ನಿನ್ನ ಜೊತೆ ನಾ ಕಳೆದ ಒಂದೊಂದು ನಿಮಿಷನೂ ನಾ ಮರಣಶಯ್ಯೆಗೆ ಹೋಗೋವರೆಗೂ ನೆನಪಿರುತ್ತೆ.
ತೊಂಬತ್ತು ನಿಮಿಷಗಳ ಆ ಆಲಿಂಗನ,ಬಿಸಿಯಪ್ಪುಗೆ ಎಂಟು ನೂರು ವರ್ಷಗಳವರೆಗೂ ಹೃದಯದಲ್ಲಿ ಭದ್ರವಾಗಿರುತ್ತೆ.
ಆ ನೋಟದಲ್ಲಿ ಕೆಲನಿಮಿಷ
ಭಯದಲ್ಲಿ ಕೆಲನಿಮಿಷ
ಬಿಗಿದಪ್ಪಿಕೊಂಡಾಗ ಜಾರಿದ ಕಣ್ಣಹನಿಗಳ ಕೆಲನಿಮಿಷಗಳು
ಯಾವುದೇ ಪರಿವಿಲ್ಲದೆ ಮುತ್ತಿನ ಮೋಹಕ್ಕೆ ಒಳಗಾದ ಆ ನಿಮಿಷಗಳು ನನ್ನ ಮರಣಶಯ್ಯೆಯಲ್ಲೂ ನೆನಪಿನಲ್ಲಿರತ್ತೆ ಕಣ್ಮಣಿ.
ಯಾವುದು ನ್ಯಾಯ ,ಯಾವುದು ಅನ್ಯಾಯ ಇಬ್ಬರಿಗೂ ಗೊತ್ತಾಗಿಲ್ಲ
ಹಗಲ?? ಇರುಳ?? ಇಬ್ಬರಿಗೂ ಅದರ ಪರಿವಿಲ್ಲ
ಯಾರು ಆರಂಭಿಸ್ತಾರೆ,ಯಾರು ಮುಗಿಸ್ತಾರೆ ಅನ್ನೊದರ ಬಗ್ಗೆ ಇಬ್ಬರಿಗೂ ಅರಿವಿರಲಿಲ್ಲ
ಇಬ್ಬರೂ ಆರಂಭಿಸಿದ್ದೆವೆ,ಇದರ ಬಗ್ಗೆ ಮುಂದೆ ಮಾತಿಲ್ಲ .
ನಾ ನಿನ್ನ ಭಯವನ್ನ ಹೋಗಲಾಡಿಸಿದೆ,ನೀ ನಿನ್ನ ಆಸೆಯನ್ನ ಬಿಚ್ಚಿಟ್ಟೆ
ನಾ ನಿನ್ನ ಬೆತ್ತಲೆಗೊಳಿಸಿದೆ,ನೀ ನಿನ್ನ ನಾಚಿಕೆಯನ್ನ ಕಳಚಿದೆ .
ಇವೆಲ್ಲವೂ ಮುಂದೆ ಕನಸಾಗಿ ಮರೆತುಹೋದ್ರು ,ಕೊನೆಯದಾಗಿ ನಿನ್ನ ಕಣ್ಣಿಂದ ಜಾರಿದ ಕಣ್ಣಿರಹನಿ ನನ್ನ ಕೈಯಲ್ಲಿ ಇನ್ನು ಮೆತ್ತಿದೆ.ನಿನ್ನ ಜೊತೆ ಕಳೆದ ಒಂದೊಂದು ನಿಮಿಷವೂ ನನ್ನ
ಮರಣಶಯ್ಯೆಯಲ್ಲೂ ನೆನಪಲ್ಲಿರುತ್ತೆ ಕಣ್ಮಣಿ.
ಕನ್ನಡಕ್ಕೆ: ನಿವೇದಿತಾ💐
No comments:
Post a Comment