Wednesday 9 July 2014

2. ನಾವು ಮಾತಾಡತೊಡಗಿದರೆ -R V Bhandari

2. ನಾವು ಮಾತಾಡತೊಡಗಿದರೆ


ನಾವು ಮಾತಾಡತೊಡಗಿದರೆ
ಮ್ಯಾಗ್ನಾಟಿಕ್
ಸಿಡಿಯುವ ಹಾಗೆ ಆಸ್ಪೋಟಿಸುತ್ತದೆ ವರ್ತಮಾನ.
ಕಟ್ಟಿರುವೆಗಳ ಮಧ್ಯ ಸಿಕ್ಕ
ನಂಜುಳ್ಳೆಯ ಹಾಗೆ
ಮಿಡುಕಾಡುತ್ತಾನೆ ಬೇಟೆಗಾರ

ಯಾಕೆಂದರೆ:
ದೀರ್ಘಕಾಲೀನ ಸಂಭಾವಿತ ಸಂಸ್ಕೃತಿಯ
ಯಜ್ಞ ಸತ್ರದ ಪೂಣರ್ಾಹುತಿಗೆ
ಬಲಿಪಶುಗಳಾದವರು ನಾವು

ಯಾಕೆಂದರೆ:
ಬಂಡುವಾಳಶಾಹಿಗಳ ಬಂಗಲೆಗಳ
ನೆಲಗಟ್ಟಿನ ಕಲ್ಲಾಗಿ
ಉಸಿರು ಸತ್ತವರು ನಾವು.

ಯಾಕೆಂದರೆ:
ಹಿತಾಸಕ್ತ ನೇಮ-ನೀತಿಗಳ
ಕಾಯ್ದೆ ಕಾನೂನುಗಳ
ಬಲೆಯಲ್ಲಿ ಸಿಕ್ಕ ಪಾರಿವಾಳಗಳು ನಾವು.

ನಾವು ಮಾತಾಡತೊಡಗಿದರೆ
ಮೈ ಮೆಲೆ ದೆವ್ವ ಬಂದವರ ಹಾಗೆ
ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡ ಹಾಗೆ
ಬಯಲಾಟದ ಕೋಡಂಗಿಗಳ ಹಾಗೆ
ಕುಣಿದು ಕುಪ್ಪಳಿಸುತ್ತಾರೆ.


ನಾವು ಮಾತಾಡತೊಡಗಿದರೆ
ಗೋಮುಖ ವ್ಯಾಘ್ರಗಳೆಲ್ಲ
ಬಟಾಂಬಯಲಾಗಿ ಘಜರ್ಿಸತೊಡಗುತ್ತವೆ.

ಯಾಕೆಂದರೆ:
ನಾವು ಕಾಲಡಿ ಮಣ್ಣಾಗಿ ಬಿದ್ದವರು;
ಕಲ್ಲಾಗಿ ಚುಚ್ಚತೊಡಗಿದ್ದೇವೆ.

ನಾವು ಮಾತಾಡತೊಡಗಿದರೆ
ಹಳೆ-ಹರಕು ಸಿಂಹಾಸನಗಳೆಲ್ಲ
ಫಿನೈಲ್ ಸಿಂಪಡಿತ ಹುಳು
ಹಿಂಡಾಗಿ ಉದುರುವ ಹಾಗೆ
ಪಟ ಪಟ ಉದುರುತ್ತಾರೆ.

ನಾವು ಬಿತ್ತಿದ ಹೊಲದ ಕದರು ದೋಚುವ
ದಣಿಗಳ ವಕೀಲರುಗಳೆಲ್ಲ
ಕುದಿಯೆಣ್ಣೆ ಮೈಮೇಲೆ ಬಿದ್ದವರ ಹಾಗೆ
ಪ್ಯಾಂಟು ಕಳಚಿ ಕುಣಿಯ ತೊಡುತ್ತಾರೆ.

ನಾವು ಮಾತಾಡತೊಡಗಿದರೆ
ಗುಳ್ಳೆನರಿಗಳೆಲ್ಲ ಅಡವಿ ಸೇರುತ್ತವೆ
ಮತ್ತು ನಾವು
ಹೊಸಕಾಲದ ಹರಿಕಾರರಾಗುತ್ತೇವೆ.


24-10-1982


No comments:

Post a Comment