Wednesday 12 June 2013

'ಸಹಯಾನ ಸಾಹಿತ್ಯೋತ್ಸವ' - 2013 -- ಚಳುವಳಿಗಳ ಮುಂದಿರುವ ಯಕ್ಷಪ್ರಶ್ನೆ

'ಸಹಯಾನ ಸಾಹಿತ್ಯೋತ್ಸವ' - 2013
 ಚಳುವಳಿಗಳ ಮುಂದಿರುವ ಯಕ್ಷಪ್ರಶ್ನೆ
ಚಳುವಳಿಗಳು ಸತ್ವಹೀನವಾಗಿವೆ ಅಥವಾ ಇಲ್ಲವಾಗಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದೇ ಸಮಯದಲ್ಲಿ - ವಿಷಯಾಧಾರಿತ, ಐಡೆಂಟಿಟಿ-ಆಧಾರಿತ, ಪ್ರತ್ಯೇಕ ದ್ವೀಪಗಳಾಗುತ್ತಿರುವ, ಯಾಜಮಾನ್ಯವನ್ನು ಆರೋಪಿಸಿ ಹಲವು ಸಂದರ್ಭಗಳಲ್ಲಿ ಪರಸ್ಪರ ವಿರೋಧಿಸುವ - ಹಲವು ದೊಡ್ಡ ಚಳುವಳಿಗಳೂ ಲಕ್ಷಾಂತರ ಸ್ಥಳೀಯ ಚಳುವಳಿಗಳೂ ನಡೆಯುತ್ತಿವೆ. ಹಾಗಾದರೆ ಎಲ್ಲಾ ರೀತಿಯ ಬಹುತ್ವ ಮತ್ತು ಐಡೆಂಟಿಟಿಗಳನ್ನು ಗೌರವಿಸುತ್ತಾ ಅವನ್ನು ಉಳಿಸಿಕೊಂಡು ಈ ಚಳುವಳಿಗಳ ದ್ವೀಪಗಳ ನಡುವೆ ಸೇತುವೆಯಾಗಬಲ್ಲ ಸಾರ್ವತ್ರಿಕ ಆಯಾಮವುಳ್ಳ ಸಾರ್ವತ್ರಿಕ ಚಳುವಳಿ ಸಾಧ್ಯವಿಲ್ಲವೇ ? ಅಂತಹ ಚಳುವಳಿ ಕಟ್ಟಿಕೊಳ್ಳುವುದು ಹೇಗೆ ? - ಎಂಬುದು ಇವತ್ತಿನ ಯಕ್ಷ ಪ್ರಶ್ನೆ. ಈ ಪ್ರಶ್ನೆಯನ್ನೇ ಆರ್.ವಿ.ಭಂಡಾರಿಯವರು ತಮ್ಮ 'ವರ್ಣದಿಂದ ವರ್ಗದೆಡೆಗೆ' ಪುಸ್ತಕದಲ್ಲಿ ಕೇಳಿದ್ದರು. ಇದು ಮೇ 26ರಂದು ಹೊನ್ನಾವರದ ಕೆರೆಕೋಣದಲ್ಲಿ ನಡೆದ ಈ ವರ್ಷದ ಸಹಯಾನ ಸಾಹಿತ್ಯೋತ್ಸವದಲ್ಲಿ ಪ್ರೊ.ಎಂ.ಜಿ. ಹೆಗಡೆಯವರ ಆಶಯ ನುಡಿಯ ಸಾರವಾಗಿತ್ತು.
ಆರ್.ವಿ.ಭಂಡಾರಿಯವರ ನಿಧನದ ನಂತರ ಅವರ ಆಶಯಗಳನ್ನು ಮುಂದೊಯ್ಯುವ ಉದ್ದೇಶದಿಂದ ಅವರ ಸ್ನೇಹಿತರು, ಸಹಚರರು, ವಿದ್ಯಾಥರ್ಿಗಳು, ಕುಟುಂಬದವರು ಆರಂಭಿಸಿದ ಸಂಸ್ಥೆ 'ಸಹಯಾನ'. ಕಳೆದ ಐದು ವರ್ಷಗಳಿಂದ ಅವರ ಹುಟ್ಟು ಹಬ್ಬದ ದಿನದಂದು (ಮೇ 5 - ಅದು ಮಾಕ್ರ್ಸ ಹುಟ್ಟುದಿನವೂ ಹೌದು) 'ಹೊಸ ತಲೆಮಾರು' ಎಂಬ ಸಾಮಾನ್ಯ ಥೀಮ್ ಮತ್ತು ಪ್ರತಿ ವರ್ಷ ಅದರಡಿಯಲ್ಲಿ ಒಂದು ನಿದರ್ಿಷ್ಟ ಥೀಮ್ನೊಂದಿಗೆ ಸಾಹಿತ್ಯೋತ್ಸವ ಹಮ್ಮಿಕೊಳ್ಳುತ್ತಿದೆ. ಈ ಬಾರಿಯ ಥೀಮ್ 'ಚಳುವಳಿ: ಹೊಸ ತಲೆಮಾರು'. ಈ ಬಾರಿ ಚುನಾವಣೆಗಳಿಂದಾಗಿ ಮೇ.26ರ ವರೆಗೆ ಮುಂದಕ್ಕೆ ಹೋಗಿತ್ತು. ಉದ್ಘಾಟನಾ ಭಾಷಣ ಮಾಡಿದ ಬರಗೂರು ರಾಮಚಂದ್ರಪ್ಪನವರು ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ ವಿಷದಗೊಳಿಸಿದರು.

ಕಣ್ಣಿಗೆ ಕಾಣದ ಜಾಗತಿಕ ಯುದ್ಧ

'1970-80ರ ದಶಕದ ಚಳುವಳಿಯ ಹಿನ್ನೆಲೆ ಮತ್ತು ಸ್ವರೂಪ, ಮತ್ತು 1990ರ ದಶಕದ ನಂತರ ಬದಲಾದ ಸನ್ನಿವೇಶ ಮತ್ತು ಅದು ಚಳುವಳಿಗಳ ಮೇಲೆ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತಾ 'ಚಳುವಳಿ:ಹೊಸ ತಲೆಮಾರು' ಎದುರಿಸುತ್ತಿರುವ ಸಮಸ್ಯೆಗಳನ್ನು ಬರಗೂರು ವಿಷದೀಕರಿಸಿದರು. ಮುಂಬರುವ ಮೂರನೆಯ ಜಾಗತಿಕ ಯುದ್ಧ ಕಣ್ಣಿಗೆ ಕಾಣಿಸದ ಶಬ್ದವಿಲ್ಲದ, ದುಷ್ಪರಿಣಾಮ ಗೊತ್ತೇ ಆಗದ ಯುದ್ಧ. ಅದು ವಿದೇಶಿ ಸಾಲದ ಯುದ್ಧ. ನಮ್ಮ ದೇಶ 1990ರ ದಶಕದಲ್ಲಿ ಕಂಡ ಭಾರೀ ಬದಲಾವಣೆಗಳನ್ನು 1980ರ ದಶಕದಲ್ಲೇ ಕಂಡ ಲ್ಯಾಟಿನ್ ಅಮೆರಿಕದ ಕಾಮರ್ಿಕ ನಾಯಕ ಲೂಯಿ ಸಿಲ್ವಾ 1985ರಲ್ಲಿ ಹೇಳಿದ ಈ ಅರ್ಥಗಭರ್ಿತ ಮಾತುಗಳಲ್ಲಿ ವಿವರಿಸಿದರು.
1970-80 ರ ದಶಕ ಸಾಮಾಜಿಕ ವಿವೇಕ, ಜಾತಿ ವಿನಾಶ, ಕೋಮು ಸೌಹಾರ್ದತೆ, ಸಂಘಟನೆ, ಸೈದ್ದಾಂತಿಕತೆಯ ಕಾಲವಾಗಿತ್ತು. 1990ರ ದಶಕದ ನಂತರದ ಕಾಲದಲ್ಲಿ 1970-80ರ ದಶಕದ ಮೌಲ್ಯಗಳ ಚಿಂತನಾಕ್ರಮ ಸ್ಥಳಾಂತರಗೊಂಡು ಆಥರ್ಿಕ ಅವಿವೇಕ, ಜಾತೀಯತೆ, ಕೋಮು ಸಂಘರ್ಷ, ವಿಘಟನೆ, ಧಾಮರ್ಿಕತೆಯ ಅಪವ್ಯಾಖ್ಯಾನ ಮುನ್ನೆಲೆಗೆ ಬಂದಿದೆ. ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನಾಯಕತ್ವದ ಬದಲು ಆಥರ್ಿಕ ನಾಯಕತ್ವ ಮುನ್ನೆಲೆಗೆ ಬಂದಿದೆ. ಸ್ವಾರ್ಥ ಮತ್ತು ಲಾಭಕೋರತನದ ಮಾರುಕಟ್ಟೆ ಮನೋಧರ್ಮ, ಜಾಹಿರಾತೀಕರಣದಿಂದಾಗಿ ವ್ಯಾಪಕವಾಗಿ ಹರಡಿದೆ. ಏಕ ಧರ್ಮ ಏಕ ಸಂಸ್ಕೃತಿ ಮತ್ತು ಏಕಮುಖ ಆಥರ್ಿಕತೆಯ ಪ್ರತಿಪಾದನೆ ಆಕ್ರಮಿಸಿಕೊಂಡಿದೆೆ.  ಮೋದಿಯಂತಹ 'ಏಕಮುಖ ಅಭಿವೃದ್ಧಿ'ಯ ನಾಯಕರನ್ನು ದೇಶದ ಮುಂದಿನ ನಾಯಕರಾಗಿ ಬಿಂಬಿಸಲಾಗುತ್ತಿದೆ.
ಹಲವರು ಚಳುವಳಿಗಳು ಸತ್ತಿವೆ ಎಂದು ಘೋಷಿಸಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಎಂದು ಹೇಳುತ್ತಾ ಅದರ ಶವಪರೀಕ್ಷೆಗೆ ಸಿದ್ಧರಾಗಿದ್ದಾರೆ. ಚಳುವಳಿಗಳ ನ್ಯೂನ್ಯತೆಗಳ ಬಗ್ಗೆ ಖಂಡಿತ ಆತ್ಮಾವಲೋಕನ ಮಾಡಬೇಕು. ಆದರೆ ಅದರ ಹೆಸರಲ್ಲಿ ಆತ್ಮಾಹುತಿ ಬೇಡ. ಬದಲಾಗುತ್ತಿರುವ ಸಮಾಜದಲ್ಲಿ ಯಾವಾಗಲೂ ಚಳುವಳಿಗಳು ಇರುತ್ತವೆ. ಚಳುವಳಿಗಳು ಇರದ ಸಮಾಜ ಆರೋಗ್ಯಕರ ಸಮಾಜ ಅಲ್ಲ. ಅದು ಪ್ರಜಾಪ್ರಭುತ್ವ ಇರುವ ಸಮಾಜವೂ ಅಲ್ಲ.  ಹೊಸ ತಲೆಮಾರಿನ ಚಳುವಳಿಗೆ ಮಾರಕವಾದ ಜಾಗತೀಕರಣ ಮತ್ತು ಜಾಹಿರಾತೀಕರಣ ನಿಮರ್ಿಸುವ ಮನೋಧರ್ಮದ ವಿರುದ್ಧ ಹೋರಾಡಬೇಕಾಗಿದೆ' ಎಂದರು ಬರಗೂರು.


 ಚಳುವಳಿಯ ನಿನ್ನೆ-ನಾಳೆಗಳು

'ಕನರ್ಾಟಕ ಕಂಡ ಚಳುವಳಿಗಳು - ನಿನ್ನೆ ಮತ್ತು ನಾಳೆ' ಗೋಷ್ಟಿಯಲ್ಲಿ ಡಾ.ಎಂ.ಡಿ.ಒಕ್ಕುಂದ 'ನಿನ್ನೆ'ಯ ಬಗ್ಗೆ ಮಾತನಾಡಿದರೆ ಡಾ.ಎಚ್.ಎಸ್.ಅನುಪಮ 'ನಾಳೆ'ಯ ಬಗ್ಗೆ ಮಾತನಾಡಿದರು. 'ನಿನ್ನೆ'ಯನ್ನು ಬೌದ್ಧ ಧರ್ಮದ ಕಾಲದ ವರೆಗೂ ವಿಸ್ತರಿಸಿದ ಒಕ್ಕುಂದ, 'ನಿನ್ನೆ'ಯ ನಾಲ್ಕು ಮಾದರಿಯ ಚಳುವಳಿಗಳಿಂದ ಏನು ಕಲಿಯಬಹುದು ಎಂಬುದರ ಬಗ್ಗೆ ಹೆಚ್ಚು ಒತ್ತು ಕೊಟ್ಟರು.  ಬೌದ್ಧ ಮತ್ತು ವೀರಶೈವದಂತಹ ಧಾಮರ್ಿಕ ಚಳುವಳಿಗಳು; ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಬಂಡೆದ್ದ ಕಬೀರ, ತುಕಾರಾಂ ಮುಂತಾದ ಅನುಭಾವಿ ಚಳುವಳಿಗಳು; ಟಿಪ್ಪು, ಕಿತ್ತೂರ ಚೆನ್ನಮ್ಮನಿಂದ ಗಾಂಧಿಯ ವರೆಗಿನ ವಸಾಹತುಶಾಹಿ ವಿರೋಧಿ ಚಳುವಳಿಗಳು; ವಸಾಹತೋತ್ತರ ಚಳುವಳಿಗಳು - ಅವರು ವಿಶ್ಲೇಷಿಸಿದ ನಾಲ್ಕು ಮಾದರಿಗಳು.
ಚಳುವಳಿ ಸಮಾಜದಲ್ಲಿ ಬದಲಾವಣೆಯ ಪ್ರಕ್ರಿಯೆಯ ಭಾಗ. ಚಳುವಳಿಯ ಸಫಲತೆ-ವಿಫಲತೆ, ಪರಿಭಾಷೆ-ವಿಧಾನಗಳ ಬಗ್ಗೆ ನಿಧರ್ಾರಕ್ಕೆ ಬರುವುದರ ಔಚಿತ್ಯವನ್ನು ಚಿನು ಅಚಿಬೆ ಅವರ ಆಫ್ರಿಕನ್ ಜಾನಪದ ಕತೆ, ಮತ್ತು ಸೊಫೊಕ್ಲಿಸನ ಗ್ರೀಕ್ ನಾಟಕದ ದೃಷ್ಟಾಂತದ ಮೂಲಕ ಪ್ರಶ್ನಿಸುತ್ತಾ, ಅನುಪಮ ನಾಳೆಯ ಚಳುವಳಿಗಳ ಬಗ್ಗೆ ತಮ್ಮ ಕೆಲವು ಪ್ರಸ್ತಾವಗಳನ್ನು ಮುಂದಿಟ್ಟರು. ನಾಳೆಯ ಚಳುವಳಿಗಳು ಜಾತಿ-ವರ್ಗ-ಲಿಂಗದ ವಿಷಯಗಳ ಬಗ್ಗೆ ಇರುತ್ತವೆ. ಪ್ರಜಾಸತ್ತಾತ್ಮಕ ಅವಕಾಶಗಳನ್ನೇ ಕಸಿಯುವುದರ ವಿರುದ್ದ, ಇದಕ್ಕಾಗಿ ಚುನಾವಣಾ ಸುಧಾರಣೆಗಳಿಗಾಗಿ ಚಳುವಳಿಗಳು ಬೇಕಾಗಿವೆ ಎಂದರು. ದಲಿತ-ಕಮ್ಯುನಿಸ್ಟ್, ಮಹಿಳೆ-ಪರಿಸರ-ಬುಡಕಟ್ಟು ಮುಂತಾದ ಚಳುವಳಿಗಳ ದ್ವೀಪಗಳ ನಡುವೆ ಸೇತುವೆಯಾಗಬೇಕು ಎಂಬ ತನ್ನ ಆಸೆ ವ್ಯಕ್ತಪಡಿಸಿದರು. ಎಲ್ಲಾ ಪ್ರಗತಿಪರ 'ವಾದಗಳ' ಮಿಶ್ರಣ (ಸಮ್ಮಿಶ್ರ ಲೋಹದಂತೆ) ಅಥವಾ ಅವುಗಳ ಸೃಜನಾತ್ಮಕ 'ನಾಶ'ದಿಂದ ಒಂದು ಹೊಸ ವಾದ ಹೊಮ್ಮಬಹುದು ಎಂಬ ಆಶಾಬಾವನೆ ವ್ಯಕ್ತಪಡಿಸಿದರು.
ಎಂ.ಜಿ.ಹೆಗಡೆ, ಬರಗೂರು, ಒಕ್ಕುಂದ ಮತ್ತು ಅನುಪಮ ಮಂಡಿಸಿದ ಈ ವಿಚಾರಗಳ ಮತ್ತು ವಿಷಯದ ಇತರ ಆಯಾಮಗಳ ಬಗ್ಗೆ ಊಟದ ವಿರಾಮದ ನಂತರ ನಡೆದ 'ಚಳುವಳಿ - ಹೊಸ ತಲೆಮಾರಿನ ಪ್ರಶ್ನೆಗಳು' ಸಂವಾದದಲ್ಲಿ, ಸಮಾರೋಪದಲ್ಲಿ, ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಎಲ್ಲರ ಮಧ್ಯೆ ಚಚರ್ೆ ನಡೆಯಿತು. ಚಳುವಳಿಗಳು ಏಳು ಬೀಳುಗಳು ಕಂಡಿವೆ. ಆದರೆ ಕೆಲವರು ಹೇಳುವಂತೆ ಸತ್ತಿಲ್ಲ. ನಿರಂತರವಾಗಿ ನಡೆಯುತ್ತಲೇ ಇವೆ. ಚಳುವಳಿಗಳ ವರದಿಗಳ ಬಗ್ಗೆ ಮಾಧ್ಯಮಗಳ ಮೌನ-ಉಪೇಕ್ಷೆ, ಅವುಗಳನ್ನು ಸ್ಥಳೀಯ ವರದಿಗೆ ಸೀಮಿತವಾಗಿಸುವ ಪ್ರವೃತ್ತಿ, ಅವು ಅಮುಖ್ಯ ಎನ್ನುವ ಮನೋಧರ್ಮ ದೊಡ್ಡ ಚಳುವಳಿಗಳನ್ನೂ (ಉದಾ. ಫೆಬ್ರುವರಿಯಲ್ಲಿ ನಡೆದ ಸಾರ್ವತ್ರಿಕ ಮುಷ್ಕರ, ಪಾಲರ್ಿಮೆಮಂಟಿನ ಮುಂದೆ ಆಹಾರ ಹಕ್ಕಿಗಾಗಿ ನಡೆದ ಭಾರೀ ಪ್ರತಿಭಟನೆ) ಜನಮಾನಸದಿಂದ 'ಇಲ್ಲವಾಗಿಸುವ' ಹುನ್ನಾರದಲ್ಲಿ ತೊಡಗಿವೆ. ಇದು ಚಚರ್ೆಯಲ್ಲಿ ವ್ಯಾಪಕವಾಗಿ ವ್ಯಕ್ತವಾದ ಅಭಿಪ್ರಾಯ.




ಹೊಸ ತಲೆಮಾರಿನ ಚಳುವಳಿಗಳ ಬಗ್ಗೆ 

ಚಳುವಳಿಗೆ ಹೊಸ ತಲೆಮಾರಿನಲ್ಲಿ ಭೂಮಿಕೆ ಸಿದ್ಧ ಪಡಿಸಲು ಶಿಕ್ಷಣದಲ್ಲಿ ಅದರಲ್ಲೂ ಪಠ್ಯಪುಸ್ತಕಗಳ ಮತ್ತು ಇತರ ಪಠ್ಯಗಳ ರಚನೆ, ಶಿಕ್ಷಣ ಲಾಬಿ ಮತ್ತು ಕೋಮುವಾದಿ ಬೆಂಬಲಿಗರ 'ಸಾಂಸ್ಕೃತಿಕೆ' ಇಮೇಜ್ ಬೆಳೆಸುವ 'ಉತ್ಸವ'ಗಳಲ್ಲಿ ಭಾಗವಹಿಸುವ ಮೂಲಕ ಅವರಿಗೆ ವಿಶ್ವಾಸಾರ್ಹತೆ ಕೊಡುವ ಪ್ರಗತಿಪರರ ಆತ್ಮಾವಲೋಕನದ ಅಗತ್ಯ, ಸಾಮಾಜಿಕ ವಿಘಟನೆಯ ಫಲವಾಗಿ ಚಳುವಳಿಯಲ್ಲಿ ಬಹುಭಾಗ ಜನತೆಯ ನಿರ್ಲಕ್ಷ ಮತ್ತು ಸಾಮೂಹಿಕ ಪಾಲ್ಗೊಳ್ಳುವಿಕೆಯ ಅಭಾವ, ಚಳುವಳಿಗಳ ವಿರುದ್ಧ ಮಾಧ್ಯಮಗಳ ಸತತ ಅಪಪ್ರಚಾರ, ಯುವಜನತೆಯನ್ನು ಚಳುವಳಿ ಒಳಗೊಳ್ಳಲು ಪರಿಭಾಷೆ-ತಂತ್ರ-ಮಾಧ್ಯಮಗಳನ್ನು ಸಮಕಾಲೀನಗೊಳಿಸಬೇಕಾದ ತುತರ್ು, ವಚನ ಚಳುವಳಿ ಮತ್ತು 70-80ರ ದಶಕಗಳ ಚಳುವಳಿಗಳ ಹಲವು ಅಂಶಗಳು ಎಷ್ಟರ ಮಟ್ಟಿಗೆ ಇಂದು ಪ್ರಸ್ತುತ ಮತ್ತು ಅವುಗಳ ನಾಸ್ಟಾಲ್ಜಿಯದ ಬಗ್ಗೆ ಎಚ್ಚರ, ವಿದೇಶಿ ಅಥವಾ ದೇಶೀ ನಿಧಿ ಪಡೆಯುವ ಎನ್.ಜಿ.ಒ.ಗಳಿಂದಾಗಿ ಪ್ರಗತಿಪರ ಸಂಘಟನೆಗಳಿಗೆ ಕಾರ್ಯಕರ್ತರ ಅಭಾವ, ಜಾಗತೀಕರಣವನ್ನು ಸಾಮಾನ್ಯ ಜನತೆ (ಉದಾ. ಗುಲ್ಬರ್ಗದ ಮಹಿಳಾ ಕಟ್ಟಡ ಕಾಮರ್ಿಕರು ತಮ್ಮ ಉದ್ಯೋಗ ನಷ್ಟಕ್ಕೆ ಕಂಡುಕೊಂಡ ಬದಲಿ) ಎದುರಿಸುವ ಬಗೆಯಿಂದ ಕಲಿಯಬೇಕಾದ ಪಾಠ, ಚಳುವಳಿಯ ನಾಯಕರು ಕಾರ್ಯಕರ್ತರು ಖಾಸಗಿ ಬದುಕಿನಲ್ಲೂ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ,  ವ್ಯಾಪಕ ಸಾರ್ವತ್ರಿಕ ದೊಡ್ಡ ಚಳುವಳಿಗಳ ಸಾಧ್ಯತೆ ಮತ್ತು ಅಗತ್ಯತೆ, ಸಾಮಾಜಿಕ ಮತ್ತು ಆಥರ್ಿಕ-ರಾಜಕೀಯ ಸ್ವರೂಪದವು ಎಂದು ಚಳುವಳಿಗಳನ್ನು ಪ್ರತ್ಯೇಕಿಸುವ ಅಪಾಯ, ಚಳುವಳಿಗಳು ಸಂಘಟನೆಯಾಗಿ ಗಟ್ಟಿಗೊಳ್ಳುವುದರ ಅಭಾವ, ದೊಡ್ಡ ಸಂಘಟನೆಗಳು ಜಡಗೊಂಡು ಸನ್ನಿವೇಶಕ್ಕೆ ಸ್ಪಂದಿಸಲಾರದ ಪರಿಸ್ಥಿತಿಯ ಮತ್ತು ಸ್ವಯಂಸ್ಫೂರ್ತತೆ ಕಳೆದುಕೊಳ್ಳುವ ಅಪಾಯ, ಲ್ಯಾಟಿನ್ ಅಮೆರಿಕನ್ ಚಳುವಳಿಗಳಿಂದ ಕಲಿಯಬಹುದಾದ ಪಾಠಗಳು - ಹೀಗೆ 'ಚಳುವಳಿ: ಹೊಸ ತಲೆಮಾರು' ವಿಷಯದ ಹತ್ತು ಹಲವು ಆಯಾಮಗಳ ಬಗ್ಗೆ ಉತ್ತಮ ಚಚರ್ೆ ನಡೆಯಿತು.


ಸಾಂಸ್ಕೃತಿಕ ವೈವಿಧ್ಯತೆ ಮೆರೆಸಿದ ಸಹಯಾನ -ಸಂವಾದ

ಕೆ.ಎಸ್.ವಿಮಲ ಸಂಯೋಜನೆ ಮಾಡಿದ 'ಚಳುವಳಿ - ಹೊಸ ತಲೆಮಾರಿನ ಪ್ರಶ್ನೆಗಳು' ಸಂವಾದದಲ್ಲಿ ವೈ.ಬಿ.ಹಿಮ್ಮಡಿ, ಕೆ.ಎಸ್.ಲಕ್ಷ್ಮಿ, ನವೀನ್ ಸೂರಿಂಜೆ, ವಸಂತರಾಜ್ ಭಾಗವಹಿಸಿದ್ದರು. ಚಳುವಳಿಯ ಮುಂದಿರುವ ಸಾಹಿತ್ಯ-ಸಾಂಸ್ಕೃತಿಕ ಸವಾಲುಗಳ ಕುರಿತು ಮಾತನಾಡಿದ ರಾಯಭಾಗದ ಲೇಖಕ ಯಲ್ಲಪ್ಪ ಹಿಮ್ಮಡಿ ಎಪ್ಪತ್ತು ಎಂಬತ್ತರ ದಶಕದಲ್ಲಿ ನಡೆದಂತೆ ನಡೆದಂತೆ ಪ್ರತಿಗಾಮಿ ಶಕ್ತಿಗಳಿಗೆ ಒಂದು ಸಂಘಟಿತ ಪ್ರತಿರೋಧವನ್ನು ಒಡ್ಡುವ ಬದ್ಧತೆಯನ್ನು ನಾವಿಂದು ಹೊಂದಬೇಕಾಗಿದೆ ಎಂದರು. ಮಹಿಳೆ ಮತ್ತು ಸಾಮಾಜಿಕ ಅಸಮತೋಲನದ ಹಿನ್ನೆಲೆಯಲ್ಲಿ ಚಳುವಳಿ ಎದುರಿಸಬೇಕಾದ ಪ್ರಶ್ನೆಗಳ ಕುರಿತು ಗಮನ ಸೆಳೆದವರು ಜನವಾದಿ ಮಹಿಳಾ ಸಂಘಟನೆಯ ರಾಜ್ಯಕಾರ್ಯದಶರ್ಿ ಕೆ.ಎಸ್ ಲಕ್ಷ್ಮಿ, ಮಾಧ್ಯಮ, ಶಿಕ್ಷಣ ಇತ್ಯದಿಯ ಹಿನ್ನೆಲೆಯಲ್ಲಿ ಮಾತನಾಡಿದವರು ಕಸ್ತೂರಿ ವಾಹಿನಿಯ ವರದಿಗಾರದ ನವೀನ ಸುರಂಜೆ; ಚಳುವಳಿಯ ಎದುರು ಇರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸವಾಲುಗಳ ಕುರಿತು ಮಾತನಾಡಿದ ಎನ್ ಕೆ ವಸಂತರಾಜ ಅವರು ಅದಕ್ಕೆ ಎಡಪಂಥೀಯ ಶಕ್ತಿಗಳು, ಸಂಘಟನೆಗಳು ಒಡ್ಡುತ್ತಿರುವ ಯಶಸ್ವಿ ಪ್ರತಿರೋಧಗಳ ಕುರಿತು ಗಮನಸೆಳೆದರು. ಸದ್ಯದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ರೂಪುಗೊಳ್ಳುತ್ತಿರುವ ಚಳುವಳಿಯ ವಿನ್ಯಾಸವನ್ನು ವಿವರಿಸಿದರು. ಸಮುದಾಯ ರಾಜ್ಯಸಮಿತಿಯ ಜತೆ ಕಾರ್ಯದಶರ್ಿ ಕೆ ಎಸ್ ವಿಮಲಾ ಸಂವಾದವನ್ನು ನಡೆಸಿಕೊಟ್ಟರು. ನಂತರ ನಡೆದ ಸಂವಾದದಲ್ಲಿ ನಹುಶ ಶರ್ಮ,ಬಸವರಾಜ ಸೂಲಿಬಾವಿ, ಸಬಿತಾ ಬನ್ನಾಡಿ, ಅನುಪಮಾ ಎಚ್ ಎಸ್, ಮೀನಾಕ್ಷಿಬಾಳಿ, ಯಮುನಾ ಗಾಂವ್ಕರ, ಸುರೇಂದ್ರರಾವ್ ಮುಂತಾದವರು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರವಾರ ಇವರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮಕ್ಕೆ ವಿದ್ಯಾಧರ ಕಡತೋಕ ಇವರು ಸ್ವಾಗತಿಸಿದರು,
 ಸಮಾರೋಪದಲ್ಲಿ ಕೆ.ನೀಲಾ ಮತ್ತು ಕುವೆಂಪು ವಿಶ್ವವಿದ್ಯಾಲಯದ ಡಾ.ಕೇಶವ ಶಮರ್ಾ ಭಾಗವಹಿಸಿದ್ದರು. ಚಳುವಳಿಗೆ ಎಲ್ಲಾ ರೀತಿಯಿಂದಲೂ ನೆಲ ಹದವಾಗಿದ್ದು ಅದು ಸಂಘಟನಾತ್ಮಕವಾದ ಸ್ವರೂಪ ಪಡೆದುಕೊಳ್ಳಬೇಕಾಗಿದೆ ಎಂದರು. ಎಂದಿನಂತೆ ಈ ಬಾರಿಯ ಸಹಯಾನ ಸಾಹಿತ್ಯೋತ್ಸವದಲ್ಲೂ  ಸ್ಥಳೀಯ ಸಂಸ್ಕೃತಿಯ ಸೊಗಡು ಮತ್ತು ಬರಿಯ ವೈಚಾರಿಕ ಚಚರ್ೆಗಳಿಗೆ ಸೀಮಿತವಾಗದ ಸಾಂಸ್ಕೃತಿಕ ವೈವಿಧ್ಯತೆಯ ಸಂಭ್ರಮ ಕಂಡು ಬಂತು. ವೇದಿಕೆಯ ವಿನ್ಯಾಸ ಮತ್ತು ಉದ್ಘಾಟನೆ ಮಾಡಿದ ರೀತಿಯಿಂದ ಆರಂಭವಾಗಿ ಊಟವೂ ಸೇರಿದಂತೆ ಇಡೀ ದಿನದ ಕಾರ್ಯಕ್ರಮದಲ್ಲಿ ಇದು ಕಂಡು ಬಂತು.
ಸಹಯಾನ ಸಾಹಿತ್ಯ ಉತ್ಸವಕ್ಕೆ ಜಾನಪದ ಕಲೆಗಳ ಮೆರಗು
ಹೊಸತಲೆಮಾರು ರೂಢಿಸಿಕೊಂಡ ಭಾಷೆಯನ್ನು ನಾವು ಅರ್ಥಮಾಡಿಕೊಂಡು ಮುನ್ನಡೆಸಬೇಕೆಂದು ಚಚರ್ಿಸಿದ್ದು ಒಂದೆಡೆಯಾದರೆ ಬದುಕಿನ ಔಚಿತ್ಯಕ್ಕಾಗಿ ಮತ್ತು ಸಮಾಜ ಒಪ್ಪಿದ ಎಲ್ಲಾ ಸವಾಲುಗಳನ್ನು ಹೋರಾಟ ಮತ್ತು ಶ್ರಮದ ಮೂಲಕವೇ ಎದುರಿಸಿದ ಜಾನಪದರ ಬದುಕು-ಬೇಗುದಿಯ ಫಲವಾಗಿ ಜನಿಸಿದ ಜಾನಪದ ಕಲೆಗಳ ಪ್ರದರ್ಶನ ಇನ್ನೊಂದೆಡೆ. ಇವೆರಡೂ ಉತ್ಸವವನ್ನು ಯಶಸ್ವಿಗೊಳಿಸಿದುವು ಮಾತ್ರವಲ್ಲ ಪರಸ್ಪರ ಪೂರಕವಾಗಿ ಉತ್ಸವವನ್ನು ಅರ್ಥಪೂರ್ಣಗೊಳಿಸಿದವು; ಸ್ಮರಣೀಯಗೊಳಿಸಿದವು. ಜೊಯ್ಡಾದ ಮಾದೇವ ವೇಳಿಪ ಡೊಳ್ಳು ಬಾರಿಸುವ ಮೂಲಕ ಉದ್ಘಾಟನೆ ಮಾಡಿದ ರೀತಿ ವಿಶಿಷ್ಟವಾಗಿತ್ತು.
 ಜಿಲ್ಲೆಯಲ್ಲಿ ಎಲೆಮರೆಯ ಕಾಯಿಯಂತೆ ಬಾಳಿ ಬದುಕುತ್ತಿರುವ 85 ವರ್ಷ ಕಲಾವಿದ ಜೋಯಿಡಾದ ಮಾದೇವ ಬುಧು ವೆಳೀಪ್ ಹಾಡಿದ ಕುಣಬಿ ರಾಮಾಯಣ ಮತ್ತು ಕುಣಬಿ ಜಾನಪದ ಹಾಡುಗಳು ಹೊಸದೇ ಆದ ಜಾನಪದ ಲೋಕವನ್ನು ಅನಾವರಣ ಮಾಡಿದವು. 'ಕುಯ್ಣ ಪಾವ್ಲಾರೆ, ಕುಯ್ಣ ಪಾವ್ಲಾರೆ' ಎಂದು ಹಾಡು ಪ್ರಾರಂಭಿಸಿದ ಮಾದೇವ ವೇಳಿಪ್ ರ ಹಾಡಿನ ಕೃಷ್ಣ ಯುದ್ಧಪ್ರಿಯನಲ್ಲ, ಅವನು ಕರಿ ಕಂಬಳಿ ಹೊದೆದೇ ಬರುತ್ತಾನೆ. ಅರಮನೆಗೆ ಬರುವುದಿಲ್ಲ. ಬದಲಾಗಿ ಗೌಳಿಗಳ ಕೇರಿಗೆ ಬರುತ್ತಾನೆ. ದನಕಟ್ಟುವ ಕೊಟ್ಟಿಗೆಗೆ ಬರುತ್ತಾನೆ. ದಶರಥ, ರಾಮನ ಕಥೆಗಳು ಸಾಂಪ್ರದಾಯಿಕ ರಾಮಾಯಣಕ್ಕಿಂತ ಭಿನ್ನವಾದ ವೈವಿಧ್ಯತೆಯ ಇನ್ನೊಂದು ರೂಪಕವಾಗಿದೆ. ಮಾದೇವ ಬುಧೋ ವೇಳಿಪ್ ಅವರಿಗೆ ಸಾಥ್ ನೀಡಿದವರು ವಾಮನ ಸಾಬಾ ವೆಳಿಪ್, ಕೃಷ್ಣ ಶಂಕರ ವೆಳಿಪ್, ಆನಂದ ಪ್ರಕಾಶ ವೆಳಿಪ್, ಪ್ರೇಮಾನಂದ ಕೇಶವ ವೆಳಿಪ್, ರಮೇಶ ಕುಷ್ಟ ವೆಳಿಪ್ ಇವರೆಲ್ಲ ಹಾಡಿನಲ್ಲಿಯೇ ರಾತ್ರಿ ಬೆಳಗಾಗಿಸುವ ಜೋಯ್ಡಾದ ಕಲಾವಿದರು.

ನಂತರ ಇನ್ನೊಂದು ಜನಪದ ವಾದ್ಯ ಪ್ರಕಾರವಾದ ಪಂಚವಾದ್ಯವನ್ನು ಕೃಷ್ಣ ಭಂಡಾರಿ,ಹೆಗಡೆ; ಹರಿಹರ ಭಂಡಾರಿ, ಉದಯ ಭಂಡಾರಿ, ಪರಮೇಶ್ವರ ಭಂಡಾರಿ ಮತ್ತು ರಾಜು  ಇವರು ಪ್ರಸ್ತುತಪಡಿಸಿದರು. ಶೃತೆ, ಮೌರಿ, ದೋಳು, ತಾಸ್ಮೋರುಗಳೊಂದಿಗೆ ನುಡಿಸಿದ ಹಾಡುಗಳು ಪ್ರೇಕ್ಷಕರ ಗಮನ ಸೆಳೆದುವು. ಸಾವಿರಾರು ಕಲಾವಿದರನ್ನು ಒಳಗೊಂಡ ಉತ್ತರ ಕನ್ನಡ ಜಿಲ್ಲೆಯ ಈ ವಿಶಿಷ್ಟ ಕಲೆ ಮೊದಲ ಬಾರಿಗೆ ಇಂಥ ಉತ್ಸವದಲ್ಲಿ ಗಮನಸೆಳೆಯುತ್ತಿದೆ.

ಇದರೊಂದಿಗೆ ಹಳದಿಪುರದ ಸಂಕ್ರುಕೇರಿಯ ಸುಬ್ರಾಯ ಗೌಡ ಅವರ ನಾಯಕತ್ವದಲ್ಲಿ  ರಮೇಶ ಗೌಡ, ನಾಗಪ್ಪ ಗೌಡ, ಗಣಪು ಗೌಡ, ನಾರಾಯಣ ಗೌಡ ಇವರಿಂದ ಪ್ರದಶರ್ಿಸಲ್ಪಟ್ಟ ಗುಮಟೆಪಾಂಗ್ ಯಾರ ಎದೆಯನ್ನೂ ಝಲ್ಲೆನಿಸುತ್ತಿತ್ತು. ಉತ್ತರ ಕನ್ನಡದ ಹಾಲಕ್ಕಿ ಸಮುದಾಯದ ಪಾರಂಪರಿಕ ಬುಡಕಟ್ಟು ಕಲೆಯಾದ ಗುಮ್ಟೆಪಾಂಗ್ ಹಾಡುಗಳೊಂದಿಗೆ ಸಣ್ಣ ಕುಣಿತವನ್ನು ಒಳಗೊಂಡಿರುತ್ತದೆ.
ಇದೆಲ್ಲದರ ಜೊತೆಗೆ ಮೈಸೂರಿನ ಜನಾರ್ದನ (ಜೆನ್ನಿ) ಮತ್ತು ಮನೋಹರ ಇವರ ಹಾಡುಗಳು ಚಳುವಳಿಯ ಕಾವನ್ನು ಮತ್ತೊಮ್ಮೆ ಹೆಚ್ಚಿಸಿದವು. ಈ ಮೂರು ಕಾರ್ಯಕ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರು ಪ್ರಾಯೋಜಿಸಿದ್ದರು.


'ಮಕ್ಕಳಿಗಾಗಿ ರಾಮಾಯಣ ದರ್ಶನಂ' ಪುಸ್ತಕ ಬಿಡುಗಡೆ:
ಖ್ಯಾತ ಪತ್ರಕರ್ತ-ಲೇಖಕ ಆರ್.ಜಿ.ಹಳ್ಳಿ ನಾಗರಾಜ್ ಆರ್.ವಿ. ಅವರ 'ಮಕ್ಕಳಿಗೆ ರಾಮಾಯಣ ದರ್ಶನಂ' ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಮತ್ತು ಆರ್.ವಿ. ಜತೆ ಒಡನಾಟಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಹಾಡುಗಾರ ಜೆನ್ನಿ, ಕವಿ ಶಾಂತಾರಾಮ ನಾಯಕ ಹಿಚ್ಕಡ, ವಿಷ್ಣು ನಾಯಕ, ಕಿರಣ ಭಟ್ಟ, ಬರಗೂರು ರಾಮಚಂದ್ರಪ್ಪ, ಮಾದೇವ ವೇಳೀಪ ಉಪಸ್ಥಿತರಿದ್ದರು.  ಹಿರಿಯ ಕವಿ ಸತೀಶ ಕುಲಕಣರ್ಿ ನಡೆಸಿ ಕೊಟ್ಟ 20ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ ನಡೆಯಿತು .ಕನರ್ಾಟಕ ಸಾಹಿತ್ಯ ಅಕಾಡೆಮಿ ಇದನ್ನು ಪ್ರಾಯೋಜಿಸಿತ್ತು.

'ಕಾವ್ಯರಂಗ' 

ಸಂಜೆ ಚಿಂತನ ರಂಗ ಅಧ್ಯಯನ ಕೇಂದ್ರದ ತಂಡದಿಂದ ಪ್ರದಶರ್ಿಸಲ್ಪಟ್ಟ 'ಕಾವ್ಯರಂಗ' ಕನ್ನಡ ಕಾವ್ಯದ ವಾಚನದ ಹೊಸ ಸಾಧ್ಯತೆಯನ್ನು ತೆರೆದು ತೋರಿಸಿತು. ವಾಚನ ಮತ್ತು ಅಭಿನಯ ಎರಡನ್ನು ಅನುಸಂಧಾನಿಸಿ ಕಟ್ಟಿದ ಈ ಪ್ರಯೋಗ ಕಾವ್ಯದ ಅರ್ಥವನ್ನು ವಿಸ್ತರಿಸುವ ಒಂದು ಪರಿಣಾಮಕಾರಿಯಾದ ಬಗೆ. ಕಾವ್ಯದ ಮೂಲಕ ನಮ್ಮನ್ನು ನಾವೇ ಓದಿಕೊಳ್ಳುವ, ತನ್ಮೂಲಕ ಸುತ್ತಲಿನ ಪ್ರಪಂಚವನ್ನು ಓದುವ ಆಶಯವನ್ನು ಹೊಂದಿತ್ತು.

'ಜಿ.ಎಸ್.ಎಸ್ ಅವರ ಹಣತೆ ಹಚ್ಚುತ್ತೇನೆ ನಾನು, ಜಗವ ಬೆಳಗುವೆನೆಂಬ ಭ್ರಮೆಯಿಂದಲ್ಲ. . . . ಇರುವಷ್ಟು ದಿನ ನನ್ನ ಮುಖ ನೀನು ನಿನ್ನ ಮುಖ ನಾನು ನೋಡಬಹುದೆಂಬ ಒಂದೇಒಂದು ಆಸೆಯಿಂದ' ಎಂಬ ಕವಿತೆಯಿಂದ ಪ್ರಾರಂಭವಾದ ಪ್ರಯೋಗ, ಸು.ರಂ. ಎಕ್ಕುಂಡಿಯವರ 'ಪಾಪದ ಸೌದೆಯ ಸೀಳುವ ಆ ಕೊಡಲಿಗೆ, ಕೆಡುಕಿನ ಮಡಕೆಯ ಒಡೆಯುವ ಆ ಕೋಲಿಗೆ ಶರಣು, ಶರಣು' ಎಂಬ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕವಿತೆಯೊಂದಿಗೆ ಮುಕ್ತಾಯವಾಗುತ್ತದೆ. ಓದುವುದೆಂದರೆ ಕೇವಲ ಪುಸ್ತಕ ಓದುವುದಲ್ಲ. ನೇಕಾರ ತಾನು ನೆಂದ ಸೀರೆಯ ವಿನ್ಯಾಸ ಓದುವುದು, ರೈತ ಆಕಾಶದ ನಕ್ಷತ್ರಗಳನ್ನು ಓದುವುದು, ನಲ್ಲ ತನ್ನ ನಲ್ಲೆಯ ಮೈಯನ್ನು ಓದುವುದು, ತಾಯಿ ತನ್ನ ಮಗುವಿನ ಮುಖದಲ್ಲಿ ಒಡಮೂಡಿದ ಭಯ ಸಂತೋಷ,ಅಚ್ಚರಿಯನ್ನು ಓದುವುದು.. ...  ಎಲ್ಲವೂ ಓದಿನ ಲಕ್ಷಣಗಳೇ ಎಂದು ಹೇಳುವ ಸಾಲುಗಳು ಓದಿನ ಸಾಂಪ್ರದಾಯಿಕ ನಂಬಿಕೆಯನ್ನು ಕಿತ್ತೆಸೆಯುತ್ತವೆ. ಜಾನಪದ, ಕವಿರಾಜಮಾರ್ಗ, ವಡ್ಡಾರಾಧನೆ, ಪಂಪ, ಕುಮಾರವ್ಯಾಸ, ಬಸವಣ್ಣ, ಕುವೆಂಪು, ನಿಸಾರ ಅಹಮ್ಮದ್, ವೈದೇಹಿ, ಪ್ರತಿಭಾನಂದಕುಮಾರ, ಮಾಧವಿ ಭಂಡಾರಿ,ಕೆರೆಕೋಣ, ಮಾಂಟೋ, ಸವಿತಾ ನಾಗಭೂಷಣ, ವಿನಯಾ ಒಕ್ಕುಂದ, ಬ್ರೆಕ್ಟ ಹೀಗೆ ಹತ್ತಾರು ಕವಿತೆಯ ಓದಿನ ಮೂಲಕ 'ಭಾವಿಸಿದ ಕನ್ನಡದ ಜನಪದವನ್ನು ಮತ್ತು ಕನ್ನಡದಲ್ಲಿ ಬಾವಿಸಿದ ಜನಪದವನ್ನು'. . . ಒಂದು ವೈಭವೀಕೃತ ಕನರ್ಾಟಕ ಮತ್ತು ವಾಸ್ತವದ ಜನಪದವನ್ನು ತೆರೆದಿಡುವ ಈ ಪ್ರಯೋಗ, ಕವಿತೆಯ ಒಳಸೂಕ್ಷ್ಮವನ್ನು ಯಶಸ್ವಿಯಾಗಿ ಅನಾವರಣ ಮಾಡಿತು.
ಶ್ರೀಪಾದ ಭಟ್ ಅವರ ನಿದರ್ೇಶನದಲ್ಲಿ ಸಿದ್ಧಗೊಂಡ ಈ ಪ್ರಯೋಗದಲ್ಲಿ ದಾಮೋದರ ನಾಯ್ಕ, ಅನಂತ ನಾಯ್ಕ, ವಿಠ್ಠಲ ಭಂಡಾರಿ, ಶ್ರೀನಿವಾಸ ನಾಯ್ಕ, ಶ್ರೀಪಾದ ಭಟ್, ಮಾಧವಿ ಭಂಡಾರಿ, ರಾಧಾ ಮಡಿವಾಳ, ಯಮುನಾ ಗಾಂವ್ಕರ್, ವಿದ್ಯಾಧರ ಕಡತೋಕಾ, ರಾಘು, ಪ್ರಮೋದ ಇವರು ಉತ್ತಮ ಅಭಿನಯ ನೀಡಿದರು. ಚಳುವಳಿಯ ಆಶಯವನ್ನು ಕಾವ್ಯದ ವಾಚನಾಭಿನಯದ ಮೂಲಕ ಪ್ರಸ್ತುತ ಪಡಿಸಿದ ಪ್ರಯೋಗದ ಮೂಲಕ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು. ಈ ನಾಟಕವನ್ನು  ನಾಟಕ ಅಕಾಡೆಮಿಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿತ್ತು.


           



                                 


No comments:

Post a Comment