Tuesday, 20 April 2021

‘ನಾವು ಪರಸ್ಪರರನ್ನು ಬೆಂಬಲಿಸಿ ಮಾತನಾಡಲಿದು ಸಕಾಲ’ ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

  ‘ನಾವು ಪರಸ್ಪರರನ್ನು ಬೆಂಬಲಿಸಿ ಮಾತನಾಡಲಿದು ಸಕಾಲ’

ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ

“ನಾವು ಶೋಷಕನಾದ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಮುಖಾಬಿಲೆಯಾಗುತ್ತಿದ್ದೇವೆ. ಈ ಎಲ್ಲಾ ಕಾರ್ಯಕರ್ತರು ಮತ್ತು ಮೇಧಾವಿಗಳನ್ನು ಅವರು ಬಡವರ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬ ಏಕೈಕ ಕಾರಣಕ್ಕಾಗಿ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ.” 

ಬಹದ್ದೂರ್ ಗರ್, (ಹರಿಯಾಣ) ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರವು ಮುಂದಿಟ್ಟ ವಿಸ್ತೃತ ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ ಒಂದು ದಿನದ ನಂತರ ೩೨ ರೈತ  ಸಂಘಟನೆಗಳಲ್ಲೇ ದೊಡ್ಡ ಗುಂಪಾಗಿರುವ ಭಾರತೀಯ ಕಿಸಾನ್ ಯೂನಿಯನ್ (ಏಕತಾ ಉಗ್ರಹನ್) ಜೈಲಿನಲ್ಲಿರುವ ಹಲವಾರು ಪ್ರಜಾಪ್ರಭುತ್ವ ಹಕ್ಕುಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ‘ಮಾನವ ಹಕ್ಕುಗಳ ದಿನ’ವನ್ನು ಆಚರಿಸಿದರು.

ಇನ್ನೂ ವಿಶಾಲವ್ಯಾಪ್ತಿಯ ಕಾರ್ಯಸೂಚಿಯನ್ನು ಸಮರ್ಥಿಸುವ ಮೂಲಕ ಬಿ ಕೆ ಯು(ಉಗ್ರಹನ್) ಕೇಂದ್ರದ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸುವ ಸೂಚನೆ ನೀಡಿತು. ದೆಹಲಿಯ ಟಿಕ್ರಿ ಗಡಿಯ ಬಳಿ ಬೀಡು ಬಿಟ್ಟಿರುವ ಅದು ಇತರ ಪ್ರಜಾಪ್ರಭುತ್ವವಾದಿ ಹಾಗೂ ಮಾನವ ಹಕ್ಕುಗಳ ಚಳುವಳಿಗಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ “ಸರ್ವಾಧಿಕಾರಿ” ಕೇಂದ್ರ ಸರ್ಕಾರದ ಮೇಲಿನ ಪೂರ್ಣಪ್ರಮಾಣದ ದಾಳಿಯಲ್ಲಿ ರೈತ ಮುಖಂಡರು ದೇಶದ ವಿವಿಧ ಪ್ರಜಾಪ್ರಭುತ್ವ ಚಳುವಳಿಗಳೊಂದಿಗೆ ನಿಲ್ಲುವ ಸಮಯ ಈಗ ಸನ್ನಿಹಿತವಾಗಿದೆ ಎಂದು ಪ್ರತಿಪಾದಿಸಿದರು. ಏಕೆಂದರೆ ತಮ್ಮ ವಿಸ್ತೃತ ಹೋರಾಟವು ಕೇವಲ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಮಾತ್ರವಾಗಿರದೆ ಭಾರತೀಯ ಕೃಷಿಯ ‘ಕಾರ್ಪೊಟೈಜೇಷನ್’ ಗೊಳಿಸುವುದುರ ವಿರುದ್ಧವಾಗಿದೆ ಎಂದೂ ಅವರು ಪ್ರತಿಪಾದಿಸಿದರು.

“ನಾವು ಶೋಷಕ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಎದುರಿಸುತ್ತಿದ್ದೇವೆ. ಈ ಎಲ್ಲ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮ ಸ್ವಂತ ಸುರಕ್ಷಿತತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಬಡವರ ದುಃಸ್ಥಿತಿಯನ್ನು ಎತ್ತಿ ತೋರಿಸಿದರು ಎಂಬುದಕ್ಕಾಗಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಈಗ ಅವರಿಗೆ ಬೆಂಬಲವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಕೃಷಿ ಕಾನೂನುಗಳಿಗೆ ನಮ್ಮ ಪ್ರತಿರೋಧದ ಜೊತೆಗೆ ಈ ಎಲ್ಲ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ” ಎಂದು ಬಿಕೆಯು ಏಕತಾ (ಉಗ್ರಹನ್) ಅಧ್ಯಕ್ಷ ಜೋಗಿಂದರ್ ಉಗ್ರಹನ್ ‘ದಿ ವೈರ್’ ಗೆ ತಿಳಿಸಿದರು.

“ಗೌತಮ್ ನವಲಖಾ ಅಥವಾ ಸುಧಾ ಭಾರದ್ವಾಜ್ ಅವರಂತಹ ಜನರು ಏನು ಮಾಡಿದರು? ದೂರದ ಪ್ರದೇಶಗಳಲ್ಲಿ ಬಡವರು ಹೀಗೆ ತೀವ್ರ ಒತ್ತಡದಲ್ಲಿದ್ದಾರೆ, ಹೇಗೆ ಬದುಕುತ್ತಿದ್ದಾರೆ, ಮತ್ತು ಸರ್ಕಾರಗಳು ಅವರನ್ನು ಹೇಗೆ ಅನ್ಯಾಯವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು ಅವರು ತೋರಿಸಿದರು. ಕಾಶ್ಮೀರದ ಜನರು ಹೇಗೆ ಭದ್ರತಾಪಡೆಗಳ ಭಯಭೀತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ತೋರಿಸಿದ ಇತರರೂ ಇದ್ದಾರೆ. ಮೋದಿ ಸರ್ಕಾರ ಅವರೆಲ್ಲರನ್ನೂ ಮೌನಗೊಳಿಸುವುದಕ್ಕಾಗಿ ಮಾತ್ರ ಜೈಲಿಗೆ ಹಾಕಿದೆ ಎಂದು ನಾವು ನಂಬುತ್ತೇವೆ. ಈಗ ನಾಗರಿಕರ ಪರವಾಗಿ ಮಾತನಾಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.

ರೈತರ ಆಂದೋಲನವನ್ನು ದೇಶದ ವಿರಾಟ್ ರಾಜಕೀಯ ಬೆಳವಣಿಗೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ.

ಕಳೆದ ಕೆಲವು ವರ್ಷಗಳಿಂದ ಹೆಚ್ಚಿನÀ ಪ್ರತಿಭಟನೆಗಳು- ಅದು ಶಾಹಿನ್ ಬಾಗ್‌ನಲ್ಲಿರಲಿ (ಸಿ.ಎ.ಎ-ಎನ್.ಆರ್.ಸಿ ವಿರುದ್ಧವಾಗಿರಲಿ) ಅಥವಾ ೩೭೦ನೇ ಪರಿಚ್ಛೇದವನ್ನು ತೆಗೆದು ಹಾಕುವುದರ ವಿರುದ್ಧವಾಗಿರಲಿ- ಈ ಕ್ರಮಗಳಿಂದಾಗಿ ಯಾರ ಮೇಲೆ ಪರಿಣಾಮವಾಗುತ್ತದೋ ಅವರನ್ನು ಸಂಪರ್ಕಿಸಲು ಸರ್ಕಾರ ತಲೆಕೆಡಿಸಿಕೊಳ್ಳದಿದ್ದ ಕಾರಣದಿಂದ ನಡೆಯುತ್ತಿವೆ. ಕೃಷಿ ಕಾನೂನುಗಳಲ್ಲೂ ಅದೇ ಸಂಭವಿಸಿದೆ. ೫೦೦೦ ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವ ಕೆಲವರನ್ನು ಮತ್ತು ಕಾರ್ಪೊರೇಟ್‌ಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಕೃಷಿ ಕಾನೂನುಗಳು ಶೇ. ೮೫ ರಷ್ಟಿರುವ ಅತಿ ಚಿಕ್ಕ ಹಿಡುವಳಿದಾರರಾದ ಭಾರತೀಯ ರೈತರ ವಿರುದ್ಧವಾಗಿದೆ. ಈಗ ಸರ್ಕಾರವು ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ತನ್ನ ಪಾಪಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ.

  “ಈ ಸರ್ಕಾರವನ್ನು ಬೆತ್ತಲೆಗೊಳಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಚಳುವಳಿಗಳು ಒಟ್ಟಾಗಲು ಈಗ ಸಕಾಲ. ಅವರ ಉದ್ದೇಶಗಳು ಸರಿಯಾಗಿಲ್ಲ, ನಾವಂತೂ ಸತ್ಯವನ್ನೇ ಹೇಳಿದ್ದೇವೆ.” ಸಿ.ಎ.ಎ ಅಥವಾ ೩೭೦ ಪರಿಚ್ಛೇದ ಅಥವಾ ಬುದ್ಧಿಜೀವಿಗಳ ಸೆರೆವಾಸ ಮುಂತಾದ ವಿಷಯಗಳ ಬಗ್ಗೆ ಮಾತನಾಡುವುದು ಕೃಷಿ ಕಾನೂನುಗಳ ಪ್ರಾಥಮಿಕ ಸಮಸ್ಯೆಯ ಪ್ರಶ್ನೆಯನ್ನು ದುರ್ಬಲಗೊಳಿಸಬಹುದು ಎಂಬ ಭಯವಿದ್ದರೂ “ಬಿಜೆಪಿಯು ಭಾರತೀಯ ಮತದಾರರನ್ನು ದೃವೀಕರಿಸಲು ಈ ಸಮಸ್ಯೆಗಳನ್ನು ಯಶಸ್ವಿಯಾಗಿ ಬಳಸಿದೆ. ರೈತ ಚಳುವಳಿಯನ್ನೂ ಹೀಗೆ ಮಾಡಲು ಬಳಸಬಹುದು. ಆದರೂ ನಾವು ಅಂಜುವುದಿಲ್ಲ. ಈ ಸರ್ಕಾರ ಹೇಗೆ ಬಡವರನ್ನು ದಮನಿಸುತ್ತಿದೆ ಎಂಬುದು ತಿಳಿದಿದೆ. ಇಂದು ನಾವು ರೈತರು ಅದರ ಏಕಪಕ್ಷೀಯ ಕಾರ್ಪೊರೇಟ್ ಪರ ವಿಧಾನದ ಬೆಂಕಿಯ ತೀವ್ರತೆಯನ್ನು ಅನುಭವಿಸುತ್ತಿದ್ದೇವೆ. ನಾಳೆ ಈ ನೋವನ್ನು ಬೇರೊಬ್ಬರು ಅನುಭವಿಸುತ್ತಾರೆ. ಹೀಗಾಗಿ ನಾವು ಒಬ್ಬರಿಗೊಬ್ಬರು ಬೆಂಬಲವಾಗುವ, ಮಾತನಾಡುವ ಸಮಯ ಇದು.” ನಮ್ಮ ಆಂದೋಲನವು ಕೃಷಿ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ನಾವು ಸ್ಪಷ್ಟಪಡಿಸಿದಾಗಲೂ ಸರ್ಕಾರ ಮತ್ತು ಪೀತ ಮಾಧ್ಯಮಗಳು ನಮ್ಮನ್ನು ಖಲಿಸ್ತಾನಿಗಳೆಂದು ಚಿತ್ರಿಸಿದವು. ಈಗ ಅವರು ನಮ್ಮನ್ನು ಅರ್ಬನ್ ನಕ್ಸಲ್ಸ್  ಎಂದು ಕರೆಯಬಹುದು. ಆದರೆ ಇವೆಲ್ಲವೂ ಸರಳ ಪ್ರಚಾರ ಎಂದು ರೈತರಿಗೆ ಬಡವರಿಗೆ ತಿಳಿದಿದೆ. ಆದ್ದರಿಂದ ನಾವು ಹೆದರುವುದಿಲ್ಲ.

ಕೃಷಿ ಕಾನೂನುಗಳು ಕೃಷಿಯನ್ನು ಕಾರ್ಪೊರೇಟ್ ಸ್ನೇಹಿಯಾಗಿಸುವ ಸರ್ಕಾರದ ವಿರಾಟ್ ಯೋಜನೆಯ ಪರಿಣಾಮವಾಗಿದೆ. ಈ ಆರ್ಥಿಕ ನೀತಿಯನ್ನು ಮೊದಲು ಅನುಸರಿಸಿದ್ದು ಕಾಂಗ್ರೆಸ್ ಉದಾರೀಕರಣ. ಬಿಜೆಪಿ ಈಗ ಅದನ್ನು ತೀವ್ರಗೊಳಿಸಿದೆ. ನಮ್ಮ ಚಳುವಳಿ ರಾಜಕೀಯವಲ್ಲ ಎಂದು ನಾವು ಹೇಳಿದಾಗ ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬAಧ ಹೊಂದಿಲ್ಲ ಎಂದು ಮಾತ್ರ. ಆದರೆ ನಾವು ಕೃಷಿಯ ಕಾರ್ಪೊರೇಟೀಕರಣವನ್ನು ವಿರೋಧಿಸುತ್ತೇವೆ ಎಂಬ ಅರ್ಥದಲ್ಲಿ ನಾವು ಖಂಡಿತವಾಗಿಯೂ “ರಾಜಕೀಯ” ಆಗಿದ್ದೇವೆ.

ಇದು ನಮ್ಮ ಭೂಮಿಯ ಪ್ರಶ್ನೆಯಾಗಿದೆ. ಕೃಷಿ ಕಾನೂನುಗಳು ಹೋಗಬೇಕೆಂದು ನಾವು ಬಯಸುತ್ತೇವೆ. ಅದೇ ಸಮಯದಲ್ಲಿ ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಹೆಚ್ಚಿನ ವ್ಯಾಪ್ತಿಯನ್ನು ಹೊಂದಬೇಕು ಎಂದೂ ನಾವು ಬಯಸುತ್ತೇವೆ. ಆ ನಿಟ್ಟಿನಲ್ಲಿ ನಾವು ಬಡವರಿಗೆ ನೋವುಂಟುಮಾಡುವ ಇಂತಹ ನೀತಿಗಳನ್ನು ವಿರೋಧಿಸುವ ಎಲ್ಲಾ ಪ್ರಜಾಪ್ರಭುತ್ವವಾದಿ ಗುಂಪುಗಳಿಗೆ ಬೆಂಬಲ ನೀಡುತ್ತೇವೆ ಮತ್ತು ಅವುಗಳ ಬೆಂಬಲವನ್ನು ಪಡೆಯುತ್ತೇವೆ. 

ಸರ್ಕಾರವು ಭೂಮಿಯ ಮೇಲಿನ ಎಲ್ಲಾ ಕಾನೂನುಗಳನ್ನೂ ಬಡವರ ವಿರುದ್ಧ ಬಳಸುತ್ತಿದೆ ಎಂಬುದು ನಮಗೆ ಮನದಟ್ಟಾಗಿದೆ. ಯಾವುದೇ ಭಯವಿಲ್ಲದೇ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಶ್ರೀಮಂತರ ವಿರುದ್ಧ ಅದೇ ಕಾನೂನುಗಳನ್ನು ಬಳಸುವುದಿಲ್ಲ. ತನ್ನನ್ನು ವಿಮರ್ಶಿಸುತ್ತಿರುವ ಜನರ ಬಾಯಿ ಮುಚ್ಚಿಸಲು “ಪಿತೂರಿ” ಆರೋಪ ಮಾಡುತ್ತಿರುವ ಈ ಸರ್ಕಾರವೇ ಪಿತೂರಿ ಮಾಡುತ್ತಿದೆ. ಜನಪರ ಬರಹಗಾರರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ದಮನಕಾರಿ ವಿಧಾನದಿಂದ ಮೌನವಾಗಿಸಲಾಗಿದೆ. ಅವರ ಪ್ರತಿಭಟನೆಗಳು ನಮ್ಮ ಪ್ರತಿಭಟನೆಯಂತೆಯೇ ಶಾಂತಿಯುತವಾಗಿತ್ತು ಆದರೂ ಅವರನ್ನು ಜೈಲಿಗಟ್ಟಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. “ಇಂದಿನ ರೈತರ ಹೋರಾಟ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನೂ ಬಲಪಡಿಸುತ್ತಿದೆ” ಎಂದರೂ ಜೋಗಿಂದರ್ ಉಗ್ರಹನ್ ಹೇಳಿದರು. 

                                               (ದಿ ವೈರ್ ಪತ್ರಿಕೆಯ ವರದಿ)

a

No comments:

Post a Comment