ರಂಗದಲ್ಲಿ ತೆರೆದುಕೊಂಡ ಊರ್ಮಿಳೆಯ ಒಡಲಾಳ -ಸತೀಶ ಯಲ್ಲಾಪುರ
ಶಿರಸಿಯಲ್ಲಿ ಇತ್ತೀಚೆಗೆ(ದಿನಾಂಕ: 2 ಅಗಸ್ಟ 2014) ರಂದು ಚಿಂತನ ರಂಗ ಅಧ್ಯಯನ ಕೇಂದ್ರದವರಿಂದ ‘ಊರ್ಮಿಳೆಯ’ ಎಂಬ ಏಕವ್ಯಕ್ತಿ ರಂಗ ಪ್ರದರ್ಶನ ಏರ್ಪಟ್ಟಿತ್ತು. ರೋಟರಿ ಕ್ಲಬ್ ಶಿರಸಿ ಆಯೋಜಿಸಿದ್ದ ಈ ರಂಗ ಚಟುವಟಿಕೆಗೆ ಡಾ. ಶಿವರಾಮ .ಕೆ.ವಿ. ಅವರ ನಯನ ಸಭಾಂಗಣ ವೇದಿಕೆಯಾಗಿತ್ತು. ಡಾ. ಶ್ರೀಪಾದ ಭಟ್ ಈ ಹಿಂದೆ ನಿದರ್ೇಶಿಸಿದ್ದ ‘ಚೋರ ಚರಣದಾಸ’ ಹಾಗೂ ‘ಮುದುಕನ ಮದುವೆ'(ಕಂಪೆನಿ ನಾಟಕ) ಗಳ ಪ್ರದರ್ಶನದಿಂದ ಪುಳಕಿತರಾಗಿದ್ದ ಶಿರಸಿ ಜನತೆಯಿಂದ ಸಭಾಂಗಣ ತುಂಬಿ ಹೋಗಿತ್ತು. ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂತರ್ಿ ಅವರ ಊಮರ್ಿಳೆ ಇಲ್ಲಿ ಡಾ. ಶ್ರೀಪಾದ ಭಟ್ಟರ ನಿದರ್ೇಶನದಲ್ಲಿ ಹೊರಬಂದಿದ್ದಳು. ಊಮರ್ಿಳೆಯ ಪಾತ್ರ ನಿರ್ವಹಣೆ ಶ್ರೀಮತಿ ಶಾಂತಲಾ ಶಾಸ್ತ್ರಿ ಹಾಗೂ ಡಾ. ಶ್ರೀಪಾದ ಭಟ್ಟ ದಂಪತಿಗಳ ಮಗಳು ಶೀತಲಾ ಭಟ್ಟ ಅವರದ್ದಾಗಿತ್ತು.
ತುಂಬ ಸರಳ ವೇದಿಕೆ. ಹಿಂಗಡೆ ಇಳಿಬಿಟ್ಟ ತಿಳಿಗುಲಾಬಿ ಹಾಗೂ ಹಳದಿ ಬಣ್ಣದ ಪಾರದರ್ಶಕ ಪರದೆಯಿಂದ ದ್ವಾರದ ನಿಮರ್ಾಣ. ರಂಗದ ಎಡಗಡೆ ಕುಸುರಿ ಕೆತ್ತನೆಯ ಕಂಬದಾಕಾರ. ಪಕ್ಕದಲ್ಲೊಂದು ಸುಂದರ ಪೀಠ. ಮಧ್ಯದಲ್ಲಿ ಆಯತಾಕಾರದ ಉದ್ದಕ್ಕೆ ಮಲಗಿದ ಮೆಟ್ಟಿಲು. ಬಲಗಡೆ ಒಂದು ಇಳಿಜಾರಾದ ಪೀಠ. ಇವಿಷ್ಟೇ ರಂಗ ಪರಿಕರ. 14 ವರ್ಷ ವನವಾಸ ಮುಗಿಸಿ, ರಾವಣ ವಧೆ ಮಾಡಿ ಪುಷ್ಟಕ ವಿಮಾನದಲ್ಲಿ ತನ್ನ ಪರಿವಾರದೊಂದಿಗೆ ನಂದಿಗ್ರಾಮಕ್ಕೆ ಆಗಮಿಸುವ ಹೊತ್ತು ಸ್ವಾಗತಕ್ಕಾಗಿ ಸಾಕೇತದ ಅರಮನೆಗೆ ಅರಮನೆಯೇ ನಂದಿಗ್ರಾಮದಲ್ಲಿ ಸಕಲಸಿದ್ಧತೆಯೊಂದಿಗೆ ನಿಂತಿರುವಾಗ, 14 ವರ್ಷಗಳಿಂದ ನಂದಿಗ್ರಾಮದಲ್ಲೇ ನಿಂತ ಲಕ್ಷ್ಮಣನ ಹೆಂಡತಿ ಊಮರ್ಿಳೆ ಮಾತ್ರ ಅರಮನೆಯತ್ತ ಹೆಜ್ಜೆ ಹಾಕುತ್ತಿದ್ದಾಳೆ. ಪರದೆಯ ಹಿಂಗಡೆಯಿಂದ ಲವಲವಿಕೆಯಿಲ್ಲದ , ಭಾರವಾದ ಹೆಜ್ಜೆಯಿಡುತ್ತ ಆಕೆ ದ್ವಾರಕ್ಕೆ ಬರುತ್ತಾಳೆ. ಅರಮನೆಯಲ್ಲಿ ಯಾವ ಬದಲಾವಣೆಯೂ ಆಕೆಗೆ ಕಾಣುವುದಿಲ್ಲ. ಎಲ್ಲವೂ ಸುಸಂಬದ್ಧವಾಗಿರುವಂತೆಯೇ ಕಾಣಿಸುತ್ತಿದೆ. ಹಿಂದಿನ ನೆನಪಿಗೆ ಸರಿಯುತ್ತಾಳೆ. ನಾಳೆ ರಾಮನಿಗೆ ಯುವರಾಜ ಪಟ್ಟಾಭಿಷೇಕ ಎಂಬ ಸಂಗತಿ ಉಂಟುಮಾಡಿದ ಸಂಚಲನವನ್ನು ತನ್ನ ಸಹೋದರಿ ಶತ್ರುಘ್ನನ ಪತ್ನಿ ಶ್ರುತಕೀತರ್ಿಯೊಂದಿಗೆ ಹಂಚಿಕೊಳ್ಳುತ್ತಾಳೆ. ಮುಗ್ಧೆ ಶ್ರುತಕೀತರ್ಿ ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರಕೊಡುತ್ತ ಹೋಗುತ್ತಾಳೆ. ಕೈಕಾದೇವಿಗೆ ರಾಮನಿಗೆ ಪಟ್ಟಾಭಿಷೇಕದ ಸುದ್ದಿ ಅಸಮಾಧಾನ ತಂದಿದೆ ಹಾಗಾಗಿ ಆಕೆ ಕೋಪಗ್ರಹ ಸೇರಿದ್ದಾಳೆ ಎಂಬ ವಿಚಾರ ಹೇಳುವ ಮೊದಲು ಎಚ್ಚೆಸ್ವಿಯವರ ಸಾಹಿತ್ಯದ ಶಕ್ತಿ ಬಹಳ ಪ್ರಖರವಾಗಿ. ವ್ಯಂಗ್ಯವಾಗಿ ಮೂಡಿಬಂದಿದೆ. ಸುಖ ದು:ಖ ಕೋಪ ತಾಪ ಯಾವುದನ್ನೂ ಅರಮನೇಲಿ ಹತ್ತು ಜನಕ್ಕೆ ಕಾಣೋ ಹಾಗೆ ತೋರಿಸೋ ಹಾಗಿಲ್ಲ. ದು:ಖ ಆದ್ರೆ ಶೋಕ ಮಂದಿರಕ್ಕೆ ಹೋಗಿ ಅಳ್ತಾ ಕೂಡಬೇಕು. ಸಂತೋಷ ಆದ್ರೆ ಹಷರ್ಾಲಯಕ್ಕೆ ಹೋಗಿ ಬಾಗಿಲು ಮುಚ್ಚಿಕೊಂಡು ಕುಣಿದು ಕುಪ್ಪಳಿಸಬೇಕು. ಕೋಪ ಬಂದ್ರೆ ಕೋಪಗ್ರಹ! ಅಲ್ಲಿ ಹೋಗಿ ದುಮುದುಮು ದುಮು ಅಂತ ಮುಖ ಊದಿಸಿಕೊಂಡು ಕೂತ್ಕೋಬೇಕು.. ವೇದಿಕೆಯ ಮೇಲೆ ಬಂದ್ವಿ ಅಂತಂದ್ರೆ ನಾವೆಲ್ಲಾ ನಿಭರ್ಾವದ ಸಾಲಭಂಜಿಕೆಗಳು ಎಂದು ಅಣಕವಾಡುವ ರೀತಿ ರಂಗದಲ್ಲಿ ಉತ್ತಮವಾಗಿ ಮೂಡಿಬಂದಿದೆ. ದಶರಥ-ಕೈಕೇಯಿಯರ ಸಂಭಾಷಣೆ ನಡೆಯುವಾಗ ಒಮ್ಮೆ ದಶರಥನಾಗಿ ಕೈಕೆಯ ಮನವೊಳಿಸುವ ವ್ಯರ್ಥಪ್ರಯತ್ನ ಮಾಡುವುದು-ಕೈಕೆ ಉರಿದೇಳುವುದು, ವರವನ್ನು ಪಡೆದೇ ತೀರುವುದು ಇವೆಲ್ಲ ತುಂಬ ಮನೋಜ್ಞವಾಗಿ ಬಂದಿತು. ಒಂದಲ್ಲ.. ಎರಡಲ್ಲ.. ಮೂರಲ್ಲ..ಹದಿನಾಲ್ಕು ವರ್ಷ. ಹದಿನಾಲ್ಕುವರ್ಷಆ ಅಂತಲೇ ಯಾಕೆ ಹೆೇಳಿದಳೋ ಕೈಕೇಯಿದೇವಿ? ಯಾರಿಗೆ ಗೊತ್ತು ಬಾಲ್ಯದಲ್ಲಿ ಅವಳು ಕಲಿತದ್ದೇ ಅಷ್ಟಿರಬಹುದು..! ಎಂಬ ಮಾತನ್ನಂತೂ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಮುಂದುವರಿದು ಇದೆಲ್ಲ ಕೈಕೇಯಿಯ ಹುಲಿಮನೆ ಆಟ ಎಂಬುದಾಗಿ ಬಣರ್ಿಸುತ್ತಾಳೆ. ಊಮರ್ಿಳೆಯೂ ಕೂಡ ಈ ಆಟದಲ್ಲಿ ಬಂಧಿ ಎಂಬುದರ ಚಿತ್ರಣ ಕಣ್ಣಿಗೆ ಕಟ್ಟುವಂತಿತ್ತು.
ಮುಂದಿನ ಭಾಗದಲ್ಲಿ ವನವಾಸ ಗಮನಿಯಾದ ರಾಮನೊಂದಿಗೆ ಲಕ್ಷ್ಮಣನೂ ಹೊರಟು ನಿಂತಿದ್ದಾನೆ. ಹೋಗಲೇಬೇಕಾ? ಎಂದು ಊಮರ್ಿಳೆ ಪ್ರಶ್ನಿಸಿದ್ದಕ್ಕೆ ಪಿತ್ರವಾಕ್ಯಪರಿಪಾಲನೆ, ಅಣ್ಣ ಅತ್ತಿಗೆಯರ ರಕ್ಷಣೆ ನನ್ನ ಹೊಣೆ ಎನ್ನುತ್ತಾನೆ. ಅದಕ್ಕೆ ಊಮರ್ಿಳೆ ಅಣ್ಣನ ಸೇವೆ ತಮ್ಮನ ಧರ್ಮ ನಿಜ. ಆದರೆ ಆ ತಮ್ಮ ಬರಿ ತಮ್ಮ ಮಾತ್ರವಲ್ಲ, ಒಬ್ಬ ತಂದೆಯ ಮಗ, ಹಾಗೇ ಒಬ್ಬ ಹೆಂಡತಿಯ ಗಂಡನೆಂದು ನೆನಪಿಸುತ್ತಾಳೆ. ಭ್ರಾತೃಧರ್ಮದ ಹಾಗೇ ಪುತ್ರ ಧರ್ಮವನ್ನೂ ಇಲ್ಲಿದ್ದು ನಡೆಸಿ ಎಂದು ಕೇಳಿಕೊಂಡಾಗ ನನ್ನ ಸ್ಥಾನದಲ್ಲಿ ನಿಂತು ನೀನು ಅದನ್ನು ನಡೆಸಬೇಕು ಎಂದು ಆದೇಶಿಸುತ್ತಾನೆ. ಆಕೆ ಲಕ್ಷ್ಮಣನ ಕಣ್ಣಲ್ಲಿ ಕಣ್ಣಿಟ್ಟುೆ ‘ಚಕ್ರವಾಕ ಜೋಡಿಯಂತೆ ಸರೋವರದಲಿ, ಒಟ್ಟಿಗೇ ಇದ್ದು ನಾವು ತೇಲೋಣಾ, ಹಾಗೆ ತೇಲಿ ದೇವ ಗಂಧರ್ವ ವಿತ್ತವನ್ನು ನೆಲದಲ್ಲೇ ಸೂರೇಗೊಳ್ಳೋಣ’ ಎಂದು ಮದುವೆಯ ಸಂದರ್ಭದ ವಚನವನ್ನು ನೆನಪಿಸುತ್ತಾಳೆ. ಲಕ್ಷ್ಮಣ ಅದನ್ನೆಲ್ಲ ನೆನಪಿಸಿ ನನ್ನನ್ನು ತಡೆಯಬೇಡ ಎಂದು ಹೇಳಿ ಪತಿ ಮನೆಯಲ್ಲಿ ಇಲ್ಲದಾಗ ಗೃಹ ರಕ್ಷಣೆ, ಅತಿಥಿ ಸೇವೆ, ಸಂತಾನ ರಕ್ಷಣೆ ಇವೆಲ್ಲ ಗೃಹಿಣಿಯ ಧರ್ಮವೆಂದು ಉಪದೇಶಿಸುತ್ತಾನೆ. ನೀನು ಇಲ್ಲೇ ಇದ್ದು ರಾಮನಿಲ್ಲದಿರುವಾಗ ರಾಜ್ಯವ್ಯವಸ್ಥೆ ವಿಮುಖವಾಗದಂತೆ ನೋಡಿಕೋ ಎಂದು ರಾಜಕಾರಣ ಬೋಧಿಸುತ್ತಾನೆ. ನೀನೊಂದು ಕಣ್ಣೊತ್ತು, ನೀನೊಂದು ಅಂತ:ಸಾಕ್ಷಿ , ನೀನೊಂದು ಎಚ್ಚರದ ಗುರುತು, ಅರ್ಥ ಮಾಡಿಕೋ ಊಮರ್ಿಳಾ.. ಧರ್ಮಕ್ಕಿಂತ ಲೋಕಧರ್ಮ ಜಟಿಲ, ಲೋಕಧರ್ಮಕ್ಕಿಂತ ರಾಜತಂತ್ರ ಜಟಿಲ ಆರ್ಥಮಾಡಿಕೋ ಎನ್ನುತ್ತಾನೆ. ಮುಂದೆ ಸಾಗಿ ಆರ್ಯರ ಹೆಗಲಿನ ಮೇಲೆ ಜಗತ್ತಿನ ಭಾರವೇ ಕೂತಿದೆ ಎನ್ನುತ್ತಾನೆ. ದಕ್ಷಿಣದಲ್ಲಿ ಹೆಚ್ಚಾಗಿರುವ ದಸ್ಯುಗಳ ಭಾರವನ್ನು ಇಳುಹುವುದಕ್ಕಾಗಿ ನಾವು ಹೋಗಬೇಕಿದೆ. ದಸ್ಯುಗಳ ಉದ್ದಾರ ಬಿಳಿಯರ ಭಾರ! ಎನ್ನುತ್ತಾನೆ. ಊಮರ್ಿಳೆ ಹೇಳಿಕೊಳ್ಳುತ್ತಾಳೆ , ಹದಿನಾಲ್ಕು ವರ್ಷ ಕಾಡುಮೇಡು ಅಲೆದು ದಸ್ಯುಗಳನ್ನು ಉದ್ದಾರ ಮಾಡಿ ಕೃತಕೃತ್ಯರಾಗಿ ಈವತ್ತು ಹಿಂದಿರುಗಿ ಬರತಾ ಇದಾರೆ ಎಂದು. ಶೀತಲಾ ಭಟ್ ಅವರ ಊಮರ್ಿಳೆ ವಂ್ಯಗ್ಯವಾಗಿ ಆಡುವ ಈ ಮಾತು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ. ಸದಾ ಸಮಾಜದಲ್ಲಿ ಆಳುವ ಹಾಗೂ ಆಳಿಸಿಕೊಳ್ಳುವ ವರ್ಗಗಳ ಹೊಯ್ದಾಟದ ಚಿತ್ರ ಹಿಂದಿನಿಂದಲೂ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಲಂಕಾದಹನದ ವಿಚಾರವಾಗಿಯೂ ಬಹಳ ಚಚರ್ೆ ನಡೆಯುತ್ತದೆ. ಅಗ್ನಿದೇವನ ಪಕ್ಷಪಾತ ಧೋರಣೆ ಬಗ್ಗೆ ವಿಚಾರವಿದೆ. ಆತ ಹನುಮನ ಬಾಲ ಸುಡುವುದೇ ಇಲ್ಲ. ಬದಲಿಗೆ ಇಡೀ ಲಂಕೆಯನ್ನೇ ಸುಟ್ಟುಬಿಡುತ್ತದೆ. ಅದರಲ್ಲಿ ನಿಷ್ಫಾಪಿ ಮಕ್ಕಳು ಮುದುಕಿಯರೂ, ಹೆಂಗಳೆಯರೂ ಎಲ್ಲ ಬೆಂದು ಹೋದರಲ್ಲ. ಇವೆಲ್ಲ ದಸ್ಯುಗಳ ಉದ್ಧಾರದ ಭಾಗವೆಂದೇ ಊಮರ್ಿಳೆ ಕಟಕಿಯಾಡುತ್ತಾಳೆ. ಯುದ್ಧ ವಿರೋಧಿ ಸಂದೇಶ ಈ ಮುಖೇನ ಎಚ್ಚೆಸ್ವಿಯವರು ನೀಡಿದ್ದಾರೆ. ಚಂದ್ರನಖಿ (ಶೂರ್ಪನಖಿ)ಯ ನೆನಪಾಗಿ ಆಕೆ ಬಂದು ನಿನ್ನ ಗಂಡ ಮದುವೆಯಾಗುವುದಿಲ್ಲ ಎಂದಿದ್ದರೆ ಸಾಕಿತ್ತು ಅದರ ಬದಲಿ ಮೂಗು, ಮೊಲೆಗಳನ್ನು ಕೊಯ್ದಿದ್ದಾನೆ. ನನಗೆ ನ್ಯಾಯ ಕೊಡಿಸು ಅಂತ ನನ್ನಲ್ಲಿ ಕೇಳಿದರೆ ನಾನೇನು ಹೇಳಬಲ್ಲೆ ಎಂದು ಹತಾಶೆ ವ್ಯಕ್ತಪಡಿಸುವ ದೃಶ್ಯ ಮನೋಜ್ಞವಾಗಿತ್ತು. ಅಂತೂ ಲಂಕೆಯಿಂದ ಹಿಂದಿರುಗಿ ಪುಷ್ಟಕವಿಮಾನದಲ್ಲಿ ನಂದಿಗ್ರಾಮಕ್ಕೆ ಬಂದ ಲಕ್ಷ್ಮಣ ಊಮರ್ಿಳೆಯನ್ನು ಕಾಣದೇ ಅರಮನೆಗೆ ಬರುತ್ತಾನೆ. ಅಂತ:ಪುರದೊಳಗೆ ಬಂದು ಊಮರ್ಿಳೆಯನ್ನು ನೇರವಾಗಿ ನೋಡಲಾರದೇ ಮಾತನಾಡಿಸುತ್ತಾನೆ. ಯಾಕೆ ಬರಲಿಲ್ಲ ಎಂದು ಕೇಳುತ್ತಾನೆ. ನೀನು ಬಾರದಿರುವುದನ್ನು ಕಂಡು ಅಣ್ಣ, ಅತ್ತಿಗೆ, ಜನ ಎಲ್ಲ ಏನೆಂದುಕೊಂಡಾರು ಎಂದು ಪ್ರಶ್ನಿಸುತ್ತಾನೆ. ಊಮರ್ಿಳೆ ಅಂದುಕೊಳ್ಳುತ್ತಾಳೆ ಯಾರಿಗೆ ಏನುಅನ್ನಿಸುತ್ತೆ ಎನ್ನುವುದು ಮುಖ್ಯವಲ್ಲ, ನನಗೆ ಏನು ಅನ್ನಿಸುತ್ತದೆ ಎನ್ನುವುದು ನನಗೆ ಮುಖ್ಯ ನೀವೇ ಹೇಳಿದ್ದಿರಿ, ನಾನು ಬರುವತನಕ ಮನೆಕಡಟೆ ನೋಡಿಕೋ.. ಗೃಹಿಣಿಯ ಕರ್ತವ್ಯ ಗೃಹ ರಕ್ಷಣೆ, ಅತಿಥಿ ರಕ್ಷಣೆ, ಸಂತಾನ ರಕ್ಷಣೆ . ನೋಡಿ ಮಾವು, ನೇರಿಲೆ, ಸುರಹೊನ್ನೆ, ಲೋಧ್ರ, ಪ್ರಿಯಾಲ, ಚಿರಬಿಲ್ವ, ಪನಸು ತಮಾಲ ಕಾಶ್ಮರಿ ಹೀಗೆ ಗಿಡಗಳ ಪಟ್ಟಿ ಮಾಡುತ್ತಾಳೆ. ಶೀತಲಾ ಭಟ್ ಈ ಧೃಶ್ಯವನ್ನು ಹೃದಯಕ್ಕೆ ತಟ್ಟುವಂತೆ ಅಭಿನಯಿಸಿದ್ದಾರೆ. ಆಕೆ ಒಂದೊಂದೇ ಗಿಡವನ್ನು ತೋರಿಸುತ್ತಾ ಅವುಗಳ ಹೆಸರನ್ನು ಹೇಳಿ ಮಾತೃವಾತ್ಸಲ್ಯದಿಂದ ಅವನ್ನು ಮಗುವಿನಂತೆ ನೋಡಿಕೊಂಡು ಬೆಳೆಸಿದ್ದೇನೆ, ಸಂತಾನ ರಕ್ಷಣೆ ಮಾಡಿದ್ದೇನೆ ಎನ್ನುವಾಗ ನೋಟಕರ ಕಣ್ಣಾಲಿಗಳೂ ಆದರ್ೃಗೊಳ್ಳುತ್ತವೆ. ಕೊನೆಯಲ್ಲಿ ಗಂಡಿನ ಹಂಗೇ ಇಲ್ಲದೇ ಹೆಣ್ಣು ಗೃಹಸ್ಥ ಜೀವನ ನಡೆಸಬಹುದು..ಸಾರ್ಥಕ ಜೀವನ ನಡೆಸಬಹುದು ಎನ್ನುತ್ತಾಳೆ. ಸ್ತ್ರೀಯ ಅಸ್ಮಿತೆಯನ್ನು ಸಾರುವ ಸಾಲುಗಳು ರಂಗದಲ್ಲಿಯೂ ತುಂಬ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಊರಿಗೆ ಉಪಕಾರಿ, ಹೆಂಡತಿಗೆ ಅಪಾಯಕಾರಿ ಮನೋಭಾವದ ಗಂಡಸರಿಗೆಲ್ಲ ಒಂದು ನೀತಿಪಾಠದಂತಿತ್ತು. ಎಚ್. ಎಸ್. ವೆಂಕಟೇಶಮೂತರ್ಿಯವರ ಈ ಬರಹಕ್ಕೆ ಶೀತಲಾ ಭಟ್ಟರ ಅಭಿನಯ – ಮಾತು ಅಷ್ಟೊಂದು ಪರಿಣಾಮಕಾರಿಯಾಗಿದೆ. ಇನ್ನೊಂದೆರಡು ಪ್ರಯೋಗವಾದರಂತೂ ಶೀತಲಾ ಭಟ್ ಯಶಸ್ವೀ ಏಕವ್ಯಕ್ತಿ ರಂಗಕಲಾವಿದೆಯಾಗಿ ಹೊರಹೊಮ್ಮುವ ಭರವಸೆ ಮೂಡಿಸುತ್ತಾರೆ. ಪ್ರಸಾಧನ, ಬೆಳಕು, ಸಂಗೀತ ಎಲ್ಲವೂ ಹಿತವಾಗಿದ್ದುದು ಪ್ರಯೋಗಕ್ಕೆ ಪ್ಲಸ್ಪಾಯಿಂಟಾಗಿತ್ತು.
-ಸತೀಶ್ ಯಲ್ಲಾಪುರ
, ಅಂಚೆ: ಬಿಸಗೋಡ, ತಾ|| ಯಲ್ಲಾಫುರ (ಉ.ಕ.)ಜಟಚಿಟ: ಚಿಣ.ಥಿಜಟಟಚಿಠಿಣಡಿ@ರಟಚಿಟ.ಛಿಠಟ
, ಅಂಚೆ: ಬಿಸಗೋಡ, ತಾ|| ಯಲ್ಲಾಫುರ (ಉ.ಕ.)ಜಟಚಿಟ: ಚಿಣ.ಥಿಜಟಟಚಿಠಿಣಡಿ@ರಟಚಿಟ.ಛಿಠಟ
No comments:
Post a Comment