Tuesday, 28 June 2016

ಅನಾಥವಾದ ಬಂಗಾರೇಶ್ವರ ಗೌಡರ ಸೈಕಲ್-ವಿಠ್ಠಲ ಭಂಡಾರಿ

                                   ಅನಾಥವಾದ ಸೈಕಲ್



ನಾನು ಬಂಗಾರೇಶ್ವರರನ್ನು ಮೊದಲು ನೋಡಿದ್ದು ಶಿರಸಿಯಲ್ಲಿ ನಡೆದ ಎಸ್ ಎಫ್ ಐ ಸಮ್ಮೇಳನದಲ್ಲಿ. ಆಗಲೂ ಅವರು ವಿದ್ಯಾರ್ಥಿಗಳಿಗೆ ಬದ್ಧತೆಯ ಬಗ್ಗೆ ಮತ್ತು ಓದಿನ ಅಗತ್ಯದ ಬಗ್ಗೆ ಹೇಳುತ್ತಿದ್ದರು.ತನ್ನ ಇಳಿ ವಯಸ್ಸಿನಲ್ಲಿಯೂ ಅವರು ಅಧ್ಯಯನ ಶಿಬಿರಕ್ಕೆ ಬಂದು ಕುಳಿತುಕೊಳ್ಳುತ್ತಿದ್ದರು.ಸಾಮಾನ್ಯವಾಗಿ ಅವರೊಂದಿಗೆ ಕಮ್ಯುನಿಷ್ಟ ಪಕ್ಷದ ಸಾಹಿತ್ಯವಾಗಲೀ, ,ಪಕ್ಷದ ಪತ್ರಿಕೆಯಾಗಲೀ ಇರುತ್ತಿತ್ತು. ಎರಡೂ ಕಾಲಿನ ಸತು ಕಳೆದುಕೊಂಡು ಮಲಗಿದ ಕಾ. ಬಂಗಾರೇಶ್ಡರರನ್ನು 15 ದಿನದ ಹಿಂದೆ ಕಾಣಲು ಹೋದಾಗಲೂ ಅವರು ಹೇಳಿದ್ದು ನನಗೆ ಕುಳಿತು ಓದಲು ಆಗುತ್ತಿಲ್ಲ. ಓದಿಸಿಕೊಳ್ಳಲು ಯಾರೂ ಸಿಗುತ್ತಿಲ್ಲ.ಎಂದು ಬೇಸರ ಪಟ್ಟುಕೊಂಡರು. ಈ ಭಾಗದದ ಭೂಮಿಗಾಗಿ ಹೋರಾಟ ಅರ್ಧಕ್ಕೆ ನಿಂತಿದೆ. ನನಗೂ ಎದ್ದು ಓಡಾಡಲು ಆಗುತ್ತಿಲ್ಲ. ಻ದನ್ನು ಮುಂದುವರಿಸಬೇಕಾಗಿತ್ತು ಎಂದು ತನ್ನಿಂದ ೆದ್ದುಓಡಾಡಲು ಸಾಧ್ಯವಾಗದಿರುವ ಬಗ್ಗೆ ನೋವುಪಟ್ಟರೇ ಹೊರತು 4-6 ತಿಂಗಳಿನಿಂದ ೊಂದೇ ಕಡೆ ಮಲಗಿದ್ದರಿಂದ ಬೆನ್ನಿಗಾದ ಎರಡು ಹುಣ್ಣಿನ ಬಗ್ಗೆ ಏನೂ ಹೇಳಲೇ ಇಲ್ಲ. ತಂದೆ ಕೆರೆಯಾ ಗೌಡರಿಂದ ಸಂಘಟನೆಯ ಕಡೆ ಒಲಿದ ಬಂಗಾರೇಶ್ವರರು ಕೊನೆಯವರೆಗೂ ಕರ್ನಾಟಕ ಪ್ರಾಂತ ರೈತ ಸಂಘದಲ್ಲಿ ದುಡಿದರು. ಬದುಕಿನ ಕೊನೆಯವರೆಗೂ ಹೋರಾಟದ ಮಂತ್ರವನ್ನೇ ಪಟಿಸಿದ ಿವರಿಗೆ ಕೊಣೆಗೂ ಒಂದು ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅರ್ಧನಿಂತ ಮನೆಯನ್ನು ಪೂರ್ನಗೊಳಿಸಲು ಅವರು ಯಾರಿಗೂ ಹೇಳಲಿಲ್ಲ.ಾದರೆ ಅರ್ಧಕ್ಕೆ ನಿಂತ ಭೂಮಿಹೋರಾಟವನ್ನು ಪೂರ್ಣಗೊಳಿಸಲು ಒತ್ತಾಯಿಸುತ್ತಲೇ ಇಂದು ತಮ್ಮ ಬದುಕಿನ ಹೋರಾಟ ಮುಗಿಸಿದ ಕಮ್ಯುನಿಷ್ಟನಿಗೊಂದು ಲಾಲ್ ಸಲಾಮ್

 ಬಂಗಾರೇಶ್ವರ ಗೌಡರು ಎಂದ ತಕ್ಷಣ ನೆನಪಾಗೋದು ಅವರ ಬಳಿ ಇರುವ ಸೈಕಲ್ಲ್. ಶಿರಸಿಯಿಂದ ಸುಮಾರು 10 ಕಿಮಿ ದೂರದಲ್ಲಿರುವ ಬಿಕ್ಕನಹಳ್ಳಿಯಿಂದ ಅವರು ಸೈಕಲ್ ಹೊಡೆದುಕೊಂಡು ಶಿರಸಿಗೆ ಬರುತ್ತಿದ್ದರು. ಅತಿಕ್ರಮಣ ಭೂಮಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರನ್ನು ಸಂಘಟಿಸಲು ಹಳ್ಳಿಹಳ್ಳಿ ತಿರುಗಲೂ ಇದೇ ಸೈಕಲ್. ಎಲ್ಲಾ ಕೆಲಸ ಮುಗಿಸಿ ಇದೇಸೈಕಲ್ ಹಿಡಿದು ರಾತ್ರಿ ಮನೆಗೆ ಹೋಗುತ್ತಿದ್ದರು. ನಾನು ಅವರನ್ನು ನೋಡಿದಾಗಿನಿಂದ ಅವರ ಸಂಗಾತಿಯಾಗಿದ್ದುದು ಈಸೈಕಲ್. ಆದರೆ ಈಗ ಅದು ತನ್ನ ಬಹುಕಾಲದ ಸಂಗಾತಿಯನ್ನು ಕಳೆದುಕೊಂಡು ಮೂಲೆಯಲ್ಲಿ ಕುಳಿತಿದೆ. ಅದರ ಪಕ್ಕದಲ್ಲಿರುವುದು ಬರೇ ಕಭ್ಬಿನ ಪಟ್ಟಿಯಲ್ಲ. ಹೊಸ ಮನೆ ಕಟ್ಟಿದ ಮೇಲೆ ಮಧ್ಯೆ ನಾಲ್ಕು ಮರದ ಹಲಗೆ ಹಾಕಿ ಪುಸ್ತಕ ಇಡಲು ಒಂದು ಕಪಾಟು ಮಾಡಿಕೊಳ್ಳಬೇಕೆನ್ನುವ ಆಸೆಯಿಂದ ಮಾಡಿಸಿಟ್ಟಿದ್ದು. ಈ ಆಸೆಯೂ ಪೂರೈಸಲೇ ಇಲ್ಲ. ವೈದ್ಯಕೀಯ ಕ್ಷೇತ್ರ ಎಷ್ಟೇ ಸುಧಾರಿಸಿದೆ ಅಂದರೂ ಬಡವರಪಾಲಿಗೆ ಅದು ಯಮರೂಪಿಯಾಗಿಯೇ ಇದೆ. ಬೆನ್ನು ಮೂಳೆಯ ಆಪರೇಶನ್ ಮಾಡಲು ಹೋದ ವೈದ್ಯರ ಅಜಾಗರೂಕತೆಯಿಂದಾಗಿ ದೇಹದ ಅರ್ಧಭಾಗವನ್ನು ಕಳೆದುಕೊಳ್ಳಬೇಕಾಯಿತು. ಹೆಂಡತಿ ಕೂಡ 70 ವರ್ಷ ದಾಟಿದವರು. ಅನಾಥರಾಗಿ ಬದುಕಿನ ಸಂಧ್ಯಾಕಾಲವನ್ನು ಕಳೆಯಬೇಕು. ಅರ್ಧ ಕಟ್ಟಿದ ಮನೆ, ಜಂಗುಹಿಡಿದ ಸೈಕಲ್ಲು, ಬಡತನದ ನಿತ್ಯದೂಟ......ವಿಠ್ಠಲ ಭಂಡಾರಿ


ಹಿರಿಯ ರೈತ ಹೋರಾಟಗಾರ ಕಮ್ಯುನಿಷ್ಟ ಮುಂದಾಳು ಬಂಗಾರೇಶ್ವರ ಗೌಡ ಇಂದು ನಮ್ಮನ್ನಗಲಿದರು. 76 ವರ್ಷದ ಬಂಗಾರೇಶ್ವ ಗೌಡರು ಪತ್ನಿ, ಮಗಳು ಮತ್ತು ಮಗನನ್ನು ಅಲ್ಲದೇ ಚಳುವಳಿಯ ಸಂಗಾತಿಗಳನ್ನು ಅಗಲಿದ್ದು ದುಖದ ಸಂಗತಿ. ಇವರು ಅವಿಭಜಿತ ಕಮ್ಯುನಿಷ್ಟ ಪಕ್ಷದ ಸಾಮಾನ್ಯ ಸದಸ್ಯರಾಗಿ 1964 ರ ನಂತರ ಭಾರತ ಕಮ್ಯುನಿಷ್ಟ ಪಕ್ಷ(ಮಾಕ್ರ್ಸವಾದಿ) ಸದಸ್ಯರಾಗಿ ಜೀವನದ ಕೊನೆಯ ತನಕವೂ ಅದೇ ಸಿದ್ಧಾಂತದಲ್ಲಿ ಮುಂದುವರೆದವರು. ಅಪ್ಪಟ ಸಿದ್ಧಾಂತ ಬದ್ಧ ವ್ಯಕ್ತಿತ್ವದ ಇವರು ಭೂಮಿ ಹೋರಾಟದ ಮುಂಚೂಣಿ ನಾಯಕರು. ಪ್ರಾರಂಭದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಮತ್ತು ನಂತರ ಕರ್ಣಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಮುಂದಾಳುವಾಗಿ ಅಧ್ಯಯನಶೀಲರೂ ಆದ ಇವರು ಹೋರಾಟದ ಜೊತೆಗೆ ಜನಜೀವನದಲ್ಲಿ ಹಾಸುಹೊಕ್ಕಾದ ಮೌಢ್ಯತೆಯ ವಿರುದ್ಧ ಸಾಂಸ್ಕೃತಿಕ ಜಾಗೃತಿಗೂ ತೊಡಗಿಸಿಕೊಂಡಿದ್ದರು. ಜಿಲ್ಲೆ ಮತ್ತು ರಾಜ್ಯ-ರಾಷ್ಟ್ರ ಮಟ್ಟದ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಇವರ ತಂದೆ ಕೆರಿಯಾ ಗೌಡರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ರೈತ ಕಾಮರ್ಿಕರ ಆಂದೋಲನದ ಭಾಗವಾಗಿ ಕಾಮ್ರೇಡ್ ಧಾರೇಶ್ವರ ವಕೀಲರ ಜೊತೆಗಿದ್ದರು. ಬಂಗಾರೇಶ್ವರರೂ ಕೂಡ ಎಂ.ಎಸ್.ಧಾರೇಶ್ವರ, ಪಿಕಳೆ ಮಾಸ್ತರ್, ಈರಾ ಮಾರ್ಯಾ ಮತ್ತು ಪಿ.ಜಿ.ಮಶಾಲ್ದಿಯವರ ಜೊತೆಗಾರರಾಗಿ ಶಿರಸಿ ಕೇಂದ್ರಿತವಾಗಿ ಸುತ್ತಲಿನ ಹಲವು ತಾಲೂಕುಗಳಲ್ಲಿ ಮನೆ, ನಿವೇಶನ ರಹಿತರ ಬೇಡಿಕೆಗಳಿಗಾಗಿ ಮತ್ತು ಅತಿಕ್ರಮಣ ಭೂಮಿ ಗಾಂವ್ ಠಾಣಾ ಭೂಮಿ ಸಕ್ರಮಾತಿಗೆ ಆಂದೋಲನ ಕಟ್ಟಿದರು. ಅಂದಿನ ದಿನಗಳಲ್ಲಿ ಜಿಲ್ಲೆಗೆ ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಹೋರಾಟಕ್ಕೆ ಕರೆಸಿ ಮಾರ್ಗದರ್ಶನ ಪಡೆಯುತ್ತಿದ್ದರು. ಶಿರಸಿಯ ಕಾಮರ್ಿಕ ಚಳುವಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರ ನಿರ್ಲಕ್ಷ್ಯದಿಂದ ಅವರು ಕಾಲಿನ ಸ್ವಾಧೀನತೆಯನ್ನು ಕಳಕೊಂಡು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಇದರಿಂದ ತನ್ನ ರೈತ ಕಾಮರ್ಿಕರ ಚಳುವಳಿಯ ಸಂಘಟನೆಯ ಕೆಲಸದಿಂದ ಬೇಗನೇ ನಿರ್ಗಮಿಸುತ್ತಿರುವ ಬಗ್ಗೆ ತೀವ್ರ ನೋವನ್ನು ತೋಡಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಇತ್ತೀಚೆಗೆ ತನ್ನೂರಿನಲ್ಲಿ ತಾನೇ ನೇತೃತ್ವ ವಹಿಸಿದ ನಿವೇಶನ ರಹಿತರ ಹೋರಾಟ ಹಾಗೂ ಅತಿಕ್ರಮಣ ಭೂಮಿ ಸಕ್ರಮಾತಿಯ ಆಂದೋಲನವನ್ನು ತೀವ್ರಗೊಳಿಸಲು ಕೂಡ ಸಂಗಾತಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಇಷ್ಟು ಬದ್ಧತೆಯ ಬಂಗಾರೇಶ್ವರರು ಅಗಲಿದಾಗ ನೂರಾರು ರೈತರು, ಹೋರಾಟದ ಸಂಗಾತಿಗಳು, ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಒಡನಾಡಿ ಮಂಜುನಾಥ ಪುಲ್ಕರ್, ಕಾರ್ಯದರ್ಶಿ ಶಾಂತಾರಾಮ ನಾಯಕ, ಸಿಐಟಿಯು ಜಿಲ್ಲಾ ಪದಾಧಿಕಾರಿಗಳಾದ ಸಿ.ಆರ್.ಶಾನಭಾಗ, ನಾಗಪ್ಪ ನಾಯ್ಕ, ಚಿಂತನ ಉತ್ತರಕನ್ನಡದ ಸಂಚಾಲಕರಾದ  ಮುಂತಾದವರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. 

ಸಿಪಿಐ(ಎಂ)ನಿಂದ ಅಂತಿಮ ನಮನ: ಸದಾ ಜನ ಹಿತಕ್ಕೆ ತುಡಿಯುತ್ತಿದ್ದ, ರೈತ ಕಾರ್ಮಿಕರ, ಯುವಜನರ ಕುರಿತು ಕೆಲಸ ಮಾಡುತ್ತಿದ್ದ ಕಮ್ಯುನಿಷ್ಟ ಸಿದ್ಧಾಂತಕ್ಕೆ ಬದ್ಧತೆಯ ಮತ್ತು ಸಮರ್ಪಣಾ ಮನೋಭಾವದ ಬಂಗಾರೇಶ್ವರ ಗೌಡರ ನಿಧನದಿಂದ ಜಿಲ್ಲೆಯ ಕಮ್ಯುನಿಷ್ಟ ಆಂದೋಲನದ ಹಿರಿಯ ಕೊಂಡಿ ಕಳೆದು ಹೋದದಂತಾಗಿದೆ. ಅವರಿಗೆ ಮನತುಂಬಿದ ಗೌರವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಭೂಮಿ ಸಂಬಂಧಿತ ಅನೇಕ ಹೋರಾಟಗಳನ್ನು ಮುನ್ನಡೆಸಿದ ಇವರ ನಿಧನದಿಂದ ಚಳುವಳಿಗೆ ಓರ್ವ ಹಿರಿಯ ಮಾರ್ಗದರ್ಶಕರನ್ನು ಕಳಕೊಂಡು ನಷ್ಟವುಂಟಾಗಿದೆ. ತನ್ನ ಸ್ವಾರ್ಥ ಬಿಟ್ಟು ಅರವತ್ತರ ದಶಕದಿಂದಲೇ ಅವಿರತವಾಗಿ ಐವತ್ತೈದಕ್ಕೂ ಹೆಚ್ಚುವರ್ಷ ಜಿಲ್ಲೆಯ ದುಡಿಯುವ ವರ್ಗಕ್ಕೆ ಸಮಪರ್ಿಸಿಕೊಂಡು, ಸಮಾಜ ಬದಲಾವಣೆಗೆ ಶೋಷಣೆಯಿಲ್ಲದ ಸಮಸಮಾಜದ ಕನಸು ನನಸಾಗಲು ತನ್ನಿಂದಾದಷ್ಟು ಕೆಲಸ ಮಾಡಿದ ಬಂಗಾರೇಶ್ವರರ ಆದರ್ಶವನ್ನು ಇಂದಿನ ಚಳುವಳಿಗಾರರು ಮುಂದುವರೆಸಿಕೊಂಡು ಹೋಗುವ ಪಣ ತೊಡುತ್ತದೆ ಎಂದು ಭಾರತ ಕಮ್ಯುನಿಷ್ಟ ಪಕ್ಷ (ಮಾಕ್ರ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತದೆ

                                                                                                                Yamuna Gaonkar
                                                                                                                       







ಭಾಸ್ಕರ ಮಯ್ಯ ಅವರ 4-5 ಪುಸ್ತಕಗಳು ಬಿಡುಗಡೆಗೆ ಸಿದ್ಧ



ಕುಂದಾಪುರದ ಹಿರಿಯ ಲೇಖರಾದ ಪ್ರೊ.ಭಾಸ್ಕರ ಮಯ್ಯ ಅವರ 4-5 ಪುಸ್ತಕಗಳು ಒಮ್ಮೆಲೆ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ನಮ್ಮನ್ನೆಲ್ಲಾ ಓದಿನ ಕಡೆ ಎಳೆದವರು ಅವರು. ನಾನು ಬಿ ಎ ಯನ್ನು ಹೊನ್ನಾವರ ಕಾಲೇಜಿನಲ್ಲಿ ಓದುತ್ತಿದ್ದಾಗ SFI ಕಾರ್ಯಕರ್ತರಾಗಿದ್ದೆವು. SFI ತಾಲೂಕು ಸಮಿತಿಯಿಂದ ಸಂಘಟಿಸಲಾಗುತ್ತಿರುವ ಅಧ್ಯಯನ ಶಿಬಿರಕ್ಕೆ R K Manipal, keshava Sharma ಮತ್ತಿತರರೊಂದಿಗೆ ಬರುತ್ತಿದ್ದ ಮಯ್ಯ ಅವರು ದಿನಗಟ್ಟಲೆ ಮಾರ್ಕ್ಸವಾದದ ಕುರಿತು, ಚಾರಿತ್ರಿಕ ಭೌತವಾದದ ಕುರಿತು ಪಾಠ ಮಾಡುತ್ತಿದ್ದರು.ಅಧ್ಯಯನ ಶಿಬಿರಕ್ಕೆ ಬರುವಾಗಲೂ ಕೆಂಪಂಗಿಯನ್ನೇ ಹಾಕಿಕೊಂಡು ಬರುತ್ತಿದ್ದರು. ಮತ್ತು ಅವರ ಕೈಯಲ್ಲಿರುವ ಕರವಸ್ತ್ರವೂ ಕೆಂಪೇ ಆಗಿರುತ್ತಿದ್ದುದು ನಮಗೆಲ್ಲಾ ಇನ್ನೊಂದು ವಿಸ್ಮಯಕಾರಿ ಸಂಗತಿಯಾಗಿತ್ತು. ಕನ್ನಡ, ಇಂಗ್ಲೀಶ,ಪಾಲಿ,ಸಂಸ್ಕ್ಋತ, ಹಿಂದಿ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಮಯ್ಯ ಻ವರು ಈ ಎಲ್ಲಾ ವಿಷಯದಲ್ಲಿ ಎಂ ಎ ಯನ್ನೂ ಮಾಡಿದ್ದಾರೆ.ಸದಾ ಓದಿನೊಂದಿಗೆ ನಡೆವ ಮಯ್ಯ ಅವರು ಉಳಿದವರ ಓದಿಗೂ ಸ್ಪೂರ್ತಿ ಆಗಿದ್ದಾರೆ. ಅವರ ಪುಸ್ತಕಗಳನ್ನು ಆಸಕ್ತರು ಕೊಂಡು ಓದುವ ಮೂಲಕ ಅವರನ್ನು ಗೌರವಿಸುವುದೊಳಿತು.