Tuesday, 4 June 2013

ಗಿರಿ ಪಿಕಳೆ ,ದಿನಕರ ದೇಸಾಯಿ ಮತ್ತು ಶಿಕ್ಷಣ ಚಳುವಳಿ

ಗಿರಿ ಪಿಕಳೆ ,ದಿನಕರ ದೇಸಾಯಿ ಮತ್ತು ಶಿಕ್ಷಣ ಚಳುವಳಿ
ಜಿಲ್ಲೆಯಲ್ಲಿ ನಡೆದ ರೈತ ಹೋರಾಟದ ಭಾಗವಾಗಿ ಅಕ್ಷರ ಕ್ರಾಂತಿ ಕೂಡ ಉ.ಕ ದಲ್ಲಿ ನಡೆಯಿತು. 'ಶಿಕ್ಪ್ಷಣ' ಹೋರಾಟದ ಒಂದು ಭಾಗ ಅಂದುಕೊಂಡ ಕಾಲವದು. ಸ್ವಾತಂತ್ರ್ಯ ಪೂರ್ವದಲ್ಲಿ ಅತಿ ಹಿಂದುಳಿದ ಹಾಲಕ್ಕಿ, ಆಗೇರ, ಹಳೇಪೈಕ್ ಇತ್ಯಾದಿ ಕೆಳಜಾತಿಯ ಜನರಿಗೆ ಶಾಲೆ ಒಂದು ಮರೀಚಿಕೆಯೇ ಆಗಿತ್ತು. (ಬ್ರಾಹ್ಮಣರಿಗೂ ಕೂಡ ಶಾಲೆ ದುರ್ಲಭವೇ ಆಗಿತ್ತು.) ಆ ಕಾಲದಲ್ಲಿ ಇದ್ದ ಪ್ರೌಢಶಾಲೆಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ್ರ. ಅಕ್ಷರ ಜ್ಞಾನವೇ ಇಲ್ಲದ ದಿನಗಳು ಅದು. ದಿನಕರ ದೇಸಾಯಿಯವರು ಚುನಾವಣೆಗೆ ನಿಂತಾದ ಅವರ ಗುರುತಾದ ಆಲದ ಮರಕ್ಕೆ ಮತ  ಹಾಕುವ ಬದಲು ಗುರುತಿಗಾಗಿ ಕೊಟ್ಟ ಆಲದ ಮರದ ಮುದ್ರಿತ  ಚೀಟಿಯನ್ಮ್ನ ಆಲದ ಮರದ ಬುಡಕ್ಕೆ    ಹಾಕಿ ದೇಸಾಯಿಯವರನ್ನು ಗೆಲ್ಲಿಸು ಎಂದು ದೇವರಲ್ಲಿ ಮೊರೆಯಿಟ್ಟ ಸಮುದಾಯದ ಮಧ್ಯೆ ಶಿಕ್ಷಣ ಸಂಸ್ಥೆ ತೆರೆಯುವ ಅನಿವಾರ್ಯತೆ ಅಂದಿನ ರೈತ ಕೂಟಕ್ಕೆ ಒದಗಿತು.
ರೈತ ಚಳುವಳಿಯ ಪ್ರಮುಖ ಭಾಗವೇ ಆಗಿದ್ದ ಗಿರಿ ಪಿಕಳೆಯವರು 1947ರಲ್ಲಿ ಸ್ಥಾಪಿಸಿದ 'ಉತ್ತರ ಕನ್ನಡ ಜಿಲ್ಲೆಯ ಆದಿವಾಸಿ ಸೇವಾ ಸಂಘದ' ಅಂಗ ರಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆದಿವಾಸಿಗಳ ಸಂಖ್ಯೆಯೇ ಹೆಚ್ಚು ಇದ್ದು,ಅವರಲ್ಲಿ ಯಾವುದೇ ಬಗೆಯ ಸಾಮಾಜಿಕ ಉನ್ನತಿಯಾಗದಿರುವುದಕ್ಕೆ ಬಹುದಿವಸಗಳಿಂದ ಅವರಲ್ಲಿ ಬೇರೂರಿ ನಿಂತ ಅಶಿಕ್ಷತತನವೇ ಮೂಲಕಾರಣವಾಗಿರುವುದರಿಂದ ಅವರ ಉನ್ನತಿಗಾಗಿ ಈ ಕೆಳಗಿನ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಈ 'ಆದಿವಾಸಿ ಸೇವಸಂಘ'ವು ಸ್ಥಾಪಿತವಾದದ್ದು.
1.ಶಿಕ್ಷಣವೇ ಎಲ್ಲ ತರದ ಪ್ರಗತಿಗೆ ಮೂಲ ಕಾರಣವಾಗಿರುವುದರಿಂದ ಆದಿವಾಸಿ ಮಕ್ಕಳ ಶಿಕ್ಷಣ ಸೌಕರ್ಯಕ್ಕಾಗಿ ಅವರ ವಸತಿ ಊರುಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವುದು.
2.ಆದಿವಾಸಿಗಳು ಹೆಚ್ಚಾಗಿ ದಾರಿದ್ರಾವಸ್ಥೆಯಲ್ಲಿರುವುದರಿಂದ ಅವರ ಶಿಕ್ಷಣಕ್ಕೆ ಸಾಕಷ್ಟು ಸವಲತ್ತು ಸಿಗುವಂತೆ ಅಲ್ಲಲ್ಲಿ ಅವರ ವಸತಿಗೃಹ(ಬೋಡರ್ಿಂಗ) ಸ್ಥಾಪನೆ ಮಾಡಿ, ಅವರಿಗೆ ಸಕರ್ಾರದಿಂದ ದೊರೆಯಬಹುದಾದ ಎಲ್ಲಾ ತರಹದ ಸೌಕರ್ಯಗಳನ್ನು ದೊರಕಿಸಿಕೊಡುವುದು.
3 ಆದಿವಾಸಿಗಳಲ್ಲಿ ಶಿಕ್ಷಣಾಭಿರುಚಿಯು ಬೆಳೆಯುವಂತೆ ಮಾಡಲು ವಾಚನಾಲಯಗಳನ್ನು ತೆರೆಯುವದು.
4. ಪ್ರೌಢ ಶಿಕ್ಷಣವನ್ನು ಸಾಧ್ಯವಿದ್ದಲ್ಲೆಲ್ಲ ಪ್ರಚಾರಮಾಡಿ ಬಡ ಆದಿವಾಸಿ ಪ್ರೌಢರನ್ನು ಸಾಕ್ಷರರನ್ನಾಗಿ ಮಾಡುವುದು. (ವಿಷ್ಣು ನಾಯ್ಕ; 2004;ದುಡಿಯುವ ಕೈಗಳ ಹೋರಾಟದ ಕಥೆ, ಪು,51) ಅಗತ್ಯವೆಂದು ಮೊದಲ ಬಾರಿಗೆ ದಾಖಲಿಸಿದರು. ಹೋರಾಟಕ್ಕಾಗಿ ಅಕ್ಷರ, ಅಕ್ಷರಕ್ಕಾಗಿ ಹೋರಾಟ, ಅಕ್ಷರ ಹೋರಾಟದ ಮೂಲಕ ಅನ್ನ.(ಭೂಮಿ) ಇದು ಅಂದಿನ ರೈತ ಹೋರಾಟದ ಧ್ಯೇಯವಾಯಿತು. ಹೆಬ್ಬೆಟ್ಟಿನ ಶಾಪದಿಂದ ರೈತರನ್ನು ವಿಮೋಚನೆ ಮಾಡುವುದೆಂದರೆ ಅದು ಸಾಂಸ್ಕೃತಿಕ ಬದಲಾವಣೆಯೂ ಹೌದು ಎಂದುಕೊಂಡ ಗಿರಿ ಪಿಕಳೆ 1941ರಲ್ಲಿ ಅಂಕೋಲೆಯಲ್ಲಿ ಪ್ರಾರಂಭವಾದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಶಿಕ್ಷಕರಾಗಿ ಕೆಲಸ ಮಾಡಿದರು. ಅದರ ಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. ಕಮುನಿಷ್ಟ ಕೆಲಸ ಮಾಡುತ್ತಾರೆಂದು ಆಪಾದಿಸಿ ಭೂಮಾಲಿಕರೇ ಹೆಚ್ಚಾಗಿರುವ ಆಡಳಿತ ಮಂಡಲಿ ಇವರನ್ನು ಈ ಶಾಲೆಯಿಂದ 1953 ರಲ್ಲಿ ಉಚ್ಛಾಟಿಸಿತು.
    ಆದರೆ ಗಿರಿ ಪಿಕಳೆಯವರಿಗೆ ಶಾಲೆಯ ಮಹತ್ವವನ್ನು ಕಡೆಗಣಿಸಲಾಗಲಿಲ್ಲ. ತಕ್ಷಣ ದಯಾನಂದ ನಾಡ್ಕಣರ್ಿಯವರ ಜೊತೆ ಸೇರಿ ಬಬ್ರುವಾಡಾದ ಸೊಡ್ಲೆಚಿಟ್ಟೆಯಲ್ಲಿ(ಸ್ಮಶಾನದಲ್ಲಿ) ಲಿಲಾವಿಗೆ ಬಂದ ಭೂಮಿಯನ್ನು ಕ್ರಯಕ್ಕೆ ಪಡೆದು ಶಾಲೆ ಪ್ರಾರಂಭಿಸುವುದೆಂದು ತೀಮರ್ಾನಿಸಿದರು. ಅದಕ್ಕಾಗಿ ಗಿರಿ ಪಿಕಳೆಯವರು 5000=00ರೂ, ದಯಾನಂದ ಪ್ರಭು 3500=00 ಹಾಕಿಕೊಳ್ಳುತ್ತಾರೆ! ಮುಂಬೈನಲ್ಲಿರುವ ದೇಸಾಯಿಯವರಿಗೆ ಪತ್ರ ಬರೆದಾಗ ಅವರು 1000-00 ರೂ ಕಳುಹಿಸಿದರು. ಶಾಲೆ ಕಟ್ಟಡ ಪ್ರಾರಂಭವಾಯಿತು. ರೈತರೇ ಬಂದು ಶ್ರಮದಾನ ಮಾಡಿದರು. ತಮ್ಮ ಮಕ್ಕಳಿಗಾಗಿ ತಾವೇ ಶಾಲೆ ಕಟ್ಟಬೇಕೆನ್ನುವ ಪ್ರಜ್ಞೆಯನ್ನು ರೈತಕೂಟ ಈಗಾಗಲೇ ಅವರಲ್ಲಿ ಮೂಡಿಸಿತ್ತು. ಶಾಲೆಗೆ ಹಣ ಸೇರಿಸಿದರು. ಅದಕ್ಕೆ ಕೆನರಾ ಎಗ್ರಿಕಲ್ಚರ್ ಹೈಸ್ಕೂಲು ಎಂದು ಹೆಸರಿಡಲಾಯಿತು. (ಇದನ್ನು ಗಿರಿ ಪಿಕಳೆಯವರೊಂದಿಗೆ ಚಚರ್ಿಸಿದಾಗ ಹೇಳಿದ್ದು.) ಈಗಲೂ ಇದನ್ನು ಹಲವರು ಪಿಕಳೆ ಮಾಸ್ತರ ಶಾಲೆ ಎಂದು ಹೇಳುತ್ತಾರೆ ಎಂದು ವಿಷ್ಣು ನಾಯ್ಕರು (ಪು.81) ದಾಖಲಿಸುತ್ತಾರೆ. ಹೀಗೆ ಪಿಕಳೆ-ದೇಸಾಯಿ-ನಾಡ್ಕಣರ್ಿಯವರ ಮುಂದಾಳ್ತನದಲ್ಲಿ ರೈತ ಹೋರಾಟದ ಭಾಗವಾಗಿ 'ಕೆನರಾ ವೆಲ್ ಫೇರ್ ಟ್ರಸ್ಟ' 1953 ರಲ್ಲಿ ಪ್ರ್ರಾರಂಭ ಆಯಿತು. ಗಿರಿ ಪಿಕಳೆಯವರು ಆಧಾರ ಸ್ಥಂಭವಾಗಿದ್ದರೆ ದೇಸಾಯಿಯವರು ಮುಂಬೈಯಿಂದಲೇ ಅಗತ್ಯ ಸಹಾಯ ನೀಡುತ್ತಿದ್ದರು.

    ಈ ಶಾಲೆಯ ಪ್ರಾರಂಭದ ನಂತರ ರೈತ ಹೋರಾಟ ನಡೆಯುತ್ತಿದ್ದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶಾಲೆ ತೆರೆಯಲು ಒತ್ತಾಯಿಸಿದರು. ದೇಸಾಯಿಯವರು ಜಾಗೃತರಾದರು. ಸಂಘಟನೆಯ ವಿಸ್ತರಣೆಗೂ ಇದು ಅಗತ್ಯವೆಂದು ಮತ್ತು  ರೈತರ ಕುಟುಂಬಕ್ಕೆ ಅಕ್ಷರ ಜ್ಞಾನ ನೀಡುವುದು ನಮ್ಮ ಕರ್ತವ್ಯವೆಂದು ತಿಳಿದು ಶಿಕ್ಷಣ ಸಂಸ್ಥೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದರು. ಒಂದೇ ವರ್ಷದಲ್ಲಿ ಉ.ಕ ದಲ್ಲಿ 9 ಹೈಸ್ಕೂಲುಗಳು ಪ್ರಾರಂಭವಾದವು.
    ಉನ್ನತ ಶಿಕ್ಷಣಕ್ಕಾಗಿ ಬೇಡಿಕೆ ಬಂದಾಗ ಅಂಕೋಲೆಯಲ್ಲಿ ಪ್ರಥಮ ದಜರ್ೆ ಪದವಿ ಕಾಲೇಜನ್ನು ಗೋಖಲೆಯವರ ಹೆಸರಿನಲ್ಲಿ 1966 ರಲ್ಲಿ ಪ್ರಾರಂಭಿಸಿದರು.(ಈಗಾಗಲೇ ಕುಮಟಾದಲ್ಲಿ ಕೆನರಾ ಕಾಲೇಜು ಜಿಲ್ಲೆಯ ಪ್ರಥಮ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿತ್ತು. ) 1970ರಲ್ಲಿ ಕಾರವಾರದಲ್ಲಿ ವಾಣಿಜ್ಯ ಮಹಾವಿದ್ಯಾಲಯ ಪ್ರಾರಂಭವಾಯಿತು.
    'ಕೆನರಾ ವೆಲ್ ಫೇರ್ ಟ್ರಸ್ಟ' ಜಿಲ್ಲೆಯಲ್ಲಿ ಒಟ್ಟೂ 2 ಪದವಿ ಮಹಾವಿದ್ಯಾಲಯ, 3 ಪದವಿ ಪೂರ್ವ ಮಹಾವಿದ್ಯಾಲಯ, 15 ಪ್ರೌಢ ಶಾಲೆ, 1 ಇಂಗ್ಲೀಷ ಮಾಧ್ಯಮ ಶಾಲೆ, 9 ಸಮಾಜ ಸೇವಾ ಸಂಸ್ಥೆಗಳನ್ನು ಹೊಂದಿದೆ.ಹೊನ್ನಾವರ,ಕುಮಟಾ ತಾಲೂಕಿನ ಗ್ರಾಮೀಣ ಭಾಗಕ್ಕಂತೂ ಇದರಿಂದ ಬಹು ದೊಡ್ಡ ಲಾಭವಾಗಿದೆ.ಶಿಕ್ಷಣ ಇಂದು ವಾಣಿಜ್ಯೋದ್ಯಮದ ಸ್ವರೂಪ ಪಡೆದುಕೊಂಡ ಸಂದರ್ಭದಲ್ಲಿ ಮಿತಿ ಮೀರಿದ ಡೊನೇಷನ್ ಹಾವಳಿ ಇಲ್ಲ ಎಂದು ಕೇಳಿದ್ದೇನೆ. ಉಪನ್ಯಾಸಕರ ನೇಮಕಾತಿಯಲ್ಲಿಯೂ ಲಂಚ ಸ್ವೀಕರಿಸಿಲ್ಲ ಎಂದು ಕೇಳಿ ಖುಷಿ ಪಟ್ಟಿದ್ದೇನೆ.
ಕೆನರಾ ವೆಲ್ಫೇರ ಟ್ರಸ್ಟನಿಂದ ಹೊರಬಂದ ಮೇಲೆ ಗಿರಿಪಿಕಳೆಯವರು ಮತ್ತು ಪ್ರೇಮಾ ಪಿಕಳೆಯವರು ಸೇರಿ ನೂತನ ಶಿಕ್ಷಣ ಸಭಾ ಟ್ರಸ್ಟ ಎನ್ನುವ ಹೊಸ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. 1962 ರಲ್ಲಿ ಹೆಣ್ಣುಮಕ್ಕಳಿಗಾಗಿ ಮೊದಲ ಪೌಢಶಾಲೆ ತೆರೆದರು.ಇದರಿಂದ ಈವರೆಗೆ ಅಂಕೋಲೆಯಲ್ಲಿ ಸುಮಾರು 15 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಜಿಲ್ಲೆಯ ಶಿಕ್ಷಣ ಚಳುವಳಿಯಲ್ಲಿ ಇದೊಂದು ಮೈಲಿಗಲ್ಲು.ಸುಮರು ಎಪ್ಪತ್ತರ ದಶಕದವರೆಗೂ ರೈತ ಹೋರಾಟ ಮತ್ತು ಶಿಕ್ಷಣ ಸಂಸ್ಥೆ ಕಟ್ಟುವ ಕೆಲಸಗಳು ಒಟ್ಟೊಟ್ಟಿಗೆ ನಡೆದವು. ಎಲ್ಲೆಲ್ಲಿ ಕೆಂಪು ರೈತಕೂಟಹೋರಾಟ ನಿರತವಾಗಿತ್ತೋ ಅಲ್ಲೆಲ್ಲಾ-ಕಾರವಾರ,ಅಂಕೋಲಾ,ಕುಮಟಾದ ಅಘನಾಶಿನಿ,ಕತಗಾಲ, ಹೊನ್ನಾವರದ ಹಳದಿಪುರ,ಕಡತೋಕ.ಕಾಸರಕೋಡ-ಶಿಕ್ಷಣ ಸಂಸ್ಥೆಗಳು ತಲೆಎತ್ತಿದವು. ಇದರಿಂದಾಗಿ ಚಳುವಳಿಗೆ ಬಲವು ಬಂತು. ಜಗತ್ತಿ ಹಲವು ದೇಶಗಳ ಅನುಭವ ಇದು.ಕ್ಯೂಬಾ ಕ್ರಾಂತಿಯಾಗಿ ಎರಡು ವರ್ಷದಲ್ಲಿ ದೇಶದ ತುಂಬಾ ಶಾಲೆ ತೆರೆಯಿತು.100%ಸಾಕ್ಷರರಾದರು.ದ.ಆಫ್ರಿಕಾ ವೆನುಜುವಿಲಾ,ಚೀನಾ,ವಿಯೆಟ್ನಾಮ್ ಈ ಮುಂತಾದ ದೇಶಗಳು ಕ್ರಾಂತಿಯ ಜೊತೆಜೊತೆಗೆ ಶಿಕ್ಷನ ಕೇಂದ್ರ ತೆರೆಯಲು ಒತ್ತು ಕೊಟ್ಟರು. ವಾರಲಿ,ಕೇರಳ,ಬೆಂಗಾಲಗಳಲ್ಲೂ ನಡೆದದ್ದು ಹೀಗೆ.
    ಆದರೆ ಕಮ್ಯೂನಿಷ್ಟ ಸಿದ್ಧಾಂತಕ್ಕೆ ಬದ್ಧರಾದ ಪಿಕಳೆ, ಉದಾರವಾದಿ ಎಡಪಂಥೀಯರಾದ ದೇಸಾಯಿ, ಅನಕ್ಷರಸ್ಥ ರೈತ ಸಮುದಾಯದವರ ಬೆವರಿನ ಫಲವಾಗಿ ಮೂಡಿಬಂದ ಈ ಸಂಸ್ಥೆಗಳು ಜಿಲ್ಲೆಯಲ್ಲಿ ಅಕ್ಷರದ ಬೀಜ ಬಿತ್ತುವಲ್ಲಿ ಮಹತ್ವದ ಸಾಧನೆ ಮಾಡಿವೆ. ಶಿಕ್ಷಣ ಸಂಸ್ಥೆಯನ್ನು ತೆರೆಯುವಿಕೆಯಲ್ಲಿ ಕೂಡ ಅದು ಒಂದು ಚಳುವಳಿಯ ಮಾದರಿಯಲ್ಲಿಯೇ ಮಾಡಿರುವುದು ಗಮನಿಸಬೇಕಾದ ಅಂಶ.
    ಹದಿನೆಂಟು ಶಾಲೆ ಕಾಲೇಜುಗಳ ಕಟ್ಟಿ
    ಮಕ್ಕಳಿಗೆ ಬಡಿಸಿದೆನು ಜೀವನದ ರೊಟ್ಟಿ
    ಆದರೂ ತೃಪ್ತಿಯಿಲ್ಲವೋ ಕರುಣ ಸಿಂಧು
    ನಾನು ಮಾಡಿದ ಕೆಲಸ ಬರಿ ಒಂದು ಬಿಂದು
ಎಂದು ಇನ್ನೂ ಮಾಡಬೇಕಾದ ಕೆಲಸದ ಬಗ್ಗೆ ಹಂಬಲಿಸುತ್ತಾರೆ.
ಆದರೆ ಚಳುವಳಿ ತಣ್ಣಗಾಗುತ್ತಿದ್ದಂತೆ ಹಲವು ಜನಪರ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೆಂದ್ರಗಳಾಗುತ್ತಿರುವುದು ಮಾತ್ರ ವಿಷಾದದ ಸಂಗತಿ.ಮತ್ತೆ ಇದನ್ನ ದೇಸಾಯಿ, ಪಿಕಳೆ ಅವರ ಕನಸಿನೊಂದಿಗೆ ಕಟ್ಟುವ ಕೆಲಸ ಆಗ ಬೇಕಗಿದೆ. ಸರಿ ದಾರಿಗೆ ತರಲು ಇನ್ನೊಣದು ಚಳುವಳಿಯೇ ಆಗಬೇಕಾಗಿದೆ.
                                                                                              ವಿಠ್ಠಲ ಭಂಡಾರಿ


No comments:

Post a Comment