Monday, 6 April 2015

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವ-ಧಾರವಾಡ ಘೋಷಣೆ





ಧಾರವಾಡಘೋಷಣೆ
ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ 2015ನೇ ಇಸವಿಯ ಏಪ್ರಿಲ್ ತಿಂಗಳಿನ 4 ಮತ್ತು 5 ದಿನಗಳಂದು, ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವುದಕ್ಕಾಗಿ ಏರ್ಪಟ್ಟಿರುವ ರಾಷ್ಟ್ರೀಯಚಿಂತನ ಸಮಾವೇಶದಲ್ಲಿ ಕೂಡಿರುವ ಲೇಖಕರು, ಶಿಕ್ಷಣತಜ್ಞರು, ನ್ಯಾಯವಾದಿಗಳು, ನಿವೃತ್ತ ನ್ಯಾಯಾಧೀಶರು, ಶಾಸಕರು, ಶಿಕ್ಷಕರು, ವಿದ್ಯಾಥರ್ಿಗಳು, ಪೋಷಕರು, ಶಿಕ್ಷಕರ ಸಂಘ ಹಾಗೂ ಜನಪರ ಸಂಘಟನೆಗಳಿಗೆ ಸೇರಿದ ನಾವು, ಈ ಮೂಲಕ ಘೋಷಿಸುವುದೇನೆಂದರೆ-
1. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡುವ ಹಾಗೂ 1ನೇ ತರಗತಿಯಿಂದ 10ನೇ ತರಗತಿಯವರೆಗೆರಾಜ್ಯಭಾಷೆಯಾದಕನ್ನಡವನ್ನುಕಡ್ಡಾಯವಾಗಿ ಕಲಿಸುವ ಬಗ್ಗೆ ಕನರ್ಾಟಕ ಸಕರ್ಾರವುವಿಧೇಯಕಗಳನ್ನು ಪಾಸುಮಾಡಿದೆ. ಇದನ್ನುಅಭಿನಂದಿಸುತ್ತೇವೆ.
2. ಭಾರತವನ್ನು ವಸಾಹತುಶಾಹಿ ಆಡಳಿತಗಾರರು ಬಿಟ್ಟುಹೋಗಿ ಏಳು ದಶಕಗಳು ತುಂಬುತ್ತ ಬಂದವು.ಆದರೂ ಈ ಹೊತ್ತಿಗೂಭಾರತಕ್ಕೆಸಮಗ್ರವಾದ ಮತ್ತು ವೈಜ್ಞಾನಿಕವಾದ ಭಾಷಾನೀತಿ ಮತ್ತು ಭಾಷಾಯೋಜನೆಯೊಂದುಇಲ್ಲ. ನಮ್ಮರಾಜ್ಯ ಸಕರ್ಾರಕ್ಕೂತನ್ನದೇಆದ ಭಾಷಾನೀತಿ ಮತ್ತು ಶಿಕ್ಷಣನೀತಿ ಇರುವುದಿಲ್ಲ.ಇದು ನ್ಯಾಯಾಲಯಗಳು ಬಲಿಷ್ಠವರ್ಗಗಳ ಪರವಾಗಿ ಭಿನ್ನಭಿನ್ನವಾದ ತೀಪರ್ುಗಳನ್ನು ಕೊಡುವುದಕ್ಕೆಒಂದುಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಕರ್ಾರಗಳು ಈಗಲಾದರೂ-
ಅ. ಜನಭಾಷೆಗಳ ಪರವಾದ ಭಾಷಾನೀತಿ ಮತ್ತು ಶಿಕ್ಷಣನೀತಿಯನ್ನು ರೂಪಿಸಿ ಜಾರಿಗೆತರಬೇಕು.
ಆ. ಪ್ರಾಥಮಿಕ ಶಿಕ್ಷಣವನ್ನು ಸಕರ್ಾರವೇ ವಹಿಸಿಕೊಳ್ಳಬೇಕು.
ಇ. ಸಮಾನ (ಕಾಮನ್) ಮತ್ತು ಸಮೀಪ (ನೈಬರ್ಹುಡ್) ಶಾಲೆಯತತ್ವದಆಧಾರದ ಮೇಲೆ, ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು.ಇದಕ್ಕೆ ಪೂರಕವಾಗಿಸಂವಿಧಾನದ 21ನೇ ಅನುಚ್ಛೇದಕ್ಕೆ ಭಾರತದ ಸಂಸತ್ತು ಸೂಕ್ತವಾಗಿ ತಿದ್ದುಪಡಿಯನ್ನುತರಬೇಕು.
ಈ. ಪ್ರತಿಯೊಂದು ಸಕರ್ಾರಿ ಶಾಲೆಯನ್ನುಕೇಂದ್ರೀಯ ವಿದ್ಯಾಲಯಗಳ ದಜರ್ೆಗೆಏರಿಸಬೇಕು.
3. `ಹುಟ್ಟಿನಿಂದ 18 ವರ್ಷದಎಲ್ಲಾ ಮಕ್ಕಳಿಗೆ ಸೂಕ್ತವಾದಆರೈಕೆ, ರಕ್ಷಣೆ, ಮತ್ತು ಶಿಕ್ಷಣವನ್ನು ಒದಗಿಸುವುದು ಸಕರ್ಾರದ ಹೊಣೆಯಾಗಿದೆ' ಎಂಬ ಒಕ್ಕಣಿಕೆಯಿರುವಮಕ್ಕಳ ಹಕ್ಕುಗಳನ್ನು ಕುರಿತ ವಿಶ್ವಸಂಸ್ಥೆಯಒಡಂಬಡಿಕೆಗೆ ಭಾರತವೂ ಸಹಿ ಹಾಕಿದೆ. ಈ ಸಕರ್ಾರವುಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲಿ ಮಕ್ಕಳಿಗೆ ಅಗತ್ಯವಾದ ಕಾನೂನುಗಳನ್ನು ರೂಪಿಸಬೇಕು.
4. ಸಕರ್ಾರವುಎಲ್ಲಾ ಶಾಲೆಗಳಲ್ಲಿಯೂ ಇಂಗ್ಲೀಷನ್ನು ಪ್ರಾಥಮಿಕ ಹಂತದಿಂದಲೇಒಂದು ಭಾಷೆಯಾಗಿ ಸಮರ್ಥವಾಗಿ ವೈಜ್ಞಾನಿಕವಾಗಿ ಕಲಿಸಲು
ತಕ್ಕವ್ಯವಸ್ಥೆಯನ್ನುರೂಪಿಸಬೇಕು;ಇದಕ್ಕೆ ಪೂರಕವಾಗಿ ಸಮರ್ಥವಾದಇಂಗ್ಲೀಷನ್ನು ಕಲಿಸಲು ಶಿಕ್ಷಕರಿಗೆ ತರಬೇತಿಕೊಡುವ ವ್ಯವಸ್ಥೆಯನ್ನು ಪ್ರತಿಜಿಲ್ಲಾ ಕೇಂದ್ರಗಳಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಗಳ ಮೂಲಕ ಮಾಡಬೇಕು.
5. ಮಾತೃಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಸಮರ್ಥವಾಗಿಕಲಿತ ಮಕ್ಕಳು ಇಂಗ್ಲೀಷನ್ನುಅಥವಾ ಮಾತೃಭಾಷೆಯಲ್ಲದಯಾವುದೇಎರಡನೇ ಭಾಷೆಯನ್ನು ಸಮರ್ಥವಾಗಿಕಲಿಯಬಲ್ಲರು. ಈ ಶೈಕ್ಷಣಿಕ ಸತ್ಯವನ್ನು ವಿಶ್ವಸಂಸ್ಥೆಯ ಅಧ್ಯಯನಗಳು ಹಾಗೂ ಶಿಕ್ಷಣತಜ್ಞರ ಪ್ರಯೋಗಗಳು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿಪ್ರಾಥಮಿಕ ಹಂತದಲ್ಲಿ ಮಕ್ಕಳ ಮಾತೃಭಾಷೆಗಳನ್ನು ಈಗಿರುವುದಕ್ಕಿಂತ ಸಮರ್ಥವಾಗಿ ಕಲಿಸುವ ವ್ಯವಸ್ಥೆ ಮಾಡಬೇಕು.
6. ಶಿಕ್ಷಣದ ಉನ್ನತ ಹಂತದಲ್ಲಿ ವಿಜ್ಞಾನ, ಮಾನವಿಕ ಹಾಗೂ ಸಮಾಜ ವಿಜ್ಞಾನಗಳನ್ನು ತಾಯ್ನುಡಿಗಳಲ್ಲಿ ಕಲಿಸುವುದಕ್ಕೆ ಬೇಕಾದ ಪಠ್ಯಪುಸ್ತಕ ಮತ್ತು ಆಕರಗ್ರಂಥಗಳನ್ನು ನಿಮರ್ಿಸುವ ವ್ಯವಸ್ಥೆ ಆಗಬೇಕು.
7. ಸಕರ್ಾರಿ ಶಾಲೆಗಳನ್ನು ಉತ್ತಮಪಡಿಸಲು ಸಮುದಾಯಗಳ ಭಾಗವಹಿಸುವಿಕೆ ಸ್ವಾಗತಾರ್ಹ.ಆದರೆ ಸಕರ್ಾರಿ ಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿಎನ್.ಜಿ.ಓ, ಕಾಪರ್ೋರೇಟ್ ಸಂಸ್ಥೆ ಹಾಗೂ ಧಾಮರ್ಿಕ ಸಂಸ್ಥೆಗಳಿಗೆ ವಹಿಸಿಕೊಡಬಾರದು.ಶಿಕ್ಷಣನೀತಿ ಮತ್ತುಯೋಜನೆಯನ್ನುರೂಪಿಸಲು ಮತ್ತುಜಾರಿಮಾಡಲು ಶಿಕ್ಷಣತಜ್ಞರ ತಜ್ಞತೆಯನ್ನು ಸರಕಾರ ಸೂಕ್ತವಾಗಿ ಬಳಸಿಕೊಳ್ಳಬೇಕು.ಆದರೆ ಈ ಕೆಲಸವನ್ನು ಎನ್.ಜಿ.ಒಗಳಿಗಾಗಲಿ, ಕಾಪರ್ೋರೇಟ್ ಸಂಸ್ಥೆಗಳಿಗಾಗಲಿ ವಹಿಸಕೂಡದು.
8. ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ 19(ಜಿ) ಕಾಲಮಿನ ದುರುಪಯೋಗ ಮಾಡಿಕೊಂಡು ಶಿಕ್ಷಣವನ್ನು ಒಂದುಉದ್ದಿಮೆಯನ್ನಾಗಿ ಮಾಡಿಕೊಂಡು ಪೋಷಕರನ್ನು ಸುಲಿಗೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸಕರ್ಾರವು ಸೂಕ್ತವಾದ ಕಾನೂನುಗಳನ್ನು ರೂಪಿಸಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆಂದು ಸರಕಾರದಿಂದ ಪರವಾನಗಿ ಪಡೆದುಇಂಗ್ಲೀಷ್ ಶಿಕ್ಷಣ ಕೊಡುವ ಮೂಲಕ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು.
9. ನವ ಉದಾರೀಕರಣದಪ್ರಸ್ತುತ ಸನ್ನಿವೇಶದಲ್ಲಿ,ಶಿಕ್ಷಣವನ್ನು ಸರಕನ್ನಾಗಿಪರಿವತರ್ಿಸಿ ಉಳ್ಳವರಿಗೆ ಮಾರಾಟ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನ್ಯಾಯಾಲಯಗಳು ತೀಪರ್ುಕೊಡುತ್ತಿವೆ. ನಮ್ಮದೇಶದ ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಜನಭಾಷೆಗಳ ಮೇಲೆ ನಡೆಯುತ್ತಿರುವಆಕ್ರಮಣವನ್ನುತಡೆಗಟ್ಟುವ ನಿಟ್ಟಿನಲ್ಲಿ, ಪ್ರಜಾತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಸೂಕ್ತವಾಗಿ ನಿರ್ವಚಿಸುವಲ್ಲಿ ಅವು ಸಂಪೂರ್ಣವಾಗಿ ವಿಫಲವಾಗಿವೆ. ಇದರ ಬಗ್ಗೆ ಸಮಾವೇಶವುತನ್ನಆತಂಕವನ್ನುದಾಖಲಿಸುತ್ತದೆ.
10. ಮಾತೃಭಾಷಾ ಮಾಧ್ಯಮದ ಪರವಾದ ಈ ಚಳುವಳಿಯು, ಈಗಿರುವ ಸೀಮಿತ ನೆಲೆಯಿಂದ ಹೊರಬಂದು, ನೇಕಾರರ, ರೈತರ,ಮಹಿಳೆಯರ, ದಲಿತರ, ವಿದ್ಯಾಥರ್ಿಗಳ ಹಾಗೂ ಶಿಕ್ಷಕರ ಚಳುವಳಿಗಳನ್ನೂ ಒಳಗೊಂಡು ವಿಶಾಲಗೊಳ್ಳ್ಳಬೇಕು. ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮಕುರಿತಂತೆ ಪೋಷಕರಲ್ಲಿರುವಆತಂಕ ಮತ್ತುತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲುಅವರಜತೆ ಸಂವಾದ ಮಾಡಬೇಕು.ಇದಕ್ಕಾಗಿಶಿಕ್ಷಣದಲ್ಲಿ ಮಾತೃಭಾಷೆಯನ್ನು ಅಳವಡಿಸುವ ಬಗ್ಗೆ ಒತ್ತಾಯಿಸುವಎಲ್ಲ ಸಂಘಟನೆಗಳು ಮತ್ತು ವ್ಯಕ್ತಿಗಳು ಸೇರಿಒಂದುಒಕ್ಕೂಟವನ್ನು ರಚಿಸಿಕೊಂಡು ಮುಂದಿನ ಹೋರಾಟವನ್ನು ಮಾಡಬೇಕೆಂದು ಸಮಾವೇಶವು ನಿರ್ಧರಿಸಿತು
                                    

No comments:

Post a Comment