Wednesday 12 February 2014

ಪುತ್ತಣ್ಣ ನಾಟಕೋತ್ಸವ - 2014 ಮತ್ತು ವಿಚಾರ ಸಂಕಿರಣ

                                        ಚಿಂತನ ರಂಗ ಅಧ್ಯಯನ ಕೇಂದ್ರ (ರಿ)ಉತ್ತರಕನ್ನಡ

                                                           ಪತ್ರಿಕಾ ಪ್ರಕಟಣೆ

    ಶಿರಸಿಯ ಸದಾನಂದ ಶಾನಭಾಗ(ಪುತ್ತಣ್ಣ) ಈ ನಾಡಿನ ಬಹದೊಡ್ಡ ಕಲಾಕಾರ. ಮುಂಬೈಯಿಂದ  ಹಿಡಿದು ಶಿರಸಿಯವರೆಗಿನ ಅವರ ಕಲಾಪಯಣದ ಆಳ, ವಿಸ್ತಾರ ಅನನ್ಯ. ಪ್ರಸಾದನ, ಪರಿಕರ, ನಟನೆ, ನಿದರ್ೇಶನ ಹೀಗೆ ಎಲ್ಲ ರಂಗದಲ್ಲಿಯೂ ವಿಶಿಷ್ಠತೆ  ಸಾಧಿಸಿದ ಇವರು ಜಿಲ್ಲೆಯ ರಂಗತಂಡಗಳಿಗೆ ನೀಡಿದ ಪ್ರತ್ಯಕ್ಷ, ಪರೋಕ್ಷ ಪ್ರೇರಣೆ ಅಪಾರ. ಇಂದು ಮಾರಿಗುಡಿ ಸುತ್ತಲಿನ ಹಲವು ಕಲಾವಿದರು ಅವರ ಮಾರ್ಗದರ್ಶನವನ್ನು ಸ್ಮರಿಸುತ್ತಲೇ ಇರುತ್ತಾರೆ. ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಚಿಂತನ ರಂಗ ಅಧ್ಯಯನ ಕೇಂದ್ರ ಸಂಘಟಿಸುತ್ತಿದೆ.

    ಚಿಂತನ ರಂಗ ಅಧ್ಯಯನಕೇಂದ್ರ ಚಿಂತನ ಉತ್ತರಕನ್ನಡದ ಅಂಗ ಸಂಸ್ಥೆ.  ಹಲವು ವರ್ಷಗಳಿಂದ ರಂಗಭೂಮಿಯ ಬೇರೆ ಬೇರೆ ಆಯಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಿಂತನದ ಗೆಳೆಯರು ಚದುರಿ ಹೋಗುತ್ತಿದ್ದ ರಂಗ ಚಟುವಟಿಕೆಗಳಿಗೆ ಒಂದು ತಾತ್ವಿಕ ಸ್ವರೂಪ ನೀಡಲು ಇದನ್ನು ಸ್ಥಾಪಿಸಿದರು. ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆರೋಗ್ಯಕರ ಸಮಾಜ ಕಟ್ಟುವ ಚಿಂತನದ ಆಶಯಗಳನ್ನು ರಂಗಮುಖೇನ ಸಾಧಿಸುವದು ಇದರ ಪ್ರಮುಖ ಗುರಿ. ರಂಗಭೂಮಿಗೆ ಸಂಬಂಧಿಸಿದ ತಾತ್ವಿಕ ಚಿಂತನೆಗಳನ್ನು ನಡೆಸುತ್ತಲೇ ಪ್ರಯೋಗಗಳ ಮೂಲಕ ಅವುಗಳನ್ನು ಗಟ್ಟಿಗೊಳಿಸುವದು ಈ ಕೇಂದ್ರದ ಉದ್ದೇಶ. ರಂಗ ತರಬೇತಿನಡೆಸುವದು, ಪ್ರದರ್ಶನ ಸಂಘಟಿಸುವದು, ವಿಚಾರಸಂಕೀರ್ಣಗಳನ್ನು ಆಯೋಜಿಸುವದು, ಸಾಮಾಜಿಕ ಆಶಯಗಳಿಗಾಗಿ ಬೀದಿನಾಟಕ ಪ್ರಯೋಗಿಸುವದು, ಕಾಲೇಜುಗಳಲ್ಲಿ ರಂಗ ಶಿಕ್ಷಣ ನೀಡುವದು ಮುಖ್ಯವಾಗಿ ಮಕ್ಕಳ ರಂಗಭೂಮಿಯನ್ನು ಪ್ರಧಾನ ನೆಲೆಗೆ ತರುವದು, ರಜಾ ಶಿಬಿರ ನಡೆಸುವದು, ಶಿಕ್ಷಣದಲ್ಲಿ ರಂಗಕಲೆಯ ಆನ್ವಯಿಕ ಸಾಧ್ಯತೆಗಳನ್ನು ಅನ್ವೇಷಿಸುವದು, ಮಕ್ಕಳ ನಾಟಕ ರೆಪರ್ಟರಿಯನ್ನು ನಡೆಸುವದು - ಇವೇ ಮುಂತಾದ ಹಲವು ಯೋಜನೆಗಳನ್ನು ಕೇಂದ್ರ ಕಾರ್ಯ ರೂಪಕ್ಕೆ ತಂದಿದೆ. ಕೇಂದ್ರದ ಸದಸ್ಯರು ಸುಮಾರು 20 ವರ್ಷಗಳಿಂದ ರಾಜ್ಯದ ಹಲವುಕಡೆ ರಂಗ ಕಾಯಕದಲ್ಲಿ ತೊಡಗಿಸಿಕೊಂಡ ಅನುಭವವನ್ನು ಬಳಸಿ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. 2003ರಿಂದ ರಂಗ ತಿರುಗಾಟದ ರೆಪರ್ಟರಿ ನಡೆಸುತ್ತಿದೆ. ಕೇಂದ್ರವು ತನ್ನದೇ ಆದ ಕಾರ್ಯಕ್ರಮಗಳ ಜತೆ ಹಲವು ಸಂಸ್ಥೆಗಳೊಡನೆ ಸೇರಿಯೂ ಕಾರ್ಯ ನಿರ್ವಹಿಸಿದೆ. ಡಯಟ್ ಗಳಲ್ಲಿ ಶಿಕ್ಷಕರಿಗಾಗಿ ರಂಗ ತರಬೇತಿ ನೀಡಿದೆ, ಮೈಸೂರು ರಂಗಾಯಣದ ಮಕ್ಕಳ ನಾಟಕ ಯೋಜನೆಗಳಲ್ಲಿ ಭಾಗವಹಿಸಿದೆ. ಹಲವು ಸಂಸ್ಥೆಗಳ ಸಹಯೋಗದಲ್ಲಿ ಬೀದಿನಾಟಕಗಳ ತಿರುಗಾಟ ನಡೆಸಿದೆ. ಕಳೆದ 5 ವರ್ಷಗಳಿಂದ ಪುತ್ತಣ್ಣನ ಹೆಸರಿನಲ್ಲಿ ರಂಗೋತ್ಸವವನ್ನು ನಡೆಸುತ್ತಿದೆ.

    
    ಈ ವರ್ಷ ತುಂಬ ವಿಶಿಷ್ಟವಾಗಿ ರಾಜ್ಯ ಮಟ್ಟದ ರಂಗೋತ್ಸವವನ್ನು ನಡೆಸಲು ಸಂಘಟನೆ ತೀರ್ನಿಮಾನಿಸಿದೆ. ಫೆಬ್ರವರಿ 15 ಮತ್ತು 16 ರಂದು ಶಿರಸಿಯಲ್ಲಿ ಹಾಗೂ 17 ರಂದು ಸಿದ್ದಾಪುರದಲ್ಲಿ ಹೀಗೆ 3 ದಿನಗಳು ಈ ನಾಟಕೋತ್ಸವ ನಡೆಯಲಿದೆ. 15ರಂದು ಶಿರಸಿಯ ಸಹ್ಯಾದ್ರಿ ರಂಗ ಮಂದಿರದಲ್ಲಿ ಆರಂಭಗೊಳ್ಳಲಿರುವ ಈ ಉತ್ಸವವನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರಹೆಗಡೆಯವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶ್ರೀಕಾಂತ ತಾರೀಬಾಗಿಲು, ಶ್ರೀಮತಿ ಭಾಗೀರಥಿಹೆಗಡೆಯವರು, ವಿ ಎನ್ಮಲ್ಲಿಕಾರ್ಜುನ ಸ್ವಾಮಿ, ರಾಜು ಮೊಗವೀರ, ಎಂ.ಎಸ್.ಪ್ರಸನ್ನ ಕುಮಾರ, ಸವಿತಾ ಪುತ್ತಣ್ಣ ಭಾಗವಹಿಸಲಿದ್ದು ವಿಡಂಬಾರಿಯವರು ಅಧ್ಯಕ್ಷತೆವಹಿಸಲಿದ್ದಾರೆ. ಸಂಜೆ 6.45ರಿಂದ ರಥಬೀದಿಗೆಳೆಯರು ಉಡುಪಿ ಇವರು, ಅಭಿಲಾಷಾ ಎಸ್. ಅವರು ರಚಿಸಿದ ಸಂಗ್ಯಾ ಬಾಳ್ಯಾ ಆಧರಿತ ನಾಟಕ 'ಗಂಗಿ ಪರಸಂಗ' ನಾಟಕವನ್ನು ಡಾ.ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. 16ರ ಬೆಳಿಗ್ಗೆ 9:30ರಿಂದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ದೇವಾನಂದ ಗಾಂವಕರ ಹಾಗೂ ಸಂಗಡಿಗರಿಂದ ರಂಗ ಗೀತೆಗಳ ಗಾಯನ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು  ಸಾಹಿತ್ಯ ಸಮುದಾಯ ಬೆಂಗಳೂರು ಇವರು ವಿಚಾರ ಸಂಕಿರಣಕ್ಕೆ  ಸಹಯೋಗ ನೀಡಲಿದ್ದಾರೆ.


ಎನ್.ಎಸ್.ಡಿ.ಪದವೀಧರರಾದ ಗೋಪಾಲ ಕೃಷ್ಣ ನಾಯರಿಯವರು ಇದನ್ನು ಉದ್ಘಾಟಿಸಲಿದ್ದು, ಖ್ಯಾತ ನಿದರ್ೇಶಕ ಇಕ್ಬಾಲ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಕೃಷ್ಣ ಭಟ್ಟ ದುಂಡಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಂಗಭೂಮಿ ಮತ್ತು ಸಿನೆಮಾದಲ್ಲಿ ಹೆಸರಾದ ಪ್ರಕಾಶ ಬೆಳವಾಡಿ, ರಂಗ ನಿದರ್ೇಶಕ ಪ್ರಕಾಶ ಗರುಡ, ನಾಟಕ ರಚನೆ ಮತ್ತು ನಿದರ್ೇಶನದಲ್ಲಿ ಹೆಸರಾದ ಅಭಿಲಾಷಾ, ಖ್ಯಾತ ಸಾಹಿತಿ ನಿಂಗು ಸೊಲಗಿ ಇವರು ಕಳೆದ ದಶಕದಲ್ಲಿ ರಂಗಭೂಮಿ ನಡೆದ ದಾರಿಯನ್ನು, ಅದರ ಚಯರ್ೆಯನ್ನು ಚಚರ್ಿಸಲಿದ್ದಾರೆ. ಅವರೊಂದಿಗಿನ ಸಂವಾದದಲ್ಲಿ ರಾಜ್ಯದ ಹಲವು ರಂಗ ಕಮರ್ಿಗಳು ಭಾಗವಹಿಸಲಿದ್ದಾರೆ. ಸಂಜೆ 6ರಿಂದ ಚಿಂತನ ರಂಗ ಅಧ್ಯಯನ ಕೇಂದ್ರದ ಕಲಾವಿದರು ರಂಗ ಸಂಗೀತ ನಡೆಸಿಕೊಡಲಿದ್ದಾರೆ. 6:30ರಿಂದ ಬೆಂಗಳೂರು ಸಮುದಾಯ ತಂಡದವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾನರ್ಾಡರು ರಚಿಸಿದ ಬಹು ಚಚರ್ಿತ ನಾಟಕ 'ತುಘಲಕ್' ಅಭಿನಯಿಸಲಿದ್ದಾರೆ. ಇದರ ನಿದರ್ೇಶನವನ್ನು ಡಾ.ಸ್ಯಾಮ ಕುಟ್ಟಿ ಪಟ್ಟಂಕರ್ರಿ ಮತ್ತು ಡಾ.ಶ್ರೀಪಾದ ಭಟ್ ಮಾಡಿದ್ದಾರೆ.

17ರಂದು ಸಂಜೆ 6ಕ್ಕೆ ಸಿದ್ದಾಪುರ ಶಂಕರ ಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಮುದಾಯದ ರಾಜ್ಯ ಕಾರ್ಯದರದಶಿ೵ ಸುರೇಂದ್ರ ರಾವ್, ಬಸವರಾಜು ಹೂಗಾರ,ಆರ್.ಪಿ.ಹೆಗಡೆ,ವಿಜಯ ಹೆಗಡೆ ದೊಡ್ಮನೆ ಪಾಲ್ಗೊಳ್ಳಲಿದ್ದಾರೆ. ನಂತರ ಚಿಂತನ ರಂಗ ಅಧ್ಯಯನ ಕೇಂದ್ರದಿಂದ ಡಾ.ಶ್ರೀಪಾದ ಭಟ್ ಇವರ ನಿರ್ದೇಶಿಸಿದ 'ಕನ್ನಡ ಕಾವ್ಯ ಕಥನಗಳ ವಾಚಿಕಾಭಿನಯ 'ಕಾವ್ಯ ರಂಗ' ಪ್ರಯೋಗಗೊಳ್ಳಲಿದ್ದು ನಂತರ ಮಂಗಳೂರಿನ ತರಿಕಿಟ ಕಲಾ ಕಮ್ಮಟ ತಂಡದವರು ಖ್ಯಾತ ರಂಗ ತಜ್ಞ ಶ್ರೀ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿದ 'ಮೆಕ್ಕಾ ದಾರಿ' ಎಂಬ ನಾಟಕವನ್ನು ಪ್ರದರದಶಿಸಲಿದ್ದಾರೆ..
. ಶ್ರೀ ವಿ.ಪಿ.ಹೆಗಡೆ ವೈಶಾಲಿಯವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು ಶ್ರೀ ಎಂ.ಎಚ್.ನಾಯ್ಕ ಕಾರ್ಯದಶರ್ಿಗಳಾಗಿ, ಹಲವು ರಂಗಾಸಕ್ತರು ಸದಸ್ಯರಾಗಿ ಈಗಾಗಲೇ ಉತ್ಸವದ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ತಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನ ಈ ದಿಸೆಯಲ್ಲಿ ಅಗತ್ಯವಾಗಿದ್ದು ಉತ್ಸವದಲ್ಲಿ ಸದಾ ನಮ್ಮ ಜತೆಗಿರಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

No comments:

Post a Comment