Saturday, 17 August 2013

ಯಕ್ಷಗಾನದ ಜಾನಪದ ನೆಲೆ- ಶ್ರೀಪಾದ ಭಟ್

   ಯಕ್ಷಗಾನದ ಜಾನಪದ ನೆಲೆ- ಶ್ರೀಪಾದ ಭಟ್  
ನಾನು ಆಧುನಿಕ ರಂಗಭೂಮಿಯ ಒಬ್ಬ ವಿದ್ಯಾರ್ಥಿ. ನನ್ನ ಆಧುನಿಕ ರಂಗಭೂಮಿಯ ಪ್ರಯೋಗವನ್ನು ರೂಪಿಸಿರುವುದು ನಾನು ಕಂಡುಂಡು ಬಂದ ಯಕ್ಷಗಾನದ ಅನುಭವ. ಈ ಯಕ್ಷಗಾನವಲ್ಲದೆ ನಾನು ನೋಡಿ ಕಲಿತ ಆಡಿ ಕಲಿತ ಸುಗ್ಗಿ, ಹೂವಿನ ಮಕ್ಕಳ ಕುಣಿತ, ಹಗಣಗಳೇ ನನ್ನ ಇಂದಿನ ರಂಗಭೂಮಿಯ ಕಾಯಕದ ಹಿಂದೆ ನಿಂತು ಇದರ ವಿನ್ಯಾಸವನ್ನು, ಲಯವನ್ನು ನಿಯಂತ್ರಿಸುತ್ತದೆ; ನಿದರ್ೇಶಿಸುತ್ತದೆ. ಈ ಮಾತುಗಳನ್ನು ಹೇಳಲು ಕಾರಣವಿದೆ.
         ಯಕ್ಷಗಾನದ ಜಾನಪದ ನೆಲೆಯನ್ನು ಕುರಿತು ಮಾತನಾಡ ಹೊರಟ ನನ್ನ ಚಿಂತನಾ ಕ್ರಮದ ರೂಪುರೇಷೆ ಈ ಸಂಗತಿಯನ್ನು ಆಧರಿಸಿದೆ. ಯಕ್ಷಗಾನದ ಅಂಗ ಅಂಗವನ್ನು ಛೇದಿಸಿ ಇದರಲ್ಲಿ ಜನಪದ ಯಾವುದು, ಶಾಸ್ತ್ರೀಯ ಯಾವುದು ಎಂದು ಗುರುತು ಹಚ್ಚಿ ಹಣೆಚೀಟಿ ಅಂಟಿಸುವುದು ಈ ನನ್ನ ಪ್ರಬಂಧದ ಉದ್ದೇಶವಲ್ಲ. ಯಕ್ಷಗಾನದ ಜಾನಪದ ನೆಲೆಯನ್ನು ಕಂಡುಕೊಳ್ಳುವ ತಾತ್ವಿಕ ಸಂಗತಿಯೆಡೆಗೆ ಮಾತ್ರ ನನ್ನ ಗಮನ. ಸವರ್ಾಂಗ ಸುಂದರವಾಗಿ ನಮ್ಮ ಮುಂದೆ ರೂಪಿತವಾಗಿ ನಿಂತಿರುವ ಯಕ್ಷಗಾನವನ್ನು ಅರ್ಥಯಿಸುವ ನೆಲೆಯಲ್ಲಿ ಇದೂ ಒಂದು ಕ್ರಮ ಎಂದು ನಾನಂದುಕೊಂಡಿದ್ದೇನೆ.
                                                     1
          ಆರಂಭದಲ್ಲಿ ನಾನು ಯಕ್ಷಗಾನದ ಜಾನಪದ ನೆಲೆಯ ಚಿಂತನೆಯಲ್ಲಿ ಎದುರಾಗುವ ಕೆಲವು ತೊಡಕುಗಳನ್ನು ಪ್ರಸ್ತಾಪಿಸಬಯಸುತ್ತೇನೆ.
            ಯಕ್ಷಗಾನದ ಜಾನಪದ ನೆಲೆಯನ್ನು ಕುರಿತು ಚಿಂತನೆ ನಡೆಸುವಾಗ ಎದುರಾಗುವ ಮುಖ್ಯ ಸಮಸ್ಯೆಯೇ ಪರಿಭಾಷೆಯದು. ಈ ಪರಿಭಾಷೆಯ ಗೊಂದಲಗಳು ಚಿಂತನೆಯ ಗಾಢತೆಯನ್ನು ನಿರ್ಲಕ್ಷಿಸಿ ಕೆಲವು ಸರಳೀಕರಿಸಿದ ತೀಮರ್ಾನಕ್ಕೆ ನಮ್ಮನ್ನು ಒಯ್ದು ಬಿಡುತ್ತವೆ. ಆಧುನಿಕ ವಿಮಶರ್ೆಯ ಅನೇಕ ಪರಿಭಾಷೆಗಳು ಯಕ್ಷಗಾನ ವಿಮಶರ್ೆಯ ದಾರಿ ತಪ್ಪಿಸಿದ್ದುಂಟು. ಈಗ ಯಕ್ಷಗಾನದ ಮಾತು ಬಂದಾಗಲೆಲ್ಲ ಶಾಸ್ತ್ರಿಯ ಥ ಜಾನಪದ, ಶಿಷ್ಟ ಥ ಪರಿಶಿಷ್ಟ, ಮಾರ್ಗ ಥ ದೇಸಿ, ದೇಶಿ ಥ ದೇಸಿ, ಬ್ರಾಹ್ಮಣ ಥ ಶೂದ್ರ ಎಂದೆಲ್ಲ ಆಗಿ ಬಿಡುತ್ತದೆ. ಜನಸಮುದಾಯದ ಕಲೆಯೊಂದನ್ನು ಹೀಗೆ ವಿಭಾಗಿಸಿ, ಖಂಡಿಸಿ ನೋಡುವುದು ಕಲೆಯ ವಿಮಶರ್ೆಯ ಮಟ್ಟಿಗಂತೂ ಬಹು ಅಪಾಯಕಾರಿ ಅಂಶವಾಗಿದೆ. (ಕಲೆಗೇನೋ ತೊಂದರೆಯಿಲ್ಲ ಬಿಡಿ ಅವು ಏನು ನಮ್ಮಂಥ ವಿಮರ್ಶಕರ ಅಪ್ಪಣೆ ಕೇಳಿ ವಿಕಾಸ ಹೊಂದುವುದಿಲ್ಲ.) ಈ ಪರಿಭಾಷೆಗಳು ಹುಟ್ಟಿಕೊಂಡ ಸಂದರ್ಭ, ಕಾಲ ಇವುಗಳನ್ನು ಅಥರ್ೈಸದೇ ಸಾರಾಸಗಟಾಗಿ ಎಲ್ಲ ದೇಶಕಾಲ ಸಂಸ್ಕೃತಿಯ ಪರಿವೇಷಕ್ಕೆ ಅನ್ವಯ ಮಾಡುವಾಗ ಗೊಂದಲಗಳು ಏಳುವುದು ಸಹಜ. ಈಗ ಯಕ್ಷಗಾನವನ್ನೇ ನೋಡಿ. ಯಕ್ಷಗಾನ ಇವುಗಳಲ್ಲಿ ಯಾವುದು? ಹಾಗೆ ನೋಡಿದರೆ ಯಾವುದೂ ಇಲ್ಲ ಅಥವಾ ಎಲ್ಲವೂ ಹೌದು. ಮುಖ್ಯವಾಗಿ ಅದು ಆಟ. ಆಟ ಕಟ್ಟುವುದು ಬದುಕು ಕಟ್ಟುವುದರೊಂದಿಗೆ ಬೆಳೆದು ಬಂದಿರುತ್ತದೆ. ಪ್ರಖ್ಯಾತ ನಾಟ್ಯ ಶಾಸ್ತ್ರಜ್ಞೆ ಪದ್ಮಾ ಸುಬ್ರಹ್ಮಣ್ಯಂ, ತೆರುಕುತ್ತಿನ ಬಗ್ಗೆ ಅಧ್ಯಯನ ಮಾಡುತ್ತ ಕೊನೆಗೊಂದು ಮಾತು ಹೇಳುತ್ತಾರೆ. ತೆರುಕುತ್ತು ಚಿ ಜಿಠಟಞ ಣಜಚಿಣಡಿಜ ತಿಣ ಛಿಟಚಿಛಿಚಿಟ ಛಚಿಜ (ಶಾಸ್ತ್ರಿ ತಳಹದಿಯ ಜಾನಪದ ರಂಗಭೂಮಿ). ಇದು ಜಾಣತನದ ಮಾತು ಅಲ್ಲ ಎಂತಾದರೆ ಬಹುಶಃ ತೆರಕುತ್ತು, ಯಕ್ಷಗಾನದಂತಹ ರಂಗಭೂಮಿಯ ಕುರಿತು ಹೀಗೆ ಮಾತನಾಡುವುದು ಅನಿವಾರ್ಯವೇನೊ?
               ಈ ಸಂದರ್ಭದಲ್ಲಿ ನನಗೆ ಖ್ಯಾತ ರಂಗತಜ್ಞ ಕೆ.ಎನ್. ಫಣಿಕ್ಕರ್ ನೆನಪಾಗುತ್ತಾರೆ. ಅವರು ಭಾಸನ ನಾಟಕಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಅವರು ಹೇಳುವ ಪ್ರಕಾರ ಭಾಸನ ನಾಟಕಗಳು ಸಂಸ್ಕೃತದಲ್ಲಿ ಇರುವುದರಿಂದ ಅದನ್ನು ಅಭಿಜಾತ ಎಂದು ಹೇಳಲಾಗದು. ಪರಿಕಲ್ಪನಾತ್ಮಕವಾಗಿ ಜಾನಪದ ಎನ್ನಬಹುದಾದ ಎಷ್ಟೋ ಅಂಶಗಳು ಆ ನಾಟಕಗಳಲ್ಲಿವೆ. ಹಾಗಾಗಿ ಅವರು ಅಭಿಜಾತ ಮತ್ತು ಜಾನಪದ ಎಂಬ ವಗರ್ಿಕರಣವನ್ನೇ ಒಪ್ಪುವುದಿಲ್ಲ. ಈ ಜಾಡನ್ನು ಹಿಡಿದು ಕೆಲವರು ಯಕ್ಷಗಾನವನ್ನು ಅರೆಶಾಸ್ತ್ರೀಯ ಎಂದರು. ಭರತನ ನಾಟ್ಯ ಶಾಸ್ತ್ರವನ್ನು ಕೈಯಲ್ಲಿ ಹಿಡಿದು ಹುಟ್ಟಿ ಬಂದವರಿಗೆ ಕೋಪ ಬಂದು ನಾಟ್ಯಶಾಸ್ತ್ರದ ಅಕ್ಷರ ಅಕ್ಷರಗಳಲ್ಲೂ ಯಕ್ಷಗಾನವನ್ನು ತುರುಕಿ ಯಕ್ಷಗಾನ ಈ ಕಾರಣಕ್ಕೆ ಶಾಸ್ತ್ರೀಯ ಎನ್ನಬೇಕು ಎಂದು ಪಟ್ಟು ಹಿಡಿದರು. ಹೀಗೆ ಯಕ್ಷಗಾನ ಕುರಿತ ಚಿಂತನೆ ವಾದಗಳ ಆಖಾಡವಾಗಿ ಮಾತ್ರ ಬೆಳೆಯುತ್ತಿದೆ.
                 ಯಕ್ಷಗಾನದ ಜಾನಪದ ನೆಲೆಯನ್ನು ಗುರುತಿಸುವಾಗ ಇನ್ನೊಂದು ಅಪಾಯ ತಲೆದೋರುತ್ತದೆ. ಅದು ಪ್ರಾದೇಶಿಕ ಸ್ವರೂಪಕ್ಕೆ ಸಂಬಂಧಿಸಿದ್ದು. ಯಕ್ಷಗಾನದ ದೇಸಿ ಸ್ವರೂಪವನ್ನು ಅರಸುತ್ತ ಆಯಾ ಪ್ರದೇಶದ ಪ್ರಾದೇಶಿಕ ಕಲೆಯಲ್ಲಿಯ ಹಾಗೂ ಯಕ್ಷಗಾನದಲ್ಲಿಯ ಅಂಶಗಳನ್ನು ಸಮಾನ್ಯೀಕರಿಸಿ ಯಕ್ಷಗಾನ ಇದೇ ಪ್ರದೇಶದಿಂದ ಹುಟ್ಟಿತು ಎಂಬ ಪ್ರಾದೇಶಿಕ ದುರಭಿಮಾನವನ್ನು ಅನೇಕ ವಿದ್ವಾಂಸರು ಪ್ರದರ್ಸಿಶಿಸಿದ್ದುಂಟು.
             ಜಗತ್ತಿನಾದ್ಯಂತ ಮೂತರ್ಿಶಿಲ್ಪದಲ್ಲಿ ಹಲವಾರು ಸಮಾನ ಅಂಶಗಳು ಕಂಡುಬರುತ್ತವೆ. ಇಂಗ್ಲೆಂಡಿನ ಕೋಗಿಲೆಯೂ ಕುಕ್ಕೂ ಎನ್ನುತ್ತದೆ. ಭಾರತದ ಕೋಗಿಲೆಯೂ ಹಾಗೇ. ಗುಡುಗು ಮಿಂಚು ಬಂದರೆ ಹೆದರುವುದು, ಅದನ್ನು ದೈವತ್ವಕ್ಕೆ ಏರಿಸುವುದು ಇವು ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಇವೆ. ನೃತ್ಯ ನಾಟಕಗಳು ಹಾಗೆಯೇ. ಇವು ಮೂಲಭೂತವಾಗಿ ಮನುಷ್ಯನ ಚಲನವಲನಕ್ಕೆ ಸಂಬಂಧಿಸಿದ್ದು. ಇವುಗಳ ಮೂಲಕ ನಾವು ಮಾನವನ ವರ್ತನೆಗಳನ್ನು ಪ್ರದರ್ಸುಶಿಸುತ್ತೇವೆ. ಜಗತ್ತಿನ ಎಲ್ಲ ನೃತ್ಯಗಳನ್ನು ತೆಗೆದುಕೊಂಡರೂ ಸಾಹಿತ್ಯವನ್ನು, ಶಿಲ್ಪವನ್ನು ತೆಗೆದುಕೊಂಡರೂ ಕೆಲವು ಛಿಠಟಟಠಟಿ ಅಂಶಗಳನ್ನು ಹುಡುಕುವುದಕ್ಕೆ ಸಾಧ್ಯ. ಇಲ್ಲಿಯ ಲಕ್ಷಣವೇ ಎಲ್ಲ ಕಡೆಗೂ ಇದೆ ಎಂದೂ, ಎಲ್ಲವಕ್ಕೂ ಇದೇ ಮೂಲ ಎಂಬ ವಾದಕ್ಕೆ ಹೊರಡುವುದು ಪ್ರಾದೇಶಿಕ ದುರಭಿಮಾನವಾಗುತ್ತದೆ. ಕೆಲವೊಮ್ಮೆ ಇದು ಮೂಲಭೂತವಾದಕ್ಕೂ ಎಡೆಮಾಡಿಕೊಡುತ್ತದೆ. ಗಣಪತಿಯನ್ನು ಹೋಲುವ ಮೂತರ್ಿಶಿಲ್ಪವನ್ನು ಪಿತಾ ಮುಂತಾದ ಶಬ್ದಗಳನ್ನು ಜಗತ್ತಿನ ಬೇರೆ ಬೇರೆ ಕಡೆ ತೋರಿಸಿ ಪಿ. ಎನ್. ಓಕ್ ಎನ್ನುವ ಮಹಾನುಭಾವ ಜಗತ್ತು ಒಂದು ಕಾಲಕ್ಕೆ ಹಿಂದೂ ರಾಷ್ಟ್ರವಾಗಿತ್ತು ಎಂಬ ಹುಂಬ ಹೇಳಿಕೆ ನೀಡಿದ್ದ. ನಾವೂ ಹಾಗೇ ಹೊರಟರೆ ಜಾನಪದ ಮೂಲಕ ಹುಡುಕಾಟ ಮೂಲಭೂತವಾದದ ಕಡೆಗೆ ತಿರುಗುತ್ತದೆ.
                                                                       2
              ಯಾವುದೇ ಒಂದು ಕಲೆ ಅದು ಈಗ ಇರುವ ರೂಪದಲ್ಲಿಯೇ ಥಟ್ ಎಂದು ಆಕಾಶದಿಂದ ಉದುರಿ ಬೀಳುವುದಿಲ್ಲ. ಹೇಳಿ ಕೇಳಿ ಯಕ್ಷಗಾನವಂತೂ ಒಂದು ಅದ್ಭುತ ರಸಪಾಕ. ಅದನ್ನು ಪರಿಪೂರ್ಣ ರಂಗಭೂಮಿ ಎನ್ನುತ್ತೇವೆ. ಅಭಿನಯದ ಯಾವೆಲ್ಲ ಆಯಾಮಗಳಿದ್ದಾವೋ ಅವೆಲ್ಲವನ್ನೂ ಒಂದು ಸಮನಾದ ಹದದಲ್ಲಿ, ನಿದರ್ಿಷ್ಟ ಶ್ರುತಿಯಲ್ಲಿ ಔಚಿತ್ಯಪೂರ್ಣವಾಗಿ ಮಿಳಿತಗೊಂಡ ಒಂದು ಕಲೆ. ಅದರ ಬೇರುಗಳು ಹೀರಿಕೊಂಡ ಗೊಬ್ಬರದ ಕಂಪನಿಗಳನ್ನು ಹಾಗೇ ಲೇಬಲ್ ಹಚ್ಚಿ ನಿಲ್ಲಿಸಿ ಬಿಡುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ. ಯಕ್ಷಗಾನದ ಶಿರೋಭೂಷಣವನ್ನೇ ನೋಡಿ ಅದು ತಲೆಯ ಮೇಲೆ ಇಟ್ಟ ಆಭರಣದಂತೆ ಕಾಣುವುದಿಲ್ಲ. ಬದಲಾಗಿ ತಲೆಯ ಜೊತೆಗೆ ಕಡೆದು ಕೆತ್ತಿ ರೂಪಿಸಿದ ಭಾಸ ಉಂಟಾಗುತ್ತದೆ. ವೇಷಭೂಷಣಗಳು ಒಂದು ಪಡಿಯಚ್ಚಿನಲ್ಲಿ ಹೊಯ್ದಂತೆ ತೋರುತ್ತದೆ. ಆಕೃತಿಯ ಸಾಂಗತ್ಯಕ್ಕೆ ಅತ್ಯುತ್ತಮ ನಿದರ್ಶನವಾಗಿ ಇದು ನಮ್ಮ ಮುಂದಿದೆ. ಇದರಂತೆ ಇದರ ಅಭಿನಯದ ಇನ್ನಿತರೆ ಸಂಗತಿಗಳು ಕೂಡಾ ಹಾಗೇ. ಆದರೆ ಇವೆಲ್ಲ ರಾತ್ರಿ ಬೆಳಗಾಗುವುದರೊಳಗೆ ಆದ ಸಿದ್ಧಿಯಲ್ಲ. ಈ ನೆಲದ ಬೆವರಿನೊಂದಿಗೆ ಬದುಕಿ ಬಂದಿದ್ದು. ಹೀಗಾಗಿ ಇದನ್ನು ರೂಪಿಸಿದ ಅಂತಃಸತ್ವವನ್ನು ಗುರುತಿಸುವುದು ಇಂತಹ ಚಿಂತನೆಗಳ ತಾತ್ವಿಕ ಉದ್ದೇಶ ಎಂದು ನಾನಂದುಕೊಂಡಿದ್ದೇನೆ.
                                                 3
            ಯಕ್ಷಗಾನದಲ್ಲಿ ಜಾನಪದ ನೆಲೆಯನ್ನು ಕುರಿತು ಈಗ ಚಿಂತಿಸುವ ಅಗತ್ಯವನ್ನೂ, ಅದರ ತಾತ್ವಿಕ ಜರೂರನ್ನೂ ಹೀಗೆ ಸ್ಪಷ್ಟಪಡಿಸಿಕೊಳ್ಳಬಹುದು.
            ನೋಡಿ ತಲೆಮಾರುಗಳ ಜ್ಞಾನವನ್ನು ನಾವು ಪುನಃ ಪುನಃ ನವೀಕರಿಸಿಕೊಳ್ಳುವುದು ಇಂದಿನ ನಮ್ಮ ಅಗತ್ಯವಾಗಿದೆ. ಮಾರುಕಟ್ಟೆಯ ರಾಜಕೀಯದಲ್ಲಿ ನಮ್ಮ ತಲೆಗಳು ಮಾರಿಹೋಗುತ್ತಿರುವುದರಿಂದ ನಾವು ತಲೆಮಾರುಗಳ ಅನುಭವವನ್ನು ಪುನಃ ಸೃಷ್ಟಿಸಿಕೊಳ್ಳಬೇಕಾಗುತ್ತದೆ.
            ಇಂದು ಜಾಗತೀಕರಣದ ಭರಾಟೆಯಲ್ಲಿ ಪರಿಕರಗಳೇ ಮನುಷ್ಯನನ್ನು ಆಳುತ್ತಿವೆ. ರಂಗಭೂಮಿಯನ್ನು ಕೂಡ ಈ ಪರಿಕರಗಳೇ ಆಳತೊಡಗಿದ್ದಾವೆ. ಜಾನಪದ ರಂಗಭೂಮಿ ಅಮೂರ್ತವನ್ನು ಮೂರ್ತವಾಗಿಯೂ, ಮೂರ್ತವನ್ನು ಅಮೂರ್ತವಾಗಿಯೂ ರೂಪಾಂತರಿಸುತ್ತದೆ. ಫಣಿಕ್ಕರ್ ಹೇಳುವ ಉದಾಹರಣೆ ಕೊಡುವದಾದರೆ ಅದು ಬೆಟ್ಟವನ್ನು ಶರೀರದಿಂದಲೂ, ಮನಸ್ಸಿನಿಂದಲೂ ಸೃಷ್ಟಿಸುತ್ತದೆ; ಆದರೆ ಅದೇ ಬೆಟ್ಟವಲ್ಲ. ಅಲ್ಲಿರುವುದು ಬೆಟ್ಟದತನ. ಕುದುರೆ ಸೃಷ್ಟಿಸುವುದಲ್ಲ; ಕುದುರೆತನವನ್ನು. ಇಲ್ಲಿ ಈ ಪುನರ್ಸೃಷ್ಟಿಯಲ್ಲಿ ಬೇಕಷ್ಟು ಠಿಚಿಛಿಜ ಗಳಿವೆ. ಕಲಾವಿದ, ಪ್ರೇಕ್ಷಕ ಅರಳಲು, ವಿಕಾಸ ಹೊಂದಲು ಸಾಕಷ್ಟು ಅವಕಾಶಗಳಿವೆ. ಸೃಷ್ಟ್ಯಾತ್ಮಕ ಅಂಶಗಳಿಗೆ ಅಗತ್ಯವಾದ ದನಿ, ಚಿತ್ರ ಎಲ್ಲ ಸೇರಿಸುತ್ತ ಹಿಗ್ಗಿಸಲು ಅವಕಾಶವಿದೆ. ಆದರೆ ನಾವಿಂದು ಯಕ್ಷಗಾನ ಪ್ರದರ್ಶನದಲ್ಲಿ ಸಿಂಹಾಸನವನ್ನೇ ರಂಗದ ಮೇಲಿಟ್ಟು ಈ ಹಿಗ್ಗಿಸುವ ಸಾಮಥ್ರ್ಯವನ್ನು ಕುಂದಿಸುತ್ತಿದ್ದೇವೆ. ರಥ, ಬೆಟ್ಟ, ಪಲ್ಲಂಗ, ಸಿಂಹಾಸನ ಏನೂ ಆಗಬಲ್ಲ ಸಾಮಥ್ರ್ಯದ ಜನಪದ ರಂಗಭೂಮಿಯ ಸತ್ವವನ್ನು ವಾಸ್ತವವಾದಿ ರಂಗಭೂಮಿಯ ಚೌಕಟ್ಟಿಗೆ ತಂದು ಹಾಳುಗೆಡವುತ್ತಿದ್ದೇವೆ.
ಅರ್ಥವನ್ನು ಕ್ರಿಯೆಯಾಗಿ, ಒಂದು ರಂಗಕ್ರಿಯೆಯಾಗಿ ಮಾಡಲು ಜನಪದ ರಂಗಭೂಮಿ ನಮಗೆ ನೆರವಾಗುತ್ತದೆ. ರಂಗಭೂಮಿ ಮೂಲತಃ ಒಂದು ಕತೆಗಾರಿಕೆ. ನಟ ಕತೆಯನ್ನು ಸಂವಹಿಸುತ್ತಿರುವಾಗ ಪಾತ್ರವಾಗಿ ಬದಲಾಗುತ್ತಾನೆ. ಸ್ಥಿತ್ಯಂತರ ಹೊಂದುತ್ತಾನೆ. ಸಂದರ್ಭವೊಂದನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಒಂದು ರೂಪದಿಂದ ಇನ್ನೊಂದಾಗಿ ಬದಲಾಗುತ್ತಾನೆ. ಪರಿಕರಗಳನ್ನು ಬದಲಾಯಿಸುತ್ತಾನೆ. ಇವೆಲ್ಲವೂ ಸೇರಿ ಒಂದು ಪರಿಣಾಮವನ್ನು ಉಂಟುಮಾಡುತ್ತದೆ. ರಂಗಭೂಮಿಯ ಈ ಮೂಲ ಸ್ವಭಾವವು ಜನಪದರ ದೈನಿಕ ಬದುಕಿನಲ್ಲಿ ಇಂದಿಗೂ ಕಂಡು ಬರುತ್ತದೆ.
                ನಮ್ಮ ತಲೆಮಾರಿನ ಜ್ಞಾನ ಪರಂಪರೆಯಲ್ಲಿ ಇಂತಹ ಅನೇಕ ಶ್ರೀಮಂತ ಸರಕುಗಳಿವೆ. ಅವನ್ನು ಯಥಾಯೋಗ್ಯವಾಗಿ ಬಳಸಲು, ಮರುಸೃಷ್ಟಿಸಲು, ಮುರಿದು ಕಟ್ಟಲು ನಮಗೆ ಇಂತಹ ಚಿಂತನೆಗಳು ಅಗತ್ಯ. ಹೀಗಾಗಿಯೇ ಯಕ್ಷಗಾನದಲ್ಲಿಯ ಜಾನಪದ ನೆಲೆಯನ್ನು ಅಥರ್ೈಸಲು ಪ್ರಯತ್ನಿಸಬೇಕಿದೆಯೇ ಹೊರತೂ ಯಕ್ಷಗಾನದಲ್ಲಿ ಶಾಸ್ತ್ರೀಯತೆ ಇಲ್ಲ ಎಂಬುದನ್ನು ಸಾಧಿಸಲು ಅಲ್ಲ.
                                                           4
        ಈಗ ಜನಪದ ರಂಗಭೂಮಿಯ ಕೆಲವು ಲಕ್ಷಣಗಳ ಜೊತೆ ಮತ್ತು ಸ್ಥಳೀಯವಾದ ಆಚರಣಾತ್ಮಕ ಕಲೆಗಳ ಕೆಲವು ಲಕ್ಷಣಗಳ ಜೊತೆ ಯಕ್ಷಗಾನವನ್ನು ಇಟ್ಟು ನೋಡೋಣ.
           ಜನಪದ ರಂಗಭೂಮಿಯ ಒಂದು ಪ್ರಮುಖವಾದ ಲಕ್ಷಣ ಶಿಥಿಲಬಂಧ ಮತ್ತು ಸ್ಥಿತಿಸ್ಥಾಪಕತ್ವ. ಇದು ಯಕ್ಷಗಾನದ ಪ್ರಧಾನ ಲಕ್ಷಣವೂ ಹೌದು. ಪ್ರಸಂಗವೊಂದರ ಸಂಕ್ಷೇಪ, ವಿಸ್ತಾರ ಎರಡೂ ಇಲ್ಲಿ ಔಚಿತ್ಯಪೂರ್ಣವಾಗಿರುತ್ತದೆ. ತಲೆಮಾರಿನಿಂದ ಬಂದ ಪ್ರದರ್ಶನ  ಜ್ಞಾನವನ್ನು ಕಲಾವಿದ ಮುರಿದು ಕಟ್ಟಲು ಇಲ್ಲಿ ಸಾಧ್ಯ. ಯಕ್ಷಗಾನದ ಕುಣಿತದ ಒಂದು ಉದಾಹರಣೆ ನೋಡೋಣ. ವೀರಾವೇಶದ ಕುಣಿತಕ್ಕೆ ಅಭಿವ್ಯಕ್ತಿ ಒದಗಿಸುವ ಮಂಡಿಕುಣಿತವನ್ನು ಶಂಭು ಹೆಗಡೆಯವರು ಭಕ್ತಿರಸ ಉದ್ದೀಪನೆಗೆ ತುಂಬ ಸುಂದರವಾಗಿ ಬಳಸುತ್ತಾರೆ. ಇದು ಕಲೆಯ ಅಪಚಾರವಾಗುವುದಿಲ್ಲ; ಬದಲಾಗಿ ವಿಸ್ತಾರವಾಗುತ್ತದೆ. ಯಕ್ಷಗಾನದಲ್ಲಿ ಇಂತಹ ವಿಕಾಸ, ವಿಸ್ತಾರಕ್ಕೆ ಬೇಕಷ್ಟು ಅವಕಾಶಗಳು ಇವೆ. ಇದು ತೆರೆದ ಮುಕ್ತಾಯವನ್ನು ಹೊಂದಿದೆ.
ಜನಪದ ಕಲೆ ಬಹುವಚನೀಯವಾದದ್ದು. ಯಕ್ಷಗಾನವೂ ಹಾಗೆ. ಜನಪದ ರಂಗಭೂಮಿಯ ಬಹುಮುಖ್ಯ ಅಂಶವೆಂದರೆ ಇಲ್ಲಿ ದೇವತೆಗಳೂ ಸಹ ಮಾನುಷ ಪರಿಸರದೊಂದಿಗೆ ಸಹಬಾಳ್ವೆ ಮಾಡುವುದು. ಮನುಷ್ಯ ಮತ್ತು ದೇವರ ಸಂಬಂಧ ಇಲ್ಲಿ ಈ ನೆಲದ ಮಣ್ಣಿನೊಂದಿಗೇ ಬದುಕುತ್ತದೆ. ಯಕ್ಷಗಾನದಲ್ಲಿಯ ಪುರಾಣ ಪಾತ್ರಗಳೂ ಹಾಗೆ. ಇಲ್ಲಿಯ ವಿದೂಷಕನಂತೂ ಅಟ್ಟಕ್ಕೇರಿದ ದೇವರುಗಳನ್ನು ತಟ್ಟನೆ ವಿಡಂಬಿಸುತ್ತಾನೆ. ಈ ಮಣ್ಣಿಗೆ ಇಳಿಸುತ್ತಾನೆ. ಸಾಮಾಜಿಕವಾದ ಬದುಕಿನೊಂದಿಗೆ ಮಿಳಿತಗೊಳಿಸುತ್ತಾನೆ.
               ಜನಪದ ರಂಗಭೂಮಿಗೆ ಕಾಲದ ಹಂಗಿಲ್ಲ. ಭೂತ, ವರ್ತಮಾನಗಳೆರಡನ್ನೂ ಅವು ಒಟ್ಟೊಟ್ಟಿಗೇ ಬೆಸೆಯುತ್ತದೆ. ಯಕ್ಷಗಾನದಲ್ಲಿ ನೋಡಿ ಭಾಗವತ ಇಂತೆಂದ ಎಂದ ಕೂಡಲೆ ಪಾತ್ರಧಾರಿ ನಾನು ದುಯರ್ೊಧನ ಹೇಳುತ್ತಿದ್ದೇನೆ ಅಂತ ಭೂತಕಾಲವನ್ನು ವರ್ತಮಾನಕ್ಕೆ ಹೊರಳಿಸಿ ಬಿಡುತ್ತಾನೆ. ಕಾಲಕ್ಕೆ ಮಾಡುವ ಕಾಯಕಲ್ಪವಿದು.
ಜನಪದ ರಂಗಭೂಮಿಯ ಇನ್ನೊಂದು ಶಕ್ತಿ ಅದರ ಶ್ರುತಿ ವ್ಯವಸ್ಥೆಯಲ್ಲಿದೆ. ಸ್ಥಾಯೀಯಾದ ಶ್ರುತಿಯಲ್ಲಿ ದೀರ್ಘವಾದ ಕಥಾನಕಗಳನ್ನು ನಿಭಾಯಿಸುವ, ಪ್ರೇಕ್ಷಕರನ್ನು ಆ ಶ್ರುತಿಯಲ್ಲಿ ಕರಗಿಸಿ ಬಿಡುವ ಶಕ್ತಿ ಅದರ ಸಂವಹನದಲ್ಲಿದೆ. ಯಕ್ಷಗಾನವಂತೂ ಶ್ರುತಿ ವ್ಯವಸ್ಥೆಯ ಒಂದು ಅದ್ಭುತ ರೂಪಕ. ದೇಹ-ಮನಸ್ಸು, ಮಾತು-ಗೀತ, ಕುಣಿತ-ಭಾವ, ನೋಟ-ಚಲನೆ, ಹಿಮ್ಮೇಳ-ಮುಮ್ಮೇಳ, ನಟ-ಪ್ರೇಕ್ಷಕ, ರೂಪ-ರೇಖೆ, ಲಯ-ಲಾಸ್ಯ, ಹೀಗೆ ಇದರ ಶ್ರುತಿ ಎಲ್ಲವನ್ನೂ ಒಂದಾಗಿಸುತ್ತದೆ.
ಜನಪದ ಕಲೆಗಳ ಸಂವಹನ ಮಾಧ್ಯಮ ಮುಖ್ಯವಾಗಿ ಮನುಷ್ಯನ ದೇಹ. ಯಕ್ಷಗಾನ ಮಾತನಾಡುವುದು ದೇಹ ಭಾಷೆಯ ಮೂಲಕವಾಗಿಯೇ. ದೇಹದ ಮೂಲಕ ಬುದ್ಧಿಯ ಕಡೆ ಅದರ ಚಲನೆ. ಯಕ್ಷಗಾನದ ಕಲಿಕೆ ಆರಂಭವಾಗುವುದು ವಾಚಕದಿಂದಲೋ, ಆಹಾರ್ಯದಿಂದಲೋ ಅಲ್ಲ. ಕುಣಿತಗಳ ಕಲಿಕೆಯಿಂದ. ಹೆಜ್ಜೆಗಳಿಂದ ದೇಹವನ್ನು ಮಣಿಸುವ, ಕುಣಿಸುವ ಅದು ಹೊರಡಿಸುವ ಧ್ವನಿ.
            ತರಂಗಗಳತ್ತ ಅದರ ಚಲನೆಯಿದೆ. ಆಧುನಿಕ ರಂಗಭೂಮಿ ವಿಚಾರದ ಮೂಲಕ ದೇಹದತ್ತ ಪ್ರಮಾಣ ಬೆಳೆಸಿದರೆ. ಯಕ್ಷಗಾನ ದೇಹದ ಮೂಲಕ ವಿಚಾರದತ್ತ ಸಾಗುತ್ತದೆ. ದೇಹ ಕಲಿಸಿದ ಮಾತನ್ನು ಬುದ್ಧಿ ಆಡುತ್ತದೆ. ದೇಹ ಶ್ರುತಿಗೊಂಡಾಗ ಮಾತೂ ಶ್ರುತಿಗೊಳ್ಳುತ್ತದೆ.
             ಅಟಚಿಛಿ ಎನ್ನಬಹುದಾದ ಕಲೆಯಲ್ಲಿ ಇರುವಂತೆ ಯಕ್ಷಗಾನದ ಮುದ್ರೆಗಳು ಅಕ್ಷರ ಅಕ್ಷರಗಳನ್ನು ವಿವರಿಸುವ ಉದ್ದೇಶ ಹೊಂದಿರುವುದಿಲ್ಲ. ಕೆಲವು ಸಾಮಾನ್ಯ ಬಹುಪರಿಚಿತ ಸಂಕೇತಗಳನ್ನು ಬಿಟ್ಟರೆ ಇವು ಪಾತ್ರಾಭಿನಯಕ್ಕೆ ಆ ಕ್ಷಣದಲ್ಲಿ ಒದಗುವ, ರೂಪುಗೊಳ್ಳುವ ದೈಹಿಕ ಅಭಿವ್ಯಕ್ತಿ ಆಗಿದೆ. ಇವು ಮನುಷ್ಯ ಕ್ರಿಯೆಯ ಅಸ್ಥಿಪಂಜರದ ರೂಪಗಳು. ನಟನ ನಿದರ್ಿಷ್ಟ ಮನೋದೈಹಿಕ ಕ್ರಿಯೆಯ ಅಭಿವ್ಯಕ್ತಿ. ಪದಾಭಿನಯಕ್ಕೆ ಹೆಸರಾಗಿದ್ದ, ನಾಟ್ಯ ಶಾಸ್ತ್ರವನ್ನು ಅಭ್ಯಸಿಸಿದ್ದರು ಎಂದು ಹೇಳಲಾಗಿದ್ದ ದಿ| ಮೂಡ್ಕಣಿ ನಾರಾಯಣ ಹೆಗಡೆಯವರು ಬೇಗನೆ ತ್ವರಿತವಾಗಿ ಎಂಬುದನ್ನು ಕೈಯಲ್ಲಿ ಚಿಟಿಕೆ ಹೊಡೆಯುವ ರೀತಿಯಲ್ಲಿ ಮುದ್ರೆಯ ಮೂಲಕ ತೋರಿಸುತ್ತಿದ್ದರು ಎಂಬ ಉಲ್ಲೇಖವು ದಾಖಲಾಗಿದೆ. ಶಂಭು ಹೆಗಡೆಯವರು ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಮುದ್ರೆಗಳನ್ನು ಬಳಸಬಹುದು ಎನ್ನುತ್ತಾರೆ. ಉದಾ: ವಿವಾಹ ಎಂಬುದನ್ನು ಪಾಣಿಗ್ರಹಣ, ಮಾಲಾರ್ಪಣೆ, ಕಂಠಸೂತ್ರ ಬಂಧನ ಮೊದಲಾದ ಅನೇಕ ಬಗೆಯಲ್ಲಿ ಕಾಣಿಸಬಹುದು ಎನ್ನುತ್ತಾರೆ.
ಆಧುನಿಕ ರಂಗಭೂಮಿ ನಿಶ್ಚಿತ ವರ್ಗದ ಪ್ರೇಕ್ಷಕರನ್ನು ಉದ್ದೇಶಿಸಿದ್ದು. ಆದರೆ ಜನಪದ ರಂಗಭೂಮಿ ಎಲ್ಲ ವರ್ಗದ, ಎಲ್ಲ ವಯೋಮಾನದ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ಉದಾ: ಆಧುನಿಕ ರಂಗಭೂಮಿಯಲ್ಲಿ ಮಕ್ಕಳನ್ನೇ ಪ್ರೇಕ್ಷಕರನ್ನಾಗಿ ಉಳ್ಳ ಮಕ್ಕಳ ರಂಗಭೂಮಿ ಇದ್ದ ಹಾಗೆ ಯಕ್ಷಗಾನದಲ್ಲಿ ಇಲ್ಲ. ಅಲ್ಲದೇ ಪ್ರೇಕ್ಷಕರನ್ನು ಉದ್ದೇಶಿಸಿ ಅದನ್ನು ಲಂಬಿಸಲು, ಸಂಕ್ಷೇಪಗೊಳಿಸಲು ಸಾಧ್ಯ. ಅದಕ್ಕೆ ಸ್ಥಿತಿಸ್ಥಾಪಕತ್ವ ಗುಣ ಇದೆ. ಆಧುನಿಕ ರಂಗಭೂಮಿಗೆ ಆ ಶಕ್ತಿ ಇಲ್ಲ. ಇವೆಲ್ಲವನ್ನು ಯಕ್ಷಗಾನಕ್ಕೆ ಅನ್ವಯಿಸಿ ನೋಡಲು ಸಾಧ್ಯ.
                  ಜನಪದ ರಂಗಭೂಮಿಯಲ್ಲಿ ಅನೇಕ ಪಠ್ಯಗಳಿರುತ್ತವೆ. ಪ್ರತಿ ಪ್ರದರ್ಶನವೂ ಒಂದೊಂದು ಪಠ್ಯವೇ ಆಗಿಬಿಡುತ್ತದೆ. ಪಂಜುಲರ್ಿ ಭೂತ ತುಳುವಿನಲ್ಲಿ ಕಾಸರಗೋಡಿನ ಭೂತಕ್ಕಿಂತ ಬೇರೆ. ಎರಡೂ ಪಂಜುಲರ್ಿಯೇ ಆದರೂ ಪಠ್ಯ ಬೇರೆ. ಜಾನಪದದಲ್ಲಿ ಕಾಲ ದೇಶ ಸಂದರ್ಭಕ್ಕೆ ಅನುಗುಣವಾಗಿ ಪ್ರದರ್ಶನ ಪಠ್ಯ ಬೇರೆ ಬೇರೆ. ಯಕ್ಷಗಾನಕ್ಕಂತೂ ಈ ಹೇಳಿಕೆ ಹೇಳಿ ಮಾಡಿಸಿದ್ದು. ಒಂದೇ ಪ್ರಸಂಗವನ್ನು ಬೇರೆ ಬೇರೆ ನಟರು ಒಂದೇ ದಿನ ಪ್ರಯೋಗಿಸಿದರೂ ಪ್ರತಿ ನಟನಿಗನುಗುಣವಾಗಿ ಪ್ರಯೋಗ ಬೇರೆಯೇ ಆಗಿರುತ್ತದೆ. ಮಾತ್ರವಲ್ಲ ಪ್ರತಿ ಪ್ರಯೋಗದಲ್ಲೂ ನಟ ಪಾತ್ರಗಳನ್ನು ಬೇರೆ ಬೇರೆಯಾಗಿಯೇ ದಶರ್ಿಸುತ್ತಾನೆ.
                                                   5
         ವರ್ತಮಾನದಲ್ಲಂತೂ ಯಕ್ಷಗಾನ ಕರಾವಳಿಯ ಮುಖ್ಯ ಭಾಷೆಯೇ ಆಗಿದೆ. ಈ ನೆಲದ ಕಲೆ ಮತ್ತು ಪರಿಸರವನ್ನು ಹಿನ್ನೆಲೆಯಲ್ಲಿಟ್ಟು ಯಕ್ಷಗಾನವನ್ನು ನೋಡೋಣ.
            ಕರಾವಳಿಯ ಜನಪದ ಕುಣಿತದಲ್ಲಿ ಸೊಂಟ, ಕಾಲುಗಳು ಮತ್ತು ಪಾದಗಳು ಹೆಚ್ಚು ಪಾಲ್ಗೊಳ್ಳುತ್ತವೆ. ಕರಾವಳಿಯ ತೀರಾ ಮೆತ್ತಗೂ ಅಲ್ಲದ, ಬಿರುಸೂ ಅಲ್ಲದ ಮರಳು ಮಿಶ್ರಿತ ಕೆಂಪು ಮಣ್ಣು ನೆಲವನ್ನು ಬಡಿದು ಜಿಗಿಯುವ, ತೀವ್ರವಾಗಿ ಚಲಿಸುವ ಪಾದಗತಿಗಳಿಗೆ ತುಂಬ ಅನುಕೂಲಕರ. ಈ ಹಿನ್ನೆಲೆಯಲ್ಲಿ ಯಕ್ಷಗಾನವನ್ನು ನೋಡಬಹುದು. ಇಲ್ಲಿಯೂ ಎದೆ ಭಾಗಕ್ಕಿಂತ ಸೊಂಟ ಮತ್ತು ಕಾಲುಗಳು, ಪಾದಗಳು ಹೆಚ್ಚಾಗಿ ಪಾಲ್ಗೊಳ್ಳುತ್ತವೆ. ಅದರಲ್ಲೂ ಇಲ್ಲಿ ಹೆಜ್ಜೆಗಳೇ ಮಾತನಾಡುತ್ತವೆ. ಹಸ್ತ ಮತ್ತು ಮುಖಮುದ್ರೆಯಿಂದ ಏನ ಹೇಳಬಯಸುತ್ತೀರೋ ಅದನ್ನು ಇನ್ನಷ್ಟು ಸುಂದರಗೊಳಿಸಿ ಆ ಅರ್ಥಗಳನ್ನು ಹೆಜ್ಜೆಯೇ ಹೇಳುತ್ತದೆ. ಯಕ್ಷಗಾನ ಬಲ್ಲವರಿಗೆ ಗೊತ್ತು ಹೆಜ್ಜೆಯ ಮೇಲೆ ಹಾಕುವ ಭಾರ ಸಹ ಪಾತ್ರದ ಸ್ವಭಾವಕ್ಕೆ ಅನುಸಾರವಾಗಿ ಬೇರೆ ಬೇರೆ ಆಗಿರುತ್ತದೆ. ಉತ್ತಮ ನಟನನ್ನು ಹೊಗಳುವಾಗ `ಅವನ ಕಾಲಾಟ ಚೆನ್ನಾಗಿದೆ ಎನ್ನುವುದುಂಟು.
               ಇನ್ನೂ ಮೂಲಕ್ಕೆ ಹೋದರೆ ಯಕ್ಷಗಾನದಲ್ಲಿಯ ಬಣ್ಣಗಾರಿಕೆ ಇಲ್ಲಿಯ ಮುಖವಾಡ ಕುಣಿತದಂತೆ ಸ್ಥಾಯೀ ಭಾವವನ್ನು ಪ್ರದಶರ್ಿಸುತ್ತದೆ. ಬಹಳ ಹಿಂದೆ ಭಾಗವತರೂ ಸಹ ಪಾತ್ರಧಾರಿಗಳೊಡನೆ ಮುಂದಕ್ಕೆ ಹಿಂದಕ್ಕೆ ಚಲಿಸುತ್ತಿದ್ದರು. (ಜೋಗಿಯರ ಆಟದಂತೆ) ದೈನಂದಿನ ಸೀರೆಗಳನ್ನೇ ಹಿಂದೆ ಕಸೆಯಾಗಿಸಿದ್ದರು. ಪಗಡೆಗೆ ಬಟ್ಟೆಯ ಬದಲು ಹೂವು ಸುತ್ತುತ್ತಿದ್ದರು. (ಅಗೇರರ ಯಕ್ಷಗಾನದಲ್ಲಿ ಹೂವಿನ ಪಗಡೆಗಳಿದ್ದ ಬಗ್ಗೆ ಉಲ್ಲೇಖಗಳಿವೆ.) ಇದರ ಹಾಡುಗಳಲ್ಲಿ ತ್ರಿಪದಿಗಳು, ಜೋಗುಳಗಳು, ಸೋಬಾನೆಗಳು, ಭಜನೆಗಳು ಪ್ರಧಾನ ಮಟ್ಟುಗಳಾಗಿದ್ದವು. ಮೃದಂಗಗಳು ಮಣ್ಣಿನದಾಗಿದ್ದವು ಎನ್ನಲಾಗಿದೆ. ಮೃದಂಗ ಶಬ್ದದ ಅರ್ಥವೂ ಮಣ್ಣಿನಿಂದ ಮಾಡಿದ ವಾದ್ಯ ಎಂದೇ ಆಗುತ್ತದೆ. (ಹಾಲಕ್ಕಿ ಒಕ್ಕಲಿಗರ ಗುಮಟೆ ಎಂಬ ವಾದ್ಯವು ಇಂದಿಗೂ ಮಣ್ಣಿನಿಂದ ಮಾಡಿದವೇ ಆಗಿದೆ.)
            ಹೀಗೆ ಇಲ್ಲಿಯ ಅನೇಕ ಜನಪದ ಕಲೆಗಳು, ಆಚರಣೆಯ ಅಂಶಗಳು, ಸ್ಥಳೀಯ ಕಲೆಯ ಮಾದರಿಗಳು ಯಕ್ಷಗಾನದಲ್ಲಿ ಛದ್ಮವೇಷಧಾರಿಗಳಾಗಿವೆ. ಇದರಲ್ಲಿ ನಾಗನೃತ್ಯವಿದೆ: ಭೂತದ ಕೋಲವಿದೆ; ಹೂವಿನ ಮಕ್ಕಳ ಅಲಂಕರಣವಿದೆ; ಸುಗ್ಗಿ ಕುಣಿತದಲ್ಲಿಯ ಲಾಲಿ ಎಂಬ ಪ್ರಭೇದವಿದೆ; ಕೀರ್ತನೆಯಿದೆ; ಜನಪದ ಕಲೆಯ ಮೂಲವರ್ಣಗಳಾದ ಕೆಂಪು, ಹಳದಿಯ ಪ್ರಾಧಾನ್ಯವಿದೆ.
           ಇನ್ನೂ ಆಳದಲ್ಲಿ ಯಕ್ಷಗಾನದ ಒಟ್ಟೂ ಸಂವಹನೆಯಲ್ಲಿ ಇಲ್ಲಿಯ ಕಾಡಿದೆ, ಕಡಲಿದೆ. ಆರಾಧನಾ ರಂಗಭೂಮಿಯೊಂದು ಮನರಂಜನಾ ಉದ್ಯಮವಾಗಿ ಬೆಳೆದು ಬರುವ ಸಂದರ್ಭದಲ್ಲಿ ಅದು ತನ್ನ ಪ್ರದರ್ಶನೀಯತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಮೂಲದ್ರವ್ಯವನ್ನು ರೂಪಾಂತರಿಸಿಕೊಂಡು ಹೊಸ ರಂಗಾಂಶಗಳಾಗಿ ಮೈದಾಳಿವೆ.
ಬಹುಶಃ ಇಷ್ಟು ಸಾಕು ಎನಿಸುತ್ತದೆ --ಶ್ರೀಪಾದ ಭಟ್

No comments:

Post a Comment