ಹಾನಿಕರ, ಶೋಷಣಾತ್ಮಕ ಹಾಗೂ ಮಾನವನ ಘನತೆಗೆ ಕುಂದುಂಟು ಮಾಡುವ ಮೂಢನಂಬಿಕೆ ಆಚರಣೆಗಳನ್ನು
ನಿಮರ್ೂಲನ ಮಾಡುವ ದೃಷ್ಟಿಯಿಂದ ಅವುಗಳ ನಿವಾರಣೆಗೆ; ಹಾಗೆ ನಿವಾರಣೆ ಮಾಡುವುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ರಾಜ್ಯ ಮಟ್ಟದಲ್ಲಿ ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರವನ್ನು ಮತ್ತು ಜಿಲ್ಲಾ ಮಟ್ಟದಲ್ಲಿ ಮೂಢನಂಬಿಕೆ ಆಚರಣೆಗಳ ಬಗೆಗಿನ ಜಾಗೃತ ಸಮಿತಿಗಳನ್ನು ಸ್ಥಾಪಿಸುವುದಕ್ಕಾಗಿ, ಮೂಢನಂಬಿಕೆ ಆಚರಣೆಗಳ ದುಷ್ಪರಿಣಾಮಗಳನ್ನು ಬಯಲಿಗೆಳೆಯುವವರಿಗೆ ರಕ್ಷಣೆ ನೀಡುವುದಕ್ಕಾಗಿ ಮತ್ತು ಅಂಥ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳ ಬಗ್ಗೆ ವಿಶೇಷ ಉಪಬಂಧ ಕಲ್ಪಿಸುವುದಕ್ಕಾಗಿ ಒಂದು ವಿಧೇಯಕ
ಅಧ್ಯಾಯ-1
ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ:-
1. ಈ ಅಧಿನಿಯಮವನ್ನು, ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ, 2013 ಎಂದು ಕರೆಯತಕ್ಕದ್ದು.
(2) ಇದು ಇಡೀ ಕನರ್ಾಟಕ ರಾಜ್ಯಕ್ಕೆ ವ್ಯಾಪ್ತವಾಗುತ್ತದೆ.
(3) ಈ ಅಧಿನಿಮದ (3)ನೇ ಪ್ರಕರಣವು ಈ ಕೂಡಲೇ ಜಾರಿಯಲ್ಲಿ ಬರತಕ್ಕುದು ಮತ್ತು ಈ ಅಧಿನಿಯಮದ ಉಳಿದ ಉಪಬಂಧಗಳು ರಾಜ್ಯ ಸಕರ್ಾರವು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಯಲ್ಲಿ ಬರತಕ್ಕುದು ಮತ್ತು ಈ ಅಧಿನಿಯಮದ ಬೇರೆ ಬೇರೆ ಉಪಬಂಧಗಳಿಗೆ
ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಬಹುದು ಮತ್ತು ಅಂತಹ ಯಾವುದೇ ಉಪಬಂಧದಲ್ಲಿ ಈ ಅಧಿನಿಯಮದ ಪ್ರಾರಂಭಕ್ಕೆ ಸಂಬಂಧಿಸಿದ ಉಲ್ಲೇಖವನ್ನು ಆ ಉಪಬಂಧವು ಜಾರಿಯಲ್ಲಿ ಬರುವ ದಿನಾಂಕಕ್ಕೆ ಮಾಡಿದ ಉಲ್ಲೇಖವೆಂದು ಅಥರ್ೈಸತಕ್ಕದ್ದು.
2. - (1) ಈ ಅಧಿನಿಯಮದಲ್ಲಿ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿಲ್ಲದಿದ್ದರೆ,
(ಎ)ಪ್ರಾಧಿಕಾರಎಂದರೆ, ಅಧಿನಿಯಮದ 9ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿಸಲಾದ 'ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರ';
(ಬಿ) ಸಮಿತಿ' ಎಂದರೆ, ಅಧಿನಿಯಮದ 15ನೇ ಪ್ರಕರಣದ ಅಡಿಯಲ್ಲಿ ಮೂಢನಂಬಿಕೆ ಆಚರಣೆಗಳ ಬಗೆಗಿನ ಜಾಗೃತ ಸಮಿತಿ,;
(ಸಿ) ನಿಧಿ ಎಂದರೆ, ಅಧಿನಿಯಮದ 8ನೇ ಪ್ರಕರಣದ ಅಡಿಯಲ್ಲಿ ರಾಜ್ಯಸಕರ್ಾರದಿಂದ ಸ್ಥಾಪಿಸಲಾದ ಮೂಢನಂಬಿಕೆ ಆಚರಣೆಗಳ ತಡೆ ನಿಧಿ;
(ಡಿ) ವ್ಯಕ್ತಿಗಳು ಎಂಬುದರಲ್ಲಿ ಸಹಜ ವ್ಯಕ್ತಿಗಳು ಮತ್ತು ಕಾನೂನು ವ್ಯಕ್ತಿಗಳು ಸೇರುತ್ತಾರೆ;
(ಇ) ನಿಯಮಿಸಲಾದುದು ಎಂದರೆ, ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ನಿಯಮಗಳಿಂದ ನಿಯಮಿಸಲಾದುದು;
(ಎಫ್) ಪ್ರಸಾರ ಎಂದರೆ, ಮೂಢನಂಬಿಕೆ ಆಚರಣೆಗಳನ್ನು ಬೆಂಬಲಿಸುವ ಯಾವುದೇ ವಿಷಯದ ಜಾಹೀರಾತು,
ಪ್ರಕಟಣೆ, ಪ್ರಸಾರ ಅಥವಾ ಸಮಾಚಾರ;
(ಜಿ) ನಿಯಮಾವಳಿಗಳು ಎಂದರೆ, ಸಂದರ್ಭವು ಸೂಚಿಸುವಂತೆ, ಈ ಅಧಿನಿಯಮದ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ
ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರದಿಂದ ರಚಿಸಲಾದ ನಿಯಮಾವಳಿಗಳು ಅಥವಾ ಮೂಢನಂಬಿಕೆ
ಆಚರಣೆಗಳ ಬಗೆಗಿನ ಜಾಗೃತ ಸಮಿತಿಯಿಂದ ರಚಿಸಲಾದ ನಿಯಮಾವಳಿಗಳು; (ಎಚ್) ನಿಯಮಗಳು ಎಂದರೆ, ಈ ಅಧಿನಿಯಮದ ಅಡಿಯಲ್ಲಿ ರಚಿಸಲಾದ ನಿಯಮಗಳು;
(ಐ) ಅನುಸೂಚಿ ಎಂದರೆ, ಈ ಅಧಿನಿಯಮಕ್ಕಿರುವ ಅನುಸೂಚಿ'
(ಜೆ) ಮೂಢನಂಬಿಕೆ ಆಚರಣೆ ಎಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು
ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ
ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ-
(ಎ) ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ
(ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ
(ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ; ಅಥವಾ ಅನುಸೂಚಿಯಲ್ಲಿ ನಿದರ್ಿಷ್ಟಪಡಿಸಿದ ಯಾವುದೇ ಕೃತ್ಯ.
ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆಥರ್ಿಕವಾಗಿ ಅಥವಾ
ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ;
(2) ಇಲ್ಲಿ ಬಳಸಿರುವ ಆದರೆ ಪರಿಭಾಷಿಸಿಲ್ಲದಿರುವ ಪದಗಳು ಮತ್ತು ಅಭಿವ್ಯಕ್ತಿಗಳು, ಔಷಧಗಳು ಮತ್ತು ಐಂದ್ರಜಾಲಿಕ ಪರಿಹಾರಗಳು (ಆಕ್ಷೇಪಣೀಯ ಜಾಹೀರಾತುಗಳು) ಅಧಿನಿಯಮ, 1954ರಲ್ಲಿ ಮತ್ತು ದಂಡ ಪ್ರಕ್ರಿಯಾ ಸಂಹಿತೆ, 1973ರಲ್ಲಿ ಅವಕ್ಕೆ ಅನುಕ್ರಮವಾಗಿ ಕೊಟ್ಟಿರುವ ಅರ್ಥಗಳನ್ನೇ ಹೊಂದಿರತಕ್ಕದ್ದು.
ಅಧ್ಯಾಯ-2 : ಮೂಢನಂಬಿಕೆ ಆಚರಣೆಗಳ ನಿಷೇಧ
ಮೂಢನಂಬಿಕೆ ಆಚರಣೆಯನ್ನು ಮಾಡುವ ಅಪರಾಧ:-
(1) ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು
ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ 5 ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು
ಸಾವಿರರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಇವೆರಡರಿಂದಲೂ ದಂಡಿತನಾಗತಕ್ಕದ್ದು.
(2) ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.
(3) ಈ ಪ್ರಕರಣದಲ್ಲಿ ಏನೇ ಇದ್ದರೂ ಮೂಢನಂಬಿಕೆ ಆಚರಣೆಯಿಂದ ಬಲಿಯಾದ ವ್ಯಕ್ತಿಯು, ಅಂಥ ಆಚರಣೆಯನ್ನು ನಡೆಸಿದುದರ ಅಥವಾ ಅದಕ್ಕೆ ದುಷ್ಪ್ರೇರಣೆ ನೀಡಿದುದರ ದೋಷಿಯಾಗತಕ್ಕದ್ದಲ್ಲ.
ಕಂಪನಿಗಳಿಂದ ಅಪರಾಧಗಳು.-
(4) (1) ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದೇ ಅಪರಾಧವನ್ನು ಮಾಡುವ ವ್ಯಕ್ತಿಯು ಒಂದು
ಕಂಪನಿಯಾಗಿದ್ದರೆ, ಅಪರಾಧವು ನಡೆದ ಕಾಲದಲ್ಲಿ ವ್ಯವಹಾರಗಳನ್ನು ನಡೆಸುವುದಕ್ಕಾಗಿ ಕಂಪನಿಯ ಆಡಳಿತವನ್ನು
ಹೊಂದಿದ್ದ ಮತ್ತು ಕಂಪನಿಗೆ ಹೊಣೆಗಾರನಾಗಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಕಂಪನಿಯನ್ನು ಆ ಅಪರಾಧದ ತಪ್ಪಿತಸ್ಥನೆಂದು ಭಾವಿಸತಕ್ಕದ್ದು ಮತ್ತು ತನ್ನ ವಿರುದ್ಧದ ವ್ಯವಹರಣೆಗೆ ಗುರಿಯಾಗತಕ್ಕದ್ದು ಹಾಗೂ ಅದಕ್ಕನುಸಾರವಾಗಿ
ದಂಡಿತರಾಗತಕ್ಕದ್ದು; ಪರಂತು, ಈ ಉಪಪ್ರಕರಣದಲ್ಲಿ ಇರುವುದು ಯಾವುದೂ, ಅಂಥ ಅಪರಾಧವು ತನಗೆ ಗೊತ್ತಿಲ್ಲದಂತೆ ನಡೆಯಿತೆಂದು ಅಥವಾ ಅಂಥ ಅಪರಾಧವು ನಡೆಯುವುದನ್ನು ತಡೆಗಟ್ಟಲು ತಾನು ಎಲ್ಲ ಯುಕ್ತ ಶ್ರದ್ದೆಯನ್ನು ವಹಿಸಿದ್ದನೆಂದು ಅಂಥ ಯಾರೇ ವ್ಯಕ್ತಿಯು ರುಜುವಾತುಪಡಿಸಿದರೆ, ಅವನನ್ನು ಈ ಅಧಿನಿಯಮದಲ್ಲಿ ಉಪಬಂಧಿಸಿದ ಯಾವುದೇ ದಂಡನೆಗೆ ಗುರಿಪಡಿಸತಕ್ಕದಲ್ಲ
(2) (2) (1)ನೇ ಉಪಪ್ರಕರಣದಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಒಂದು
ಕಂಪನಿಯು ಮಾಡಿದ್ದಲ್ಲಿ ಮತ್ತು ಆ ಅಪರಾಧವನ್ನು, ಕಂಪನಿಯನ್ನು ನೋಡಿಕೊಳ್ಳುವುದಕ್ಕೆ ಅಥವಾ ಅದರ
ಉಸ್ತುವಾರಿಗೆ ಜವಾಬ್ದಾರನಾಗಿರುವ ಕಂಪನಿಯ ನಿದರ್ೇಶಕನ, ವ್ಯವಸ್ಥಾಪಕನ, ಕಾರ್ಯದಶರ್ಿಯ ಅಥವಾ
ಇತರ ಅಧಿಕಾರಿಯ ಸಮ್ಮತಿಯಿಂದ ಅಥವಾ ಪರೋಕ್ಷ ಸಮ್ಮತಿಯಿಂದ ಮಾಡಲಾಗಿದೆಯೆಂದು ಅಥವಾ ಅವನ
ಯಾವುದೇ ನಿರ್ಲಕ್ಷ ್ಯದಿಂದ ಸಂಭವಿಸಿತೆಂದು ರುಜುವಾತಾದಲ್ಲಿ ಅಂಥ ನಿದರ್ೆಶಕನನ್ನು, ವ್ಯವಸ್ಥಾಪಕನನ್ನು, ಕಾರ್ಯದಶರ್ಿಯನ್ನು ಅಥವಾ ಇತರ ಅಧಿಕಾರಿಯನ್ನು ಆ ಅಪರಾಧದ ದೋಷಿಯೆಂದು
ಭಾವಿಸತಕ್ಕುದು ಮತ್ತು ಅವನನ್ನು ವ್ಯವಹರಣೆಗೆ ಗುರಿಪಡಿಸತಕ್ಕುದು ಮತ್ತು ತದನುಸಾರವಾಗಿ ದಂಡಿತನಾಗತಕ್ಕುದು.
ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ,-
(ಎ) ಕಂಪನಿ ಎಂದರೆ, ಒಂದು ನಿಗಮಿತ ನಿಕಾಯ ಮತ್ತು ಇದು ಒಂದು ಫಮರ್್ ಅನ್ನು ವ್ಯಕ್ತಿಗಳ ಸಂಸ್ಥೆಯನ್ನು ಅಥವಾ ವ್ಯಕ್ತಿಗಳ ನಿಕಾಯವನ್ನು, ಅದು ನಿಗಮಿತವಾಗಿರಲಿ ಅಥವಾ ಇಲ್ಲದಿರಲಿ ಒಳಗೊಳ್ಳುತ್ತದೆ ಮತ್ತು ಇದು ಒಂದು ವಿಶ್ವಸ್ಥ ಸಂಸ್ಥೆಯನ್ನೂ ಸಹ, ಅದು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ನೋಂದಾಯಿತವಾಗಿರಲಿ ಅಥವಾ ಇಲ್ಲದಿರಲಿ, ಒಳಗೊಳ್ಳುತ್ತದೆ.
(ಬಿ) ಒಂದು ಫಮರ್ಿನ ಸಂಬಂಧದಲ್ಲಿ ನಿದರ್ೇಶಕ ಎಂದರೆ ಫಮರ್ಿನ ಪಾಲುದಾರ ಮತ್ತು ನಿಗಮಿತ ನಿಕಾಯ, ವ್ಯಕ್ತಿಗಳ ಸಂಸ್ಥೆ, ಅಥವಾ ವ್ಯಕ್ತಿಗಳ ನಿಕಾಯದ ಸಂಬಂಧದಲ್ಲಿ, ಅವುಗಳ ವ್ಯವಹಾರಗಳ ನಿಯಂತ್ರಣವನ್ನು ಹೊಂದಿರುವ ಯಾರೇ ವ್ಯಕ್ತಿ ಮತ್ತು ಒಂದು ವಿಶ್ವಸ್ಥ ಸಂಸ್ಥೆಯ ಸಂಬಂಧದಲ್ಲಿ, ವಿಶ್ವಸ್ಥ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ಒಳಗೊಳ್ಳುತ್ತದೆ.
ದುಷ್ಪ್ರೇರಣೆ.- 5. ಈ ಅಧಿನಿಯಮದ ಅಡಿಯಲ್ಲಿ ದಂಡನಾರ್ಹವಾಗುವ ಯಾವುದೇ ಅಪರಾಧಕ್ಕೆ ದುಷ್ಪ್ರೇರಣೆ ನೀಡುವ ಯಾರೇ ವ್ಯಕ್ತಿಯು ಹಾಗೆ ದುಷ್ಪ್ರೇರಣೆ ನೀಡಿದ ಅಪರಾಧವನ್ನು ಎಸಗಲಾಗಿರಲಿ ಅಥವಾ ಇಲ್ಲದಿರಲಿ ಹಾಗೆ ದುಷ್ಪ್ರೇರಣೆ ನೀಡಿದ ಅಪರಾಧಕ್ಕೆ ನೀಡಲಾಗುವ ಅದೇ ಶಿಕ್ಷೆಯಿಂದ ದಂಡಿತನಾಗತಕ್ಕದ್ದು. ವಿವರಣೆ:- ಈ ಅಧಿನಿಯಮದ ಉದ್ದೇಶಕ್ಕಾಗಿ, 'ದುಷ್ಪ್ರೇರಣೆ' ಎಂಬುದು ಭಾರತ ದಂಡ ಸಂಹಿತೆ (1860ರ 45) ರಲ್ಲಿ ಅದಕ್ಕೆ ನೀಡಲಾಗಿರುವ ಅರ್ಥವನ್ನೇ ಹೊಂದಿರತಕ್ಕದ್ದು.
ಅಪರಾಧಗಳು ಸಂಜ್ಞೇಯ ಮತ್ತು ಜಾಮೀನೀಯವಲ್ಲದವುಗಳು:-
6. ಅನುಸೂಚಿಯಲ್ಲಿ ನಿದರ್ಿಷ್ಟವಾಗಿ ಸೂಚಿಸಿದ್ದ ಹೊರತು ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾಗುವ ಎಲ್ಲ
ಅಪರಾಧಗಳು ಸಂಜ್ಞೇಯವಾಗಿರತಕ್ಕದ್ದು ಮತ್ತು ಜಾಮೀನೀ ಯವಲ್ಲದವುಗಳಾಗಿರತಕ್ಕದ್ದು.
ಅಪರಾಧಗಳ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿ.-
7. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಥವಾ ಪ್ರಥಮ ದಜರ್ೆ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕಿಂತ ಕೆಳಗಿನ
ಯಾವುದೇ ನ್ಯಾಯಾಲಯವು ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾಗುವ ಯಾವುದೇ ಅಪರಾಧದ ವಿಚಾರಣೆಯನ್ನು ನಡೆಸತಕ್ಕದ್ದಲ್ಲ.
ಮೂಡನಂಬಿಕೆ ಆಚರಣೆಗಳ ತಡೆ ನಿಧಿ.-
8. (1) ರಾಜ್ಯ ಸಕರ್ಾರವು,-
() ಮೂಡನಂಬಿಕೆ ಆಚರಣೆಯಿಂದ ಬಲಿಯಾದವರಿಗೆ ಪರಿಹಾರ, ನಷ್ಟ ಪರಿಹಾರ ಮತ್ತು ಪುರ್ನವಸತಿ ಕಲ್ಪಿಸುವುದಕ್ಕಾಗಿ, () ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಬಗ್ಗೆ ಅರಿವು
ಮತ್ತು ಶಿಕ್ಷಣ ನೀಡುವುದನ್ನು ಉತ್ತೇಜಿಸುವುದಕ್ಕಾಗಿ ಮತ್ತು ಮೂಢನಂಬಿಕೆ ಆಚರಣೆಯನ್ನು ತಡೆಯುವುದಕ್ಕಾಗಿ,-
() ಈ ಅಧಿನಿಯಮದ ಉಪಬಂಧಗಳಿಗೆ ಸಂಗತವಾಗಿರುವ ಇತರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕಾಗಿ
- ಮೂಢನಂಬಿಕೆ ಆಚರಣೆಗಳ ತಡೆ ನಿಧಿಯನ್ನು ಸ್ಥಾಪಿಸತಕ್ಕದ್ದು. (2) ಅಂತಹ ನಿಧಿಯ ಅಡಿಯಲ್ಲಿ ವಂತಿಗೆ ನೀಡಲು ಮತ್ತು ಅದರ ಹಣದ ನೀಡುವ ಬಟವಾಡೆ ಮಾಡುವ ಕಾರ್ಯವಿಧಾನ ಮತ್ತು ರೀತಿಯು ಈ ಸಂಬಂಧವಾಗಿ ನಿಯಮಿಸಬಹುದಾದ ನಿಯಮಗಳಿಗೆ ಅನುಸಾರವಾಗಿ ಇರತಕ್ಕದ್ದು. (3) ಈ ಪ್ರಕರಣದಲ್ಲಿ ಇರುವುದು ಯಾವುದು ಸಂಹಿತೆಯ 357ನೇ ಪ್ರಕರಣದ ಅಡಿಯಲ್ಲಿ ನಷ್ಟ ಪರಿಹಾರವನ್ನು ಸಂದಾಯ ಮಾಡುವ ಆದೇಶವನ್ನು ಹೊರಡಿಸುವ ನ್ಯಾಯಾಲಯದ ಅಧಿಕಾರವನ್ನು ಅಲ್ಪೀಕರಿಸತಕ್ಕದ್ದಲ್ಲ.(ಕುಂಠಿತಗೊಳಿಸತಕ್ಕದ್ದಲ್ಲ)
ಅಧ್ಯಾಯ-3
ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರ
9. ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರ ಎಂದುಕರೆಯಲಾಗುವ ಒಂದು ಪ್ರಾಧಿಕಾರವಿರತಕ್ಕದ್ದು. ಅಂಗರಚನೆ.- 10. (1) ಆ ಪ್ರಾಧಿಕಾರದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನುರಾಜ್ಯಪಾಲರು ನೇಮಿಸತಕ್ಕದ್ದು.
(2) ಪ್ರಾಧಿಕಾರವು-() ಕನರ್ಾಟಕ ಉಚ್ಚ ನ್ಯಾಯಾಲಯದ ಉಚ್ಚ ನ್ಯಾಯಾಧೀಶರಶಿಫಾರಸ್ಸಿನ ಮೇರೆಗೆ ನೇಮಿಸಬಹುದಾದ ಕನರ್ಾಟಕ ಉಚ್ಚನ್ಯಾಯಾಲಯದ ಒಬ್ಬರು ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ; () ಮೂಢನಂಬಿಕೆ ಆಚರಣೆಗಳ ಮತ್ತು ಅವುಗಳದುಷ್ಪರಿಣಾಮಗಳ ಬಗ್ಗೆ ವಿಶೇಷ ಜ್ಞಾನವಿರುವ ಅನುಭವವಿರುವ ಮತ್ತು ಪರಿಣತಿಯಿರುವ ಶಿಕ್ಷಣವೇತ್ತರು,ಸಾಮಾಜಿಕ ಕಾರ್ಯಕರ್ತರು ಅಥವಾ ಕಾನೂನು ತಜ್ಞರು ಆಗಿರುವ ಇಬ್ಬರು ಗಣ್ಯ ವ್ಯಕ್ತಿಗಳನ್ನು, ಹೊಂದಿರತಕ್ಕದ್ದು;(3) ಸಮಾಜ ಕಲ್ಯಾಣ ಇಲಾಖೆಯ ಕಾರ್ಯದಶರ್ಿಯವರು ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಯಾಗಿರತಕ್ಕದ್ದು.
ಅಧಿಕಾರಾವಧಿ ಮತ್ತು ಸೇವಾ ಷರತ್ತುಗಳು
11. (1) ಪ್ರಾಧಿಕಾರದ ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ನೇಮಿತನಾದ ವ್ಯಕ್ತಿಯು, ಅಂತಹ ಪದಧಾರಣೆ ಮಾಡಿದ
ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಪದಧಾರಣೆ ಮಾಡಿರತಕ್ಕದ್ದು.(2) ಅಧ್ಯಕ್ಷರು ಮತ್ತು ಸದಸ್ಯರ ವೇತನ ಭತ್ಯೆಗಳು ಮತ್ತು ಸೇವಾ ಷರತ್ತುಗಳು ನಿಯಮಿಸಬಹುದಾದಂತೆ ಇರತಕ್ಕದ್ದು. (3) ಅಧ್ಯಕ್ಷರು ಮತ್ತು ಸದಸ್ಯರು, ರಾಜ್ಯಪಾಲರಿಗೆ ಸಂಭೋಧಿಸಿ ಸ್ವ ಹಸ್ತಾಕ್ಷರದಲ್ಲಿ ಬರೆದ ಪತ್ರದ ಮೂಲಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು.
ಅಧಿಕಾರಗಳು ಮತ್ತು ಕರ್ತವ್ಯಗಳು.-
12. ಈ ಮುಂದಿನವುಗಳು ಪ್ರಾಧಿಕಾರದ ಕರ್ತವ್ಯಗಳಾಗಿರತಕ್ಕದ್ದು.- () ಈ ಅಧಿನಿಯಮದ ಉಪಬಂಧಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು; () ಈ ಅಧಿನಿಯಮದ ಅಡಿಯಲ್ಲಿ ಸ್ಥಾಪನೆಯಾದ ಜಿಲ್ಲಾ
ಜಾಗೃತ ಸಮಿತಿಗಳು ಸಲ್ಲಿಸಿದ ವರದಿಗಳನ್ನು ಸೂಕ್ಷಮವಾಗಿ ಪರಿಶೀಲಿಸುವುದು; () ಈ ಅಧಿನಿಯಮದ (8)ನೇ ಪ್ರಕರಣದ ಮೂಲಕ ಸ್ಥಾಪಿಸಲಾದ ಮೂಢನಂಬಿಕೆ ಆಚರಣೆಗಳ ತಡೆ ನಿಧಿಯ ಆಡಳಿತವನ್ನು ನೋಡಿಕೊಳ್ಳುವುದು;
(ತ) ರಾಜ್ಯ ಸಂಸ್ಥೆಗಳು ಮತ್ತು ಸಚಿವರು, ಅಧಿಕಾರಿಗಳು ಮತ್ತು ನೌಕರರು ತಮ್ಮ ಪದೀಯ ಸಾಮಥ್ರ್ಯಗಳಲ್ಲಿ ಅನುಸರಿಸುವ ಮೂಢನಂಬಿಕೆ ಆಚರಣೆಗಳನ್ನು ತಡೆಯಲು ಮತ್ತು ನಿಮರ್ೂಲನೆಗೊಳಿಸಲು ಸೂಕ್ತವಾದ ಕ್ರಮಗಳನ್ನು ಶಿಫಾರಸ್ಸು ಮಾಡುವುದು; (ತ) ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಹಾಯಕವಾಗುವ ರೀತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯಕ್ರಮವನ್ನು ಪರಿಶೀಲಿಸುವುದು ಮತ್ತು ಪರಿಶೋಧಿಸುವುದು ಮತ್ತು ಅವುಗಳನ್ನು ಸೂಕ್ತವಾದ ರೀತಿಯಲ್ಲಿ ಸರಿಪಡಿಸಲು ಶಿಫಾರಸ್ಸುಗಳನ್ನು ಮಾಡುವುದು; (ತ) ಮೂಢನಂಬಿಕೆ ಆಚರಣೆಗಳ ಪರಿಣಾಮಗಳ ಬಗ್ಗೆ
ಸಂಶೋಧನೆ ಮತ್ತು ಅಧ್ಯಯನ ಕೈಗೊಳ್ಳಲು ಅನುಕೂಲ ಕಲ್ಪಿಸುವುದು;
(ತ) 16ನೇ ಪ್ರಕರಣದಲ್ಲಿ ಜಿಲ್ಲಾ ಜಾಗೃತ ಸಮಿತಿಗಳಿಗೆ ವಹಿಸಲಾದ ಎಲ್ಲ ಇತರ ಪ್ರಕಾರ್ಯಗಳನ್ನೂ ನೆರವೇರಿಸುವುದು;
(ತ) ಈ ಅಧಿನಿಯಮದ ಉದ್ದೇಶಗಳಿಗೆ ಸಂಗತವಾಗಿರುವಂತೆ ಮೂಢನಂಬಿಕೆ ಆಚರಣೆಗಳನ್ನು ನಿಮರ್ೂಲನ ಮಾಡುವ ಅಂತಹ ಇತರ ಪ್ರಕಾರ್ಯಗಳನ್ನು ಕೈಗೊಳ್ಳುವುದು.
(2) ಈ ಅಧಿನಿಯಮದ ಅಡಿಯಲ್ಲಿ ಪ್ರಾಧಿಕಾರಕ್ಕೆ ಪ್ರದಾನ ಮಾಡಿರುವ ಪ್ರಕಾರ್ಯಗಳನ್ನು ಚಲಾಯಿಸುವಲ್ಲಿ
ಮಾತ್ರ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ 5) ಅಡಿಯಲ್ಲಿ ದಾವೆಯನ್ನು ವಿಚಾರಣೆ ಮಾಡುವಾಗ
ಸಿವಿಲ್ ನ್ಯಾಯಾಲಯವು ಹೊಂದಿರುವ ಅಧಿಕಾರಗಳನ್ನು, ಪ್ರಾಧಿಕಾರವು, ಈ ಮುಂದಿನ ವಿಷಯಗಳಿಗೆ ಸಂಬಂಧಪಟ್ಟಂತೆ ಹೊಂದಿರತಕ್ಕದ್ದು, ಎಂದರೆ.- () ಯಾರೇ ವ್ಯಕ್ತಿಯನ್ನು ಸಮನು ಮಾಡುವ ಮತ್ತು
ಹಾಜರಾತಿಯನ್ನು ಒತ್ತಾಯಿಸುವಸುವ ಮತ್ತು ಅವನನ್ನು ಪ್ರಮಾಣವಚನದ ಮೇಲೆ ಪರೀಕ್ಷೆಗೆ ಒಳಪಡಿಸುವುದು;
() ಯಾವುದೇ ದಸ್ತಾವೇಜನ್ನು ಪತ್ತೆ ಮಾಡುವಂತೆ ಮತ್ತು ಹಾಜರುಪಡಿಸುವಂತೆ ಅಗತ್ಯಪಡಿಸುವುದು;
() ಅಫಿಡವಿಟ್ಟುಗಳ ಮೂಲಕ ಸಂಗತಿಗಳನ್ನು ರುಜುವಾತುಪಡಿಸುವುದು ಮತ್ತು
(ತ) ಸಂಗತಿಗಳ ಮತ್ತು ದಸ್ತಾವೇಜುಗಳ ಪರೀಕ್ಷೆಗೆ ಕಮೀಷನ್ನುಗಳನ್ನು ಹೊರಡಿಸುವುದು;
(ತ) ನಿಯಮಿಸಬಹುದಾದಂತಹ ಇತರ ಯಾವುದೇ ವಿಷಯ.
ಅಧಿಕಾರಿಗಳು ಮತ್ತು ಉದ್ಯೋಗಿಗಳು.-
13. (1) ರಾಜ್ಯ ಸಕರ್ಾರವು ಈ ಅಧಿನಿಯಮದ ಅಡಿಯಲ್ಲಿ ಪ್ರಾಧಿಕಾರವು ತನ್ನ ಪ್ರಕಾರ್ಯಗಳನ್ನು ನಿರ್ವಹಿಸಲು ಅಗತ್ಯ ಎಂದು ಪರಿಗಣಿಸುವ ಅಂತಹ ಸಂಖ್ಯೆಯ ಅಧಿಕಾರಿಗಳನ್ನು ಮತ್ತು ಇತರ ಉದ್ಯೋಗಿಗಳನ್ನು ನೇಮಕ ಮಾಡಬಹುದು. (2) (1)ನೇ ಉಪ ಪ್ರಕರಣದ ಅಡಿಯಲ್ಲಿ ನೇಮಕ ಮಾಡಲಾದ ಪ್ರಾಧಿಕಾರದ ಅಧಿಕಾರಿಗಳು ಮತ್ತು ಇತರ ಉದ್ಯೋಗಿಗಳ ಅಧಿಕಾರಾವಧಿ ಮತ್ತು ಷರತ್ತುಗಳು ನಿಯಮಿಸಬಹುದಾದಂತೆ ಇರತಕ್ಕದ್ದು.
ಸಭೆಗಳು ಮತ್ತು ಕಾರ್ಯವಿಧಾನ.-
14. (1) ಪ್ರಾಧಿಕಾರವು, ಅಧ್ಯಕ್ಷರು ನಿರ್ವಹಿಸಬಹುದಾದಂತಹ ಸಮಯದಲ್ಲಿ ಮತ್ತು ಅಂತಹ ಸ್ಥಳದಲ್ಲಿ ಸಭೆ ಸೇರತಕ್ಕದ್ದು. (2) ಪ್ರಾಧಿಕಾರವು ಈ ಅಧಿನಿಯಮದ ಅಡಿಯಲ್ಲಿ ತನ್ನ ಪ್ರಕಾರ್ಯಗಳನ್ನು ನೆರವೇರಿಸಲು ಕಾರ್ಯವಿಧಾನವನ್ನು ನಿಯಾಮಾವಳಿಗಳ ಮೂಲಕ ನಿದರ್ಿಷ್ಟಪಡಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.
ಅಧ್ಯಾಯ -4
ಮೂಢನಂಬಿಕೆ ಆಚರಣೆಗಳ ಬಗೆಗೆ ಜಾಗೃತ ಸಮಿತಿ
ಜಾಗೃತ ಸಮಿತಿಗಳು:- 15. ಪ್ರತಿ ಜಿಲ್ಲೆಯಲ್ಲಿಯೂ, ರಾಜ್ಯ ಸಕರ್ಾರದಿಂದ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಮೂರು ವರ್ಷಗಳ ಅವಧಿಗೆ ರಚಿಸಲಾಗುವ ಮೂಢನಂಬಿಕೆ ಆಚರಣೆಗಳ ಬಗೆಗಿನ ಒಂದು ಜಾಗೃತ ಸಮಿತಿ ಇರತಕ್ಕದ್ದು.
ಅಂಗರಚನೆ:- 16. ಪ್ರತಿ ಸಮಿತಿಯು ಈ ಮುಂದಿನವರನ್ನು ಒಳಗೊಂಡಿರತಕ್ಕದ್ದು.
(1) ಜಿಲ್ಲಾ ಮ್ಯಾಜಿಸ್ಟ್ರೇಟರು ಅಥವಾ ಅವರಿಂದ ನಾಮನಿದರ್ೇಶಿತನಾದ ಯಾರೇ ಇತರ ವ್ಯಕ್ತಿ, ಅಧ್ಯಕ್ಷರು:
ಪರಂತು ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ನಾಮನಿದರ್ೇಶಿತನಾದ ಯಾರೇ ವ್ಯಕ್ತಿಯು ಸಂಹಿತೆಯ ಅಡಿಯಲ್ಲಿ ಕಾರ್ಯಕಾರಿ
ಮ್ಯಾಜಿಸ್ಟ್ರೇಟರ ಅಧಿಕಾರ ಹೊಂದಿರುವ ವ್ಯಕ್ತಿಯಾಗಿರತಕ್ಕದ್ದು. (2) ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮತ್ತು ಸಿವಿಲ್ ಹಕ್ಕುಗಳ ಜಾರಿ ನಿದರ್ೇಶನಾಲಯದ ಜಿಲ್ಲಾ ಮಟ್ಟದ ಒಬ್ಬರು ಅಧಿಕಾರಿಯನ್ನು ಒಳಗೊಂಡಂತೆ ಜಿಲ್ಲಾ ಮ್ಯಾಜಿಸ್ಟ್ರೇಟರು
ನಾಮನಿದರ್ೇಶಿಸುವ ಜಿಲ್ಲೆಯಲ್ಲಿ ವಾಸಿಸುವ ಮೂವರು ವ್ಯಕ್ತಿಗಳು, ಸದಸ್ಯರು,-
(3) ರಾಜ್ಯ ಸಕರ್ಾರದಿಂದ ನಾಮನಿದರ್ೇಶಿತರಾಗುವ ನಾಗರಿಕ ಸಮಾಜದ ಐವರು ಸದಸ್ಯರು, ಅವರು ಮೂಢನಂಬಿಕೆ
ಆಚರಣೆಗಳ ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ವಿಶೇಷ ಜ್ಞಾನವಿರುವ, ಅನುಭವವಿರುವ ಮತ್ತು ಪರಿಣತಿಯಿರುವ ಶಿಕ್ಷಣವೇತ್ತರು, ಸಾಮಾಜಿಕ ಕಾರ್ಯಕರ್ತರು ಅಥವಾ ಕಾನೂನು ತಜ್ಞರು ಆಗಿರತಕ್ಕದ್ದು:
ಪರಂತು, ಈ ಉಪ ಪ್ರಕರಣದ ಅಡಿಯಲ್ಲಿ ನಾಮನಿದರ್ೇಶಿತರಾಗುವ ಕನಿಷ್ಠ ಇಬ್ಬರು ಸದಸ್ಯರು
ಮಹಿಳೆಯರಾಗಿರತಕ್ಕದ್ದು; ಮತ್ತೂ ಪರಂತು, ಈ ಉಪ ಪ್ರಕರಣದ ಅಡಿಯಲ್ಲಿ ನಾಮನಿದರ್ೇಶಿತರಾದ ಕನಿಷ್ಠ ಮೂವರು ಸಕರ್ಾರೇತರ ಸದಸ್ಯರು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಾಗಿರತಕ್ಕದ್ದು.
ಪ್ರಕಾರ್ಯಗಳು:- 17. ಈ ಮುಂದಿನವುಗಳು ಪ್ರತಿ ಸಮಿತಿಯ ಕರ್ತವ್ಯಗಳಾಗಿರತಕ್ಕದ್ದು;
(1) ಮೂಢನಂಬಿಕೆ ಆಚರಣೆಗಳನ್ನು ಗುರುತಿಸಲು ಜಿಲ್ಲಾದ್ಯಂತ ಸಮೀಕ್ಷೆಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು
ಅನುಸೂಚಿಯಲ್ಲಿ ಸೇರಿಸಲು ರಾಜ್ಯ ಸಕರ್ಾರಕ್ಕೆ ಸೂಕ್ತವಾದ ಶಿಫಾರಸ್ಸುಗಳನ್ನು ಮಾಡುವುದು;
(2) ಮೂಢನಂಬಿಕೆ ಆಚರಣೆಗಳ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಲ್ಲಿನ ಜನತೆಗೆ ಅದರಲ್ಲೂ ವಿಶೇಷವಾಗಿ ಅದಕ್ಕೆ
ಸುಲಭವಾಗಿ ಬಲಿಯಾಗುವ ಸಮಾಜದ ದುರ್ಬಲ ವರ್ಗಗಳಿಗೆ ತಿಳಿವಳಿಕೆ ಕಾರ್ಯಕ್ರಮಗಳನ್ನು ಮತ್ತು ಆಂದೋಲನಗಳನ್ನು ನಡೆಸುವುದು; ಯಾರೇ ವ್ಯಕ್ತಿಯು ಅಥವಾ ಸಂಸ್ಥೆಯು ಈ ಅಧಿನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಯಾರೇ ವ್ಯಕ್ತಿಯಿಂದ ವೈಯಕ್ತಿಕ ದೂರುಗಳನ್ನು ಸ್ವೀಕರಿಸುವುದು ಅಥವಾ ತಾನೇ ಸ್ವತಃ ಅದರ ಸಂಜ್ಞಾನವನ್ನು ತೆಗೆದುಕೊಳ್ಳುವುದು ಮತ್ತು ಅಗತ್ಯ ಕ್ರಮಕ್ಕಾಗಿ ಅಧಿಕಾರ ವ್ಯಾಪ್ತಿಯಿರುವ ಪೊಲೀಸಿಗೆ ಅದನ್ನು ವರದಿ ಮಾಡುವುದು.
ವಿವರಣೆ:- ಈ ಉಪಬಂಧವು, ಅಂತಹ ದೂರುಗಳನ್ನು ನೇರವಾಗಿ ತೆಗೆದುಕೊಳ್ಳುವ ಪೊಲೀಸರ ಸಾಮಾನ್ಯ ಅಧಿಕಾರಗಳು ಮತ್ತು ಅಧಿಕಾರ ವ್ಯಾಪ್ತಿಗೆ ಪ್ರತಿಕೂಲವಾಗಿರುವುದಿಲ್ಲ. (4) ಮೂಢನಂಬಿಕೆ ಆಚರಣೆಗಳನ್ನು ಬಯಲಿಗೆಳೆಯುವ ಮತ್ತು ಅದರ ವಿರುದ್ಧ ಹೋರಾಡುವ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಬರುವ ದೂರುಗಳನ್ನು ಸ್ವೀಕರಿಸುವುದು ಮತ್ತು ಅದರ ವಿಚಾರಣೆ ನಡೆಸುವುದು ಹಾಗೂ ಕಾನೂನಿನ ಅಡಿಯಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಮತ್ತು ಈ ಉದ್ದೇಶಕ್ಕಾಗಿ ಕಾನೂನು ಜಾರಿಗೊಳಿಸುವ ಸಂಸ್ಥೆಗಳಿಗೆ ನಿದರ್ೇಶನಗಳನ್ನು ಕೊಡುವುದು ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. (5) ಈ ಅಧಿನಿಯಮದ ಅಡಿಯಲ್ಲಿನ ಕರ್ತವ್ಯಗಳನ್ನು
ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಸಕರ್ಾರಿ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವುದು.
(6) ಈ ಅಧಿನಿಯಮದ ಉದ್ದೇಶಗಳನ್ನು ನೆರವೇರಿಸಲು, ವಿಶೇಷವಾಗಿ ಈ ಅಧಿನಿಯಮದ ಉಪಬಂಧಗಳ
ಉಲ್ಲಂಘನೆಯನ್ನು ತಡೆಗಟ್ಟಲು ಯಾರೇ ವ್ಯಕ್ತಿಗಳಿಗೆ,ಪ್ರಾಧಿಕಾರಗಳಿಗೆ ಅಥವಾ ಏಜೆನ್ಸಿಗಳಿಗೆ ಸೂಕ್ತವಾದ
ನಿದರ್ೇಶನಗಳನ್ನು ನೀಡುವುದು.
(7) ಮೂಢನಂಬಿಕೆ ಆಚರಣೆಗಳಿಗೆ ಬಲಿಯಾದವರಿಗೆ ಸಮಗ್ರ ಸಮಾಜೋ-ಆಥರ್ಿಕ ಪುನರ್ವಸತಿ ಕ್ರಮಗಳನ್ನು
ಕೈಗೊಳ್ಳುವುದು.
ಅಧಿಕಾರಗಳು ಮತ್ತು ಅಧಿಕಾರ ವ್ಯಾಪ್ತಿ:-
18. (1)ಈ ಅಧಿನಿಯಮದ ಅಡಿಯಲ್ಲಿ ಸಮಿತಿಗೆ ಪ್ರದಾನ ಮಾಡಿರುವ ಪ್ರಕಾರ್ಯಗಳನ್ನು ಚಲಾಯಿಸುವಲ್ಲಿ ಮಾತ್ರ,
ಸಮಿತಿಯು, ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ
5) ಅಡಿಯಲ್ಲಿ ದಾವೆಯನ್ನು ವಿಚಾರಣೆ ಮಾಡುವಾಗ ಸಿವಿಲ್ ನ್ಯಾಯಾಲಯವು ಹೊಂದಿರುವ ಅಧಿಕಾರಗಳನ್ನು
ಈ ಮುಂದಿನ ವಿಷಯಗಳಿಗೆ ಸಂಬಂಧಪಟ್ಟಂತೆ ಹೊಂದಿರತಕ್ಕದ್ದು, ಎಂದರೆ.-
(ಎ) ಯಾರೇ ವ್ಯಕ್ತಿಯನ್ನು ಸಮನು ಮಾಡುವ ಮತ್ತು ಹಾಜರಾತಿಯನ್ನು ಒತ್ತಾಯಗೊಳಿಸುವ ಮತ್ತು ಅವನನ್ನು
ಪ್ರಮಾಣವಚನದ ಮೇಲೆ ಪರೀಕ್ಷೆಗೆ ಒಳಪಡಿಸುವುದು; (ಬಿ) ಯಾವುದೇ ದಸ್ತಾವೇಜನ್ನು ಪತ್ತೆ ಮಾಡುವಂತೆ ಮತ್ತು
ಹಾಜರುಪಡಿಸುವಂತೆ ಅಗತ್ಯಪಡಿಸುವುದು; (ಸಿ) ಅಫಿಡವಿಟ್ಟುಗಳ ಮೂಲಕ ಸಂಗತಿಗಳನ್ನು
ರುಜುವಾತುಪಡಿಸುವುದು ಮತ್ತು (ಡಿ) ಸಂಗತಿಗಳ ಮತ್ತು ದಸ್ತಾವೇಜುಗಳ ಪರೀಕ್ಷೆಗೆ
ಕಮೀಷನ್ನುಗಳನ್ನು ಹೊರಡಿಸುವುದು; (ಇ) ನಿಯಮಿಸಬಹುದಾದಂತಹ ಇತರ ಯಾವುದೇ ವಿಷಯ.
(2) ಸಮಿತಿಯ ಅಧಿಕಾರ ವ್ಯಾಪ್ತಿಯು ಇಡೀ ಕಂದಾಯ ಜಿಲ್ಲೆಗೆ ವ್ಯಾಪ್ತವಾಗುತ್ತದೆ.
ಸಭೆಗಳು ಮತ್ತು ಕಾರ್ಯವಿಧಾನ:-
19. (1) ಪ್ರತಿ ಸಮಿತಿಯ ಸದಸ್ಯರ ಬಹುಮತದ ನಿಧರ್ಾರವನ್ನು ಸಮಿತಿಯ ನಿಧರ್ಾರವೆಂದು ಪರಿಗಣಿಸತಕ್ಕದ್ದು.
(2) ಪ್ರತಿ ಸಮಿತಿಯು ನಿದರ್ಿಷ್ಟವಾದ ಮತ್ತು ತುತರ್ು ಕ್ರಮದ ಉದ್ದೇಶಗಳಿಗಾಗಿ ಉಪ ಸಮಿತಿಗಳನ್ನು ರಚಿಸಬಹುದು.
ಇದನ್ನು ಸಮಿತಿಯು ತದನಂತರದಲ್ಲಿ ಅನುಸಮಥರ್ಿಸತಕ್ಕದ್ದು. (3) ಪ್ರತಿ ಸಮಿತಿಯ ಮತ್ತು ಉಪ ಸಮಿತಿಯ (ಗಳ) ಸಭೆಗೆ ಗಣ ಪೂತರ್ಿಯು ನಿಯಮಿಸಬಹುದಾದಂತೆ ಇರತಕ್ಕದ್ದು. (4) ಪ್ರತಿ ಸಮಿತಿಯು ಅಧ್ಯಕ್ಷರು ನಿರ್ಧರಿಸಬಹುದಾದಂತಹ ಸಮಯದಲ್ಲಿ ಮತ್ತು ಅಂತಹ ಸ್ಥಳದಲ್ಲಿ ಸಭೆ ಸೇರತಕ್ಕದ್ದು. ಪರಂತು, ಅಂಥ ಸಭೆಯು ಕನಿಷ್ಠ ಮೂರು ತಿಂಗಳಿಗೊಮ್ಮೆ ಸೇರತಕ್ಕದ್ದು. (5) ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂದಾಯ ಮಾಡುವ ಶುಲ್ಕ
ಮತ್ತು ಭತ್ಯೆಗಳು ನಿಯಮಿಸಬಹುದಾದಂತೆ ಇರತಕ್ಕದ್ದು. (6) ಪ್ರತಿ ಸಮಿತಿಯು, ಅಧಿನಿಯಮದ ಅಡಿಯಲ್ಲಿ ತನ್ನ
ಪ್ರಕಾರ್ಯಗಳನ್ನು ನೆರವೇರಿಸಲು ಕಾರ್ಯವಿಧಾನವನ್ನು ನಿಯಮಾವಳಿಗಳ ಮೂಲಕ ನಿದರ್ಿಷ್ಟಪಡಿಸುವ
ಅಧಿಕಾರವನ್ನು ಹೊಂದಿರತಕ್ಕದ್ದು.
(7) ಸಮಿತಿಯ ಯಾವುದೇ ಕೃತ್ಯ ಅಥವಾ ನಡಾವಳಿಗಳನ್ನು, ಯಾವುದೇ ಖಾಲಿ ಸ್ಥಾನ ಇದೆ ಎಂಬ ಅಥವಾ ಸಮಿತಿಯ ರಚನೆಯಲ್ಲಿ ದೋಷವಿದೆಯೆಂಬ ಕಾರಣ ಮಾತ್ರದಿಂದಲೇ ಪ್ರಶ್ನೆಗೆ ಒಳಪಡಿಸತಕ್ಕದ್ದಲ್ಲ ಅಥವಾ ಅಸಿಂಧುಗೊಳಿಸತಕ್ಕದ್ದಲ್ಲ.
ಅಧ್ಯಾಯ-5 ಸಂಕೀರ್ಣ ಇತರ ಕಾನೂನುಗಳ ಅನ್ವಯ:-
20. ಈ ಅಧಿನಿಯಮದ ಉಪಬಂಧಗಳು, ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿಗೆ
ಹೆಚ್ಚುವರಿಯಾಗಿರತಕ್ಕದ್ದು ಮತ್ತು ಅದನ್ನು ಅಲ್ಪೀಕರಿಸತಕ್ಕದ್ದಲ್ಲ.
ನಿಯಮಗಳ ರಚನಾಧಿಕಾರ:-
21. (1) ರಾಜ್ಯ ಸಕರ್ಾರವು, ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದ
ಉಪಬಂಧಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ನಿಯಮಗಳನ್ನು ರಚಿಸಬಹುದು.
(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಉಪಬಂಧ ಸಾಮಾನ್ಯತೆಗೆ ಪ್ರತಿಕೂಲವಾಗದಂತೆ ಅಂತಹ ನಿಯಮಗಳು
ಈ ಮುಂದಿನ ವಿಷಯಗಳಿಗೆ ಉಪಬಂಧ ಕಲ್ಪಿಸಬಹುದು.(ಎ) 8(2) ಪ್ರಕರಣದ ಪ್ರಕಾರ ನಿಧಿಗೆ ವಂತಿಗೆ ಮತ್ತು ಅದರ ಹಣದ ಬಟವಾಡೆ (ಬಿ) 11 (2)ನೇ ಪ್ರಕರಣದ ಅಡಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ಮತ್ತು ಸಮಿತಿಯ ಸಂಬಳ, ಶುಲ್ಕಗಳು, ಭತ್ಯೆಗಳು ಮತ್ತು ಸೇವಾ ಷರತ್ತುಗಳು; (ಸಿ) 13(2)ನೇ ಪ್ರಕರಣದ ಅಡಿಯಲ್ಲಿನ ಪ್ರಾಧಿಕಾರದ ಪದಾಧಿಕಾರಿಗಳು ಮತ್ತು ಇತರ ಉದ್ಯೋಗಿಗಳ ಅಧಿಕಾರಾವಧಿ ಮತ್ತು ಷರತ್ತುಗಳು;
(ಡಿ) 19(3) ನೇ ಪ್ರಕರಣದ ಅಡಿಯಲ್ಲಿ ಸಮಿತಿಗಳ ಸಭೆಗಳ ಗಣ ಪೂತರ್ಿ; (ಇ) 19(5)ನೇ ಪ್ರಕರಣದ ಅಡಿಯಲ್ಲಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂದಾಯ ಮಾಡಬೇಕಾದ ಶುಲ್ಕಗಳು ಮತ್ತು ಭತ್ಯೆಗಳು.
(3) ಈ ಅಧಿನಿಯಮದ ಅಡಿಯಲ್ಲಿ ರಚಿಸಲಾದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನದಲ್ಲಿ ಅಥವಾ ಒಂದಾದ ಮೇಲೊಂದರಂತೆ ಬರುವ ಎರಡು ಅಥವಾ ಹೆಚ್ಚು ಅಧಿವೇಶನಗಳಲ್ಲಿ
ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗಿನ ಅಧಿವೇಶನದಲ್ಲಿ ಇಡತಕ್ಕದ್ದು, ಮತ್ತು ಮೇಲೆ ಹೇಳಿದ ಅಧಿವೇಶನದ ಅಥವಾ ಒಂದಾದ ಮೇಲೊಂದರಂತೆ ಬರುವ ಅಧಿವೇಶನಗಳ ನಿಕಟೋತ್ತರದ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ, ಆ ನಿಯಮದಲ್ಲಿ ಯಾವುದೇ ಮಾಪರ್ಾಟನ್ನು ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಸಕರ್ಾರವು, ಸಕರ್ಾರಿ ರಾಜ್ಯಪತ್ರದಲ್ಲಿ ಆ ಮಾಪರ್ಾಟನ್ನು ಅಥವಾ ರದ್ದಿಯಾತಿಯನ್ನು ಅಧಿಸೂಚಿಸಿದ ದಿನಾಂಕದಿಂದ ಅಂಥ ನಿಯಮವು ಸಂದಭರ್ಾನುಸಾರ, ಹಾಗೆ ಮಾಪರ್ಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ, ಆದಾಗ್ಯೂ ಅಂಥ ಯಾವುದೇ ಮಾಪರ್ಾಟು ಅಥವಾ ರದ್ದಿಯಾತಿಯು ಆ
ನಿಯಮದ ಅಡಿಯಲ್ಲಿ ಹಿಂದೆ ಮಾಡಲಾದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ.
ನಿಯಮಾವಳಿಗಳನ್ನು ರಚಿಸುವ ಅಧಿಕಾರ:-
22. ಪ್ರಾಧಿಕಾರ ಮತ್ತು ಸಮಿತಿಯು, ಈ ಅಧಿನಿಯಮದ ಉಪಬಂಧಗಳನ್ನು ಮತ್ತು ರಾಜ್ಯ ಸಕರ್ಾರವು ಇದರ
ಅಡಿಯಲ್ಲಿ ರಚಿಸಿದ ನಿಯಮಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ನಿಯಮಾವಳಿಗಳನ್ನು ಹೊರಡಿಸಬಹುದು.
ತೊಂದರೆಗಳನ್ನು ನಿವಾರಿಸಲು ಅಧಿಕಾರ:-
23. (1) ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಾಗ ಯಾವುದೇ ತೊಂದರೆ ಉಂಟಾದರೆ, ರಾಜ್ಯ ಸಕರ್ಾರವು, ರಾಜ್ಯಪತ್ರದಲ್ಲಿ ಪ್ರಕಟಿಸುವ ಆದೇಶದ ಮೂಲಕ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಲ್ಲದ ಮತ್ತು ತೊಂದರೆಯನ್ನು ನಿವಾರಿಸಲು ಅಗತ್ಯವೆಂದು ಕಂಡುಬರುವ ಅಂತಹ ಉಪಬಂಧಗಳನ್ನು ಮಾಡಬಹುದು. ಪರಂತು, ಈ ಅಧಿನಿಯಮದ ಪ್ರಾರಂಭದಿಂದ 2 ವರ್ಷಗಳ ಅವಧಿಯ ಮುಕ್ತಾಯದ ನಂತರ ಈ ಪ್ರಕರಣದ ಮೇರೆಗೆ ಯಾವುದೇ ಅಂತಹ ಆದೇಶವನ್ನು ಮಾಡತಕ್ಕದ್ದಲ್ಲ.
(2) ಈ ಪ್ರಕರಣದ ಅಡಿಯಲ್ಲಿ ಮಾಡಲಾದ ಪ್ರತಿಯೊಂದು ಆದೇಶವನ್ನು, ಅದನ್ನು ಮಾಡಿದ ತರುವಾಯ ಕೂಡಲೇ
ರಾಜ್ಯ ವಿಧಾನಮಂಡಲದ ಪ್ರತಿ ಸದನದ ಮುಂದೆ ಮಂಡಿಸತಕ್ಕದ್ದು.
ಉಳಿಸುವಿಕೆಗಳು:- 24. (1) ಈ ಅಧಿನಿಯಮದಲ್ಲಿ ಉಪಬಂಧ ಕಲ್ಪಿಸಲಾಗಿರುವ ವಿಷಯಗಳಿಗೆ ಸಂಬಂಧಪಟ್ಟಂಂತೆ ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಜಾರಿಯಲ್ಲಿರುವ ಎಲ್ಲ ನಿಯಮಗಳು, ನಿಯಮಾವಳಿಗಳು, ಆದೇಶಗಳು, ಅಧಿಸೂಚನೆಗಳು ಮತ್ತು ಸುತ್ತೋಲೆಗಳು ಈ ಅಧಿನಿಯಮದ ಉಪಬಂಧಗಳಿಗೆ ಅವುಗಳು ಸಂಗತವಾಗಿರುವಷ್ಟರ ಮಟ್ಟಿಗೆ, ಅವುಗಳನ್ನು ಈ ಅಧಿನಿಯಮದ ಮೇರೆಗೆ ಕೈಗೊಳ್ಳಲಾದ ಯಾವುದೇ ಕ್ರಮ ಅಥವ ಮಾಡಲಾದ ಯಾವುದೇ ನಿಯಮ, ನಿಯಮಾವಳಿ, ಅಧಿಸೂಚನೆ ಅಥವಾ ಆದೇಶವು ರದ್ದುಗೊಳಿಸದಿದ್ದರೆ, ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.
ಅನುಸೂಚಿ (ಪ್ರಕರಣ 3):
(1) ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:
(ಎ) () ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ಮನುಷ್ಯನನ್ನು ಬಲಿಕೊಡುವುದು;
() ಈ ಅಧಿನಿಯಮದಲ್ಲಿ ಏನೇ ಇದ್ದರೂ, ಮನುಷ್ಯನನ್ನು ಬಲಿ ಕೊಡುವ ಆಚರಣೆಗೆ ಶಿಕ್ಷೆಯು
ಮರಣ ಅಥವಾ ಆಜೀವ ಕಾರಾವಾಸ ಆಗಿರತಕ್ಕದ್ದು ಮತ್ತು ಜುಲ್ಮಾನೆಗೂ ಒಳಗಾಗತಕ್ಕದ್ದು.
() ಮಾನುಷ್ಯ ಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ಮಾನುಷ್ಯ ಬಲಿಕೊಡುವಂತೆ ಇತರರನ್ನು ಪ್ರೇರೇಪಿಸುವುದು.
(ಬಿ) ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ ಭೂತೋಚ್ಚಾಟನೆಯನ್ನು ನಡೆಸುವುದು.
(ಸಿ) () ಭಾರತ ದಂಡ ಸಂಹಿತೆ, 1860ರ 297ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು;
() ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ
() ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆಥರ್ಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು;
(ಡಿ) ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ ಘೋಷಣೆಯನ್ನು ಬಳಸಿಕೊಂಡು,
() ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು;
() ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು ಹುಟ್ಟಿಸುವುದು;
(ಇ) ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು;
(ಎಫ್) ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು;
(ಜಿ) ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು;
(ಎಚ್) ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳು;-
() ಋತುಮತಿಯಾದ ಅಥವಾ ಗಭರ್ಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿಷೇಧಿಸುವುದು ಅಥವಾ ಬೇರೆ ಇರಿಸಲು ಅನುಕೂಲ ಕಲ್ಪಿಸುವುದು.
() ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ, ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು ಮಾಡುವುದು.
() ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದಶರ್ಿಸುವುದು, ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.
(ಐ) ಗಭರ್ಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು;
() ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು ಒತ್ತಾಯಿಸುವುದು;
(ಜೆ) ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ ಅನುಕೂಲ ಕಲ್ಪಸುವುದು;
(ಕೆ) ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಕಲ್ಪಿಸುವುದು;
() ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು ಒತ್ತಾಯಿಸುವುದು;
() ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ ಆಚರಣೆಗಳನ್ನು ಮಾಡುವುದು;
2. ಈ ಮುಂದಿನ ಅಪರಾಧಗಳು ಸಂಜ್ಷೇಯವಲ್ಲದ ಅಪರಾಧಗಳಾಗಿರತಕ್ಕದ್ದು,-
(ಎ) () ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ;
() ಭವಿಷ್ಯವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ
ಮಾಡಿಸುವುದಕ್ಕೆ, ಅಥವಾ
() ವ್ಯಕ್ತಿಗಳಿಗೆ ತೀವ್ರ ಹಣಕಾಸು ನಷ್ಟ ಉಂಟಾಗುವುದಕ್ಕೆ ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
(ಬಿ) ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;
ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ
1 ಸಾಮಾನ್ಯ ಜನತೆಗೆ ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಲ್ಲಿ ತೀವ್ರ ಹಾನಿಯುಂಟುಮಾಡುವ ಮತ್ತು ಅವರ ಶೋಷಣೆಗೆ ಕಾರಣವಾಗುವ ಮೂಢನಂಬಿಕೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದದ್ಯಂತ ಹರಡಿದೆ. ಮಾನವ ನತೆಗೆ ಧಕ್ಕೆಯುಂಟು ಮಾಡುವ ಅಘೋರಿ, ಮಡೆ ಸ್ನಾನ, ಬೆತ್ತಲೆ ಸೇವೆ ಅಂಥ ಇತರ ಆಚರಣೆಗಳು ವ್ಯಾಪಕವಾಗಿ ಜಾರಿಯಲ್ಲಿದೆ. ಅದರ ಜೊತೆಗೇ ಬಲಿಯಾದವರ ಆಥರ್ಿಕ ಶೋಷಣೆಗೆ ಮತ್ತು ಮಾನಸಿಕ ಕ್ಷೊಭೆಗೆ ಕಾರಣವಾಗುವ ಅನೇಕ ರೀತಿಯ ಮೂಢನಂಬಿಕೆ ಆಚರಣೆಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿವೆ.ಕಾನೂನಿ ನಿಯಮವು ಅನ್ವಯಿಸುವ ನಾಗರಿಕ ಸಮಾಜದಲ್ಲಿ ಅಂಥ ಆಚರಣೆಗಳಿಗೆ ಸ್ಥಾನವಿಲ್ಲ. 2 ಘನತೆಯಿಂದ ಜೀವಿಸುವ ಹಕ್ಕು ಭಾರತದ ಸಂವಿಧಾನದ 21ನೇ ಅನುಚ್ಛೇದದಿಂದ ಕೊಡಲಾಗಿರುವ ಮತ್ತು ಭಾರತದ ಸವರ್ೋಚ್ಚ ್ಯಾಯಾಲಯದ ಅನೇಕ ತೀಪರ್ುಗಳಲ್ಲಿ ಪುಷ್ಟಿಗೊಂಡಿರುವ ಮೂಲಭೂತ ಹಕ್ಕು. ಅಂಥ ಆಚರಣೆಗಳು ವ್ಯಾಪಕವಾಗಿ ಜಾರಿಯಲ್ಲಿರುವುದರಿಂದ ಅಂಥ ಹಕ್ಕು ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿದೆ. ಅಲ್ಲದೆ, ಎಲ್ಲ ವ್ಯಕ್ತಿಗಳು ಮನಃಸಾಕ್ಷಿ ಮತ್ತು ನಂಬಿಕೆಗಳನ್ನು ಹೊಂದಿರುವ ಸ್ವಾತಂತ್ರ್ಯವನ್ನು ಹೊಂದಿರಲು ಹಕ್ಕುಳ್ಳವರಾಗಿದ್ದರೂ ಕೆಲವು ಮೂಢನಂಬಿಕೆ ಆಚರಣೆಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇಂಥ ಅನೇಕ ಇತ್ತೀಚಿನ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ, ಈ ರೀತಿಯ ಮೂಢನಂಬಿಕೆ ಆಚರಣೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅಂಥ ಆಚರಣೆಗಳನ್ನು ನಿದರ್ಿಷ್ಟವಾಗಿ ಅಪರಾಧಗಳೆಂದು ಗುರುತಿಸುವುದು ಅನಿವಾರ್ಯವಾಗಿದೆ. ಕನರ್ಾಟಕ ಮೂಢನಂಬಿಕೆ ಆಚರಣೆಗಳ ತಡೆ ವಿಧೇಯಕ, 2013 ಈ ಉದ್ದೇಶಗಳನ್ನು ಸಾಧಿಸ ಬಯಸುತ್ತದೆ. 3 ತಮಗಿದೆಯೆನ್ನಲಾಗುವ ಅತಿ ಮಾನಷ ಶಕ್ತಿಯನ್ನು ಆಹ್ವಾನಿಸಿ ಇತರ ವ್ಯಕ್ತಿಗಳ ಕಾಯಿಲೆಯನ್ನು ಗುಣಪಡಿಸುವ ಅಥವಾ ಲಾಭವುಂಟು ಮಾಡುವ ಭರವಸೆ ನೀಡಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಇತರರಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ, ಅವರನ್ನು ಆಥರ್ಿಕವಾಗಿ ಅಥವಾ ಲೈಂಗಿಕವಾಗಿ ಶೋಷಿಸುವ ಅಥವಾ ಅವರ ಮೂಲಭೂತ ಘನತೆಗೆ ಘಾಸಿಯುಂಟುಮಾಡುವ ಕೆಲವು ಮೂಢನಂಬಿಕೆ ಆಚರಣೆಗಳ ಉತ್ತೇಜನೆ, ಪ್ರಸಾರ ಅಥವಾ ನಡೆಸುವುದನ್ನು ಈ ವಿಧೇಯಕ ನಿದರ್ಿಷ್ಟ ಅಪರಾಧವನ್ನಾಗಿಸಲು ಉದ್ದೇಶಿಸುತ್ತದೆ.ಅಂಥ ಅಪರಾಧವನ್ನು ಎಸಗಿದವರಿಗೆ ಕಠಿಣ ಶಿಕ್ಷೆ ನೀಡುವುದರಿಂದ ಖಚಿತವಾಗಿ ಭಯ ಮೂಡಿಸುತ್ತದೆ ಮತ್ತು ಆ ಮೂಲಕ ಅವು ಮತ್ತೆ ಮರುಕಳಿಸದಂತೆ ತಡೆದು ಅವನ್ನು ನಿಧಾನವಾಗಿ ನಿಮರ್ೂಲನೆ ಮಾಡುವುದು ಸಾಧ್ಯವಾಗುತ್ತದೆ. 4 ಅದರ ಜೊತೆಗೆ ಅಂಥ ಚರಣೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಮಾನ್ಯ ಜನತೆಗೆ ತಿಳಿವಳಿಕೆ ಮೂಡಿಸುವುದೂ ಅಗತ್ಯ, ಮತ್ತು ಅಂಥ ಘಟನೆಗಳು ಸಂಭವಿಸಿದಾಗ, ಅವುಗಳನ್ನು ವರದಿ ಮಾಡಲು ಒಂದು ವೇದಿಕೆ ಹೊಂದಿರುವುದೂ ಅಷ್ಟೇ ಅಗತ್ಯ. ಆದ್ದರಿಂದ, ಅಧಿನಿಯಮದ ಒಟ್ಟಾರೆ ಜಾರಿಯನ್ನು ಖಚಿತಗೊಳಿಸುವುದಕ್ಕೆ ಜವಾಬ್ದಾರವಾಗಿರುವ ರಾಜ್ಯ ಮಟ್ಟದ ನೋಡಲ್ ಪ್ರಾದೀಕಾರವಾದ ಕನರ್ಾಟಕ ಮೂಢನಂಬಿಕೆ ವಿರೋಧಿ ಪ್ರಾಧಿಕಾರವನ್ನು ಸ್ಥಾಪಿಸಲು ವಿಧೇಯಕ ಉದ್ದೇಶಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಮೂಢನಂಬಿಕೆ ಆಚರಣೆಗಳ ಬಗೆಗಿನ ಜಾಗೃತ ಸಮಿತಿಗಳು ಪ್ರಾಧಿಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಇವು ದೂರುಗಳನ್ನು ಸ್ವೀಕರಿಸಬಹುದು, ಕುಂದು ಕೊರತೆಗಳನ್ನು ನಿವಾರಿಸಬಹುದು,ತನಿಖೆ ಮತ್ತು ನ್ಯಾಯಿಕ ವ್ಯವಹರಣೆಗಳಲ್ಲಿ ಅಧಿಕಾರ ವ್ಯಾಪ್ತಿಯಿರುವ ಪೊಲೀಸರಿಗೆ ನೆರವು ನೀಡಬಹುದು, ತಾನೇ ಸ್ವತಃ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು ಮತ್ತು ಮೂಢನಂಬಿಕೆ ಆಚರಣೆಗಳ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅದರಲ್ಲೂ ಸಮಾಜದ ದುರ್ಬಲ ವರ್ಗದವರನ್ನು ಸಂವೇದನಾಶೀಲರನ್ನಾಗಿಸಲು ತಿಳಿವಳಿಕೆ ಮತ್ತು ಅರಿವು ಮೂಡಿಸುವ ಆಂದೋಲನಗಳನ್ನು ಕೈಗೊಳ್ಳಬಹುದು. 5 ಹೀಗೆ, ಈ ವಿಧೇಯಕ, ಭಾರತದ ಸಂವಿಧಾನದ 51ಎ(ಎಚ್) ಅನುಚ್ಛೇದದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿರುವ ವೈಜ್ಞಾನಿಕ ಮನೋಧರ್ಮ, ಮನವಾಸಕ್ತಿ ಮತ್ತು ವಿಚಾರಿಸುವ ಹಾಗೂ ಸುಧಾರಿಸುವ ಸ್ವಭಾವವನ್ನು ಬೆಳೆಸಲು ಸಾಧ್ಯವಾಗುವಂತೆ ಮಾಡುತ್ತದೆ. ಜೊತೆ ಜೊತೆಯಲ್ಲೇ, ಮೂಢನಂಬಿಕೆ ಆಚರಣೆಗಳು ಮುಂದುವರಿಯದಂತೆ ತಡೆಗಟ್ಟುವ ಮೂಲಕ, ಭಾರತದ ಸಂವಿಧಾನದ ಅಡಿಯಲ್ಲಿ ಕೊಡಲಾಗಿರುವ ಘನತೆಯ ಜೀವನವನ್ನು ಸಾಗಿಸಲು ಸಾಧ್ಯವಾಗಿಸುತ್ತದೆ.
6 ವಿಧೇಯಕವು ಮೇಲಿನ ಉದ್ದೇಶಗಳನ್ನು ಸಾಧಿಸಲು ಬಯಸುತ್ತದೆ
ಪರಿಕಲ್ಪನಾತ್ಮಕ ಟಿಪ್ಪಣಿ ಪ್ರಸ್ತಾವನೆ
21ನೇ ಶತಮಾನದ ಈ ಆಧುನಿಕ ಕಾಲದಲ್ಲಿಯೂ ನಮ್ಮ ಸಮಾಜದಲ್ಲಿ ಮೂಢನಂಬಿಕೆಗಳು,ಕಂದಾಚಾರಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಹಳೆಯಪದ್ಧತಿಗಳ ಜೊತೆಗೆ, ಹೊಸ ಹೊಸ ಮೂಢನಂಬಿಕೆಗಳು ಆವಿಷ್ಕಾರಗೊಳ್ಳುತ್ತಿವೆ. ಮಾಧ್ಯಮಗಳುಸಹ ಮೌಢ್ಯಗಳನ್ನು ಬಿತ್ತಿಬೆಳೆದು ಪೋಷಿಸುತ್ತಿವೆ. ಈ ಮೌಢ್ಯಗಳ ಕಾರಣಗಳಿಂದಾಗಿ ಅಸಹನೀಯಸಂಕಟಗಳಿಗೆ ಇಡೀ ಸಮಾಜ ಈಡಾಗಿದೆ. ಭಾರತದ ಸಂವಿಧಾನದ ವಿಧಿ 51-ಎ(ಹೆಚ್)ಗೆ ತಂದ 42ನೇ ತಿದ್ದುಪಡಿಯಲ್ಲಿ ವೈಜ್ಞಾನಿಕ ಚಿಂತನೆ, ಪ್ರಶ್ನಿಸುವ ಮನೋಭಾವ, ಮಾನವತಾವಾದ ಹಾಗೂ ಸಾಮಾಜಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಜತೆಗೆ, ಹಿಂದೆ ಅನೂಹ್ಯವಾಗಿದ್ದ ಹಲವು ವಿಸ್ಮಯಗಳನ್ನು, ನಿಗೂಢಗಳನ್ನು ಆಧುನಿಕ ಕಾಲದಲ್ಲಿ ಎಲ್ಲರ ಅನುಭವಕ್ಕೆ ಬರುವ ಹಾಗೆ ವಿಜ್ಞಾನ ಆವಿಷ್ಕಾರಗೊಳಿಸುತ್ತಿದೆ. ಈ ಆವಿಷ್ಕಾರಗಳು ಈವರೆಗಿನ ಹಲವಾರು ರೂಢಿಗತ ಮೂಢನಂಬಿಕೆಗಳು ಮತ್ತು ಆಚರಣೆಗಳನ್ನು ಅವೈಜ್ಞಾನಿಕ-ಅಸಂಗತ ಎಂದು ಸಾಬೀತುಪಡಿಸಿವೆ. ನಮ್ಮ ದೇಶದ ಸಂವಿಧಾನ ತನ್ನೆಲ್ಲಾ ಪ್ರಜೆಗಳಿಗೆ ತಮ್ಮ ನಂಬಿಕೆಯ ಧಾಮರ್ಿಕ ಶ್ರದ್ಧೆಯನ್ನು ಆಚರಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಇದನ್ನು ನಾವು ಗೌರವಿಸುತ್ತಲೇ ಮುಂದುವರೆಯಬೇಕಿದೆ. ಸೂಕ್ಷ್ಮ ಸಂಗತಿಯೆಂದರೆ ಧಾಮರ್ಿಕ ಶ್ರದ್ಧೆ
ಬೇರೆ, ಅಂಧಶ್ರದ್ಧೆಯ ಮೂಢನಂಬಿಕೆಗಳೇ ಬೇರೆ. ಸ್ವಾತಂತ್ರ್ಯ ಪೂರ್ವದ ಭಾರತೀಯ ಸಮಾಜದಲ್ಲಿ ದಲಿತರನ್ನು, ಹಿಂದುಳಿದ ಜಾತಿಯವರನ್ನು, ಮಹಿಳೆಯರನ್ನು, ಧಾಮರ್ಿಕ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣುವ ತಾರತಮ್ಯ ನೆಲೆಯ ಶೋಷಕ ಪದ್ಧತಿಗಳು ಎಲ್ಲಾ ಧರ್ಮಗಳ ಪಟ್ಟಭದ್ರ ಹಿತಾಸಕ್ತಿಗಳು ಸಂಪ್ರದಾಯ, ಧಾಮರ್ಿಕ ನಂಬಿಕೆ, ರೂಢಿಗತ ಪರಂಪರೆ ಮುಂತಾದ ಹೆಸರಿನಲ್ಲಿ ಚಾಲ್ತಿಯಲ್ಲಿಟ್ಟಿದ್ದವು. ಸಮಾನತೆ ಮತ್ತು ವೈಜ್ಞಾನಿಕ ಮನೋಭಾವಗಳ ಆಶಯವನ್ನಿರಿಸಿಕೊಂಡ ಸಂವಿಧಾನವು ಜಾರಿಗೆ ಬಂದು ಆರೂವರೆ ದಶಕಗಳ ನಂತರವೂ ಮೌಢ್ಯಪಾಲಕ ಸ್ಥಾಪಿತ ಹಿತಾಸಕ್ತಿಗಳನ್ನು ಹತ್ತಿಕ್ಕಲಾಗಿಲ್ಲ.
ಇದು ಸಮಾನತೆ-ಸೋದರತೆ-ಸಹಬಾಳ್ವೆ ಎಂಬ ಸಂವಿಧಾನಾತ್ಮಕ ಆಶಯಗಳನ್ನು ಕೇವಲ ನೆಪಮಾತ್ರವಾಗಿಸಲು ಮತ್ತೊಂದು ಪ್ರಮುಖ ಕಾರಣವಾಗಿದೆ.
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾಮರ್ಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ. ಈ ಟಿಪ್ಪಣಿಯನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ 'ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ'ದ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ.
ಯಾವುದೇ ಪ್ರಜಾತಾಂತ್ರಿಕ ಸಮಾಜದಲ್ಲಿ ಜನರು ತಮಗೆ ಇಷ್ಟ ಬಂದ ಆರೋಗ್ಯಕಾರಿ ನಂಬಿಕೆಗಳನ್ನಿಟ್ಟುಕೊಳ್ಳಲು
ಸ್ವತಂತ್ರರಾಗಿರಬೇಕು ಮತ್ತು ಅಂತಹ ಯಾವುದೇ ನಂಬಿಕೆಗಳನ್ನಿಟ್ಟುಕೊಳ್ಳುವುದನ್ನು ಸಕರ್ಾರ ಅಪರಾಧೀಕರಿಸಬಾರದು. ಆದರೆ ಜನರ ಅಂಥಾ ನಂಬಿಕೆಗಳನ್ನು ವೈಜ್ಞಾನಿಕ, ವೈಚಾರಿಕ ತಳಹದಿಯಲ್ಲಿ ವಿಶ್ಲೇಷಣೆ ಮಾಡಲು, ಪರಿಷ್ಕರಣೆ ಮಾಡಲು ಸಶಕ್ತರನ್ನಾಗಿಸುವ ಮೂಲಕ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸುವುದಕ್ಕೆ ಬೆಂಬಲ ನೀಡುವುದು ಸಕರ್ಾರದ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಪ್ರಸ್ತುತ ಕನರ್ಾಟಕ ಸಕರ್ಾರವು ರೂಪಿಸಲು ಬಯಸಿರುವ ಮೂಢನಂಬಿಕೆ ಆಚರಣೆಗಳ ನಿಯಂತ್ರಣ ಹಾಗೂ ನಿಷೇಧ ವಿಧೇಯಕವು ಏಕಕಾಲದಲ್ಲಿ ಜನಸಾಮಾನ್ಯರ ಧಾಮರ್ಿಕ ನಂಬಿಕೆಗಳನ್ನು ಶೋಷಣೆಯ ಸಾಧನವನ್ನಾಗಿ ಮಾಡಿಕೊಳ್ಳುತ್ತಿರುವ ಧೋರಣೆಗಳನ್ನು ಹಾಗೂ ಈ ಪ್ರಕ್ರಿಯೆಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ
ಅಡ್ಡಿ ಪಡಿಸುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ಮನೋಧರ್ಮವನ್ನು ಅಳಿಸಿಹಾಕಬೇಕಾಗಿದೆ. ಅದೇ ವೇಳೆ ಜನರಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಮನೋಭಾವಗಳನ್ನು ಉತ್ತೇಜಿಸುವ ಸದಾಶಯವನ್ನು ನಾವು ತಳೆಯಬೇಕಾಗುತ್ತದೆ. ಇದಾಗದ ಹೊರತು ಭಾರತವನ್ನು ಒಂದು ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ಜ್ಯಾತ್ಯತೀತ ದೇಶವನ್ನಾಗಿ ರೂಪಿಸುವ ಸಂವಿಧಾನದ ಆಶಯಗಳು ಈಡೇರುವುದಿಲ್ಲ. ಆದುದರಿಂದಲೇ ಪಾರಂಪರಿಕವಾಗಿ ರೂಢಿಗೆ ಬಂದಿರುವ ಮತ್ತು ಹೊಸದಾಗಿ ಹುಟ್ಟುವಳಿಯಾಗಿರುವ ಹಾಗೂ ಮುಂದೆ ಹುಟ್ಟಿಕೊಳ್ಳಬಹುದಾದ ಎಲ್ಲಾ ರೀತಿಯ ಮೌಢ್ಯಗಳನ್ನು ಹತ್ತಿಕ್ಕುವ ಮೂಲಕ, ಜನರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಮೂಲಕ, ಸಕರ್ಾರದ ಮತ್ತು ಸಮಾಜದ ಹೊಣೆಗಾರಿಕೆಯನ್ನು ಎತ್ತಿಹಿಡಿಯುವ ನಿದರ್ಿಷ್ಟ ವಿಧೇಯಕವನ್ನು ರೂಪಿಸಿ ಜಾರಿಗೊಳಿಸುವ ಅಗತ್ಯವಿದೆ.
ಹಿನ್ನೆಲೆ
ನಮ್ಮ ಸಮಾಜವು ಕೇವಲ ಆಥರ್ಿಕ ವಲಯಗಳಲ್ಲಿ ಮಾತ್ರವಲ್ಲದೆ, ಸಮಾಜದ ಎಲ್ಲಾ ರಂಗಗಳಲ್ಲಿ ಪ್ರಗತಿಯನ್ನು ಸಾಧಿಸಲು, ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೌಢ್ಯಮೂಲದ ಅನಿಷ್ಟಗಳನ್ನು ಹೋಗಲಾಡಿಸುವುದು ಅಗತ್ಯ. ಈ ಕಾರ್ಯಕ್ಕೆ ಅವಶ್ಯಕವಾಗಿ ಬೇಕಾಗಿರುವ ವೈಚಾರಿಕ ಜಾಗೃತಿಯನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಕೊಡುಗೆಯೆಂದು ಕೆಲವರು ಹಳಿಯುವುದುಂಟು. ಆದರೆ ಭಾರತದ ಭವ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ವೈಚಾರಿಕ ನೆಲೆಗಟ್ಟಿನ ಬೌದ್ಧ, ಸಾಂಖ್ಯ, ಚಾವರ್ಾಕ, ವೈಶೇಷಿಕ, ಆರೂಢ, ಲೋಕಾಯತ, ಶರಣ ಪರಂಪರೆ ಮುಂತಾದ ದರ್ಶನಗಳು, ಬುದ್ಧ, ಬಸವಣ್ಣ,
ಅಲ್ಲಮಪ್ರಭು, ಫೂಲೆ, ಪೆರಿಯಾರ್, ಸ್ವಾಮಿ ವಿವೇಕಾನಂದ, ನಾರಾಯಣಗುರು, ನೆಹರು, ಅಂಬೇಡ್ಕರ್, ಲೋಹಿಯಾ ಮುಂತಾದವರ ಚಿಂತನೆಗಳು ಇತಿಹಾಸದುದ್ದಕ್ಕೂ ಹಾಸುಹೊಕ್ಕಾಗಿವೆ. ಈ ಪ್ರಯತ್ನದಲ್ಲಿ ಜನಪದ ತತ್ವಪದಕಾರರು, ದೇಶೀ ಯೋಗಿಗಳು, ಬಂಡುಕೋರ ಸಾಂಸ್ಕೃತಿಕ ನಾಯಕರು, ಸಂತ ಮಹಾಂತರು, ಶರಣರು, ಸೂಫಿಗಳು, ದಾಸರು ಮುಂತಾದ ಸಮಾಜ ಸುಧಾರಕರ ಕೊಡುಗೆ ಕೂಡ ಗಮನಾರ್ಹ. ನಮ್ಮ ಪರಂಪರೆಯೊಂದಿಗೆ ಸಾಗಿ ಬಂದಿರುವ ಮೌಢ್ಯಗಳ ಮತ್ತು ಭೂತದ ವ್ಯಸನಗಳ ವಿರುದ್ಧ ದಂಗೆ ಸಾರಿದ ಇವರು ಹೊಸ ಚಿಂತನೆಗೆ ನಾಂದಿ ಹಾಡಿದ್ದಾರೆ. ಯಾವುದನ್ನೇ ಆಗಲಿ ಯಥಾವತ್ತಾಗಿ ಸ್ವೀಕರಿಸದೆ, ಸೂಕ್ಷ್ಮವಾಗಿ ಗಮನಿಸಿ, ಪರೀಕ್ಷಿಸಿ, ಅದು ಬಹುಜನರ ಹಿತವನ್ನು ರಕ್ಷಿಸಬಲ್ಲದೆಂದು ಮನವರಿಕೆಯಾದ ನಂತರವೇ ಒಪ್ಪಬೇಕೆನ್ನುವ ಬುದ್ಧನ ಸಂದೇಶವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬುದ್ಧಗುರುವಿನ ಇಂತಹ ವೈಚಾರಿಕ ಚಿಂತನೆಗಳಿಂದ ತಾವು ಆಕಷರ್ಿತರಾದ ಬಗ್ಗೆ ಸ್ವತಃ ಅಂಬೇಡ್ಕರ್ರವರೇ ಹೇಳಿಕೊಂಡಿದ್ದಾರೆ. ನೆಹರೂ ಅವರು ವೈಜ್ಞಾನಿಕ ಮನೋಧರ್ಮಕ್ಕೂ, ಸಾಮಾಜಿಕ ನ್ಯಾಯದ ವಿಷಯಕ್ಕೂ ಪರಸ್ಪರ ಸಂಬಂಧವಿದೆಯೆಂದು ನಂಬಿದ್ದರು. ಕುವೆಂಪು, ಶಿವರಾಮ ಕಾರಂತ, ಹೆಚ್.ನರಸಿಂಹಯ್ಯ ಮುಂತಾದವರು ಮೌಢ್ಯವನ್ನು ಮೀರಿ ಕನರ್ಾಟಕವನ್ನು
ಕಟ್ಟಲು ಜೀವನ ಪರ್ಯಂತ ಹೋರಾಡಿದ್ದಾರೆ.
1986ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನಕ್ಕೆ, ವೈಚಾರಿಕ ಚಿಂತನೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ಅಂತಹ ವೈಜ್ಞಾನಿಕ ಮನೋಧರ್ಮವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಾಮಾಜಿಕ ಪ್ರಗತಿ ಸಾಧಿಸಬೇಕೆಂದು ಘೋಷಿಸಲಾಗಿದೆ. ಹಾಗೆಯೇ 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಕೂಡಾ ಇದನ್ನೇ ಸೂಚಿಸಿದೆ. ಮೂಢನಂಬಿಕೆ ಆಚರಣೆಗಳು, ಈಗಾಗಲೇ ತಿಳಿದುಬಂದಿರುವ ಪ್ರಕೃತಿ ನಿಯಮಗಳಿಗೆ ವಿರುದ್ಧವಾಗಿವೆ ಎಂಬುದನ್ನು ವೈಜ್ಞಾನಿಕ ಮನೋಭಾವವು ತೋರಿಸಿಕೊಟ್ಟಿದೆ. ಆದರೆ, ಇಂದಿನ ಸುಶಿಕ್ಷಿತರೆನ್ನಿಸಿಕೊಂಡವರಲ್ಲಿಯೂ ಕಂದಾಚಾರ ಕಡಿಮೆಯಾಗಿ ವೈಜ್ಞಾನಿಕ ಮನೋಭಾವ ಹೆಚ್ಚಾಗುವ ಬದಲು ಮೌಢ್ಯವೇ ಮನೆ ಮಾಡಿದೆ. ಸಕರ್ಾರಿ ಕಛೇರಿಗಳಲ್ಲಿ ಪೂಜೆಪುನಸ್ಕಾರ ನಡೆಸುವ, ಸಕರ್ಾರಿ ಕಟ್ಟಡಗಳನ್ನು ಕಟ್ಟಲು ಗುದ್ದಲಿ ಪೂಜೆ ಮಾಡಿಸುವ, ವಿಧಾನಸೌಧ-ವಿಕಾಸಸೌಧಗಳಂತಹ ಸಾರ್ವಜನಿಕ
ಕಟ್ಟಡಗಳಲ್ಲಿರುವ ಕೊಠಡಿಗಳನ್ನು ವಾಸ್ತುದೋಷ ನಿವಾರಣೆಯ ಹೆಸರಿನಲ್ಲಿ ಮನಬಂದಂತೆ ಬದಲಿಸಿ ಕಟ್ಟುವ ಮೂಢಮತಿಗಳಿದ್ದಾರೆ. ಹೀಗಾಗಿ ವೈಚಾರಿಕತೆಯೆಂಬುದು ಶಿಕ್ಷಿತರಿಗೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸಂಬಧಿಸಿರಬೇಕಾದ ವಿಷಯವಲ್ಲ. ಹೀಗಾಗಿ, ನೂರಿಪ್ಪತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ವೈಚಾರಿಕತೆ ಬೆಳೆಸುವ ಮತ್ತು ವೈಜ್ಞಾನಿಕ ಮನೋಧರ್ಮವನ್ನು ರೂಪಿಸುವ ಹೊಣೆಯನ್ನು ಸೀಮಿತ ಸಂಖ್ಯೆಯಲ್ಲಿರುವ ಪ್ರಗತಿಪರ ಚಿಂತಕರು, ಪ್ರಗತಿಪರ ಹೋರಾಟಗಾರರು ಮಾತ್ರ ಹೊತ್ತುಕೊಂಡರಷ್ಟೇ ಸಾಲದು. ಸಕರ್ಾರದ ಸಕಲ ಆಡಳಿತ ಯಂತ್ರಾಂಗಗಳೂ, ಸಾರ್ವಜನಿಕ ಸಂಸ್ಥೆಗಳೂ, ಸಂವಿಧಾನಾತ್ಮಕವಾದ ಈ ಕರ್ತವ್ಯವನ್ನು ನಿರ್ವಹಿಸಬೇಕಾಗಿರುತ್ತದೆ. ಅಲ್ಲದೆ ಮೌಢ್ಯಾಚರಣೆಗಳನ್ನು ತಡೆಗಟ್ಟುವ ಕೆಲಸವನ್ನು ಸಕರ್ಾರಿ ಕಛೇರಿಗಳಿಂದಲೇ ಮೊದಲು ಪ್ರಾರಂಭವಾಗುವುದು. ಚಾಮರಾಜನಗರ ಜಿಲ್ಲೆ ಶಾಪಗ್ರಸ್ಥ ನೆಲ, ಮುಖ್ಯಮಂತ್ರಿಯಾದವರು ಅಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯವನ್ನು ಪ್ರಭುತ್ವದ ಮೇಲೆಯೇ ಹೇರಲಾಗಿದ್ದ ವಿದ್ಯಮಾನವೊಂದು ಈವರೆಗೆ ಚಾಲ್ತಿಯಲ್ಲಿತ್ತು. ಈ ಮೌಢ್ಯವನ್ನು ನಂಬಿದ ಹಲವಾರು ಮುಖ್ಯಮಂತ್ರಿಗಳು ಆ ಜಿಲ್ಲೆಗೆ ಭೇಟಿಕೊಟ್ಟಿರಲಿಲ್ಲ. ಈ ಮೌಢ್ಯವನ್ನು ಧಿಕ್ಕರಿಸಿ ಚಾಮರಾಜನಗರಕ್ಕೆ ಭೇಟಿ ನೀಡಿರುವ ಈಗಿನ ಮುಖ್ಯಮಂತ್ರಿಗಳ ವೈಚಾರಿಕ ನಡಿಗೆ ಅನುಕರಣೀಯವಾದುದು.
ಪ್ರಸ್ತುತ ವಿಧೇಯಕದ ತಾತ್ವಿಕತೆ, ಆಶಯ ಮತ್ತು ವ್ಯಾಪ್ತಿ
ಭಾರತದ ಸಂವಿಧಾನವು ನಮ್ಮ ದೇಶದಲ್ಲಿ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ಸಮಾಜವಾದಿ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿರಬೇಕೆಂಬ ಆಕಾಂಕ್ಷೆ ಹೊಂದಿದ್ದು, ಅಂತಹ ಆಶಯಗಳಿಗೆ ಪೂರಕವಾಗುವಂಥ ಹಲವು ಮಾರ್ಗದಶರ್ಿ ಸೂತ್ರಗಳನ್ನು ಮತ್ತು ವಿಧಿಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ನಮ್ಮ ಸಾಮಾಜಿಕ ವ್ಯವಸ್ಥೆಯು ಕೆಲ ಜಾತಿಗಳ ಜನರನ್ನು ಮತ್ತು ಮಹಿಳೆಯರನ್ನು ಅಜ್ಞಾನ ಮತ್ತು ಅಂಧಕಾರದಲ್ಲಿಟ್ಟು ಶೋಷಿಸುತ್ತಿತ್ತು. ಅದನ್ನು ವಿರೋಧಿಸಿ ಹಲವಾರು ಸಮಾಜ ಸುಧಾರಣೆಗಳು ಮತ್ತು ಬಂಡಾಯಗಳು ಆಗಿಹೋಗಿವೆ. ಇಷ್ಟಾಗಿಯೂ ಅವೈಚಾರಿಕ ಚಿಂತನೆಗಳು ಮತ್ತು ಕಂದಾಚಾರಗಳು ಮುಂದುವರೆದಿವೆ. ಮಾತ್ರವಲ್ಲದೆ ಪುರೋಹಿತಶಾಹಿ ವ್ಯವಸ್ಥೆ ಸಾಮಾನ್ಯ ಜನತೆಯನ್ನು ಬೌದ್ಧಿಕ ದಾಸ್ಯದಲ್ಲಿರಿಸಿದೆ. ಬೌದ್ಧಿಕ ದಾಸ್ಯಕ್ಕೆ ಸಿಲುಕಿ ಸ್ವತಂತ್ರವಾಗಿ ವಿಚಾರ ಮಾಡುವ ಧೋರಣೆಯನ್ನೇ ತಳೆಯದೆ, ಶೋಷಣೆಯನ್ನು ಅನುಭವಿಸುತ್ತಲೇ ಬದುಕುತ್ತಿದ್ದಾರೆ. ಸ್ವಾತಂತ್ರ್ಯಾ ನಂತರವೂ ಮೌಢ್ಯಪೋಷಕ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕುವ ಮತ್ತು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಸಕರ್ಾರದ ಮತ್ತು ಪ್ರಜ್ಞಾವಂತ ನಾಗರಿಕರ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲದಿರುವ ಕಾರಣದಿಂದ ಆರೋಗ್ಯವಂತ ನಾಗರಿಕ ಸಮಾಜವಾಗಿ ನಾವು ವಿಕಾಸಗೊಂಡಿಲ್ಲ. ಹಾಗೆಂದ ಮಾತ್ರಕ್ಕೆ ಜನರ ಈ ಬೌದ್ಧಿಕ ದಾರಿದ್ರ್ಯವನ್ನು ಬದಲಿಸಬಾರದೆಂದೇನೂ ಇಲ್ಲ. ದಮನಿತ ಸಾಮಾಜಿಕ ವಲಯಗಳ ಎಚ್ಚೆತ್ತ ಪ್ರಜ್ಞೆಯ ಜನರು ಮತ್ತು ದಮನಿತರ ಪರವಾಗಿ ಹೊರಗಿನ ಪ್ರಜ್ಞಾವಂತರು ದನಿ ಎತ್ತಿ ಸಾಮಾಜಿಕ ಸುಧಾರಣೆಗಾಗಿ ಹೋರಾಡಿದಿರುವುದನ್ನು ಇತಿಹಾಸದ ಅನೇಕ ಪ್ರಸಂಗಗಳು ಸಾರಿ ಹೇಳುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಸಕರ್ಾರವೇ ಸಮಾಜ ಸುಧಾರಣೆಯ ಹೊಣೆಯನ್ನು ಹೊರಬೇಕಾಗಿರುವುದು ಅಗತ್ಯವಾಗಿದೆ. ಇದು ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ. ಪ್ರಜಾಪೀಡಕ ಕಂದಾಚಾರಗಳು ಮತ್ತು ಶೋಷಣೆಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳದ ಸ್ಥಾಪಿತ ಹಿತಾಸಕ್ತಿಗಳನ್ನು ಪ್ರಶ್ನಿಸದ ಎಲ್ಲ ಧಮರ್ಿಯರೂ
ಈ ವ್ಯವಸ್ಥೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಧಾಮರ್ಿಕ ಮೂಲಭೂತವಾದಿ ಶಕ್ತಿಗಳ ಸಾಂಪ್ರದಾಯಕ ಅಧಿಕಾರವನ್ನು ಸದ್ಯದ ಕಾನೂನುಗಳು ಪ್ರತಿಬಂಧಿಸಲಾಗದಿರುವುದರಿಂದ ಶೋಷಣೆಯ ಮುಂದುವರಿಕೆಗೆ ಅಡೆತಡೆ ಇಲ್ಲದಂತಾಗಿದೆ. ದೇಶವನ್ನು ಪ್ರಗತಿಯೆಡೆಗೆ ನಡೆಸಬೇಕಾದ ಜವಾಬ್ದಾರಿ ಹೊತ್ತಿರುವ ಪ್ರಭುತ್ವ ಈ ದಿಕ್ಕಿನಲ್ಲಿ ಚಿಂತನೆ ನಡೆಸಿ, ಪ್ರಗತಿಗೆ ಧಕ್ಕೆ ತರುವ ಎಲ್ಲಾ ಶಕ್ತಿಗಳನ್ನು ಹತ್ತಿಕ್ಕುವ ಉಪಕ್ರಮಗಳನ್ನು ಹುಡುಕಬೇಕಿದೆ. ಈಗ ರೂಪಿಸಲು ಆಲೋಚಿಸುತ್ತಿರುವ ಮೂಢನಂಬಿಕೆ ಆಚರಣೆಗಳ ನಿಯಂತ್ರಣ ಹಾಗೂ ನಿಷೇಧ ವಿಧೇಯಕ ಅಂತಹ ಉಪಕ್ರಮದ ಪ್ರಯತ್ನವಾಗಿದೆ.
ಸಂವಿಧಾನದ ವಿಧಿ 51-ಎ(ಹೆಚ್)ಗೆ ತಂದ 42ನೇ ತಿದ್ದುಪಡಿಯಲ್ಲಿ 'ವೈಜ್ಞಾನಿಕ ಮನೋಭಾವ, ಧರ್ಮನಿರಪೇಕ್ಷತೆ, ಮಾನವತಾವಾದ ಮತ್ತು ಪ್ರಶ್ನಿಸುವ ಗುಣ ಹಾಗೂ ಸುಧಾರಣಾ ಮನೋಭಾವ'ಗಳನ್ನು ಸಮಾಜದಲ್ಲಿ ನೆಲೆಗೊಳಿಸುವುದನ್ನು ಈ ದೇಶದ ನಾಗರಿಕರ ಕರ್ತವ್ಯವೆಂದು ಪ್ರಸ್ತಾಪಿಸಲಾಗಿದೆ. ಇಂತಹ ಸುಧಾರಣವಾದಿ ಸದಾಶಯಗಳಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಈ ಕಾಲದ ಅಗತ್ಯವಾಗಿದೆ. ಇಲ್ಲಿ ವೈಚಾರಿಕ ಸಮಾಜವನ್ನು ನಿಮರ್ಾಣ ಮಾಡುವುದು ಎಷ್ಟು ಮುಖ್ಯವೋ, ಈ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವವರ ರಕ್ಷಣೆಗೆ ನಿಲ್ಲುವುದು ಅಷ್ಟೇ ಮುಖ್ಯ. ಇವೆಲ್ಲವೂ ಈ ದೇಶದ ನಾಗರಿಕರ ಮೂಲಭೂತ ಕರ್ತವ್ಯಗಳ ಭಾಗವಾಗಿ ಸಂವಿಧಾನದಲ್ಲಿ ಸೇರ್ಪಡೆಗೊಂಡಿವೆ. ವೈಜ್ಞಾನಿಕ ಮನೋಭಾವವೆಂದರೆ ಒಂದು ಆಲೋಚನಾ ಕ್ರಮ. ಅಂದರೆ, ಬದುಕಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಕಾರ್ಯಕಾರಣಗಳ ತಳಹದಿಯ ಮೇಲೆ ವಿಶ್ಲೇಷಿಸಿ, ತರ್ಕಬದ್ಧವಾಗಿ ಅಥರ್ೈಸಿಕೊಂಡು ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಂತಹದ್ದಾಗಿದೆ. ಹಾಗೆಯೇ ಒಬ್ಬ ವ್ಯಕ್ತಿ ಇತರೆ ಸಹಮಾನವವರ ಘನತೆಯನ್ನು ಗುರುತಿಸಿ, ಸಾಮಾಜಿಕ ಒಳಿತಿನ ಕಾಳಜಿಯನ್ನು ಹೊಂದಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಧರ್ಮ ಬೆಳೆಸಿಕೊಳ್ಳಬೇಕು. ಇದನ್ನು ಮಾನವತಾವಾದವೆಂದು ಕರೆಯುತ್ತೇವೆ. ಈ ಮಾನವತಾವಾದವು ಮನುಷ್ಯರು ಎದುರಿಸುವ ಸಮಸ್ಯೆಗಳನ್ನು ವಿಚಾರದ ಆಧಾರದಲ್ಲಿ ಅಥರ್ೈಸುತ್ತದೆ ಮತ್ತು ಯವುದೇ ಸಮಸ್ಯೆಗೆ ಪರಿಹಾರವನ್ನು ವಿವೇಚನೆಯ ಮೂಲಕ ಕಂಡುಹಿಡಿಯುವುದರೊಂದಿಗೆ ಮಾನವೀಯ ಮೌಲ್ಯಗಳಾದ ಸೋದರತೆ ಮತ್ತು ಸಮಾನತೆಯನ್ನು ಎತ್ತಿಹಿಡಿಯುತ್ತದೆ. ಸಾರ್ವಜನಿಕ ಜೀವನದಲ್ಲಿ ಧರ್ಮದ ಮಧ್ಯಪ್ರವೇಶವಿಲ್ಲದಿರುವುದು ಹಾಗೂ ಆಡಳಿತದಲ್ಲಿ ಯಾವುದೇ
ಧರ್ಮದ ಪಕ್ಷಪಾತಿಯಾಗದೆ ಎಲ್ಲ ಧರ್ಮಗಳಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವುದೇ ಧರ್ಮನಿರಪೇಕ್ಷತೆಯ ತಿರುಳು. ಅದನ್ನು ಅನುಸರಿಸುತ್ತಲೇ ಸಮಾಜದಲ್ಲಿ ಪ್ರಚಲಿತದಲ್ಲಿರುವ ಕಂದಾಚಾರಗಳನ್ನು ಮತ್ತು ಅನಿಷ್ಟ ಸಾಮಾಜಿಕ ಪದ್ಧತಿಗಳನ್ನು ಗುರುತಿಸಿ ಅವುಗಳನ್ನು ನಿಯಂತ್ರಿಸಿ ಅಥವಾ ನಿಷೇಧಿಸಿ ಎಲ್ಲರೂ ಸುಖ ಸಂತೋಷ ನೆಮ್ಮದಿಯಿಂದ ಸಹಬಾಳ್ವೆ ನಡೆಸುವಂತಾಗಬೇಕೆಂಬುದು ಈ ಮಸೂದೆಯ ಆಶಯವಾಗಿದೆ.
ನಂಬಿಕೆ-ಮೂಢನಂಬಿಕೆ-ಸಂಪ್ರದಾಯ-ಆಚರಣೆ
ಜನಪದ ನಂಬಿಕೆಯೆಂಬುದು ಸಾಂಪ್ರದಾಯಿಕವಾಗಿ ಅಂಗೀಕೃತವಾದ ಪರಿಕಲ್ಪನೆಯಾಗಿದ್ದು, ವ್ಯಕ್ತಿಯ ವಿಶ್ವಾಸಕ್ಕೆ ಸಂಬಂಧಿಸಿದ್ದಾಗಿದೆ. ಅದು ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಅಥವಾ ಭವಿಷ್ಯತ್ತಿನಲ್ಲಿ ಘಟಿಸಬಹುದಾದುದನ್ನು ಮುನ್ನವೇ ತಡೆಯಲು ಬಳಸುವ ಒಂದು ಸಾಧನ. ಇಂತಹ ನಂಬಿಕೆಗಳಲ್ಲಿ ಅನುಪದ್ರವಿಯಾದ ನಂಬಿಕೆಗಳು ಇರುವಂತೆ ಅಪಕಲ್ಪನೆಯ ಹಾಗೂ ಹಾನಿಕಾರಕ ನಂಬಿಕೆಗಳೂ ಇವೆ. ನಂಬಿಕೆಗಳ ಮೇಲೆಯೇ ಆಚರಣೆ ಮತ್ತು ಸಂಪ್ರದಾಯಗಳು ರೂಪುಗೊಂಡಿರುತ್ತವೆ. ಹಾಗೆಯೇ ವಿಧಿ-ನಿಷೇಧಗಳೂ ರೂಪುಗೊಳ್ಳುತ್ತವೆ. ಈ ವಿಧಿ-ನಿಷೇಧಗಳು ಅಧಿಕವಾಗುತ್ತ ಹೋದಂತೆ, ಜನರ ಮನಸ್ಸಿನ ಮೇಲೆ ಅಧಿಕಾರ ಸ್ಥಾಪಿಸಿ, ಬದುಕನ್ನು ಉಸಿರುಗಟ್ಟಿಸುತ್ತವೆ; ನರಕವಾಗಿಸುತ್ತವೆ. ಧಾಮರ್ಿಕ ಸ್ವರೂಪದಲ್ಲಿರುವ ಆಚರಣೆ-ಸಂಪ್ರದಾಯಗಳೆಲ್ಲವೂ ಅಪಾಯಕಾರಿಯಲ್ಲ. ಆದರೆ ಬಹುಪಾಲು ಆಚರಣೆ-ಸಂಪ್ರದಾಯಗಳು ಸಮಾಜದ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಫಲಜ್ಯೋತಿಷ್ಯ, ಜಾತಕಫಲ, ಶಕುನ, ಕಾಲನಿರ್ಣಯ(ಕಾಲಜ್ಞಾನ), ನ್ಯೂಮರಾಲಜಿ, ವಾಸ್ತುಶಾಸ್ತ್ರ, ಪವಾಡ, ಯಕ್ಷಿಣಿ ವಿದ್ಯೆ, ಜಾದುಗಾರಿಕೆ, ಮಾಟಮಂತ್ರ, ಮೋಡಿ-ರಣಮೋಡಿ, ಬಾನಾಮತಿ, ವಶೀಕರಣ, ವಾಮಾಚಾರ ಮುಂತಾದವು ಸಮಾಜದ ಆರೋಗ್ಯವನ್ನು ಕದಡುತ್ತಿದ್ದು, ದೇವರು-ಧರ್ಮದೊಂದಿಗೆ ಸಂಬಂಧ ಸಾಧಿಸಿವೆ. ಇವು ನಮ್ಮ ಸಮಾಜದ ಕೋಟ್ಯಂತರ ಪ್ರಜೆಗಳಿಗೆ ಅಂಟಿದ ಪೀಡೆಗಳಾಗಿ ಬಾಧಿಸುತ್ತಿವೆ. ಮಾಂತ್ರಿಕ ಅಥವಾ ಅಗೋಚರ ಶಕ್ತಿಗಳನ್ನು ಅವಲಂಬಿಸಿ ಬಂದ ಅಥವಾ ವಾಮಾಚಾರದ ತಂತ್ರ ಪರಿಕಲ್ಪನೆಗಳು ಜನರನ್ನು ಹಿಂಸಿಸುವ, ಆಸ್ತಿಪಾಸ್ತಿಯನ್ನು ನಾಶಮಾಡುವ ಅಥವಾ ಹಾನಿಗೊಳಿಸುವ
ಪ್ರಕ್ರಿಯೆಗಳನ್ನು ಹೊಂದಿರುತ್ತವೆ. ಇವು ಹಿಂಸಾಸ್ವರೂಪಿಯೂ ಹೌದು, ರಹಸ್ಯ ಅಥವಾ ನಿಗೂಢ ಸ್ವರೂಪಿಯೂ ಹೌದು. ಕೆಲವೊಮ್ಮೆ ಮಾರಣಾಂತಿಕವೂ ಹೌದು. ಸ್ವ-ಅಭಿಲಾಷೆ, ಸೇಡು- ಪ್ರತಿಸೇಡುಗಳಂತಹ ಮನೋಭಾವಗಳೇ ಹಿನ್ನೆಲೆಯಲ್ಲಿದ್ದು ಈ ಕೆಲಸ ಮಾಡಿಸುತ್ತವೆ. ಈ ಆಚರಣೆಗಳು ಎದುರಾಳಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಷ್ಕ್ರಿಯಗೊಳಿಸಿ, ದುರ್ಬಲಗೊಳಿಸಿ, ನಿಶ್ಯಕ್ತರನ್ನಾಗಿಸಿ, ಗೆಲ್ಲುವಂತಹ ಸ್ವರೂಪದವುಗಳಾಗಿದ್ದು, ಪ್ರಾಣಾಂತಿಕವೂ ಆಗಿರುತ್ತವೆ. ಜನರು ತಮ್ಮನ್ನು
ಬಾಧಿಸುತ್ತಿರುವ ದು:ಖ-ದುಮ್ಮಾನ, ಕಷ್ಟ-ನಷ್ಟ ವೈಯಕ್ತಿಕ ಜೀವನದ ಪಾಡು-ಪಡಿಪಾಟಲುಗಳಿಗೆ ಪರಿಹಾರ ಹುಡುಕಿ ದುರ್ಬಲ ಮನಸ್ಥಿತಿಯಿಂದ ಇಂತಹ ಮೌಢ್ಯಗಳನ್ನು ಅನುಸರಿಸುತ್ತಿರುವುದು ಹಾಗೂ ವಂಚಕ ಶಕ್ತಿಗಳ ಮೊರೆಹೋಗುತ್ತಿರುವುದು ಸಾಮಾನ್ಯ ವಿದ್ಯಮಾನವಾಗಿದೆ. ಜನರಲ್ಲಿ ಮಾಟಮಂತ್ರದ ಬಗೆಗಿರುವ ದೃಢವಾದ ನಂಬಿಕೆ, ಅತಿಯಾದ ಜೀವಭಯ ಇವುಗಳ ಯಶಸ್ಸಿಗೆ ಕಾರಣವಾಗಿವೆ. ಮೂಢ ಆಚರಣೆಗಳು ವ್ಯಾಪಾರೀಕರಣಗೊಂಡಾಗ ಈ ರೀತಿಯ ನಡವಳಿಕೆಗಳು ಢಾಳಾಗಿ ಕಾಣುತ್ತವೆ. ಹಾದಿಬೀದಿಗಳಲ್ಲಿ ನವಿಲುಗರಿ ಗೊಂಡೆಗಳನ್ನು ತಲೆಮೇಲಿರಿಸಿ ಆಶೀರ್ವದಿಸುವ ಬಾಬಾಗಳು, ಶಕುನ ನುಡಿಯುವವರು, ಜಪಮಾಲೆ-ರುದ್ರಾಕ್ಷಿ-ಮಣಿಸರ-ಹರಳುಗಳು-ಶಕುನ ಗೊಂಬೆಗಳು ಮುಂತಾದ ವಸ್ತುಗಳನ್ನು ಮಾರಾಟ ಮಾಡುವವರು, ಅಂತ್ರ-ತಂತ್ರ-ವೈದ್ಯತಂತ್ರ-ಕಡಗ-ಸರಿಗೆ-ಮುರ-ತಾಯತತೋ ಳ್ಬಳೆ-ಮಂತ್ರಗಾಯಿ ಮಂತಾದ ವಸ್ತುಗಳನ್ನು ಮಾರಾಟ ಮಾಡುವ, ಹಸ್ತಸಾಮುದ್ರಿಕೆ-ಜಾತಕ ಬರೆಹ-ಕುಂಡಿಲಿ-ಗೃಹಪುಣ್ಯವದನ-ದಿಗ್ಬಂಧನ ಮುಂತಾದ ಸೇವೆಗಳನ್ನು ಒದಗಿಸುವ ಪುರೋಹಿತರು, ದೈವಾಂಶಸಂಭೂತ ದೇವಮಾನವರೆಂದು ಬಿಂಬಿಸಿಕೊಳ್ಳುವ ಧಾಮರ್ಿಕ ಮುಖವಾಡ ಧರಿಸಿದ ವಂಚಕರು ಮುಂತಾದವರು ನಡೆಸುತ್ತಿರುವ 'ಮೌಢ್ಯ'ದ ವ್ಯಾಪಾರ ದೊಡ್ಡ ದಂಧೆಯಾಗಿಯೇ ಬೆಳೆದಿದೆ. ಇವು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಧಾಮರ್ಿಕ ನಂಬಿಕೆಯ ಸ್ವಾತಂತ್ರ್ಯ, ಜನಪದ ಪರಂಪರೆ, ಸಂಸ್ಕೃತಿಗಳ ಅನನ್ಯತೆ ಮುಂತಾದ ಪರಿಕಲ್ಪನೆಗಳನ್ನು ಗಣನೆಗೆ ತೆಗೆದುಕೊಂಡೇ ಅವುಗಳಲ್ಲಿರುವ ಜನವಿರೋಧಿ ಆಚರಣೆಗಳ ವಿರುದ್ಧ ಕಾನೂನನ್ನು ರೂಪಿಸುವ ಅಗತ್ಯವಿದೆ. ಸಾಮಾನ್ಯವಾಗಿ ಮೂಢನಂಬಿಕೆಗಳ ವಿರುದ್ಧದ ಕಾಯರ್ಾಚರಣೆಗಳಿಂದ ನಮ್ಮ ಧಾಮರ್ಿಕ ನಂಬುಗೆಗಳಿಗೆ ನೋವಾಗುತ್ತದೆ ಎಂದು ಕೆಳವರು ಹೇಳುವುದುಂಟು. ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ ಪದ್ಧತಿ ಮುಂತಾದ ಜನವಿರೋಧಿ ಆಚರಣೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಸಾಂಪ್ರದಾಯಿಕ ಹಿತಾಸಕ್ತಿಗಳ ಭಾವನೆಗಳಿಗೆ ನೋವುಂಟಾಗುವುದು ಸಹಜ. ಆದರೆ ಇದನ್ನೇ ನೆಪವಾಗಿಟ್ಟುಕೊಳ್ಳುವ ಕೆಲವೇ ಮಂದಿ ಮೂಲಭೂತವಾದಿಗಳ ನಂಬಿಕೆಯನ್ನು ಕಾಪಾಡುವುದಕ್ಕಾಗಿ ಇಡೀ ಸಮಾಜವನ್ನು ಅಂಧಕಾರದಲ್ಲಿರಿಸುವುದು ಸಾಧುವಲ್ಲ. ಮೇಲು ನೋಟಕ್ಕೆ ಹಾನಿಕಾರಕವಾಗಿ ಕಾಣುವ ಈ ಆಚರಣೆಗಳಲ್ಲದೆ, ಮನುಷ್ಯನ ಸಾಮಾಜಿಕ ಘನತೆಗೆ ಧಕ್ಕೆ ತರುವ, ಆಥರ್ಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶೋಷಣೆ ಮಾಡಲು ಸಹಕಾರಿಯಾಗುವಂತಹ, ಆಧುನಿಕತೆಯ ಮುಖವಾಡದ ಹುಸಿ ವೈಜ್ಞಾನಿಕತೆಯ ಹೆಸರಲ್ಲೂ ವ್ಯಾಪಕಗೊಳ್ಳುತ್ತಿರುವ ಹಲವಾರು ಬಗೆಯ ಆಚರಣೆಗಳು ಚಾಲ್ತಿಯಲ್ಲಿರುವುದನ್ನು ಗುರುತಿಸಬೇಕಾಗಿದೆ.ವಿಜ್ಞಾನದ ತಳಹದಿ ಇದೆಯೆಂದು ಹೇಳುವ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಫಲಜ್ಯೋತಿಷ್ಯ,
ವಾಸ್ತುಶಾಸ್ತ್ರ ,ಯಕ್ಷಿಣಿ ವಿದ್ಯೆ, ವಶೀಕರಣ ಮುಂತಾದವುಗಳ ದುರ್ಬಳಕೆಯನ್ನು ಸದರಿ ಕಾಯ್ದೆಯ ವ್ಯಾಪ್ತಿಯೊಳಕ್ಕೆ ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಸಾಂಪ್ರದಾಯಿಕ ಆಚರಣೆಗಳ ಹೆಸರಿನಲ್ಲಿ ಜಾತಿ ತಾರತಮ್ಯವನ್ನು ಪರೋಕ್ಷವಾಗಿ ಆಚರಿಸುವ ಮೂಲಕ ಕೆಲವು ಸಮುದಾಯಗಳನ್ನು ಮತ್ತು ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವುದನ್ನು ಸಮಥರ್ಿಸಿಕೊಳ್ಳುವ ಮತ್ತು ಮುಂದುವರೆಸುವ ಮೌಢ್ಯಪದ್ಧತಿಗಳು ಎಲ್ಲಾ ಧರ್ಮದ ಹೆಸರಲ್ಲೂ ಸಾಗುತ್ತಿವೆ. ಬಂಜೆತನ ನಿವಾರಣೆಯಾಗಿ ಮಕ್ಕಳಾಗುತ್ತವೆಂದು ನಂಬಿಸಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸುವುದು, ದೆವ್ವ-ಭೂತ-ಪ್ರೇತ-ಗಾಳಿ ಬಿಡಿಸುವ ಹೆಸರಿನಲ್ಲಿ ಚಿತ್ರವಿಚಿತ್ರವಾಗಿ ದೈಹಿಕ ಹಿಂಸೆ ಕೊಡುವ ವಿಕೃತಿಗಳು
ಆಚರಣೆಯಲ್ಲಿವೆ. ಲಾಗಾಯ್ತಿನಿಂದ ಬೆಳೆದುಬಂದಿರುವ ಮೌಢ್ಯದ ಕಪಿಮುಷ್ಟಿಯಲ್ಲಿ ಸಿಲುಕಿರುವ ಹಿರಿಯರಾದಿಯಾಗಿ ಕಿರಿಯರವರೆಗೆ ಎಲ್ಲರನ್ನೂ ಬಿಡುಗಡೆ ಮಾಡುವ ಕುರಿತು ಹಾಗೂ ಇಂತಹ ಮೌಢ್ಯಕ್ಕೆ ಈಗಿನ್ನೂ ಸಿಲುಕದಿರುವ ಎಳೆಯ ಮನಸ್ಸುಗಳಿಗೆ ಎಂತಹ ವೈಚಾರಿಕ ಪಠ್ಯಗಳನ್ನು ರೂಪಿಸಬೇಕೆಂಬುದನ್ನು ಕುರಿತು ಒಂದು ವ್ಯವಸ್ಥಿತ ಕಾರ್ಯಯೋಜನೆ ಹಾಕಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳು ಊಜರ್ಿತವಾಗುತ್ತವೆ. ಇಲ್ಲದಿದ್ದರೆ ಮೌಢ್ಯದ ವಿರುದ್ಧದ ಹೋರಾಟದಲ್ಲಿ ನಾವು ಯಶಗಳಿಸಲು ಸಾಧ್ಯವಿಲ್ಲ. ಮೌಢ್ಯದ ವಿರುದ್ಧದ ಸಮರದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ
ಮನೋಧರ್ಮಗಳು ಮೇಲುಗೈ ಸಾಧಿಸಲು ಶಾಲೆಗಳಲ್ಲಿ ಜಾತ್ಯತೀತ, ಮತಾತೀತ, ಅಂಧಶ್ರದ್ಧೆಗಳಿಗೆ ಅತೀತವಾದ ಪಠ್ಯಗಳನ್ನು ರೂಪಿಸಬೇಕಾದ ಅಗತ್ಯವಿದೆ. ನಮ್ಮ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು ತಮ್ಮದೇ ಆದ ಪ್ರತ್ಯೇಕ ಸ್ಥಾಯಿಸೂಚಿಗಳೊಂದಿಗೆ ವಿದ್ಯಾಥರ್ಿಗಳಲ್ಲಿ ವೈಚಾರಿಕತೆಯನ್ನು ಬಿತ್ತುವ ಚಚರ್ೆ-ಸಂವಾದ, ವ್ಯಕ್ತಿತ್ವ ವಿಕಸನ ಶಿಬಿರ, ನಾಯಕತ್ವ ತರಬೇತಿ ಶಿಬಿರ, ವಿಚಾರ ಸಾಹಿತ್ಯ ಕಮ್ಮಟ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಹಾಗೂ ವೈಚಾರಿಕ ಅಧ್ಯಯನ ಪ್ರಬಂಧಗಳನ್ನು ಪ್ರಕಟಿಸುವ, ವೈಜ್ಞಾನಿಕ ಸಂಶೋಧನೆಗಳಿಗೆ ಇಂಬುಕೊಡುವ ಹಲವಾರು ಯೋಜನೆಗಳನ್ನು ರೂಪಿಸುವಂತಾಗಬೇಕು. ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಆಯೋಜಿಸಲಾಗುವ ಪ್ರವಾಸಗಳನ್ನು ಮತಮೌಢ್ಯಗಳನ್ನು ಬಿತ್ತುವ ಧಾಮರ್ಿಕ ಕೇಂದ್ರಗಳನ್ನು ಹೊರತುಪಡಿಸಿದ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳು, ನಿಸರ್ಗ
ರಮಣೀಯ ತಾಣಗಳು, ಸಾಹಸ ಪ್ರವೃತ್ತಿಗಳಿಗೆ ಉತ್ತೇಜನಕಾರಿಯಾದ ಸ್ಥಳಗಳು, ಮ್ಯೂಜಿಯಂಗಳು, ವಸ್ತು ಸಂಗ್ರಹಾಲಯಗಳು, ವಿಜ್ಞಾನ ಕೇಂದ್ರಗಳು ಮುಂತಾದ ಸ್ಥಳಗಳಿಗೆ ಮಾತ್ರ ಆಯೋಜಿಸುವಂತೆ ಶೈಕ್ಷಣಿಕ ಸುತ್ತೋಲೆಗಳನ್ನು ಹೊರಡಿಸಬೇಕಾಗುತ್ತದೆ. ಪ್ರಸ್ತುತ ಕಾಯ್ದೆಯನ್ನು ರೂಪಿಸುವ ಹೊತ್ತಿನಲ್ಲಿ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಸಕರ್ಾರಿ ಕಛೇರಿಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿ ರೂಢಿಗೆ ತಂದಿರುವ ಮೌಢ್ಯಪೂರಿತ ಧಾಮರ್ಿಕ ಆಚರಣೆಗಳನ್ನು ನಿಷೇಧಿಸುವ ಕಡೆಗೂ ಆಲೋಚಿಸಬೇಕಾಗುತ್ತದೆ. ಒಟ್ಟಿನಲ್ಲಿ ಅನಾರೋಗ್ಯಕರ ಸಮಾಜವನ್ನು ಸೃಷ್ಟಿಸುವ ಯಾವುದೇ ನಂಬಿಕೆ-ಆಚರಣೆಗಳನ್ನು 'ಮೌಢ್ಯ' ಎಂದು ಕರೆಯಬಹುದಾಗಿದೆ. ಇಂಥ ಆಚರಣೆ ಅಥವಾ ಸಂಪ್ರದಾಯಗಳು ಸುಲಿಗೆಕೋರ ಶಕ್ತಿಗಳ ಜೀವನೋಪಾಯದ ಮಾರ್ಗವಾದಾಗ ಅಥವಾ ವ್ಯಾಪಾರೀಕರಣಕ್ಕೆ ನೆಲೆಯಾದಾಗ ನಂಬಿಗಸ್ತ ಜನಸಾಮಾನ್ಯರನ್ನು ಶೋಷಿಸಲು ದಾರಿಯಾಗುತ್ತದೆ. ಇಂಥ ಪರಿಕಲ್ಪನೆಗಳ ಮೇಲೆ ಕಾನೂನಿನ ಹಿಡಿತವಿಲ್ಲದಿದ್ದರೆ ಮೌಢ್ಯಪೂರಿತ ಸಮಾಜಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಮೂಢನಂಬಿಕೆಯ ಮೂಲಕ ಜನತೆಯ ಶ್ರದ್ಧೆಯನ್ನು ಬಂಡವಾಳ ಮಾಡಿಕೊಂಡು ಭಯ-ಅಂಜಿಕೆ-ಹೆದರಿಕೆ-ಉದ್ವೇಗಗಳನ್ನು ಸೃಷ್ಟಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನುಂಟುಮಾಡುವ ಹಾಗೂ ಮಾರಣಾಂತಿಕ ಪರಿಸ್ಥಿತಿಗಳಿಗೆ ದೂಡುವ ಯಾವುದೇ ಮೂಢನಂಬಿಕೆ, ಆಚರಣೆ, ಸಂಪ್ರದಾಯ ಹಾಗೂ ವಿಧಿ ನಿಷೇಧಗಳನ್ನು ಕಾನೂನಿನ ಮೂಲಕ ನಿಯಂತ್ರಣ ಮಾಡುವ/ನಿಷೇಧಿಸುವ ಅಗತ್ಯವಿದೆ. ಇಂಥ ಆರೋಗ್ಯವಂತ ನವಸಮಾಜದ ಮಾತ್ರ ಬೌದ್ಧಿಕವಾಗಿ ಪ್ರಬುದ್ಧವಾದ ಕನರ್ಾಟಕವನ್ನು ಕಟ್ಟಲು ಸಾಧ್ಯ. ಮೂಢನಂಬಿಕೆ ಮತ್ತು ಧಾಮರ್ಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವೆಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆಥರ್ಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು. ಹಾಗೆಯೇ, ಸಾಮಾನ್ಯವಾಗಿ ಇಂಥ ಆಚರಣೆಗಳು ಮಹಿಳೆ, ಮಕ್ಕಳು, ದಲಿತರು, ಧಾಮರ್ಿಕ ಅಲ್ಪಸಂಖ್ಯಾತರು ಮತ್ತು ಬಡವರನ್ನೇ ಬಲಿಪಶುಗಳನ್ನಾಗಿಸುವುದರಿಂದ ಇವುಗಳ ವಿರುದ್ಧ ಗಂಭೀರವಾದ ಉಪಕ್ರಮಗಳ ಅಗತ್ಯವಿರುತ್ತದೆಯೆಂಬುದನ್ನು ಈ ವಿಧೇಯಕ ರೂಪಿಸುವ ಹೊತ್ತಿನಲ್ಲಿ ಮನಗಾನಬೇಕಾಗಿರುತ್ತದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮೂಢನಂಬಿಕೆ ಆಚರಣೆಗಳ ನಿಷೇಧಕ್ಕೆ ತತ್ಸಂಬಂಧಿಸಿದ ಕಾನೂನು ಉಪಕಂಡಿಕೆಗಳು ಹಾಗೂ ಶಿಕ್ಷಾರ್ಹ ವ್ಯಾಪ್ತಿಯಲ್ಲಿ ಒಳಗೊಳ್ಳಬೇಕಾದ ಮುಖ್ಯಾಂಶಗಳ
ನಿರೂಪವನ್ನು ಈ ಕೆಳಕಂಡಂತೆ ರೂಪಿಸಬಹುದು.
ನಿಷೇಧಾರ್ಹ ಮತ್ತು ಶಿಕ್ಷಾರ್ಹ ಮೌಢ್ಯಗಳ ತತ್ಸಂಬಂಧಿ ಕಾನೂನು ಸ್ವರೂಪ ಸೂಚಿ:
1. ಯಾವುದೇ ಮತಧರ್ಮಕ್ಕೆ ಸಂಬಂಧಿಸಿದ ಮೌಢ್ಯ ಪ್ರೇರಕ ಜ್ಯೋತಿಷ್ಕರ್ಮ, ಮಾಟಮಂತ್ರ, ಮೋಡಿ-ರಣಮೋಡಿ, ಬಾನಾಮತಿ, ವಶೀಕರಣ, ವಾಮಾಚಾರ, ಯಕ್ಷಿಣಿ ವಿದ್ಯೆ, ಮಂದಿರಗಳಲ್ಲಿ ದೈವೀಪ್ರಶ್ನೆ ಕೇಳುವುದು-ನುಡಿಯುವುದು, ಪಾದಪೂಜೆ-ಅಡ್ಡಪಲ್ಲಕಿ ಸೇವೆ ಮುಂತಾದ ಧಾಮರ್ಿಕ ವ್ಯಾಪಾರಗಳನ್ನು ನಿಷೇಧಿಸಬೇಕು.
2. ಜನತೆಯ ಸಾಮಾಜಿಕ ಸಾಮರಸ್ಯವನ್ನು ಕಲಕುವ, ಜಾತಿ-ಲಿಂಗ-ವರ್ಗ ತಾರತಮ್ಯಗಳನ್ನು ಎತ್ತಿ ಹಿಡಿಯುವ, ಮನುಜ-ಮನುಜರ ನಡುವೆ ಭೇದ ಸೃಷ್ಟಿಸುವ, ಮೇಲು-ಕೀಳು ಎಂಬ ಭಾವನೆಗಳನ್ನು ಪ್ರಚೋದಿಸುವ ಸ್ಪೃಶ್ಯಾಸ್ಪೃಶ್ಯ ಭಾವನೆಗೆ ದೂಡುವ ಅಥವಾ ಪ್ರಚೋದಿಸುವ, ಮನುಷ್ಯನ ಘನತೆಗೆ ಧಕ್ಕೆ ತರುವ ಯಾವುದೇ ಮೂಢನಂಬಿಕೆ ಅಥವಾ ಗೊಡ್ಡುಸಂಪ್ರದಾಯಗಳು (ಉದಾ: ಅಜಲು ಪದ್ಧತಿ, ಗೆಜ್ಜೆಪೂಜೆ, ಅಥವಾ ಬೆತ್ತಲೆಸೇವೆ, ಮಡೆಸ್ನಾನ,) ಇತ್ಯಾದಿ ಆಚರಣೆಗಳು ನಿಷೇಧಾರ್ಹವಾಗಬೇಕು.
3, ಸಾಮೂಹಿಕವಾಗಿ ಆಚರಿಸುವ ಯಾವುದೇ ಆಚರಣೆ-ಸಂಪ್ರದಾಯಗಳ ಸಂದರ್ಭದಲ್ಲಿ ಮಡಿ -ಮೈಲಿಗೆ ನೆಪದಲ್ಲಿ ಯಾವುದೇ ಜಾತಿಯ ಜನತೆಯನ್ನು ಹೊರಗಿಡುವ, ಮಾತನಾಡಿಸದಿರುವ, ಮುಟ್ಟದಿರುವ, ಭಕ್ತರಿಂದ ತೊಗಲು ಪ್ರದರ್ಶಕ ಅರೆಬೆತ್ತಲೆ ದೇವದರ್ಶನ ಮಾಡಿಸುವ, ಪ್ರತ್ಯೇಕ ಪಂಕ್ತಿ ಭೋಜನ ಮಾಡುವ ಸಂಪ್ರದಾಯಗಳು ನಿಷೇಧಾರ್ಹವಾಗಬೇಕು.
4. ಬಂಜೆತನ ಅನಿಷ್ಟವೆಂಬ ಮೌಢ್ಯದ ವಿಚಾರ ಮುಂದು ಮಾಡಿ 'ಸಂತಾನ ಭಾಗ್ಯ' ಒದಗಿಸುವುದಾಗಿ
ಹೇಳುವ ಅಥವಾ ನಿಧಿ ಸಂಪಾದನೆ ಮಾಡಿಕೊಡುವುದಾಗಿ ಹೇಳಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ನಿಧಿಗಾಗಿ ಅಥವಾ ವಾಸ್ತುದೋಷ ಪರಿಹಾರಕ್ಕಾಗಿ ನರಬಲಿ ಅಥವಾ ಪಶುಬಲಿ ನೀಡುವುದು, ಬೆತ್ತಲೆ ಸೇವೆ, ಹೆಣ್ಣುಮಕ್ಕಳಿಗೆ ಮುತ್ತು ಕಟ್ಟಿಸಿ- ಓಕುಳಿಯಾಡಿ ಬಸವಿ ಬಿಡುವ ಪದ್ಧತಿ ಪಾಲನೆ ಅಥವಾ ಮಳೆ-ಬೆಳೆ ನೆಪದಲ್ಲಿ ಮಹಿಳೆಯರನ್ನು
ವ್ಯಭಿಚಾರಕ್ಕೆಳೆಯುವುದು, ಮುಟ್ಟು-ಪ್ರಸವ ಕಾಲದಲ್ಲಿ ಹೆಣ್ಣುಮಕ್ಕಳನ್ನು ಊರ ಹೊರಗಡೆಯಲ್ಲಿ ಇರಿಸುವುದು, ಸಾರ್ವಜನಿಕ ಪೂಜಾ ಸ್ಥಳಗಳಿಗೆ ಮಹಿಳೆ ಅಥವಾ ಪುರುಷರನ್ನು ಬರದಂತೆ ತಡೆಯುವುದು ಮುಂತಾದ ಸಮಾಜ ವಿರೋಧಿ ಆಚರಣೆಗಳೆಲ್ಲಾ ನಿಷೇಧಾರ್ಹವಾಗಬೇಕು.
ಶಿಕ್ಷಾರ್ಹ ಹಾಗೂ ನಿಯಂತ್ರಣಾರ್ಹ ಮೌಢ್ಯಗಳ ನಿರೂಪ ಸೂಚಿ:
ಪ್ರಜಾಸತ್ತಾತ್ಮಕ ಭಾರತ ದೇಶದಲ್ಲಿ ಪ್ರಜೆಗಳು ತಮ್ಮ-ತಮ್ಮ ನಂಬಿಕೆಗಳಿಗೆ ಅನುಸಾರ ಸಾಮಾಜಿಕ ಆರೋಗ್ಯವು ಕೆಡದಂತೆ ಧಾಮರ್ಿಕ ಶ್ರದ್ಧೆ ತೋರುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕರುಣಿಸಿದೆ. ಹೀಗಿರುವಾಗ ಜನರೇ ತಮ್ಮ ಸ್ವ-ಇಚ್ಛೆಯಿಂದ ಇಂಥ ಆಚರಣೆಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಮೂಢನಂಬಿಕೆಯ ಕುರಿತು ಮಾತನಾಡುವಾಗ ಸಾಮಾನ್ಯವಾಗಿ ಪ್ರಸ್ತಾಪಿಸಲಾಗುವ ವಿಚಾರ. ಇದು ನಿಜವೇ ಆದರೂ, ಮೂಢನಂಬಿಕೆಗೆ ಬಲಿಯಾದ ಅಮಾಯಕರೇ ಈ ಕಾನೂನಿನಿಂದ ಶಿಕ್ಷೆಗೆ ಗುರಿಯಾಗುವಂತಾಗಬಾರದು. ಶ್ರೀಸಾಮಾನ್ಯರನ್ನು ಬಲಿಪಶುವಾಗಿಸುವ ಧಾಮರ್ಿಕ ವ್ಯಕ್ತಿ/ಶಕ್ತಿಗಳನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಬೇಕು. ಮೂಢನಂಬಿಕೆಗಳನ್ನು ಎಲ್ಲಾ ಧರ್ಮಗಳು ಒಂದಲ್ಲಾ ಒಂದು ರೀತಿಯಲ್ಲಿ ಆಚರಣೆಯಲ್ಲಿಟ್ಟಿರುವುದರಿಂದ ಈ ವಿಧೇಯಕವು ಎಲ್ಲ ಧರ್ಮಗಳಲ್ಲಿರುವ ಮೌಢ್ಯಗಳಿಗೆ ಅನ್ವಯಿಸುವಂತಿರಬೇಕು.
1. ಯಾವುದೇ ಮತಧರ್ಮದ ಧಾಮರ್ಿಕ ಪಂಥಗಳ ವ್ಯಾಪ್ತಿಯಲ್ಲಿ ಬರುವ ವಾಸ್ತು, ಫಲ ಜ್ಯೋತಿಷ್ಯ, ಜಾತಕ, ಕುಂಡಿಲಿನಿ, ಹಸ್ತಸಾಮುದ್ರಿಕೆ, ಕಣಿ-ಶಕುನ ನುಡಿಯುವುದು/ಕೇಳುವುದು, ಮಠ- ಮಂದಿರ-ಗುರುಪೀಠ-ಗದ್ದಿಗೆಗಳಲ್ಲಿ ಅತೀಂದ್ರಿಯ ಧಾಮರ್ಿಕ ಶಕ್ತಿಗಳ ಮೈದುಂಬಿ ದೈವಪ್ರಶ್ನೆ ಹೇಳುವುದು/ಕೇಳುವುದು, ಕಾಲನಿರ್ಣಯ(ಕಾಲಜ್ಞಾನ), ಪ್ರಾಣಿವಧೆ, ಗಾವು ಸಿಗಿಯುವುದು, ಪವಾಡ ಮುಂತಾದವು ಈ ವಿಧೇಯಕದ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಘೋಷಿಸಬೇಕು. ಇಂಥವುಗಳನ್ನು ನಡೆಸುವವರೂ ಅಥವಾ ನಡೆಸುವ ಸಂಘ, ಸಂಸ್ಥೆ, ಟ್ರಸ್ಟ್ ಮುಂತಾದವು ಈ ವಿಧೇಯಕದ ವ್ಯಾಪ್ತಿಗೆ ಒಳಪಟ್ಟಿದ್ದು ಅಂಥವರು ಅಥವಾ ಅಂತಹ ಸಂಘ-ಸಂಸ್ಥೆಗಳು ನಡೆಸುವ ಧಾಮರ್ಿಕ ವ್ಯಾಪಾರ ಮತ್ತು ಮೂಢಾಚಾರ ಚಟುವಟಿಕೆಗಳು ಕಾನೂನುಬಾಹಿರ ಅಪರಾಧ ಕೃತ್ಯಗಳೆಂದು ಘೋಷಿಸುವಂತಾಗಬೇಕು. ಇಲ್ಲಿಯವರೆಗೆ ಚಾಲ್ತಿಯಲ್ಲಿರುವ ಇಂತಹ ಧಾಮರ್ಿಕ ವ್ಯಾಪಾರನಿರತ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಸಕ್ಷಮ ನೋಂದಣಿ ಪ್ರಾಧಿಕಾರದಲ್ಲಿ ನಿಯಮಾನುಸಾರ ನೋಂದಣಿ ಮಾಡಿಕೊಳ್ಳುವಂತಾಗಬೇಕು.
2. ಜನತೆಯ ಧಾಮರ್ಿಕ ಶ್ರದ್ಧೆಯನ್ನು ಬಂಡವಾಳ ಮಾಡಿಕೊಂಡು ಮೌಢ್ಯದ ಆಚರಣೆ, ಗೊಡ್ಡು ಸಂಪ್ರದಾಯ, ಕಂದಾಚರಣೆಗಳನ್ನು ಬಿತ್ತುವ, ಭಯ-ಅಂಜಿಕೆ-ಉದ್ವೇಗಗಳನ್ನು ಸೃಷ್ಟಿಸುವ, ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನುಂಟುಮಾಡುವ, ಯಾವುದೇ ಧರ್ಮದ ಅಥವಾ ಸ್ವಯಂಘೋಷಿತ 'ಪರಿಚಾರಕ' ಅಥವಾ 'ಪರಿಚಾರಿಕೆ'ಯರನ್ನು (ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪಂಚಾಂಗದಯ್ಯನವರು, ಸಾರುವಯ್ಯನವರು ಮುಂತಾದವರನ್ನು) ಈ ವಿಧೇಯಕದ ವ್ಯಾಪ್ತಿಗೆ ಒಳಪಡಿಸಬೇಕು.
3. ಜನತೆಯ ನಂಬಿಕೆ-ಆಚರಣೆ-ಸಂಪ್ರದಾಯಗಳನ್ನು ಬಳಸಿಕೊಂಡು ಅವರ ಪ್ರಶ್ನೆಗಳಿಗೆ ಪರಿಹಾರಗಳನ್ನು ಒದಗಿಸುವ ನೆಪದಲ್ಲಿ ಶೋಷಿಸುವ ಮತ್ತು ಇಲ್ಲಸಲ್ಲದ ಆಮಿಷಗಳನ್ನು ತೋರಿ ಪರಿಹಾರ ಒದಗಿಸುವ ಭರವಸೆ ನೀಡುವುದನ್ನು (ಉದಾ: ವಾಸ್ತುದೋಷ ನಿವಾರಣೆ, ಜಾತಕದೋಷ ನಿವಾರಣೆ, ಗ್ರಹಗತಿ ನಿವಾರಣೆ ಮುಂತಾದವು) ಗ್ರಾಹಕರಿಗೆ ನೀಡುವ ಸೇವೆ ಎಂದು ಪರಿಗಣಿಸಿ, ಇವುಗಳನ್ನು 'ಗ್ರಾಹಕರ ಕಾಯ್ದೆ'ಯ ಅಡಿಯಲ್ಲಿ ತರುವ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ಸೇವೆಗಳನ್ನು ಒದಗಿಸುವವರ ಮೇಲೆ ನಿಗಾಯಿರಿಸುವುದರ ಜೊತೆಗೆ ಇಂಥ ಸೇವೆಗಳನ್ನು ನೀಡುವುದಾಗಿ ಜಾಹಿರಾತು ನೀಡುವ ಮತ್ತು ಸಾರ್ವಜನಿಕವಾಗಿ ಆಧ್ಯಾತ್ಮದ ಹೆಸರಿನಲ್ಲಿ ಜನರನ್ನು ಸಮಾವೇಶಗೊಳಿಸುವ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಸಕ್ಷಮ ನೋಂದಣಿ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತಾಗಬೇಕು.
4. ಮೌಢ್ಯದ ಹೆಸರಿನಲ್ಲಿ ಗುಲಾಮಗಿರಿ, ಅಸ್ಪೃಶ್ಯತೆಯನ್ನು ಎತ್ತಿ ಹಿಡಿಯುವ, ಜಾತಿ-ಧರ್ಮಗಳ ನಡುವೆ ವೈಷಮ್ಯ ಹರಡುವ, ಮಕ್ಕಳು, ಹೆಂಗಸರನ್ನು ಹಿಂಸೆಗೆ ಒಳಪಡಿಸುವ, ಕೆಲವೇ ಧಾಮರ್ಿಕ ಗುಂಪುಗಳ ಹಿತಾಸಕ್ತಿಯನ್ನು ಕಾಪಾಡುವ ಪ್ರಕ್ರಿಯೆಗೆ ಮುಂದಾಗುವವರನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಯ ಯೋಜಕರನ್ನು (ಆಡಳಿತ ಮಂಡಳಿ) ಶಿಕ್ಷೆಗೆ ಗುರಿಪಡಿಸುವಂತಾಗಬೇಕು.
5. ಯಾವುದೆ ಸಂಘ-ಸಂಸ್ಥೆ, ವ್ಯಕ್ತಿ ಅಥವಾ ಬಣ ಅಥವಾ ಟ್ರಸ್ಟ್ ಮೌಢ್ಯವನ್ನು ಆಚರಿಸುತ್ತಿದ್ದರೆ ಅಥವಾ ಬೆಂಬಲ ನೀಡುತ್ತಿದ್ದರೆ, ಪ್ರಚಾರ ಮಾಡುತ್ತಿದ್ದರೆ ಅಥವಾ ಇಂಥದಕ್ಕೆ ಸಹಕರಿಸುತ್ತಿದ್ದರೆ (ದೂರದರ್ಶನ ವಾಹಿನಿಗಳು, ರೇಡಿಯೋ, ಚಲನಚಿತ್ರ, ಅಂತಜರ್ಾಲ ತಾಣ, ವೆಬ್ಸೈಟ್, ಪುಸ್ತಕ ಪ್ರಕಟಣೆ, ಪತ್ರಿಕೆಗಳು ಮುಂತಾದ ಪ್ರಸಾರ ಮಾಧ್ಯಮಗಳೂ ಸೇರಿದಂತೆ) ಅದು ಕಾನೂನು ಬಾಹಿರ ವರ್ತನೆಯೆಂದು ಪರಿಗಣಿಸುವಂತಾಗಬೇಕು.
6. ಸಂಪ್ರದಾಯ ಮತ್ತು ಆಚರಣೆಗಳ ಅಪಗ್ರಹಿಕೆ, ಧಾಮರ್ಿಕ ಅಪಕಲ್ಪನೆ ಮತ್ತು ಅಂಧಶ್ರದ್ಧೆಯಿಂದ ಮನುಜರನ್ನು ದೇವರೆಂದು ಅಥವಾ ದೇವಮಾನವರೆಂದು ಬಿಂಬಿಸುವ, ಅದಕ್ಕೆ ಸಂಬಂಧಿಸಿದಂತೆ ನಂಬಿಕೆಗಳನ್ನು ಹುಟ್ಟಿಹಾಕುವ, ಮತಮೌಢ್ಯದ ಕಂದಾಚಾರಗಳನ್ನು ಕಾನೂನು ಪ್ರಕಾರ ನಿಷೇಧಿಸುವಂತಾಗಬೇಕು ಮತ್ತು ಇಂಥ ಚಟುವಟಿಕೆಗಳಿಗೆ ಸಂಬಂಧಿಸಿದವರನ್ನು ಕಾನೂನು ಪ್ರಕಾರ ಶಿಕ್ಷಾರ್ಹವಾಗಿಸಬೇಕು.
7. ಮನುಷ್ಯರ ಕಷ್ಟಗಳ ಪರಿಹಾರದ ಕಾರಣಕ್ಕಾಗಿ, ಧನ ಪ್ರಾಪ್ತಿಗಾಗಿ, ಲೋಕಕಲ್ಯಾಣದ ಹೆಸರಿನಲ್ಲಿ ಧಾಮರ್ಿಕ ಅಂಧಶ್ರದ್ಧೆಯನ್ನು ಉದ್ದೀಪಿಸುವ, ಮೂಢನಂಬಿಕೆಯಿಂದಾಗಿ ಪ್ರಾಣಿಗಳನ್ನು ಸಾರ್ವಜನಿಕ ದೇವಮಂದಿರಗಳ ಆವರಣದಲ್ಲಿ ಬಲಿ ಕೊಡುವುದು, ದನ-ಕುರಿ-ಮೇಕೆ- ನಾಯಿ ಇತ್ಯಾದಿ ಜಾನುವಾರುಗಳಿಗೆ ರೋಗ ಬಂದಾಗ ಅವುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸಿ ಹಾಕುವುದು ಇಂಥ ಮೌಢ್ಯದ ಹಿಂಸಾತ್ಮಕ ಕಾರ್ಯಗಳು ಈ ವಿಧೇಯಕದ ವ್ಯಾಪ್ತಿಗೆ ಒಳಪಡಬೇಕು.
8. ಅಂಧಶ್ರದ್ಧೆಯ ಆಚರಣೆಗಳಾದ ಅಗ್ನಿದಿವ್ಯದ ಮೂಲಕ ಪ್ರಮಾಣ ಮಾಡಿಸುವುದು, ಆರೋಪಿತ ವ್ಯಕ್ತಿಯನ್ನು ಅವೈಜ್ಞಾನಿಕ ಪರಿಕಲ್ಪನೆಯ ಮೂಲಕ ಪರೀಕ್ಷಿಸುವುದು ಹಾಗೂ ಅವೈಜ್ಞಾನಿಕವಾಗಿ ನ್ಯಾಯ ತೀಮರ್ಾನಗಳನ್ನು ಮಾಡುವುದು (ಕಾಫ್ ಪಂಚಾಯತ್ ನ್ಯಾಯನಿರ್ಣಯ, (ಅವ) ಮಯರ್ಾದಾ ಹತ್ಯೆ, ಗಡಿಪಾರು, ಸಾಮಾಜಿಕ ಬಹಿಷ್ಕಾರ ಮುಂತಾದವು) ಈ ವಿಧೇಯಕದ ಪ್ರಕಾರ ಅಪರಾಧ ಮತ್ತು ಶಿಕ್ಷಾರ್ಹವೆಂದು ಘೋಷಿಸಬೇಕು.
9. ಮೂಢನಂಬಿಕೆ ಆಚರಣೆಗಳಿಗೆ ಸಂಬಂಧಿಸಿದಂತೆ ರೂಪಿಸುವ ಪ್ರಸ್ತುತ ವಿಧೇಯಕದಲ್ಲಿ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣಗಳು ಗಂಭೀರವಾಗಿರಬೇಕೇ ವಿನಃ ನಗೆಪಾಟಲಿಗೀಡಾಗುವಂತಿರಬಾರದು. ಮಹಾರಾಷ್ಟ್ರ ಸರಕಾರ ರೂಪಿಸಿರುವ ಇಂಥ ಕಾಯ್ದೆಯ ಮೊದಲ ಕರಡಿನಲ್ಲಿ ಈ ವಿಧೇಯಕವನ್ನು ಉಲ್ಲಂಘಿಸಿದವರಿಗೆ ಏಳು ವರ್ಷ
ಜೈಲು ಶಿಕ್ಷೆ ಹಾಗೂ 50,000 ರೂಪಾಯಿ ಜುಲ್ಮಾನೆ ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಅಂತಿಮವಾಗಿ ಅದು ಜಾರಿಗೆ ಬಂದಾಗ ಜುಲ್ಮಾನೆ ಅಷ್ಟೇ ವಿಧಿಸಲಾಗಿದ್ದು ಶಿಕ್ಷೆಯ ಅವಧಿಯನ್ನು ಆರರಿಂದ ಏಳು ತಿಂಗಳು ಎಂದು ನಿಗದಿ ಮಾಡಲಾಗಿದೆ, ಇದು ಸೂಕ್ತವಲ್ಲ. ಶಿಕ್ಷೆಯ ಅವಧಿಯನ್ನು ಹೆಚ್ಚುಗೊಳಿಸುವುದು ಸೂಕ್ತವಾಗಿದೆ.
10. ಮಾಹಿತಿ ಹಕ್ಕು ಕಾಯ್ದೆಯನ್ನು ಉಪಯೋಗಿಸಿಕೊಂಡು ಸಾಮಾಜಿಕ ಬದಲಾವಣೆಗೆ ಯತ್ನಿಸುವವರಿಗೆ ರಕ್ಷಣೆ ಒದಗಿಸುವ ನಿಬಂಧನೆಯೊಂದು ಈಗಾಗಲೇ ಜಾರಿಯಲ್ಲಿರುವಂತೆ ವೈಜ್ಞಾನಿಕ ಮನೋಭಾವವನ್ನು ಗಂಭೀರವಾಗಿ ನೆಲೆಗೊಳಿಸಲು ಮುಂದಾಗುವವರಿಗೂ ಇದೇ ರೀತಿಯ ಕಾನೂನಾತ್ಮಕ ರಕ್ಷಣೆಯನ್ನು ಒದಗಿಸುವುದು ಅನಿವಾರ್ಯ.
ಸರಕಾರವು ಮಾಡಬೇಕಾದ ಇತರೆ ಕಾರ್ಯಗಳ ಸ್ವರೂಪ ಸೂಚಿ :
1. ನಾಟಕ, ಬೀದಿನಾಟಕ, ಯಕ್ಷಗಾನ, ಕರಪತ್ರ, ಗೋಡೆ ಬರಹ, ರೇಡಿಯೋ, ಅಂತಜರ್ಾಲ ತಾಣ, ಸಿನಿಮಾ, ಪತ್ರಿಕೋದ್ಯಮ, ಪುಸ್ತಕ ಪ್ರಕಾಶನ, ದೂರದರ್ಶನ ಧಾರಾವಾಹಿ, ಸಾಕ್ಷಚಿತ್ರ- ಕಿರುಚಿತ್ರ ನಿಮರ್ಾಣ, ಸಾರ್ವಜನಿಕ ಜಾಹಿರಾತು, ಪಠ್ಯಕ್ರಮ, ಸಭೆ-ಸಮಾವೇಶ-ವಿಚಾರ ಸಂಕಿರಣ ಮುಂತಾದ ಮಾಧ್ಯಮಗಳನ್ನು ಬಳಸಿಕೊಂಡು ಮೌಢ್ಯಗಳನ್ನು ತೊಡೆದುಹಾಕಲು ಒಂದು ಅಭಿಯಾನದ ರೀತಿಯಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. 2. ಮೌಢ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತೊಡೆದುಹಾಕಲು ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ವೈಚಾರಿಕತೆಯನ್ನು ಬಿತ್ತುವ, ವೈಜ್ಞಾನಿಕ ಮನೋಭಾವವನ್ನು ಬೆಳೆಸುವ, ಪ್ರಶ್ನಿಸುವ ಮನೋಗುಣ ಮತ್ತು ಆತ್ಮಸ್ಥೈರ್ಯವನ್ನು ತುಂಬುವ ಅರಿವಿನ ಪಠ್ಯವಿಷಯಗಳನ್ನು ಕಡ್ಡಾಯವಾಗಿ ಸೇರಿಸುವಂತಾಗಬೇಕು.
3. ಪರಂಪರಾನುಗತವಾಗಿ ಬಂದ ಜನಪದ ಕಲೆಗಳು, ನಂಬಿಕೆ, ಆಚರಣೆ, ಸಂಪ್ರದಾಯ ಮುಂತಾದವುಗಳು ಧಾಮರ್ಿಕ ಸ್ವರೂಪದವುಗಳಾಗಿದ್ದು ದೇವರು-ಧರ್ಮದೊಂದಿಗೆ ಸಂಬಂಧವನ್ನು ಸಾಧಿಸಿವೆ. ಇಂಥವುಗಳಿಂದ ಜನಪದ ಕಲೆಗಳನ್ನು ಬೇರ್ಪಡಿಸುವ ಕಾರ್ಯ ಆಗಬೇಕಿದೆ. ಆಗ ಮೌಢ್ಯಭರಿತ ನಂಬಿಕೆಗಳು, ಕಂದಾಚಾರಗಳು ನಿಷ್ಕ್ರಿಯವಾಗುತ್ತವೆ. ಇಂಥ
ಸುಧಾರಣವಾದಿ ಪ್ರಕ್ರಿಯೆಗೆ ವ್ಯಾಪಕ ಚಾಲನೆ ನೀಡಬೇಕು. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ವಿಶ್ವವಿದ್ಯಾನಿಲಯ ಅಧಿಕೃತವಾಗಿ ಇಂಥ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುವಂತಾಗಬೇಕು. ಜತೆಗೆ ಇತರೆ ಸಾರ್ವಜನಿಕ ಮತ್ತು ಖಾಸಗಿ ಸಂಘಸಂಸ್ಥೆಗಳು, ಪ್ರಾಧಿಕಾರಗಳು, ಅಕಾಡೆಮಿಗಳು, ನಿಗಮ- ಮಂಡಳಿಗಳು, ಆಡಳಿತ ಯಂತ್ರಾಂಗದ ಅಂಗಭಾಗಗಳು, ನ್ಯಾಯಾಲಯ ಮುಂತಾದವುಗಳು
ತಮ್ಮ ತಮ್ಮ ಕ್ಷೇತ್ರದ ಒಳಗಿರುವ ಮೌಢ್ಯಗಳನ್ನು ಕಳೆಯಲು ಮುಂದಾಗಬೇಕು.
4. ಮೌಢ್ಯ ರಹಿತ ಪ್ರಬುದ್ಧ ಕನರ್ಾಟಕವನ್ನು ಕಟ್ಟಲು ಹಾಗೂ ಅಭಿವೃದ್ಧಿಶೀಲ ಕನರ್ಾಟಕವನ್ನು ರೂಪಿಸಲು 'ವೈಜ್ಞಾನಿಕ ಮಾರ್ಗಪ್ರಾಧಿಕಾರ'ವನ್ನು ಸ್ಥಾಪಿಸಬೇಕು ಮತ್ತು ಈ ಪ್ರಾಧಿಕಾರಕ್ಕೆ ಮೌಢ್ಯ ನಿಮರ್ೂಲನದ ಜವಾಬ್ದಾರಿಯೊಂದಿಗೆ, ಸರಕಾರಿ-ಅರೆಸಕರ್ಾರಿ ಹಾಗೂ ಸರಕಾರೇತರ ಸಂಘ- ಸಂಸ್ಥೆಗಳಲ್ಲಿ, ಅನುದಾನಿತ-ಅನುದಾನರಹಿತ ಸಾರ್ವಜನಿಕ ವಲಯಗಳಲ್ಲಿ ಮೂಢನಂಬಿಕೆ ಆಚರಣೆಗಳ ವಿರುದ್ಧ ಕಾಯರ್ಾಚರಣೆ ಮತ್ತು ಮೇಲ್ವಿಚಾರಣೆಯ ಅಧಿಕಾರ ಹಾಗೂ ಒಂದು ಹಂತದವರೆಗೆ ಕಾನೂನಾತ್ಮಕವಾಗಿ ಶಿಕ್ಷಿಸುವ ಅಧಿಕಾರವನ್ನು ನೀಡಬೇಕು.
ಕನ್ನಡ ಪರಾಮರ್ಶನ ಗ್ರಂಥಗಳು
1. ಡಾ. ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು. ಸಂಪುಟ 7, ಮಹಾರಾಷ್ಟ್ರ ಸಕರ್ಾರ.
2. ಬರಗೂರು ರಾಮಚಂದ್ರಪ್ಪ .'ಉಪಸಂಸ್ಕೃತಿ ಅಧ್ಯಯನ', ಕನರ್ಾಟಕ ಸಾಹಿತ್ಯ ಅಕಾಡೆಮಿ 1993.
3. ಹಿ.ಚಿ. ಬೋರಲಿಂಗಯ್ಯ, 'ಉಜ್ಜಿನಿ ಚೌಡಮ್ಮ' ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು 1979.
4. ಚಂದ್ರಶೇಖರ ಕಂಬಾರ. (ಸಂ) 'ಕನ್ನಡ ಜಾನಪದ ವಿಶ್ವಕೋಶ', ಕ.ಸಾ.ಪ ಬೆಂಗಳೂರು 1985.
5. ಚೆನ್ನಣ್ಣ ವಾಲೀಕಾರ 'ಹೈದರಾಬಾದ್ ಕನರ್ಾಟಕ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ',
ದಲಿತ ಬಂಡಾಯ ಸಾಹಿತ್ಯ ಪ್ರಕಾಶನ, ಗುಲ್ಬರ್ಗ 1998.
6. ಎಂ.ಚಿದಾನಂದಮೂತರ್ಿ. 'ಮಧ್ಯಕಾಲೀನ ಕನರ್ಾಟಕದ ಕೆಲವು ರಹಸ್ಯ ತಾಂತ್ರಿಕ ಪಂಥಗಳು'
ಸಂಶೋಧನಾ ತರಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
7. ಎಂ. ಚಿದಾನಂದಮೂತರ್ಿ. 'ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ', ಪ್ರಸಾರಾಂಗ,
ಕನರ್ಾಟಕ ವಿಶ್ವವಿದ್ಯಾಲಯ, ಧಾರವಾಡ 1985.
8. ದೇವನೂರ ಮಹಾದೇವ. 'ಎದೆಗೆ ಬಿದ್ದ ಅಕ್ಷರ', ಅಭಿನವ ಪ್ರಕಾಶನ, ಬೆಂಗಳೂರು 2012.
9. ದೇವೀಪ್ರಸಾದ್ ಚಟ್ಟೋಪಾಧ್ಯಾಯ. 'ಲೋಕಾಯತ', ನವದೆಹಲಿ 1958.
10. ಗೋವಿಂದ 'ಬಳ್ಳಾರಿ ಜಿಲ್ಲೆಯ ಜಾನಪದ ದೈವಗಳು' ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,
ಹಂಪಿ 2001.
11. ಜೋಗನ್ಶಂಕರ್. 'ದೇವದಾಸಿ ಸಂಪ್ರದಾಯ', ವಿಮೋಚನಾ ಪ್ರಕಾಶನ, ಅಥಣಿ 1993.
12. ಶಂಬಾಜೋಷಿ 'ಕನರ್ಾಟಕ ಸಂಸ್ಕೃತಿ ಪೂರ್ವಪೀಠಿಕೆ', ಸಮಾಜ ಪುಸ್ತಕಾಲಯ,
ಧಾರವಾಡ 1966.
13. ಕಡೆತೋಟದ ಎಸ್.ಕೆ. 'ಎಲ್ಲಮ್ಮನ ಜೋಗತಿಯರು ಹಾಗೂ ದೇವದಾಸಿ ಪದ್ಧತಿ', ಕನರ್ಾಟಕ
ವಿಶ್ವವಿದ್ಯಾಲಯ, ಧಾರವಾಡ 1983.
14. ಬಿ.ವಿ. ಕಕ್ಕಿಲಾಯ. 'ಭಾರತೀಯ ದರ್ಶನಗಳು', ನವಕನರ್ಾಟಕ ಪಬ್ಲಿಕೇಷನ್ ಪ್ರೈವೇಟ್ (ಲಿ)
ಬೆಂಗಳೂರು 1994.
15. ಕಮಲಾಕ್ಷ. ಪಿ. 'ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ',
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು 1994.
16. ಡಿ.ಡಿ. ಕೋಸಂಬಿ. 'ಮಿಥ್ ಅಂಡ್ ರಿಯಾಲಿಟಿ', ಪಾಪ್ಯುಲರ್ ಪ್ರಕಾಶನ, ಬಾಂಬೆ 1962.
17. ವಿ.ಆರ್. ಕೃಷ್ಣ ಅಯ್ಯರ್. 'ದುರ್ಬಲವರ್ಗದವರಿಗೆ ನುಡಿಯಲ್ಲಿ ನ್ಯಾಯ, ನಡೆಯಲ್ಲಿ ಅನ್ಯಾಯ'
(ಅನು ಶಂಪ ಐತಾಳ) ಅಕ್ಷರ ಪ್ರಕಾಶನ, ಸಾಗರ 1984.
18. ಕುಮಾರ ಕಕ್ಕಯ್ಯ ಪೋಳ. 'ಚಾತುರ್ವರ್ಣ ಧರ್ಮದರ್ಶನ', ಲೋಹಿಯಾ ಪ್ರಕಾಶನ. ಬಳ್ಳಾರಿ
1997.
19. ಮಂಜುನಾಥ ಬೇವಿನಕಟ್ಟೆ .'ಕನ್ನಡ ಜನಪದ ನಂಬಿಕೆಗಳು', ಜ್ಯೋತಿ ಪ್ರಕಾಶನ
ಮೈಸೂರು 2007.
20. ಕೆ.ಜಿ. ನಾಗರಾಜಪ್ಪ. 'ಗುಪ್ತ ಸಮಾಜಗಳು, ಇಕ್ಕಟ್ಟು-ಬಿಕ್ಕಟ್ಟು' ಪ್ರಣತಿ ಪ್ರಕಾಶನ,
ತುಮಕೂರು 1998.
21. ಪುರುಷೋತ್ತಮ ಬಿಳಿಮಲೆ. 'ಹುಲಿಗೆಮ್ಮ' ಪ್ರಸಾರಾಂಗ, ಹಂಪಿ 1999.
22. ಪುರುಷೋತ್ತಮ ಬಿಳಿಮಲೆ. 'ಹಂಪಿ ಜಾನಪದ' ಪ್ರಸಾರಾಂಗ, ಕನರ್ಾಟಕ
ವಿಶ್ವವಿದ್ಯಾಲಯ, ಹಂಪಿ 1996.
23. ಕುವೆಂಪು. 'ವಿಚಾರ ಕ್ರಾಂತಿಗೆ ಆಹ್ವಾನ', ಉದಯರವಿ ಪ್ರಕಾಶನ, ಮೈಸೂರು 1976.
24. ಪುಟ್ಟಸ್ವಾಮಿ. 'ಜನಪದ ನಂಬಿಕೆ, ಸಂಪ್ರದಾಯ, ಆಶಯ', ಸಂವಹನ ಪ್ರಕಾಶನ
ಮೈಸೂರು.
25. ರಾಘವ ಮತ್ತು ವಸಂತಕುಮಾರಿ ಎಂ.ಸಿ. 'ಜನಪದ ನಂಬಿಕೆಗಳು', ಪ್ರಬುದ್ಧ
ಪ್ರಕಾಶನ-1972.
26. ರಹಮತ್ ತರೀಕೆರೆ. 'ಧರ್ಮ'. ಕ.ವಿ.ವಿ. ಹಂಪಿ ವಿಶ್ವಕೋಶ, 2000.
27. ಡಾ. ರಾಮಮನೋಹರ ಲೋಹಿಯಾ. 'ವ್ಹೀಲ್ ಆಫ್ ಹಿಸ್ಟರಿ', ಹೈದರಾಬಾದ್-1974.
28. ರೊಮೀಲಾ ಥಾಪರ್ (ಅನು:ಸೂರ್ಯನಾಥ ಕಾಮತ್). 'ಗತಕಾಲದ ಬಗ್ಗೆ
ಪೂವರ್ಾಗ್ರಹ' ನ್ಯಾಷನಲ್ ಬುಕ್ಟ್ರಸ್ಟ್ ಆಫ್ ಇಂಡಿಯಾ, ನವದೆಹಲಿ 1979.
29. ಎಸ್.ಜಿ. ಸರದೇಸಾಯಿ. 'ಭಾರತೀಯ ತತ್ವಜ್ಞಾನ- ವೈಚಾರಿಕ ಮತ್ತು ಸಾಮಾಜಿಕ
ಸಂಘರ್ಷ, ನವಕನರ್ಾಟಕ ಪಬ್ಲಿಕೇಷನ್ (ಬೆಂ) 1994.
30. ಡಾ. ಸಿದ್ಧಲಿಂಗಯ್ಯ. 'ಗ್ರಾಮದೇವತೆಗಳು', ಮೂಲಭಾರತಿ ಪ್ರಕಾಶನ, ಬೆಂಗಳೂರು
1997.
ತುಂಬ ಚೆನ್ನಾಗಿದೆ
ReplyDelete