಯ ರಕ್ಷಣೆಯ ನೆಪದಲ್ಲಿ ಬಂದ ಹತ್ತಾರು ಕಾನೂನುಗಳು ಅಂದರೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಜಲ ಮತ್ತು ವಾಯು ಮಾಲಿನ್ಯ ನಿಯಂತ್ರಣಾ ಕಾಯ್ದೆ, ಜೈವಿಕ ತಂತ್ರಜ್ಞಾನ ಅನುಮೋದನಾ ಸಮಿತಿಯ ನಿಯಮಾವಳಿಗಳು, ಜಂಟಿ ಅರಣ್ಯ ನಿರ್ವಹಣಾ ನೀತಿಗಳು, ಪರಿಸರ ಅಭಿವೃದ್ಧಿ ಕಾರ್ಯಕ್ರಮಗಳು, ತೀರ ಪ್ರದೇಶ ನಿಯಮಾವಳಿಗಳು, ರಾಷ್ಟ್ರೀಯ ಜೀವ ವೈವಿಧ್ಯತಾ ಕಾರ್ಯತಂತ್ರ-ಕ್ರಿಯಾ ಯೋಜನೆ, ಜೊತೆಗೆ ಕನರ್ಾಟಕದಲ್ಲಿ ಕನರ್ಾಟಕ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯವಾಗುತ್ತವೆ. ಇವೆಲ್ಲ ಸುತ್ತು ಬಳಸಿ ಹೇಳುವುದೂ ಇದನ್ನೇ.

 ಕಸ್ತೂರಿ ರಂಗನ್ ವರದಿಯು, ಟೌನ್ ಶಿಪ್ ಅಥವಾ ವಸತಿ ಸಂಕಿರ್ಣ ನಿಮರ್ಾಣ ಮತ್ತು ಇತರೇ ಅಭಿವೃದ್ಧಿ ಕಾರ್ಯ ನಿಷೇಧ, ಈಗಾಗಲೇ ಇರುವ ಕೈಗಾರಿಕೆಗಳನ್ನು ಕ್ರಮೇಣ ಮುಚ್ಚುವುದು, 20 ಸಾವಿರ ಚ.ಕಿ.ಮಿ ಮತ್ತು ಅದಕ್ಕಿಂತ ಹೆಚ್ಚು ಅಳತೆಯ ಕಟ್ಟಡ ಮತ್ತು ಇರತೇ ನಿರ್ಮಣ ಕಾರ್ಯಗಳ ನಿಶೇಧ, ವಿವಿಧ ಪ್ರದೇಶಗಳಲ್ಲಿ ಹಲವು ಶಾಸನಗಳ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹೇರಿದ್ದ ನಿರ್ಬಂಧದ ಮುಂದುವರಿಕೆ, ಖಾಸಗಿ ಏಜೆನ್ಸಿ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹ ಹೀಗೆ ಹಲವು ರೀತಿಯ ಶಿಫಾರಸ್ಸುಗಳನ್ನು ಹೇರಿದೆ. ಇದರೊಂದಿಗೆ ಸಂಪೂರ್ಣವಾಗಿ ಗಣಿಗಾರಿಕೆ, ಕಲ್ಲುಕ್ವಾರಿ, ಮತ್ತು ಮರಳುಗಾರಿಕೆ ನಿಷೇಧಿಸಿದೆ. ಇವೆಲ್ಲವೂ ಪಶ್ಚಿಮ ಘಟ್ಟದಲ್ಲಿ ಬದುಕುವವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಅಡೆತಡೆಯಾಗಿ 'ಸ್ಥಳೀಯ ಸಮುದಾಯಗಳ ಹಕ್ಕುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ' ಆಶೊತ್ತರಗಳನ್ನು ನಾಶಪಡಿಸುವಂತದ್ದೇ ಆಗಿದೆ.

ಮುಖ್ಯವಾಗಿ ಇದು ಜನರ ಸಾಮುದಾಯಿಕ ಹಕ್ಕುಗಳನ್ನು ನಾಶಮಾಡಿ ಖಾಸಗಿಕರಣದೆಡೆಗೆ ಮುಖಮಾಡುತ್ತದೆ. ಸಾವಯವ ಕೃಷಿಗೆ ಬೆಂಬಲ ನೀಡುವ ನೆಪದಲ್ಲಿ ಇಡೀ ಕೃಷಿಯನ್ನೇ ಏಜೆನ್ಸಿಗಳಿಗೆ, ಖಾಸಗಿಗೆ ಕೊಡಲು ಮುಂದಾಗಲಾಗುತ್ತದೆ. ಗಾಡ್ಗಿಳ್ ವರದಿ ಹೇಳಿರುವ ಸಾರ್ವಜನಿಕ ಭೂಮಿಯ ಖಾಸಗಿಕರಣ ಮಾಡುವುದರ ನಿಷೇಧ ಮತ್ತು ಸ್ಥಳೀಯ ಅಭಿವೃದ್ಧಿಯ ಕುರಿತಾದ ತೀಮರ್ಾನವನ್ನು ತೆಗೆದುಕೊಳ್ಳುವ ಹಕ್ಕನ್ನು ಗ್ರಾಮಸಭೆ ಕೈಗೊಳ್ಳಬೇಕೆಂಬ ನಿಲುವನ್ನು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ಕೈಬಿಟ್ಟಿದೆ. ಇದು ವಿಕೇಂದ್ರೀಕರಣಕ್ಕೆ ವಿರೋಧವಾಗಿದೆ. ದೇಶದಲ್ಲಿ ಬಹುತೇಕ ಕಿರು ಜಲ ವಿದ್ಯುತ್ ಯೋಜನೆಗಳನ್ನು ಖಾಸಗಿಗೆ ವಹಿಸಿಕೊಡುತ್ತಿರುವ ಹೊತ್ತಿನಲ್ಲಿ ಈ ವರದಿ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಲವು ನಿಯಮದ ಅಡಿಯಲ್ಲಿ ಜಲವಿದ್ಯುತ್ ಯೋಜನೆಗೆಗಳನ್ನು ಆರಂಭಿಸಲು ಅನುಮತಿ ನೀಡುತ್ತದೆ

.
ಇದರೊಂದಿಗೆ ನದಿ ನೀರಿನ ಹಂಚಿಕೆ, ಹರಿವಿನ ವಿಸ್ತರಣೆ, ಪಾತ್ರ ಬದಲಾವಣೆ ಇತ್ಯಾದಿಗಳಿಗೆ ಇದು ವಿರೋಧವಾಗಿದೆ. ನೀರೇ ಇಲ್ಲದೇ ಸಾವಿನ ದವಡೆಗೆ ಸಾಗುತ್ತಿರುವ ಮನುಷ್ಯನ ರಕ್ಷಣೆಗಾಗಿ ನದಿ ನೀರಿನ ಸದ್ಬಳಕೆಯ ವಿಸ್ತರಣೆಗೆ ನಾವು ಆಲೋಚಿಸಲೇ ಬೇಕಾಗಿದೆ. ಯಾವ್ಯಾವುದೋ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಬಾಟಲಿ ನೀರಿಗಾಗಿ ಕೆರೆ-ಹಳ್ಳಗಳನ್ನೇ ಮಾರಲು ಹಿಂದೆ ನೋಡದ ಸಕರ್ಾರ ತನ್ನ ದೇಶದ ಜನತೆಯ ದಾಹ ತೀರಿಸಲು ನಿರ್ಬಂಧ ಹೇರುವುದು ಎಷ್ಟರ ಮಟ್ಟಿಗೆ ಸರಿ?

ಭೂಮಿಯ ಸಕ್ರಮದ ಪ್ರಶ್ನೆ: ಕಸ್ತೂರಿ ರಂಗನ್ ಗುರಿತಿಸಿದ ಪ್ರದೇಶಗಳಲ್ಲಿ ಬದುಕುತ್ತಿರುವ ರೈತರು ಮತ್ತು ಬುಡಕಟ್ಟು ರೈತರಿಗೆ ಸಾಗುವಳಿ ಯೋಗ್ಯ ಕೃಷಿಭೂಮಿಯ ಸಕ್ರಮಗೊಳಿಸುವಲ್ಲಿ ತೊಡಕುಂಟಾಗಲಿದೆ. ದೊಡ್ಡಪ್ರಮಾಣದಲ್ಲಿ ಆಹಾರ ಬೆಳೆಯನ್ನು ಮತ್ತು ಆಥರ್ಿಕ ಬೆಳೆಯನ್ನು ಬೆಳೆಯುತ್ತಿದ್ದವರನ್ನು ಮೂಲ ಸೌಕರ್ಯ ನೀಡದೇ ಸ್ವತಃ ಅವರೇ ಬಿಟ್ಟು ಹೋಗುವಂತ ವಾತಾವರಣವನ್ನು, ಸಂದರ್ಭವನ್ನು ಸೃಷ್ಟಿಸಲಾಗುತ್ತದೆ. ಆಹಾರದ ಕೊರತೆ, ಆಹಾರ ಅಭದ್ರತೆ ಎದುರಾಗಲಿದೆ. ಪಾರಂಪರಿಕ ನಿವಾಸಿಗಳ ರಕ್ಷಣೆಯ ಬಾಯುಪಚಾರದ ಮಾತಿದ್ದರೂ ಅತಿಕ್ರಮಣ ಭೂಮಿ,ಬಗರ್ ಹುಕುಂ,ಹಂಗಾಮಿ ಲಾಗಣಿ...ಇತ್ಯಾದಿ ಸಕ್ರಮಕ್ಕೆ ಪೂರ್ಣ ಅವಕಾಶಗಳಿಲ್ಲ. ಒಂದೆಡೆ ಪಶ್ಚಿಮ ಘಟ್ಟದಾಚೆಯ ಕೃಷಿಭೂಮಿಯನ್ನು ಖಾಸಗಿ.ವಿದೇಶಿ ಕಂಪನಿಗಳಿಗೆ ಕೊಡಲು ಯಾವ ನಿರ್ಬಂಧ ಇಲ್ಲ. ಆದರೆ ಇಲ್ಲಿ ಜನರ ಭೂಮಿ ಜನರಿಗೆ ಕೊಡಲು ಮಾತ್ರ ಇಲ್ಲಿ ನಿರ್ಬಂಧ!

ಉದ್ಯೋಗಕ್ಕಾಗಿ ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯವಾಗಿರುವುದರಿಂದ ಕೈಗಾರಿಕಾ ಸ್ಥಾಪನೆಯ ಮೇಲಿನ ನಿಷೇಧ ಯುವಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಪುನಃ ಮಹಾನಗರದತ್ತ ವಲಸೆ ವ್ಯಾಪಕವಾಗಲಿದೆ.

ಕರಾವಳಿ ಭಾಗದಲ್ಲಂತೂ ಒಂದೆಡೆ ಸಮುದ್ರ ತೀರ ನಿಯಂತ್ರಣ ಕಾಯ್ದೆಗಳು, (ಸಿಆರ್.ಝಡ್) ಇನ್ನೊಂದೆಡೆ ಅಭಯಾರಣ್ಯ, ಹುಲಿ ಮತ್ತು ಆನೆ ನಡೆದಾಡುವ ಬೆಟ್ಟಗಳು, ಸಿಂಗಳೀಕ, ಗಮಯ, ಪಕ್ಷಿಗಳ ಕುರಿತು ಸಂರಕ್ಷಿತಾರಣ್ಯವಾದ್ದರಿಂದ ಈಗಾಗಲೇ ಮಾನವ ಪ್ರವೇಶ ನಿಷೇಧ ಮಾಡಲಾಗುತ್ತಿದೆ. ಈಗ ಸುಮಾರು 2000ದಷ್ಟು ಹಳ್ಳಿಗಳನ್ನು ಅಭಿವೃದ್ಧಿ ಹೀನಸ್ಥಿತಿಗೆ ಒಯ್ಯಲಿದೆ. (ಅಧಿಕೃತ ಸಂಖ್ಯೆ 1576 ಆದರೂ ಅದರ ಆಸುಪಾಸಿನ ಹಳ್ಳಿಗಳಿಗೂ ಇದರ ಬಿಸಿ ತಟ್ಟಿತ್ತದೆ. ಸಂಚಾರ ನಿರ್ಭಂಧ ನಾಕಾ ಹಾಕಲಾಗುತ್ತದೆ.) 

ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈಗಾಗಲೇ ವನ್ಯಜೀವಿ ಕಾಯ್ದೆಗೆ,(ಹುಲಿ, ಆನೆ, ಹಾರ್ನಬಿಲ್, ಕಾಡೆಮ್ಮೆಕಾಡುಕೋಣ ಧಾಮ) ರಾಷ್ಟ್ರೀಯ ಉದ್ಯಾನಕ್ಕೆ ಹೋಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಜನತೆಯ ವಾಸ ನಿರ್ಬಂಧ ಮತ್ತು ಜಲವಿದ್ಯುತ್ ಯೋಜನೆಗೆ ಅರಣ್ಯ ನಾಶ ಜೊತೆಗೆ ಮನೆ-ಭೂಮಿ ಕಳಕೊಂಡಿದ್ದಾರೆ. ಈಗಿನ 88 ಹಳ್ಳಿಗಳು ಸೇರಿದರೆ ಇಡೀ ಜೋಯಿಡಾ ತಾಲೂಕು ಐತಿಹಾಸಿಕವಾಗಿ ಮಾನವ ವಸತಿಯ ನಕಾಶೆಯಿಂದ ಮಾಯವಾಗಲಿದೆ! ಇಲ್ಲಿಯ ಆದಿವಾಸಿ ಕುಣಬಿ, ಗೌಳಿಗಳ ಮತ್ತು ಇತರೇ ಹಿಂದುಳಿದ ಜನಾಂಗಗಳ ಪರಿಸ್ಥಿತಿ ಊಹಿಸಲಿಕ್ಕೂ ಸಾಧ್ಯವಿಲ್ಲದಂತೆ ಅವನತಿ ಹೊಂದುತ್ತದೆ.


ಹಾಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಖಾಸಗಿಕರಣ ಮಾಡಿ ಈ ನೆಲವನ್ನೂ ಮಾರಿದ್ದರಿಂದ ಪರಿಸರ ಅಸಮತೋಲನವನ್ನು ಸರಿ ಮಾಡಲು ಬಡ ರೈತರ ಭೂಮಿಯನ್ನು ಕಂಪನೀಕರಣ ಅಥವಾ ಕಸಿಯುವ ಹುನ್ನಾರದ ಭಾಗವಾಗಿ ಇದು ಕಾಣುತ್ತದೆ. ಲಾಭಕೋರ ಖಾಸಗಿಕರಣ ಮತ್ತು ಖಾಸಗಿಯವರಿಗೆ ಲಾಭತರುವ ತಪ್ಪು ಅಭಿವೃದ್ಧಿಯ ನೀತಿಯಿಂದಾಗಿ ಇಡೀ ಪರಿಸರ ನಾಶವಾದುದು ಸಕರ್ಾರಕ್ಕೆ ಕಾಣುತ್ತಲೇ ಇಲ್ಲ. ಅದರ ಪಾಪದ ಫಲವನ್ನು ಮಾತ್ರ ಸಣ್ಣ ಹಿಡುವಳಿದಾರರ, ಕೃಷಿಕೂಲಿ ಕಾಮರ್ಿಕರ ಹೆಗಲಿಗೆ ದಾಟಿಸುವ ಕೆಲಸವನ್ನು ಈ ವರದಿ ಯಶಸ್ವಿಯಾಗಿ ಮಾಡಿದೆ. 

 ವರದಿ ಒತ್ತು ಕೊಡುವ ಸಾವಯವ ಕೃಷಿ ಪೂರ್ಣ ಪ್ರಮಾಣದಲ್ಲಿ ಇಂದು ಕಾರ್ಯಸಾಧುವೇ? ಎಂಬ ಪ್ರಶ್ನೆ ಕೂಡ ಇದೆ. ಸಾವಯವ ಕೃಷಿ ಹುಟ್ಟಿಕೊಂಡಿದ್ದು ಒಂದು ನಿಧರ್ಿಷ್ಟ ಸಮಾಜೋ ಆಥರ್ಿಕ ಪದ್ಧತಿಯಲ್ಲಿ. ಆದರೆ, ಈಗ ಆ ಪದ್ಧತಿ ಅಲ್ಪಮಾತ್ರ. ಇದರೊಂದಿಗೆ ಮನುಷ್ಯನ ಅಗತ್ಯತೆ ಮತ್ತು ಅಪೇಕ್ಷೆಗಳು ಬದಲಾಗಿವೆ. ಜನಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವಾಗ ತಕ್ಷಣ ಸಾವಯವಕೃಷಿಗೆ ಪರಿವತರ್ಿಸುವುದರಿಂದ ಈ ಜನಸಂಖ್ಯೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮತ್ತು ಕಡಿಮೆ ದರದಲ್ಲಿ ಆಹಾರ ಒದಗಿಸಲು ಸಾಧ್ಯವೆ? ಹೆಚ್ಚು ಕೀಟ ನಾಶಕ ಬಳಸದ, ರಾಸಾಯನಿಕ ಕಡಿಮೆ ಬಳಸಿಯೂ ಉತ್ತಮ ಬೆಳೆ ಬರಬಹುದಾದ ಹೊಸ ಕೃಷಿ ಪದ್ಧತಿಯ ಸಂಶೋಧನೆಗೆ ಒತ್ತು ಕೊಡಬೇಕು. ಇದು ಸಾರ್ವಜನಿಕ ವಲಯದಲ್ಲಿಯೇ ನಡೆಯುವಂತಾಗಬೇಕು. ಬದಲಾಗಿ ಸಾವಯವದ ಉತ್ತೇಜನದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿಯವರಿಗೆ ನೀಡುವುದು, ಅದರ ಪ್ರೋತ್ಸಾಹದ ಏಜೆನ್ಸಿಯನ್ನು ಖಾಸಗಿಕರಣಗೊಳಿಸುವುದನ್ನು ಈ ವರದಿ ಪ್ರೋತ್ಸಾಹಿಸುತ್ತಿರುವುದು ಖಂಡನೀಯ. 
ಹಲವು ಯೋಜನೆಗಳ ಜಾಲ ಹೆಣೆಯುವ ಬದಲು ಈಗಿರುವ ಕಾನೂನನ್ನೆ ಜನರ ಸಹಭಾಗಿತ್ವದಲ್ಲಿ, ಪರಿಸರ ಪ್ರೇಮಿ- ಜನಮುಖಿಯಾಗಿ ತರುವ ಇಚ್ಛಾಶಕ್ತಿಯನ್ನು ತೋರ್ಪಡಿಸಬಹುದಾಗಿತ್ತು. ಆದರೆ ಸಕರ್ಾರ ತನ್ನ ವೈಫಲ್ಯ ಮರೆಮಾಚಲು ಹೊಸ ಹೊಸ ಯೋಜನೆಯನ್ನು ತಂದು ಜನರನ್ನು ಸದಾ ವ್ಯಥಿತರನ್ನಾಗಿಸುವುದರಲ್ಲೇ ಖುಷಿಕಾಣುತ್ತಿದೆ. ಒಂದೆಡೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಪ್ರದೇಶ ಇನ್ನೊಂದೆಡೆ ಯುನೆಸ್ಕೋ ಪಾರಂಪರಿಕ ವಿಶ್ವತಾಣ, ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಹುಲಿ ಮತ್ತು ಆನೆ ಕಾರಿಡಾರ್, ಹಾರ್ನಬಿಲ್ ಧಾಮ, ಬೈಸನ್ ಸೆಂಚುರಿ, ಸಿಂಗಳೀಕ ಉದ್ಯಾನ, ಜಲವಿದ್ಯುತ್ ಯೋಜನೆ. . . ಹೀಗೆ ಹತ್ತು ಹಲವು ಯೋಜನೆಗಳಿಗಾಗಿ ಮನುಷ್ಯ ಬಹುತೇಕ ಕಾಡುಗಳನ್ನು ಸಂಪೂರ್ಣವಾಗಿ ತೊರೆಯಬೇಕಾದ ಸ್ಥಿತಿ ಬಂದಿದೆ. ಉಳ್ಳವರ ಮೋಜಿಗೆ ಇಲ್ಲದವರು ಕೊರಳು ನೀಡುವ ಸ್ಥಿತಿ.

ಇಡೀ ವರದಿ ಪಶ್ಚಿಮ ಘಟ್ಟ ಅಭಿವೃದ್ಧಿಯ ಪಯರ್ಾಯದ ಬಗ್ಗೆ ಮಾತನಾಡುವುದಿಲ್ಲ. ಕೃಷಿ ನಾಶದಿಂದಾಗುವ ಆಹಾರ ಭದ್ರತೆ ಸಮಸ್ಯೆ, ಮರಳುಗಾರಿಗೆ, ಕಲ್ಲುಕ್ವಾರಿಯ ಪೂರ್ಣ ನಿಷೇಧದಿಂದ ಮನೆ ನಿಮರ್ಾಣ, ಅಗತ್ಯ ಕಾಮಗಾರಿಗೆ ತೊಡಕು, ಇರುವ ವಿದ್ಯುತ್ ಯೋಜನೆಯನ್ನು ಕ್ರಮೇಣ ನಿಲ್ಲಿಸಿದರೆ ಕೊರತೆಯಾಗಲಿರುವ ವಿದ್ಯುತ್ ಪ್ರಶ್ನೆ ಇತ್ಯಾದಿ ಕಡೆಗೆ ಆಲೋಚಿಸಬೇಕಿತ್ತು. ಆದರೆ ಈ ವರದಿಗೆ ಎಲ್ಲವನ್ನೂ ನಿಷೇಧಿಸುವ ಕುರಿತು ಇರುವ ಉತ್ಸಾಹ ಪಯರ್ಾಯವನ್ನು ಸೂಚಿಸುವುದರಲ್ಲಿ ಇಲ್ಲ. 
ಈ ಪ್ರದೇಶದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಪಟ್ಟ ಪೂರ್ವಭಾವಿ ಅನುಮತಿಯನ್ನು ನಿಧರ್ಿಷ್ಟ ಪಡಿಸಿದ ಇಲಾಖೆಯಿಂದ ಪಡೆದುಕೊಳ್ಳುವಂತೆ ಈ ವರದಿ ಹೇಳುತ್ತದೆ. ಇದು ಅತ್ಯಂತ ದೊಡ್ಡ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಉಳ್ಳವರ ಹಿತ ಕಾಯುವ ಮತ್ತು ಆಳುವ ರಾಜಕಾರಣಿಗಳ ಮಜರ್ಿಗೆ ಒಳಗಾಗುವಂತೆ ಮಾಡುತ್ತದೆ. 
ಸ್ಥಳೀಯ ಅಭಿವೃದ್ಧಿಯ ಸಾಧ್ಯತೆಯನ್ನು, ಸ್ವರೂಪವನ್ನು ನಿಶ್ಚಯಿಸುವ ಜವಾಬ್ದಾರಿ ಸ್ಥಳೀಯ ಗ್ರಾಮಸಭೆಗೆ ನೀಡಬೇಕು. ನೈಸಗರ್ಿಕ ಸಂಪತ್ತಿನ ನಿರ್ವಹಣೆಯನ್ನು ಖಾಸಗಿಕರಣ ಮಾಡಬಾರದು, ಪರಿಸರ ಸ್ನೇಹಿಯಾದ ಗಣಿಗಾರಿಕೆ, (ಚೀರೆಕಲ್ಲು ಇತ್ಯಾದಿ) ಮರಳುಗಾರಿಕೆಯನ್ನು ಸಕರ್ಾರವೇ ನಿಯಮಬದ್ಧವಾಗಿ ನಿರ್ವಹಿಸಬೇಕು. ಕಾಡಿನ ಜವಾಬ್ದಾರಿಯನ್ನು ಸ್ಥಳೀಯ ಸಮಿತಿಗಳಿಗೆ ಕೊಡಬೇಕು. ಅರಣ್ಯ ಕಿರು ಉತ್ಪನ್ನಗಳ  ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡಬೇಕು, ಮಾರುಕಟ್ಟೆ ಒದಗಿಸಬೇಕು, ಬಂಜರು ಭೂಮಿ, ಪಡ ಭೂಮಿಗಳನ್ನು ರೈತರಿಗೆ ನೀಡುವ ಮೂಲಕ ಅರಣ್ಯಾವಲಂಬನೆಯನ್ನು ಕಡಿಮೆಗೊಳಿಸಬಹುದು. ಉಳಿದ ಭೂಮಿಯಲ್ಲಿ ಅರಣ್ಯ ಯೋಜನೆ ಜ್ಯಾರಿಗೆ ತರಬೇಕು. ಎಲ್ಲಾ ಕಡೆ ಚಾಲ್ತಿಯಲ್ಲಿರುವ ಮೊನೋ ಕಲ್ಚರ್ ಕೈಬಿಟ್ಟು ವೈವಿಧ್ಯ ಅರಣ್ಯೀಕರಣ ಮಾಡಬೇಕು. ಅರಣ್ಯ ಇಲಾಖೆ ಭ್ರಷ್ಟಾಚಾರ, ಕಳ್ಳಸಾಗಾಣಿಕೆ ನಿಲ್ಲಿಸಲು, ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯ ಹಸ್ತಾಂತರ ನಿಲ್ಲಿಸಲು ಕ್ರಮ ವಹಿಸಬೇಕಿತ್ತು. ಈ ಬಗ್ಗೆ ಈ ವರದಿ ಮೌನವಾಗಿದೆ.




ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನು ಕೂಡ ಇಲ್ಲಿ ಗಮನಿಸಬೇಕು. ತಲೆತಲಾಂತರದಿಂದ ಕಾಡನ್ನು, ವನ್ಯ ಪ್ರಾಣಿಗಳನ್ನು ಪ್ರೀತಿಯಿಂದ ಬೆಳೆಸುತ್ತಾ ಅವಿಗಳೊಂದಿಗೆ ಅನ್ಯೋನ್ಯತೆ ಸಾಧಿಸಿದ ಮನುಷ್ಯನನ್ನು ಹೊರದೂಡುವುದೆಂದರೆ ಅಲ್ಲಿಯ ವೈವಿಧ್ಯತೆಯನ್ನು ನಾಶಮಾಡಿದಂತೆ. ಪಶ್ಚಿಮ ಘಟ್ಟದಲ್ಲಿ ನೂರಾರು ವರ್ಷಗಳಿಂದ ಬದುಕುತ್ತಿರುವ ಬುಡಕಟ್ಟು ಸಮುದಾಯ, ಪಾರಂಪರಿಕ ಅರಣ್ಯವಾಸಿಗಳು ಆ ಮಣ್ಣಿನೊಂದಿಗೆ, ಕಾಡಿನೊಂದಿಗೆ ಒಂದು ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಂಡು ಬಂದಿದ್ದಾರೆ. ಅವರ ಕಲೆ, ಸಾಹಿತ್ಯ, ಕುಣಿತ, ಭಾಷೆ ಇತ್ಯಾದಿಗಳು, ನಂಬಿಕೆ, ಆಚರಣೆ ಮುಂತಾದವುಗಳು ಈ ಕಾಡಿನಿಂದ ಬೇರ್ಪಡಿಸಲಾಗದ ಮುಖ್ಯ ಭಾಗವೇ ಆಗಿವೆ. ಅಲ್ಲಿಯೇ ಅವು ಹುಟ್ಟಿದ್ದು. ಈ ಪ್ರದೇಶವನ್ನು ಅಭಿವೃದ್ಧಿ ನಿಷೇಧ ಪ್ರದೇಶವನ್ನಾಗಿಸಿ ಅಲ್ಲಿಂದ ಹೊರದಬ್ಬಿದರೆ ಅವರು ಸಾವಿರಾರು ವರ್ಷಗಳಿಂದ ಕಟ್ಟಿಕೊಂಡು ಬಂದ ಸಾಂಸ್ಕೃತಿಕ ಪರಿಸರದ ಕಥೆ ಏನು? ನೀರಿನಿಂದ ತೆಗೆದ ಮೀನಿನಂತಲ್ಲವೇ? ಹಾಗಾಗಿ ಇಲ್ಲಿಯ ಭೂಮಿಯ ಹಕ್ಕು ಪತ್ರವನ್ನು ಅವರಿಗೆ ಕೊಡುವ ಶಾಲೆ, ಆಸ್ಪತ್ರೆ, ಕೈಗಾರಿಕೆಗಳ ಮೂಲಕ ಮೂಲ ಸೌಕರ್ಯ ಒದಗಿಸಿ, ಬದುಕುವ ಹಕ್ಕನ್ನು ಖಾತ್ರಿ ಪಡಿಸಬೇಕು, ಹಕ್ಕುನ ವಿಸ್ತರಣೆ ಕೂಡ ಆಗಬೇಕು. ಈ ಕುರಿತು ವರದಿ ಮೌನ ವಹಿಸಿದೆ. ಹೀಗೆ ಬುಡಕಟ್ಟು ಹಕ್ಕನ್ನು ನಿರಾಕರಿಸುವ ಯಾವ ವರದಿಗೂ ನಮ್ಮ ವಿರೋಧವಿದೆ. 
                                                                                                 ಯಮುನಾ ಗಾಂವ್ಕರ್, ಕಾರವಾರ 

ಜನರ ಬದಕು ಮತ್ತು ಪಶ್ಚಿಮ ಘಟ್ಟ ಉಳಿಸಿ, ಕಸ್ತೂರಿ ರಂಗನ್ ಸಮಿತಿ ವರದಿ ತಿರಸ್ಕರಿಸಿ- kprs

                                                                                                                               
               
                               ಅಖಿಲ ಭಾರತ ಕಿಸಾನ್ ಸಭಾ   4 ಅಶೋಕಾ ರಸ್ತೆ, ನವ ದೆಹಲಿ = 110001
                                                        ಪತ್ರಿಕಾ ಹೇಳಿಕೆ                                      20-11-2013                                                                                                                                                
ಜನರ ಬದಕು ಮತ್ತು ಪಶ್ಚಿಮ ಘಟ್ಟ ಉಳಿಸಿ,
 ಕಸ್ತೂರಿ ರಂಗನ್ ಸಮಿತಿ ವರದಿ ತಿರಸ್ಕರಿಸಿ

      ಭಾರತ ಸಕರ್ಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ದಿನಾಂಕ: 16-11-2013ರಂದು ಕಛೇರಿ ಸುತ್ತೋಲೆ ಹೊರಡಿಸಿ ಕಸ್ತೂರಿರಂಗನ್ ಸಮಿತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಎಂದು ಹೇಳಿರುವುದನ್ನು ಅಖಿಲ ಭಾರತ ಕಿಸಾನ್ ಸಭಾ ಬಲವಾಗಿ ಖಂಡಿಸುತ್ತದೆ.  ಹೈ ಲೆವೆಲ್ ವಕರ್ಿಂಗ್ ಗ್ರೂಪ್ (ಊಐಐಘಉ)  ಅಥವಾ ಕಸ್ತೂರಿ ರಂಗನ್ ಸಮಿತಿ ಎಂದು ಕರೆಯುವ ಸಮಿತಿಯು ನೀಡಿರುವ ವರದಿಯು ಪಶ್ಚಿಮ ಘಟ್ಟದ 4,156  ಹಳ್ಳಿಗಳಲ್ಲಿ ಕೃಷಿ ಮತ್ತು ಇತರೆ ಮೂಲಭೂತ ಅಭಿವೃದ್ದಿ ಕಾರ್ಯಗಳನ್ನು ನಿಯಂತ್ರಿಸಲು ಹೇಳುತ್ತದೆ. ಹಾಗಾಗಿ ತಕ್ಷಣವೇ ಈ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸುತ್ತೇವೆ. ರೈತರು ಮತ್ತು ಇತರೆ ಜನ ವಿಭಾಗಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಸವರ್ಾಧಿಕಾರಿ ಮಾದರಿಯಲ್ಲಿ ಆದೇಶವನ್ನು ನೀಡಿರುವುದು ಆಕ್ಷೇಪಾರ್ಹವಾಗಿದೆ. ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ಪಶ್ಚಿಮ ಘಟ್ಟ ಜೈವಿಕ ತಜ್ಞರ ಸಮಿತಿ ಅಥವಾ ಮಾಧವ ಗಾಡ್ಗೀಳ್ ಸಮಿತಿ ನೀಡಿದ್ದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ಶಿಫಾರಸ್ಸು ನೀಡಬೇಕೆಂದು  ಮತ್ತು ಅಲ್ಲಿಯ ಸ್ಥಳೀಯ ಹಾಗೂ ಮೂಲ ನಿವಾಸಿಗಳ ಅಗತ್ಯ ಮತ್ತು ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಗಾಡ್ಗೀಳ್ ಸಮಿತಿಯ ವರದಿಯನ್ನು ಪರಿಶೀಲಿಸಬೇಕೆಂದು ರಚಿಸಲಾಗಿತ್ತು.  ಆದರೆ ಈ ಸಮಿತಿಯು ರೈತರು ಮತ್ತು ಪಶ್ಚಿಮ ಘಟ್ಟ ಪ್ರದೇಶದ ಜನವಿಭಾಗಗಳು ಎತ್ತಿದ ದೂರುಗಳನ್ನು ಪರಿಹರಿಸಲು ಸಂಪೂರ್ಣವಾಗಿ ವಿಫಲಾಗಿದೆ.

     ಎರಡೂ ವರದಿಗಳು ತದ್ವಿರುದ್ದ ಶಿಫಾರಸ್ಸುಗಳನ್ನು ನೀಡಿರುವ ಹಿನ್ನಲೆಯಲ್ಲಿ ಒಂದನ್ನು ಪಕ್ಕಕ್ಕೆ ಇಟ್ಟು ಇನ್ನೊಂದನ್ನು ಏಕ ಪಕ್ಷೀಯವಾಗಿ ಆರಿಸಿಕೊಳ್ಳುವುದು ಪಶ್ಷಿಮಘಟ್ಟದ ಅತಿ ಸೂಕ್ಷ್ಮ ಜೈವಿಕ ಪರಿಸರದ ವಿರುದ್ದ ಶತಶತಮಾನಗಳಿಂದ ಅಲ್ಲಿನ ಪರಿಸರದ ಜೊತೆ ಬದುಕಿಕೊಂಡು ಬಂದಿರುವ ಜನರನ್ನು ಎತ್ತಿ ಕಟ್ಟುವ ಕೆಲಸವಾಗಿದೆ. ಎರಡು ವರದಿಗಳು ಅಲ್ಲಿಯ ಜನರು ಪಶ್ಚಿಮ ಘಟ್ಟದ ಪರಿಸರವನ್ನು ಉಳಿಸುವಲ್ಲಿ ಮತ್ತು ವನ್ಯ ಜೀವಿಗಳು ಮತ್ತು ಜೈವಿಕ ವೈವಿದ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ವಹಿಸುತ್ತಿರುವ ಪಾತ್ರವನ್ನು ನಿರ್ಲಕ್ಷಿಸಿವೆ. ಈ ವರದಿಗಳು ಅಧಿಕಾರಶಾಹಿ ವರದಿಗಳಾಗಿದ್ದು ಯಾವುದೇ ಪ್ರಜಾಸತಾತ್ಮಕ ಕಣ್ಣೋಟವನ್ನು ಹೊಂದಿಲ್ಲವಾಗಿದೆ. ಹಾಗಾಗಿ ಅವು ಅಲ್ಲಿನ ಜನತೆ ಮತ್ತು ಪರಿಸರದ ನಡುವಿನ ಸಂಬಂಧವನ್ನು ವೈಜ್ಞಾನಿಕವಾಗಿ ಅಂದಾಜಿಸುವಲ್ಲಿ ವಿಫಲವಾಗಿವೆ. ಹಾಗಾಗಿ ಸಮಾಜ ವಿಜ್ಞಾನಿಗಳು, ಪರಿಸರ ತಜ್ಞರು, ರೈತ ಸಂಘಟನೆಗಳು ಮತ್ತು ಸಂಬಂಧಿಸಿದ ರಾಜ್ಯಗಳ ವಿವಿಧ ರಾಜಕೀಯ ಪಕ್ಷಗಳ ಸರಿಯಾದ ಪ್ರಾತಿನಿದ್ಯ ಇರುವ ವಿಶಾಲ ವ್ಯಾಪ್ತಿಯ ಸಮಿತಿಯಿಂದ ವೈಜ್ಞಾನಿಕ ಅಂದಾಜಿಗೆ ಬರಲು ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸುತ್ತದೆ. ಅತಿ ಸೂಕ್ಷ್ಮ ಜೀವ ವೈವಿಧ್ಯ ಮತ್ತು ಬದುಕಿನ ರಕ್ಷಣೆಯ ಬಗ್ಗೆ ಒಂದು ಸಮಗ್ರ ಅಭಿಪ್ರಾಯಕ್ಕೆ ಬರುವ ಮುನ್ನ ಅಲ್ಲಿಯ ಜನರು ಮತ್ತು ಸಂಬಂಧಿಸಿದ ಎಲ್ಲರೊಡನೆ ವಿಶಾಲ ವ್ಯಾಪ್ತಿಯ ಸಮಾಲೋಚನೆ ನಡೆಯಬೇಕಿದೆ.
     ವ್ಯಾಪಕ ಪ್ರಮಾಣದ ಪ್ರಮಾಣದ ಪ್ರತಿಭಟನೆಗಳನ್ನು ಗಮನಕ್ಕೆ ತೆಗೆದುಕೊಳ್ಳದ ಪರಿಸರ ಮತ್ತು ಅರಣ್ಯ ಸಚಿವಾಲಯವು. ಆರು ರಾಜ್ಯಗಳ 4,156 ಹಳ್ಳಿಗಳನ್ನು (ಗೋವಾ-99, ಗುಜರಾತ್-64, ಕನರ್ಾಟಕ-1576, ಕೇರಳ-123, ಮಹಾರಾಷ್ಟ್ರ-2159, ಮತ್ತು ತಮಿಳುನಾಡು-135) ಒಳಗೊಂಡ ಪ್ರದೇಶವನ್ನು ಜೈವಿಕ ಸೂಕ್ಷ್ಮ ವಲಯಗಳು ಎಂದು ಘೋಷಿಸಿ ಮತ್ತು ಆ ಮೂಲಕ ಅಲ್ಲಿ ಕೃಷಿ ಹಾಗೂ ಇನ್ನೀತರೆ ಮೂಲಭೂತ ಚಟುವಟಿಕೆಗಳನ್ನು ನಿಯಂತ್ರಿಸಿ ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳನ್ನು  ಕಾರ್ಯಚರಣೆಗೆ ತರಲು ಹೊರಟಿದೆ. ಕಂದಾಯ ಹಳ್ಳಿಗಳನ್ನು ಆದರಿಸಿ ಜೈವಿಕ ಸೂಕ್ಷ್ಮ ವಲಯಗಳು ಎಂದು ಘೋಷಿಸಿರುವುದು ಕೂಡ ಅವೈಜ್ಞಾನಿಕವಾಗಿದೆ.

     ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇವಲ ಜನವಸತಿಗಳನ್ನು ವಿಸ್ತರಿಸುವ ಉದ್ದೇಶವಲ್ಲದೇ ಬೇರಾವುದೇ ಉದ್ದೇಶಕ್ಕೆ ಭೂಮಿಯ ಬಳಕೆಯನ್ನು ನಿಷೇದಿಸುವ ಗಾಡ್ಗೀಳ್ ವರದಿಯ ಶಿಫಾರಸ್ಸು ಮತ್ತು ಅದನ್ನು ಅನುಮೋದಿಸುವ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಭಾರತ ಸಕರ್ಾರವು ಅಂಗೀಕರಿಸಿದೆ. ಈ ಕ್ರಮವು ಆ ಹಿಂದುಳಿದ ಪ್ರದೇಶದಲ್ಲಿ ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಭೂತ ಸವಲತ್ತುಗಳನ್ನು ನೀಡಲು ನಿಯಂತ್ರಣ ಹೇರುತ್ತದೆ. ಇದನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ.  ಕಾಫಿಯನ್ನು ಒಳಗೊಂಡಂತೆ ಒಂದೇ ರೀತಿಯ ಬೆಳೆಯನ್ನು ಒಳಗೊಂಡ ಕೃಷಿ ಚಟುವಟಿಕೆ ಮೇಲೆ ನಿಯಂತ್ರಣ,  ರಸಗೊಬ್ಬರಗಳ ಬಳಕೆ, ಜೈವಿಕ ಕೃಷಿ ಕಡ್ಡಾಯ ಎಂಬ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ.  ನವೆಂಬರ್-16ರ ಆಧೇಶದ ಮೂಲಕ ಸಚಿವಾಲಯವು ಅಂಗೀಕರಿಸಿರುವ ಶಿಫಾರಸ್ಸುಗಳು ರೈತರ ಬದುಕಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದಿಲ್ಲ ಎಂದು  ಹೇಳಿರುವ ಕೇಂದ್ರ ಸಚಿವೆ ಜಯಂತಿ ನಟರಾಜನ್ರವರ ಹೇಳಿಕೆ ಆಧಾರರಹಿತವಾಗಿದೆ.

     ಪರಿಸರ ರಕ್ಷಣೆಗೆ ತನ್ನ ಆಳವಾದ ಬದ್ದತೆಯನ್ನು ಪುನರುಚ್ಚರಿಸುವಾಗಲೇ ಪ್ರಾಂತ ರೈತ ಸಂಘವು ಜನರ ಬದುಕು ಮತ್ತು ನಾಗರಿಕತೆಯಿಂದ ಪರಿಸರದ ಪ್ರಶ್ನೆಗಳನ್ನು ಪ್ರತ್ಯೇಕಿಸಬೇಕೆಂಬ ನಿಲುವುವನ್ನು ತಿರಸ್ಕರಿಸುತ್ತದೆ.  ಪರಿಸರಕ್ಕೆ ಪೂರಕವಾದ ಅಭಿವೃದ್ದಿಯು ಆ ಪ್ರದೇಶದ ಜನತೆಯ ಬದುಕು ಮತ್ತು ಆಥರ್ಿಕ ಆಯ್ಕೆಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಗಾಡ್ಗೀಳ್ ವರದಿಯು ತನ್ನ ಶಿಫಾರಸ್ಸುಗಳಲ್ಲಿ ಈ ಪ್ರಶ್ನೆಗೆ ಸಂಬಂಧಿಸಿರುವ ಸಮಾಜೋ ಆಥರ್ಿಕ ಅಂಶಗಳನ್ನು ಪರಿಶೀಲಿಸಲು ವಿಫಲವಾಗಿದೆ. ಎರಡು ವರದಿಗಳು ವಿವಿಧ ಸಾಮಾಜಿಕ ವಿಭಾಗಗಳ ಜೀವನದ ಮೇಲೆ ಪರಿಸರದ ನಾಶವು ಉಂಟು ಮಾಡುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿಲ್ಲ. ಈ ವರದಿಗಳು ಪಶ್ಷಿಮ ಘಟ್ಟ ಪ್ರದೇಶದಲ್ಲಿ ಮಾನವ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಲು, ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿ ಮತ್ತು ಸಸ್ಯ ಸಂಕುಲಗಳ ರಕ್ಷಣೆ, ಭತ್ತದ ಗದ್ದೆಗಳು ಮತ್ತು ನೀರಿನ ಸೆಲೆಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಪರಿಹಾರಾತ್ಮಕ ಸಲಹೆಗಳನ್ನು ನೀಡುವಲ್ಲಿ ವಿಫಲವಾಗಿವೆ.

     ಗಣಿ ಮತ್ತು ಅರಣ್ಯ ಮಾಫಿಯಗಳ ಜೊತೆ ರೈತರು ಕೂಡ ಪರಿಸರವನ್ನು ಹಾಳು ಮಾಡುತ್ತಾರೆಂದು ವಿಭಾಗಿಕರಿಸಿರುವ ನಿಲುವನ್ನು ರೈತ ಸಂಘ ತಿರಸ್ಕರಿಸುತ್ತದೆ.  ಪರಿಸರ ಸಂರಕ್ಷಣೆಯಲ್ಲಿ ರೈತರು ಯಾವಾಗಲೂ ಮುಂದು ಎಂದು ರೈತ ಸಂಘ ನಂಬಿದೆ. ಪಶ್ಚಿಮ ಘಟ್ಟ ಪ್ರದೇಶದ ಸಂರಂಕ್ಷಣೆಯಲ್ಲಿ ಸ್ಥಳೀಯ ರೈತಾಪಿ ಮತ್ತು ಜನಗಳ ಬೆಂಬಲ  ಹಾಗೂ ಪ್ರಜ್ಞಾ ಪೂರ್ವಕ ಪಾಲ್ಗೋಳ್ಳುವಿಕೆ ಅಗತ್ಯ ಎಂಬುದನ್ನು ಭಾರತ ಸಕರ್ಾರ ಅರ್ಥ ಮಾಡಿಕೊಳ್ಳಬೇಕು.

     ಕಸ್ತೂರಿ ರಂಗನ್ ಸಮಿತಿಯ ವರಧಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತೇವೆ ಎಂಬ ಪರಿಸರ ಮತ್ತು ಅರಣ್ಯ ಸಚಿವಾಲಯದ ತಿಮರ್ಾನವು ಸಂಬಂಧಿಸಿದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳಿಗೆ ಕಾರಣವಾಗಿದೆ. ಎರಡೂ ಸಮಿತಿಗಳ ಜನವಿರೋಧಿ, ರೈತ ವಿರೋಧಿ, ಶಿಫಾರಸ್ಸುಗಳ ವಿರುದ್ದದ ಪ್ರತಿಭಟನೆಗಳಿಗೆ ರೈತ ಸಂಘ ಬೆಂಬಲಿಸುತ್ತದೆ ಮತ್ತು ಈ ಪ್ರತಿಭಟನೆಗಳಲ್ಲಿ ಸೇರಿಕೊಳ್ಳುವಂತೆ ತನ್ನೆಲ್ಲಾ ಘಟಕಗಳಿಗೆ ಕರೆ ನೀಡುತ್ತದೆ.

     ಹಾಗಾಗಿ ಎರಡೂ ಸಮಿತಿಗಳ ಜನ ವಿರೋಧಿ ಮತ್ತು ರೈತ ವಿರೋಧಿ ಶಿಫಾರಸ್ಸುಗಳನ್ನು ಕೈಬಿಡಲು ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯವು ರೈತ ಸಂಘಟನೆಗಳು ಮತ್ತು ಇತರೆ ಸಂಬಂಧಿಸಿದ ಎಲ್ಲರ ಜೊತೆ ಚಚರ್ಿಸಿ ಪಶ್ಚಿಮ ಘಟ್ಟದ ಅಭಿವೃದ್ದಿಗೆ ಒಂದು ಸಮಗ್ರ ಕಾರ್ಯ ಯೋಜನೆ ರೂಪಿಸಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಆ ಪ್ರದೇಶದ ಜನತೆಯ ಮನಸ್ಸಿನಲ್ಲಿ ಅನುಮಾನ ಮತ್ತು ಅಭದ್ರತೆಯನ್ನು ಹುಟ್ಟಿ ಹಾಕಿವೆ. ಆದ್ದರಿಂದ ಆ ಅನುಮಾನಗಳನ್ನು ಹೋಗಲಾಡಿಸಲು ಹಾಗೂ  ಜೀವನದ ಭದ್ರತೆಯನ್ನು ಕಾಪಾಡುವ ಪ್ರಾಮಾಣಿಕ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ
.
     ಆಮ್ರ ರಾಂ                                                                                 ಹನನ್ ಮೊಲ್ಲಾ                
    ಅಧ್ಯಕ್ಷರು                                                                        ಪ್ರಧಾನ ಕಾರ್ಯದಶರ್ಿ